Asianet Suvarna News Asianet Suvarna News

Numerology:ಜನ್ಮಸಂಖ್ಯೆ 4 ಹೊಂದಿರೋರಿಗೆ ಆಸ್ತಿ ಖರೀದಿ ಯೋಗ

ನವೆಂಬರ್ 20th 2022 ಭಾನುವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ.

Daily Numerology predictions of November 20th 2022 in Kannada
Author
First Published Nov 20, 2022, 7:10 AM IST | Last Updated Nov 20, 2022, 7:10 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ರಾಜಕೀಯ ಹಾಗೂ ಸಾಮಾಜಿಕ ಒಪ್ಪಂದಗಳಿಂದ ನಿಮಗೆ ಕೆಲವು ಪ್ರಮುಖ ಮಾಹಿತಿ ಸಿಗಲಿದೆ. ಅಧ್ಯಯನದಲ್ಲಿ ಸಮಯ ಕಳೆಯುತ್ತೀರಿ. ಯುವಜನರಿಗೆ ಕೈಗೊಂಡ ಕೆಲಸ-ಕಾರ್ಯಗಳಲ್ಲಿ ಯಶಸ್ಸು. ಕೌಟುಂಬಿಕ ಕಲಹದ ಕಾರಣ ಒಡಹುಟ್ಟಿದವರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮೂಡಬಹುದು. ಸಮಸ್ಯೆಯನ್ನು ಶಾಂತಿ ಹಾಗೂ ಸಹನೆಯಿಂದ ಪರಿಹರಿಸಿಕೊಳ್ಳಿ. ಮಾತಿನಲ್ಲಿ ಕಾಲಹರಣ ಮಾಡದೆ ನಿಮ್ಮ ಗುರಿ ಮೇಲೆ ಗಮನ ಕೇಂದ್ರೀಕರಿಸಿ. ಉದ್ಯಮ ವಿಚಾರಗಳಲ್ಲಿ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳಲು ಇದು ಸಕಾಲವಲ್ಲ. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಕುಟುಂಬ ಸದಸ್ಯರ ಜೊತೆಗೆ ಕುಳಿತು ಮಾತುಕತೆ ನಡೆಸಿ. ಅನೇಕ ಸಮಸ್ಯೆಗಳನ್ನು ಬಹೆಗರಿಸಬಹುದು. ಕೆಲವು ವೆಚ್ಚಗಳು ಎದುರಾಗಬಹುದು, ಇದ್ರಿಂದ ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಗಬಹುದು. ಯಾವುದೇ ಕೆಲಸ ಮಾಡುವಾಗಲೂ ಶಾಂತವಾಗಿರಿ.  ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು ಮೂಡಬಹುದು. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಆಧ್ಯಾತ್ಮಿಕ ಸಂತಸ ಸಿಗುತ್ತದೆ. ದೀರ್ಘ ಸಮಯದ ಬಳಿಕ ಸ್ನೇಹಿತನ ಜೊತೆ ಮಾತನಾಡೋದ್ರಿಂದ ಮನಸ್ಸಿಗೆ ಖುಷಿ. ತಮ್ಮ ಗುರಿಗಳ ಬಗ್ಗೆ ಯುವಜನರು ಚಿಂತಿತರಾಗಿರುತ್ತಾರೆ. ದುಃಖದ ಘಟನೆ ನಿಮ್ಮನ್ನು ಭಾವನಾತ್ಮಕವಾಗಿ ದುರ್ಬಲಗೊಳಿಸುತ್ತದೆ. ಯಾವುದೇ ರೀತಿಯ ವಿವಾದ ಹಾಗೂ ಚರ್ಚೆಗಳಿಂದ ದೂರವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಆಸ್ತಿ ಖರೀದಿ ವಿಚಾರ ಅಂತಿಮವಾಗಲಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇನ್ನೊಬ್ಬರ ಮೇಲೆ ಅವಲಂಬಿತರಾಗುವ ಬದಲು ನಿಮ್ಮ ಕೆಲಸ-ಕಾರ್ಯಗಳನ್ನು ನೀವೇ ಮಾಡಿ. ಇಂದು ಯಾರಿಗೂ ಸಾಲ ನೀಡಬೇಡಿ. ಮಕ್ಕಳು ಚಿಂತಿರಾಗುವ ಸಾಧ್ಯತೆ. ಈ ಸಮಯದಲ್ಲಿ ಅವರಿಗೆ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಿ. ಆರೋಗ್ಯ ಉತ್ತಮ.

