Asianet Suvarna News Asianet Suvarna News

Numerology: ಈ ಜನ್ಮಸಂಖ್ಯೆಗೆ ಇಂದು ಪ್ರತಿ ಕೆಲಸದಲ್ಲೂ ಯಶಸ್ಸು

ಡಿಸೆಂಬರ್ 26th 2022 ಸೋಮವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ.

Daily Numerology predictions of December 26th 2022 in Kannada
Author
First Published Dec 26, 2022, 7:00 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ.  ಮಾರ್ಕೇಟಿಂಗ್ ಹಾಗೂ ಮಾಧ್ಯಮ ಸಂಬಂಧಿ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿ. ಇನ್ನೊಬ್ಬರ ವಿಚಾರಗಳಿಗೆ ತಲೆಹಾಕದೆ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ನಕಾರಾತ್ಮಕ ವಿಚಾರಗಳು ಮನಸ್ಸಿನ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಿ. ಕುಟುಂಬ ಸದಸ್ಯರ ಜೊತೆಗೆ ಸಂತಸದಿಂದ ಸಮಯ ಕಳೆಯುತ್ತೀರಿ. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇದು ಸೂಕ್ತ ಸಮಯ. ಶಿಕ್ಷಣ ಹಾಗೂ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಿ ವಿದ್ಯಾರ್ಥಿಗಳಿಗೆ ನೆಮ್ಮದಿ ಸಿಗುತ್ತದೆ. ವೃತ್ತಿಗೆ ಸಂಬಂಧಿಸಿ ಹೊಸ ಯೋಜನೆಗಳನ್ನು ರೂಪಿಸುತ್ತೀರಿ. ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರ ಕೈಗೊಳ್ಳಿ. ಮನೆಯಲ್ಲಿ ನೆಮ್ಮದಿಯ ವಾತಾವರಣ. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಕೋಪ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಹೀಗಾಗಿ ಕೋಪವನ್ನು ನಿಯಂತ್ರಿಸಿ. ಮಕ್ಕಳಿಗೆ ನಿಮ್ಮ ಸಹಾಯದ ಅಗತ್ಯವಿದೆ. ಕೆಲವು ಹೊಸ ಒಪ್ಪಂದಗಳು ಈ ದಿನ ನಿಮಗೆ ದೊರಕಲಿವೆ. ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ. ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದ ವರ್ತಿಸಿ. ಹಿಂದಿನ ಘಟನೆಗಳ ಬಗ್ಗೆ ಹೆಚ್ಚು ಯೋಚಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. 

Vastu colour: ಮನೆಯ ಹೊರ ಗೋಡೆಗೆ ಯಾವ ಬಣ್ಣ ಬಳಸಿದ್ರೆ ಬೆಸ್ಟ್?

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಉದ್ಯಮವನ್ನು ಮುನ್ನಡೆಸಲು ಸೂಕ್ತವಾದ ಯೋಜನೆ ರೂಪಿಸುತ್ತೀರಿ. ಇಂದು ಎಲ್ಲ ಕೆಲಸಗಳನ್ನು ಆತ್ಮವಿಶ್ವಾಸದಿಂದ ಮಾಡಿ ಮುಗಿಸುತ್ತೀರಿ. ಸ್ನೇಹಿತರಿಗೆ ಅಗತ್ಯ ನೆರವು ಒದಗಿಸುತ್ತೀರಿ. ನಿಮ್ಮ ಕೆಲಸಗಳಿಗೆ ಕುಟುಂಬ ಸದಸ್ಯರ ಬೆಂಬಲ ದೊರಕಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಇಂದು ನಿಮಗೆ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಗಳು ದೊರಕಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಲಹೆಗಳಿಗೆ ಮನ್ನಣೆ ಸಿಗಲಿದೆ. 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಹಳೆಯ ಆಸ್ತಿಗೆ ಸಂಬಂಧಿಸಿ ವಿವಾದ ಸೃಷ್ಟಿಯಾಗುವ ಸಾಧ್ಯತೆಯಿದೆ. ಪರಿಸ್ಥಿತಿಯನ್ನು ತಾಳ್ಮೆಯಿಂದ ನಿರ್ವಹಿಸಿ. ನೀವು ಕೈಗೊಳ್ಳುವ ಹೊಸ ಕಾರ್ಯದಲ್ಲಿ ಸ್ನೇಹಿತರ ಬೆಂಬಲ ಸಿಗಲಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿದ್ರೆ ಬೇಸರಪಡಬೇಡಿ. ಪ್ರಯತ್ನ ಮುಂದುವರಿಸಿ. ಬಹುದಿನಗಳ ಬಳಿಕ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಮಧ್ಯಾಹ್ನದ ಬಳಿಕ ಖುಷಿಯಿಂದ ಸಮಯ ಕಳೆಯಲಿದ್ದೀರಿ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಉದ್ಯಮ ಕ್ಷೇತ್ರದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತೀರಿ. ಆತ್ಮವಿಶ್ವಾಸದಿಂದ ಕೆಲಸಗಳನ್ನು ಕೈಗೊಳ್ಳುವ ಮೂಲಕ ಅದರಲ್ಲಿ ಯಶಸ್ಸು ಕೂಡ ಗಳಿಸುತ್ತೀರಿ. ಬಹುದಿನದ ನಿಮ್ಮ ಕನಸು ಇಂದು ನನಸಾಗಲಿದೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ನಿಮಗೆ ಗೆಲುವು ಸಿಗಲಿದೆ. ಇಂದು ನಿಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಇತರರು ಗುರುತಿಸುತ್ತಾರೆ. ಕೆಲಸದ ಸ್ಥಳದಲ್ಲಿ ಮನ್ನಣೆ ಸಿಗಲಿದೆ. 

