ಏನೇ ಮಾಡಿದ್ರೂ ದುಡ್ಡು ಕೈ ಸೇರ್ತಾ ಇಲ್ವಾ? ದರಿದ್ರ ಯೋಗವೇ ಬೆಂಬತ್ತಿರ್ಬೋದು!
ಎಷ್ಟು ಪ್ರಯತ್ನಿಸಿದರೂ ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಏಳಿಗೆಯೇ ಆಗದಿರುವುದು ಅನೇಕರ ಸಮಸ್ಯೆ. ಇದರಿಂದ ಭಾರೀ ಸಮಸ್ಯೆಯಾಗುವುದು ಖಚಿತ. ಇಂತಹ ಹಣಕಾಸಿನ ನಿರಂತರ ಸಮಸ್ಯೆ ಜನ್ಮಕುಂಡಲಿಯಲ್ಲಿ ದರಿದ್ರ ಯೋಗವಿದ್ದರೆ ಸಾಮಾನ್ಯವಾಗಿ ಎದುರಾಗುತ್ತದೆ. ಹೀಗಾಗಿ, ದರಿದ್ರ ಯೋಗದಿಂದ ಮುಕ್ತಿ ಪಡೆಯುವುದು ಅಗತ್ಯ.

ಪ್ರತಿದಿನವೂ ಬೆಳಗ್ಗೆ ಎದ್ದಾಕ್ಷಣ ನಿಮ್ಮ ಹಣಕಾಸು ಸ್ಥಿತಿಗತಿ ನೆನೆದು ಮನಸ್ಸು ಮುದುಡುತ್ತದೆಯೇ? ದೇವರು ದುಡ್ಡಿನ ವಿಚಾರದಲ್ಲಿ ನೆಮ್ಮದಿಯನ್ನೇ ಕೊಡುತ್ತಿಲ್ಲ ಎನ್ನುವ ಭಾವನೆ ಮೂಡುತ್ತದೆಯೇ? ಖರ್ಚು ಕಡಿಮೆ ಆಗದೇ, ಮಾಡಿದ ಕಾರ್ಯಗಳೆಲ್ಲವೂ ವಿಫಲವಾಗಿ ಸಾಲದ ಕೂಪದಲ್ಲಿ ಬೀಳುವಂತಾಗಿದೆಯೇ? ಹಣಕಾಸು ಪ್ರಗತಿ ಮರೀಚಿಕೆಯಾಗಿದೆಯೇ? ಇದನ್ನು ನೀವು ಕೆಟ್ಟ ಸಮಯ, ದುರಾದೃಷ್ಟ, ಹಣಕಾಸು ಯೋಜನೆಗಳು ಸರಿಯಾಗಿಲ್ಲ ಎಂದು ಅಂದುಕೊಳ್ಳಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದಕ್ಕೆ ಇನ್ನೂ ಆಳವಾದ ವಿವರಣೆಯಿದೆ. ಜನ್ಮಕುಂಡಲಿಯಲ್ಲಿರುವ “ದರಿದ್ರ ಯೋಗ’ ಈ ಸ್ಥಿತಿಗೆ ಕಾರಣವಾಗಿರುತ್ತದೆ. ದರಿದ್ರ ಯೋಗವಿದ್ದರೆ ಹಣಕಾಸಿಗೆ ಸಂಬಂಧಿಸಿ ಅತ್ಯಂತ ಹೀನ ಸ್ಥಿತಿ ಎದುರಾಗುತ್ತದೆ. ನೆಮ್ಮದಿಯ ಸಂಗತಿ ಎಂದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರಗಳನ್ನೂ ತಿಳಿಸಲಾಗಿದೆ. ಹಣಕಾಸಿಗೆ ಸಂಬಂಧಿಸಿ ಸಂಕಷ್ಟಗಳನ್ನು, ಕೆಟ್ಟ ಅದೃಷ್ಟವನ್ನೂ ತರುವಲ್ಲಿ ಕೆಲವು ಗ್ರಹಗಳ ಸ್ಥಿತಿಗತಿ, ಜೋಡಣೆ ಕಾರಣವಾಗುತ್ತವೆ. ಶನಿ ಮತ್ತು ಚಂದ್ರನ ಸ್ಥಾನವನ್ನು ಇದು ಅವಲಂಬಿಸಿದ್ದು, ಜ್ಯೋತಿಷಿಗಳು ನಿಮ್ಮ ಕುಂಡಲಿಯಲ್ಲಿ ದರಿದ್ರ ಯೋಗವಿದೆಯೇ ಎನ್ನುವುದನ್ನು ಪರಿಶೀಲನೆ ಮಾಡಿ ತಿಳಿಸಬಲ್ಲರು.