ಪೂಜೆಯಲ್ಲಿ ಗರುಡ ಗಂಟೆಯನ್ನು ಏಕೆ ಬಳಸಬೇಕು?

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ದಿನವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪ್ರಾರಂಭಿಸಿ. ಅನೇಕ ದಿನಗಳಿಂದ ಚಿಂತೆಗೆ ಕಾರಣವಾಗಿದ್ದ ಸಮಸ್ಯೆ ಬಗೆಹರಿಯಲಿದೆ. ಆಲಸ್ಯದ ಕಾರಣದಿಂದ ಯಾವುದೇ ಕೆಲಸವನ್ನು ನಿರ್ಲಕ್ಷ್ಯಿಸಬೇಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು.  ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಉದ್ಯಮವನ್ನು ಮುನ್ನಡೆಸಿ.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ನಿಮ್ಮ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸೂಕ್ತ ಸಮಯ. ಇದ್ರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಹಣಕಾಸಿನ ತೊಂದರೆ ಕಾರಣಕ್ಕೆ ಕೆಟ್ಟ ಕಾರ್ಯಗಳತ್ತ ನೀವು ಮುಖ ಮಾಡುವ ಸಾಧ್ಯತೆ. ಹೀಗಾಗಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.  ನಿತ್ಯದ ಕೆಲಸ ಕಾರ್ಯಗಳು ನಿಮ್ಮ ಭೌತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ. 

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಪ್ರಭಾವಿ ಜನರ ಸಂಪರ್ಕದಿಂದ ಲಾಭ ಹಾಗೂ ಗೌರವ. ಇಂಥ ವ್ಯಕ್ತಿಗಳ ಜೊತೆ ಸಮಯ ಕಳೆಯೋದ್ರಿಂದ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಗೌರವ ಹೆಚ್ಚಲಿದೆ. ಕೆಲವು ಸ್ನೇಹಿತರು ನಿಮಗೆ ತೊಂದರೆಯುಂಟು ಮಾಡುವ ಸಾಧ್ಯತೆ. ಹೀಗಾಗಿ ಅವರ ಮಾತುಗಳಲ್ಲಿ ನಂಬಿಕೆಯಿಡಬೇಡಿ. ಇದ್ರಿಂದ ಹಣಕಾಸಿನ ನಷ್ಟ ಎದುರಾಗುವ ಸಾಧ್ಯತೆ. ಉದ್ಯಮದಲ್ಲಿ ಅನುಭವ ಹೊಂದಿರುವವರ ಜೊತೆ ಸ್ವಲ್ಪ ಸಮಯ ಕಳೆಯಿರಿ. ಕೆಲಸದ ಕಾರಣಕ್ಕೆ ಕುಟುಂಬದ ಮೇಲೆ ಸಮಯ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. 

Zodiac Sign: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಜನರ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುನ್ನಡೆದರೆ ನಿಮಗೆ ಯಶಸ್ಸು ಖಚಿತ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ನಕಾರಾತ್ಮಕ ವ್ಯಕ್ತಿತ್ವದ ಕೆಲವು ಜನರು ನಿಮಗೆ ತೊಂದರೆಯುಂಟು ಮಾಡಲಿದ್ದಾರೆ. ಮನೆಯ ಹಿರಿಯರ ಮಾತುಗಳಿಗೆ ಗಮನ ಕೊಡಿ. ಇದ್ರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗಲಿದೆ. ನಿಮ್ಮ ಅಹಂ ಭಾವವನ್ನು ತಗ್ಗಿಸಿಕೊಳ್ಳಿ. 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಹಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ಜಮೀನಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವಿಶೇಷ ವ್ಯಕ್ತಿ ಅಥವಾ ಗೆಳೆಯನ ಭೇಟಿಯಿಂದ ಖುಷಿ. ಅವ್ಯಕ್ತ ಭಯ  ಕಾಡಬಹುದು. ಆದರೆ, ಇದು ನಿಮ್ಮ ಮನಸ್ಸಿನ ಕಲ್ಪನೆಯೇ ಆಗಿದ್ದು, ತೊಂದರೆ ಎದುರಾಗದು. ಕೆಲಸದ ಸ್ಥಳದಲ್ಲಿ ಉನ್ನತಾಧಿಕಾರಿಗಳು ಹಾಗೂ ಅನುಭವಿ ಜನರ ನೆರವು ದೊರೆಯಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. 


 

Latest Videos
Follow Us:
Download App:
  • android
  • ios