Asianet Suvarna News Asianet Suvarna News

Numerology: ಈ ಸಂಖ್ಯೆಯ ದೊಡ್ಡ ಕಂಪನಿಗೆ ಸೇರುವ ಯತ್ನಕ್ಕೆ ಯಶಸ್ಸು

ಇಂದು ಈ ಸಂಖ್ಯೆಗೆ ವೃತ್ತಿಯಲ್ಲಿ ಕಡಿಮೆಯಾಗುವ ಆಸಕ್ತಿ, ಮತ್ತೊಂದಕ್ಕೆ ಮನೆ ಹಿರಿಯರ ಆರೋಗ್ಯ ವ್ಯತ್ಯಾಸದಿಂದ ಆತಂಕ. ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 

Daily Numerology predictions of September 21st 2022 in Kannada SKR
Author
First Published Sep 21, 2022, 7:24 AM IST | Last Updated Sep 21, 2022, 7:24 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)
ಇಂದು ಹೊಸ ಭರವಸೆಯೊಂದಿಗೆ ದಿನ ಪ್ರಾರಂಭಸುತ್ತದೆ. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ನೀವು ಸಮರ್ಥವಾಗಿ ಎದುರಿಸುವಿರಿ. ಮನೆಯಲ್ಲಿ ಧಾರ್ಮಿಕ ಯೋಜನೆ ಇರಬಹುದು. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಇತರ ಜನರ ವ್ಯವಹಾರಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ವೃತ್ತಿ ಕ್ಷೇತ್ರದಲ್ಲಿ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಸಾಬೀತುಪಡಿಸುತ್ತದೆ.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಇಂದು ಹೆಚ್ಚಿನ ಸಮಯವನ್ನು ಹತ್ತಿರದ ಸಂಬಂಧಿಗೆ ಸಹಾಯ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ವ್ಯಯಿಸಲಾಗುವುದು. ಸಾಮಾಜಿಕ ಖ್ಯಾತಿಯಲ್ಲೂ ಲಾಭವಾಗಲಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರಬಹುದು. ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ. ಮನೆಯ ಕ್ರಮವನ್ನು ಕಾಪಾಡಲು ಗಮನ ಹರಿಸುವುದು ಅವಶ್ಯಕ. ಸಂಗಾತಿಯ ಬೆಂಬಲವು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಈ ಸಮಯದಲ್ಲಿ ನೀವು ಹೆಚ್ಚು ಚೈತನ್ಯ ಹೊಂದುತ್ತೀರಿ.. ಇತರರ ವಿಷಯಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ. ಇದು ನಿಮ್ಮ ಸ್ವಾಭಿಮಾನವನ್ನು ಕಡಿಮೆ ಮಾಡಬಹುದು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಷಯಗಳು ಈಗ ಬರಬಹುದು. ಈ ಹಂತದಲ್ಲಿ ತಾಳ್ಮೆಯಿಂದಿರುವುದು ಜಾಣತನ. ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾದಂತೆನಿಸಬಹುದು, ಕೆಲವು ಏರಿಳಿತಗಳಿರಬಹುದು. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ನೀವು ಇಂದು ದೀರ್ಘಕಾಲದ ಆತಂಕ ಮತ್ತು ಒತ್ತಡದಿಂದ ಪರಿಹಾರವನ್ನು ಪಡೆಯಬಹುದು. ವಿಮೆ, ಹೂಡಿಕೆ ಮುಂತಾದ ಹಣಕಾಸಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಆಸ್ತಿ ವಿವಾದಗಳನ್ನು ಪರಿಹರಿಸುವಲ್ಲಿ ಮನೆಯ ಹಿರಿಯ ವ್ಯಕ್ತಿಯನ್ನು ಸಂಪರ್ಕಿಸಿ. ಸದ್ಯ ಆದಾಯದ ಜತೆಗೆ ಖರ್ಚು ಕೂಡ ಅಧಿಕವಾಗಲಿದೆ. ಅನಗತ್ಯ ಖರ್ಚುಗಳು ನಿಮ್ಮನ್ನು ಕಾಡಬಹುದು. ಎದುರಾಳಿಗಳ ಚಲನವಲನಗಳನ್ನು ನಿರ್ಲಕ್ಷಿಸಬೇಡಿ. 

Pitru Paksha 2022: ಸುಮ್ಮನೆಯಲ್ಲ ಮಾನವ ಜನ್ಮ ತಾಳುವುದು, ಇದು ಎಂಥ ಕಠಿಣ ಹಾದಿ ಗೊತ್ತಾ?

