Asianet Suvarna News Asianet Suvarna News

Numerology:ಈ ಜನ್ಮಸಂಖ್ಯೆಗೆ ಸಂಬಂಧಿಗಳ ಜೊತೆಗಿನ ವೈಮನಸ್ಸು ದೂರ

ನವೆಂಬರ್ 21st 2022 ಸೋಮವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ.

Daily Numerology predictions of November 21st 2022 in Kannada
Author
First Published Nov 21, 2022, 7:15 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ಈ ಮಧ್ಯಾಹ್ನ ನಿಮಗೆ ಅನುಕೂಲಕರ ಸನ್ನಿವೇಶ ಸೃಷ್ಟಿಯಾಗಲಿದೆ. ಕುಟುಂಬದ ಕೆಲವು ಹಿರಿಯ ವ್ಯಕ್ತಿಗಳಿಂದ ನಿಮಗೆ ಅನೇಕ ವಿಧದ ಪ್ರಯೋಜನ ಸಿಗಲಿದೆ. ಮನೆಯ ಹಿರಿಯರನ್ನು ಗೌರವಿಸಿ. ವೆಚ್ಚ ಹೆಚ್ಚಲಿದೆ. ಹಾಗೆಯೇ ಆದಾಯದ ಮೂಲವೂ ಸಿಗಲಿದೆ. ಯಾವುದೇ ವಿಷಯದ ಬಗ್ಗೆ ಹೆಚ್ಚು ಯೋಚಿಸಬೇಕಾದ ಅಗತ್ಯವಿಲ್ಲ. ಸ್ನೇಹಿತ ಕೂಡ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಲ್ಲ. ನಿಮ್ಮ ಗುಣ ನಡತೆಯಲ್ಲಿನ ಒಳ್ಳೆಯತನ ನಿಮ್ಮ ಪ್ರೇಮ ಸಂಬಂಧವನ್ನು ಸುಧಾರಿಸಲಿದೆ.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಈ ಸಮಯದಲ್ಲಿ ನಿಮ್ಮ ಗಮನವನ್ನು ಕೆಲಸದ ಮೇಲೆ ಕೇಂದ್ರೀಕರಿಸಿ. ವಂಶಪಾರಂಪರ್ಯವಾಗಿ ಬಂದಂತಹ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಸ್ವಲ್ಪ ಮಟ್ಟಿಗಿನ ಒತ್ತಡ ನಿಮ್ಮ ಕೆಲಸದ ಸಾಮರ್ಥ್ಯದ ಮೇಲೆ ಪ್ರಭಾವ ಬೀರಲಿದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಜೊತೆಗೆ ವೈಮನಸ್ಸು ಮೂಡಬಹುದು. ಯಾವುದೇ ಕೆಲಸದಲ್ಲಿ ಸಂಗಾತಿಯ ಸಲಹೆ ಕೇಳುವುದು ಉತ್ತಮ.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಸಹೋದರರ ಜೊತೆ ಇಂದು ಮುಖ್ಯವಾದ ಮಾತುಕತೆ ನಡೆಸಲಿದ್ದೀರಿ. ಭವಿಷ್ಯ ಸಂಬಂಧಿ ಕೆಲವು ಯೋಜನೆಗಳು ಇಂದು ಪೂರ್ಣಗೊಳ್ಳಲಿವೆ. ನಿಮ್ಮ ಕೋಪ ಹಾಗೂ ಆಲೋಚನೆಗಳನ್ನು ನಿಯಂತ್ರಿಸಿ. ನಿಮ್ಮ ಗೌರವಕ್ಕೆ ಚ್ಯುತಿ ಬರುವಂತಹ ಯಾವುದೇ ನಕಾರಾತ್ಮಕ ವಿಚಾರಗಳು ನಡೆಯೋದಿಲ್ಲ. ಪತಿ ಹಾಗೂ ಪತ್ನಿ ಪರಸ್ಪರ ಗೌರವ ಭಾವದಿಂದ ನಡೆದುಕೊಳ್ಳುವ ಕಾರಣ ಸಂಬಂಧ ಮಧುರವಾಗಿರುತ್ತದೆ.

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಇಂದು ಯಾವುದೇ ಕೆಲಸ ಮಾಡುವ ಮುನ್ನ ಅದರ ಯೋಜನೆ ರೂಪಿಸಿ. ಆ ಬಳಿಕ ಕೆಲಸ ಪ್ರಾರಂಭಿಸಿ. ಪ್ರಮುಖವಾದ ವ್ಯಕ್ತಿಯ ಭೇಟಿಯಿಂದ ನಿಮಗೆ ಲಾಭವಾಗಲಿದೆ. ಬಂಧುವಿನ ಮಧ್ಯಪ್ರವೇಶದಿಂದ ಕುಟುಂಬದಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಸಮಯದಲ್ಲಿ ಇತರರು ಏನು ಯೋಚಿಸುತ್ತಾರೆ ಎಂಬ ಬಗ್ಗೆ ಗಮನ ನೀಡಬೇಡಿ. ಸರ್ಕಾರಿ ಉದ್ಯೋಗಿಗಳಿಗೆ ಇಂದು ಶುಭ ಸುದ್ದಿ ಸಿಗುವ ಸಾಧ್ಯತೆ. ದಾಂಪತ್ಯ ಬದುಕು ಸುಂದರವಾಗಿರಲಿದೆ. 

Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಭಾವನೆಗಳ ಬದಲು ಆಲೋಚನೆಗಳ ಮೂಲಕ ಕಾರ್ಯನಿರ್ವಹಿಸಿ. ನಿಮ್ಮ ಕಾರ್ಯಗಳ ಬಗ್ಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.  ವಿದ್ಯಾರ್ಥಿಗಳಿಗೆ ಅವರ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಲು ಸೂಕ್ತ ಅವಕಾಶ ಸಿಗಲಿದೆ. ನಕಾರಾತ್ಮಕ ಹೇಳಿಕೆಗಳು ವಿವಾದಕ್ಕೆ ಕಾರಣವಾಗಬಲ್ಲದು. ಮಕ್ಕಳ ಜೊತೆಗೆ ಸಹಕಾರ ಮನೋಭಾವದಿಂದ ವರ್ತಿಸಿ. ನಿಮಗೆ ಗೊತ್ತಿರುವ ಎಲ್ಲ ಸಂಗತಿಗಳನ್ನು ಸಂಗಾತಿಯ ಜೊತೆಗೆ ಹಂಚಿಕೊಳ್ಳಿ.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಸಂಬಂಧಿಗಳ ಜೊತೆಗಿನ ವೈಮನಸ್ಸು ನಿಮ್ಮ ಸಹಕಾರದಿಂದ ಬಗೆಹರಿಯಲಿದೆ. ಸಮಾಜದಲ್ಲಿ ನಿಮ್ಮ ಗೌರವ ಕೂಡ ಹೆಚ್ಚಲಿದೆ. ಈ ಸಮಯದಲ್ಲಿ ಪ್ರತಿ ವಿಚಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ವೆಚ್ಚ ಹೆಚ್ಚಳದಿಂದ ತೊಂದರೆಯುಂಟಾಗಲಿದೆ. ಉದ್ಯೋಗಿಗಳ ನಕಾರಾತ್ಮಕ ವರ್ತನೆ ನಿಮಗೆ ಮಾನಸಿಕ ಕಿರುಕುಳ ಉಂಟು ಮಾಡಬಹುದು. 

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಒಂದು ವೇಳೆ ಇಂದು ನೀವು ಮನೆ ಬದಲಾಯಿಸಲು ಯೋಚಿಸಿದ್ರೆ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ. ನಿಮ್ಮ ಕೋಪದ ಮೇಲೆ ಹಿಡಿತವಿರಲಿ. ಕೆಲಸಗಳು ಸುಸೂತ್ರವಾಗಿ ನಡೆಯಲಿವೆ. ಪ್ರೇಮ ಸಂಬಂಧಕ್ಕೆ ಕುಟುಂಬ ಸದಸ್ಯರ ಒಪ್ಪಿಗೆ ಅಗತ್ಯ. ಪ್ರೀತಿಗೆ ಕುಟುಂಬ ಸದಸ್ಯರಿಂದ ಒಪ್ಪಿಗೆ ಸಿಗಲಿದೆ.

Vaastu Tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ಅಪ್ಪಿ ತಪ್ಪಿಯೂ ನೋಡಬೇಡಿ

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಮನೆಯ ವಾತಾವರಣ ಸಕಾರಾತ್ಮಕವಾಗಿರಲಿದೆ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ರೂ ಇಂದು ಬಗೆಹರಿಯಲಿದೆ. ನಿರೀಕ್ಷೆಗಿಂತವೆಚ್ಚ ಹೆಚ್ಚಿರುತ್ತದೆ. ಹಣಕಾಸಿನ ಪರಿಸ್ಥಿತಿ ಮೇಲೆ ಗಮನ ಕೇಂದ್ರೀಕರಿಸಿ. ಈ ಸಮಯದಲ್ಲಿ ತಾಳ್ಮೆ ಕಾಯ್ದುಕೊಳ್ಳಿ. ಹೊಸ ಉದ್ಯಮ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಮನೆಯ ಹಿರಿಯರ ಆಶೀರ್ವಾದ ಹಾಗೂ ಸದಸ್ಯರ ಸಹಕಾರದಿಂದ ನೆಮ್ಮದಿ. ಈ ಸಮಯದಲ್ಲಿ ಅವರ ಭಾವನೆಗಳನ್ನು ಗೌರವಿಸಿ. ಮಾಧ್ಯಮ ಸಂಪರ್ಕದಿಂದ ಅವಕಾಶಗಳು ಲಭಿಸಲಿವೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಭೇಟಿಯಿಂದ ಸಂತಸ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 
 

Follow Us:
Download App:
  • android
  • ios