ದರಿದ್ರ ಯೋಗವಿದ್ದಾಗ ಹಣಕಾಸು ಸ್ಥಿತಿಗತಿ ಯಾವಾಗಲೂ ಸಮಸ್ಯೆಯಿಂದ ಕೂಡಿರುತ್ತದೆ. ಎಂದಿಗೂ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ವೃತ್ತಿಯಲ್ಲೂ ಹಿನ್ನಡೆ ಉಂಟಾಗುತ್ತದೆ. ಸ್ಥಿರ ಆದಾಯ, ವೃತ್ತಿಯಲ್ಲಿ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಅನಿರೀಕ್ಷಿತ ಖರ್ಚು-ವೆಚ್ಚಗಳು ಎದುರಾಗುತ್ತವೆ. ಪದೇ ಪದೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಸಾಲ ಬೆಳೆಯುತ್ತದೆ. ಉಳಿತಾಯ ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಿಂದ ಪಾರಾಗಲು ವೈದಿಕ ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಮಾರ್ಗೋಪಾಯಗಳಿವೆ. ಬದ್ಧತೆಯಿಂದ ಇವುಗಳನ್ನು ಅನುಸರಿಸಿದರೆ ಹಣಕಾಸಿಗೆ ಸಂಬಂಧಿಸಿದ ದುರಾದೃಷ್ಟವನ್ನು ನಿವಾರಿಸಿಕೊಳ್ಳಬಹುದು. ಜೀವನಕ್ಕೆ ಪ್ರಗತಿ ದೊರೆಯುವಂತೆ ಮಾಡಿಕೊಳ್ಳಬಹುದು.
ಸ್ಮೆಲ್ ಚನ್ನಾಗಿರಲಿ ಅಂತ ರಾತ್ರೋ ರಾತ್ರಿ ಪರ್ಫ್ಯೂರ್ಮ್ ಹಾಕಿದರೆ ಜೇಬಿಗೆ ಬೀಳುತ್ತಾ ಕತ್ತರಿ?
ದರಿದ್ರ ಯೋಗಕ್ಕೆ (Daridra Yoga) ಜ್ಯೋತಿಷ್ಯ ಶಾಸ್ತ್ರದ (Astrology) ಪರಿಹಾರಗಳು
• ರತ್ನಗಳನ್ನು (Gemstones) ಧರಿಸುವುದು ಮುಖ್ಯ. ನೀಲಿ ರತ್ನ ಅಥವಾ ಮೂನ್ ಸ್ಟೋನ್ (ಚಂದ್ರಕಾಂತ್) ಅನ್ನು ಧರಿಸುವುದು ಶನಿ (Saturn) ಮತ್ತು ಚಂದ್ರ (Moon) ಗ್ರಹದ (Planet) ಪ್ರಭಾವವನ್ನು ಕಡಿಮೆ ಮಾಡಲು ಸಹಕಾರಿ.
• ಮಂತ್ರಗಳು (Mantra) ಮತ್ತು ಶ್ಲೋಕಗಳು ಪ್ರಗತಿಗೆ (Prosperity) ಸಹಕಾರಿಯಾಗಿವೆ. ಶನಿ ಮತ್ತು ಚಂದ್ರ ಮಂತ್ರಗಳನ್ನು ದಿನವೂ ಪಠಿಸುವುದರಿಂದ ಇವುಗಳ ಕೆಟ್ಟ ಪರಿಣಾಮದಿಂದ ಬಚಾವಾಗಬಹುದು.
