Asianet Suvarna News Asianet Suvarna News

Chikkaballapur: ಸತ್ಯಸಾಯಿ ಗ್ರಾಮದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ: ಚಂಡಿಕಾಯಾಗ ಆರಂಭ

ದಸರಾ ವೈಭವ ಎಲ್ಲೆಲ್ಲೂ ಮನೆ ಮಾಡಿದೆ. ಇದರಂತೆ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಹೃದಯ ಮಂದಿರದಲ್ಲಿ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ದೇಶದ ಸಾಂಸ್ಕೃತಿಕ ಮತ್ತು ಪಾರಮಾರ್ಥಿಕ ಸಂಸ್ಕೃತಿಯನ್ನು ಬಿಂಬಿಸುವ ನಾಡ ಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. 

Dasara celebrations at sathya sai grama at chikkaballapur gvd
Author
First Published Sep 26, 2022, 10:34 PM IST

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಸೆ.26): ದಸರಾ ವೈಭವ ಎಲ್ಲೆಲ್ಲೂ ಮನೆ ಮಾಡಿದೆ. ಇದರಂತೆ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಹೃದಯ ಮಂದಿರದಲ್ಲಿ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ದೇಶದ ಸಾಂಸ್ಕೃತಿಕ ಮತ್ತು ಪಾರಮಾರ್ಥಿಕ ಸಂಸ್ಕೃತಿಯನ್ನು ಬಿಂಬಿಸುವ ನಾಡ ಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. 

ದುರ್ಗಾಪೂಜೆ, ನವದುರ್ಗೆ ಹೋಮ ಎಂಬುದಾಗಿ ಕರೆಯಲ್ಪಡುವ ಚಂಡಿಕಾ ಯಾಗ ವಿಧಿವತ್ತಾಗಿ ಆರಂಭವಾಗಿ ಇಂದಿನಿಂದ 10 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಇಂತಹ ಕಾರ್ಯಕ್ರಮಕ್ಕೆ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರು ದಿವ್ಯ ಚಾಲನೆಯನ್ನು ನೀಡಿದರು. ಇದೇ ವೇಳೆ ಸಹಸ್ರ ಮೋದಕ ಗಣಪತಿ ಹೋಮ, ನವಗ್ರಹ ಹವನ, ಶನಿ ಶಾಂತಿ ಹೋಮ ಕೂಡ ನೆರವೇರಿತು. ನವರಾತ್ರಿ ಕಾಲದ ಆಚರಣೆಯ ಆಕರ್ಷಕ ಬಿಂದುಗಳಾದ ನವದುರ್ಗೆಯರಲ್ಲಿ ಮೊದಲಿಗಳಾದ ಮಾತೆ ಶೈಲ ಪುತ್ರಿಯ ಆರಾಧನೆಯ ಕೈಂಕರ್ಯ ಕೂಡ ನಡೆಯಿತು.

Vijayapura; ಗುಮ್ಮಟನಗರಿಯಲ್ಲಿ ಸಂಭ್ರಮದ ನವರಾತ್ರಿ ಹಬ್ಬ

ಗಮನ ಸೆಳೆದ ಢಾಕಿ ನೃತ್ಯ: 10 ದಿನಗಳ ಕಾಲ ನಡೆಯಲಿರೋ ದುರ್ಗಾರಾದನೆಯಲ್ಲಿ ಪಶ್ಚಿಮ ಬಂಗಾಳದಿಂದ ವಿಶೇಷವಾಗಿ ಆಗಮಿಸಿದ ಸಾಂಪ್ರದಾಯಿಕ ಆರಾಧಕರು ಢಾಕಿ ವಾದನಗೈದು ನೃತ್ಯ, ನಿವೇದನೆ, ಶಬ್ದ, ಗಾಯನಗಳೇ ಮೊದಲಾದ ವಿಧಿಗಳಿಂದ ದುರ್ಗಾ ಮಾತೆಯನ್ನು ಆರಾಧಿಸಿ ಮಂಗಳಾರತಿಯನ್ನು ಬೆಳಗಿದರು. ಪಶ್ಚಿಮ ಬಂಗಾಳದ ಈ ಪೂಜಾ ವಿಧಾನ ಎಲ್ಲರ ಗಮನ ಸೆಳೆಯಿತು.

ಮೈಸೂರು ಅಷ್ಟೇ ಅಲ್ಲ, ರಾಜ್ಯದ ಈ ಊರುಗಳಲ್ಲೂ ನಡೆಯುತ್ತೆ ಅದ್ಧೂರಿ ದಸರಾ!

ದಸರಾ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ದಸರಾ ಬಂದರೇ ಸಾಕು ಸತ್ಯಸಾಯಿ ಆಶ್ರದಮಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ, ದೇಶ ವಿದೇಶಗಳ ಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದ ಇಲ್ಲಿನ ರೂಢಿ, ಸಂಪ್ರದಾಯ. ಅದರಂತಯೇ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ನಡೆದ ಸಾಂಸ್ಕೃತಿಕ ಸಂಧ್ಯಾ ಸಮಾರಂಭದಲ್ಲಿ ಚೆನ್ನೈನ ಕಲಾಕ್ಷೇತ್ರ ಪ್ರತಿಷ್ಠಾನವು 'ಕೂರ್ಮಾವತಾರ' ಎಂಬ ನೃತ್ಯರೂಪಕವನ್ನು ಪ್ರದರ್ಶಿಸಿತು. ಪುರಾಣಗಳ ಕಾಲದ ದೇಶದ ಪಾರಮಾರ್ಥಿಕ ಇತಿಹಾಸದಲ್ಲಿ ಘಟಿಸಿದ ಘಟನೆ ಮತ್ತು ಲೋಕಕಲ್ಯಾಣಕ್ಕಾಗಿ ದೇವತೆಗಳು ಮಾಡಿದ ಕಾರ್ಯ, ಅವತಾರಿ ಶ್ರೀಮನ್ನಾರಾಯಣನು ಜಗತ್ಕಲ್ಯಾಣಕ್ಕಾಗಿ ನೀಡಿದ ಸಹಾಯವನ್ನು ನೆನಪಿಸುವಲ್ಲಿ ನೃತ್ಯತಂಡವು ಯಶಸ್ವಿಯಾಗಿತ್ತು.

Follow Us:
Download App:
  • android
  • ios