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಧಾರ್ಮಿಕ ಚಟುವಟಿಕೆಯ ವ್ಯಕ್ತಿಯ ಉಪಸ್ಥಿತಿಯಲ್ಲಿ ನಿಮ್ಮ ಆಲೋಚನೆಯಲ್ಲಿ ಧನಾತ್ಮಕ ಬದಲಾವಣೆ ಕಂಡುಬರುತ್ತದೆ. ಜೀವನಕ್ಕೆ ಸಂಬಂಧಿಸಿದ ಪ್ರತಿ ಕೆಲಸವನ್ನು ಮಾಡುವಲ್ಲಿ ಉತ್ತಮ ದೃಷ್ಟಿ ಸಿಗುತ್ತದೆ. ಹಣಕಾಸಿನ ಸ್ಥಿತಿಯು ತುಂಬಾ ಉತ್ತಮವಾಗಿದೆ. ನಿಮ್ಮ ಪ್ರಮುಖ ವಸ್ತುಗಳು ಮತ್ತು ದಾಖಲೆಗಳನ್ನು ಸುರಕ್ಷಿತವಾಗಿರಿಸಿ. ದೈನಂದಿನ ಆದಾಯ ಹೆಚ್ಚಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿ ಸಾಗಲಿದೆ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಮನೆಯಲ್ಲಿರುವ ಹಿರಿಯರ ಸಲಹೆ ಇಂದು ನಿಮಗೆ ತುಂಬಾ ಅದೃಷ್ಟವನ್ನು ನೀಡುತ್ತದೆ. ಆದ್ದರಿಂದ ಅವರ ಮಾತುಗಳನ್ನು ನಿರ್ಲಕ್ಷಿಸಬೇಡಿ. ಮಹಿಳೆಯರಿಗೆ ದಿನವು ತುಂಬಾ ಫಲಪ್ರದವಾಗಿದೆ. ಸಂಬಂಧಗಳು ಕೆಡದಂತೆ ಜಾಗ್ರತೆ ವಹಿಸಿ. ಅಲ್ಲದೆ, ಸಾಮರ್ಥ್ಯವನ್ನು ಮೀರಿ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವ್ಯಾಪಾರ ಸ್ಪರ್ಧೆಯಲ್ಲಿ ನೀವು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಕಳೆದ ಕೆಲವು ವರ್ಷಗಳಿಂದ ನಿಕಟ ಜನರೊಂದಿಗೆ ನಡೆಯುತ್ತಿದ್ದ ಮನಸ್ತಾಪಗಳು ಬಗೆಹರಿಯುತ್ತವೆ. ಪರಸ್ಪರ ಸಂಬಂಧ ಉತ್ತಮವಾಗಿರುತ್ತದೆ. ಆತ್ಮೀಯ ಸ್ನೇಹಿತರ ಸಲಹೆ ಭರವಸೆಯನ್ನು ತರುತ್ತದೆ. ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ವಿವಾದವಿದ್ದರೆ ಅದನ್ನು ಯಾರೊಬ್ಬರ ಮಧ್ಯಸ್ಥಿಕೆಯಿಂದ ಪರಿಹರಿಸಬಹುದು. ಈ ಸಮಯದಲ್ಲಿ ನಿಮ್ಮ ಮಾನಸಿಕ ಸ್ಥಿತಿಯನ್ನು ಧನಾತ್ಮಕವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. 

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಇಂದು ಕುಟುಂಬ ಚಟುವಟಿಕೆಗಳಲ್ಲಿ ನಿರತರಾಗಿರಬಹುದು. ಮನೆಯ ಸದಸ್ಯರ ಸೌಕರ್ಯಗಳನ್ನು ನೋಡಿಕೊಳ್ಳುವುದು ಅವರಿಗೆ ಭದ್ರತೆಯ ಭಾವವನ್ನು ನೀಡುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಿಮಗೆ ಆಧ್ಯಾತ್ಮಿಕ ಸಂತೋಷ ನೀಡುತ್ತದೆ. ಹೂಡಿಕೆಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವ ಮೊದಲು ಸರಿಯಾದ ತನಿಖೆ ಮಾಡಿ. ಸಾಲವನ್ನು ತೆಗೆದುಕೊಳ್ಳುವ ಯೋಜನೆಯನ್ನು ಮಾಡಲಾಗುತ್ತಿದ್ದರೆ, ಮೊದಲು ಅದರ ಮಿತಿಯನ್ನು ನೋಡಿಕೊಳ್ಳಿ. 

Lucky zodiacs: 5 ರಾಶಿಗಳಿಗೆ ಅದೃಷ್ಟದ ಅಕ್ಟೋಬರ್, ನಿಮ್ಮದ್ಯಾವ ರಾಶಿ?

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ನಿಮ್ಮ ಆತ್ಮವಿಶ್ವಾಸದ ಮುಂದೆ ಸ್ಪರ್ಧಿಗಳು ಸೋಲುತ್ತಾರೆ. ಮಕ್ಕಳು ಸ್ಪರ್ಧಾತ್ಮಕ ಕಾರ್ಯಗಳಲ್ಲಿ ಮೇಲುಗೈ ಸಾಧಿಸಬಹುದು. ರಾಜಕೀಯ ಸಹಾಯವು ನಿಮಗೆ ಪ್ರಯೋಜನಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ವೃತ್ತಿಪರವಾಗಿ ದೊಡ್ಡ ಕಂಪನಿಗೆ ಸೇರುವ ಪ್ರಯತ್ನ ಯಶಸ್ವಿಯಾಗುತ್ತದೆ. ಸಂಗಾತಿಯ ಬೆಂಬಲವು ನಿಮ್ಮ ಭವಿಷ್ಯವನ್ನು ಬಲಪಡಿಸುತ್ತದೆ.

Latest Videos
Follow Us:
Download App:
  • android
  • ios