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ನಿಮ್ಮ ಬಲಹೀನತೆ ಏನು ಎಂಬುದು ಇಂದು ನಿಮ್ಮ ಅರಿವಿಗೆ ಬರಲಿದೆ. ಭವಿಷ್ಯದ ಬಗ್ಗೆ ಹೊಸ ಕನಸುಗಳನ್ನು ಕಾಣಲು ಇದು ಸೂಕ್ತ ಸಮಯ. ವೃತ್ತಿ ಬದಲಾವಣೆ ಬಗ್ಗೆ ಯೋಚಿಸುತ್ತೀರಿ. ಸಮೀಪದ ಬಂಧುಗಳ ಭೇಟಿಯಿಂದ ಮನಸ್ಸಿಗೆ ಖುಷಿ. ಹಲವು ದಿನಗಳಿಂದ ಬಾಕಿ ಉಳಿದಿರುವ ಕೆಲಸ ಇಂದು ಪೂರ್ಣಗೊಳ್ಳಲಿದೆ. ಇಂದಿನ ಇಡೀ ದಿನ ನೆಮ್ಮದಿಯಿಂದ ಕೂಡಿರುತ್ತದೆ. 

ಇಷ್ಟು ಶುಕ್ರವಾರ Vaibhav Laxmi Vrat ಆಚರಿಸಿದ್ರೆ ಹಣದ ಕೊರತೆ ಇರದು!

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುತ್ತೀರಿ. ಕೆಲಸದೊತ್ತಡದಿಂದ ಕುಟುಂಬ ಸದಸ್ಯರಿಗೆ ಇಂದು ಹೆಚ್ಚಿನ ಸಮಯ ನೀಡಲು ಸಾಧ್ಯವಾಗೋದಿಲ್ಲ. ಕೆಲಸದ ಸ್ಥಳದಲ್ಲಿ ನಿಶ್ಚಿತ ಫಲಿತಾಂಶ ಸಿಗದೆ ಮನಸ್ಸಿಗೆ ಕಿರಿಕಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲು ಹೆಚ್ಚಿನ ಪರಿಶ್ರಮ ಅಗತ್ಯ. ಕುಟುಂಬದ ಹಿರಿಯರಿಂದ ಸೂಕ್ತವಾದ ಮಾರ್ಗದರ್ಶನ ಸಿಗಲಿದ್ದು, ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಇಂದು ನೀವು ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಸಿಗಲಿದೆ. ಭವಿಷ್ಯದಲ್ಲಿ ಹೂಡಿಕೆಗೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೀರಿ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಆತ್ಮವಿಶ್ವಾಸ ಹಾಗೂ ಸಾಕಾರಾತ್ಮಕ ಮನೋಭಾವದಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಗಳಿಸುತ್ತೀರಿ. 
 

Follow Us:
Download App:
  • android
  • ios