• ಶನಿವಾರದಂದು (Saturday) ಮತ್ತು ಸೋಮವಾರದಂದು (Monday) ದಾನ ಮಾಡುವುದರಿಂದ ಜೀವನಕ್ಕೆ ಧನಾತ್ಮಕ ಎನರ್ಜಿ (Positive Energy) ಲಭಿಸುತ್ತದೆ.
• ಶನಿವಾರ ಮತ್ತು ಸೋಮವಾರಗಳಂದು ಉಪವಾಸ (Fasting) ಮಾಡುವುದರಿಂದ ಈ ಗ್ರಹಗಳ ಜತೆಗೆ ನಿಮ್ಮ ಬಾಂಧವ್ಯ ಉತ್ತಮವಾಗಿ, ಕೆಟ್ಟ ಪ್ರಭಾವ (Effect) ಕುಗ್ಗುತ್ತದೆ.
• ಜ್ಯೋತಿಷಿಗಳ ಸಲಹೆ ಪಡೆದುಕೊಳ್ಳುವುದು ಅಗತ್ಯ. ನಿಮ್ಮ ಕುಂಡಲಿ (Kundli) ಪರಿಶೀಲಿಸಿ ಅವರು ನಿರ್ದಿಷ್ಟ ಪರಿಹಾರ ತಿಳಿಸುತ್ತಾರೆ.
ಹೆಂಡತಿಗೆ ಹೊಡೆಯೋ ಗಂಡಂದಿರೇ ಇಲ್ ಕೇಳಿ, ನಿಮ್ಮ ದುಷ್ಕೃತ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ದರಿದ್ರ ಯೋಗಕ್ಕೆ ವೈದಿಕ (Vedic) ಪರಿಹಾರ
• ನಿರ್ದಿಷ್ಟ ಪದ್ಧತಿ ಪಾಲಿಸುವುದು ಅಗತ್ಯ. ನವಗ್ರಹ ಪೂಜೆ, ಶನಿ ಶಾಂತಿ ಪೂಜೆಗಳಿಂದ ಕುಂಡಲಿಯಲ್ಲಿರುವ ದೋಷಕ್ಕೆ (Problem) ಪರಿಹಾರ ಸಿಗುತ್ತದೆ.
• ನಿರ್ದಿಷ್ಟ ಯಂತ್ರಗಳನ್ನು ಧರಿಸುವ ಮೂಲಕ ಪರಿಹಾರ ದೊರೆಯುತ್ತದೆ. ಶ್ರೀ ಯಂತ್ರ, ನವಗ್ರಹ ಯಂತ್ರಗಳಿಂದ ನಕಾರಾತ್ಮಕ (Negative) ಪ್ರಭಾವ ಕಡಿಮೆಯಾಗುತ್ತದೆ.
• ಧ್ಯಾನ ಮತ್ತು ಯೋಗದಿಂದ ನಮ್ಮ ಎನರ್ಜಿಯನ್ನು (Energy) ಸಮತೋಲನಗೊಳಿಸಿಕೊಳ್ಳಲು ಸಾಧ್ಯ. ಇದರಿಂದ ಹಣಕಾಸು (Financial) ಪ್ರಗತಿಯನ್ನು ಉತ್ತೇಜಿಸಿಕೊಳ್ಳಬಹುದು.
• ದೇವತೆಗಳ ಆರಾಧನೆ (Worship) ಮಾಡಬೇಕು. ಸಂಪತ್ತಿಗೆ (Wealth) ಸಂಬಂಧಿಸಿದ ಲಕ್ಷ್ಮೀ ಮತ್ತು ಕುಬೇರನಿಗೆ ಪೂಜೆ ಸಲ್ಲಿಸಬೇಕು. ನಿರಂತರವಾಗಿ ಇದನ್ನು ಮಾಡುವುದರಿಂದ ಹಣಕಾಸು ಪ್ರಗತಿ ಸಾಧ್ಯ.