9 ಮಾರ್ಚ್ 2022, ಬುಧವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಮೀನಕ್ಕೆ ಹೆಚ್ಚುವ ಆತ್ಮವಿಶ್ವಾಸ
ಮೇಷ(Aries): ಆರೋಗ್ಯ ಸಮಸ್ಯೆ ಹೆಚ್ಚಲಿದೆ. ದೂರದ ಸ್ನೇಹಿತರ ಸಹಕಾರದಿಂದ ಕೆಲ ಕಾರ್ಯಗಳು ಯಶಸ್ವಿಯಾಗಲಿವೆ. ಕೆಟ್ಟ ಚಟಗಳಿಂದ ಗೌರವ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ವಂಚನೆ ಸಾಧ್ಯತೆ. ಪ್ರಯಾಣದಲ್ಲಿ ತೊಡಕುಗಳು ಹೆಚ್ಚಬಹುದು. ಗಣಪತಿ ಸ್ಮರಣೆ ಮಾಡಿ.
ವೃಷಭ(Taurus): ಕೇವಲ ಮತ್ತೊಬ್ಬರ ಕ್ಷೇಮವನ್ನು ನೋಡುತ್ತಾ ನಿಮ್ಮ ಆರೋಗ್ಯ ಕಡೆಗಣಿಸದಿರಿ. ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ಕೇಳಿ ಸಂತೋಷ ಹೆಚ್ಚುವುದು. ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆ. ಹಳೆಯ ಗಾಯವನ್ನೇ ಕೆರೆದುಕೊಂಡು ದೊಡ್ಡದಾಗಿಸಿಕೊಳ್ಳಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಮಿಥುನ(Gemini): ದಿನದ ಆರಂಭವು ಉತ್ತಮವಾಗಿರಲಿದೆ. ಶುಭ ಸುದ್ದಿಗಳು ಕಿವಿಗೆ ಬೀಳಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬಂದು ಮನೆಯಲ್ಲಿ ಸಂತಸದ ವಾತಾವರಣ ಏರ್ಪಡುವುದು. ಧೈರ್ಯ, ಆತ್ಮವಿಶ್ವಾಸ ಹೆಚ್ಚಲಿದೆ. ಗಣಪತಿ ಆರಾಧನೆ ಮಾಡಿ.
ಕಟಕ(Cancer): ಮಾಡದ ತಪ್ಪಿಗೆ ಅಪವಾದ ಎದುರಿಸಬೇಕಾಗಬಹುದು. ಅಲ್ಪ ಆದಾಯ. ಎಲೆಕ್ಟ್ರಾನಿಕ್ ಉಪಕರಣಗಳು ರಿಪೇರಿಗೆ ಬಂದು ಕಿರಿಕಿರಿಯಾಗಬಹುದು. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ನಿಮ್ಮ ಹಟಮಾರಿತನದಿಂದ ಕುಟುಂಬಕ್ಕೆ ಸಮಸ್ಯೆಗಳು ಹೆಚ್ಚಬಹುದು. ಕೋಪ ನಿಯಂತ್ರಿಸಿಕೊಳ್ಳಿ. ಗಣಪತಿಗೆ 21 ದರ್ಬೆ ಅರ್ಪಿಸಿ.
ಸಿಂಹ(Leo): ಮನಸ್ಸು ವ್ಯಾಕುತಲೆಗೊಳಗಾಗಿ, ಎಲ್ಲ ವಿಷಯಕ್ಕೂ ಕೋಪ ಬರಬಹುದು. ಕಚೇರಿಯಲ್ಲಿ ಕೆಲಸಗಳು ಹೆಚ್ಚಲಿವೆ. ಜವಾಬ್ದಾರಿ ಬದಲಾಗಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ಅಲ್ಪಲಾಭವಿರಲಿದೆ. ಏನೇ ಪ್ರಯತ್ನ ಹಾಕಿದರೂ ಫಲ ದೊರೆಯುತ್ತಿಲ್ಲವಲ್ಲ ಎನಿಸಬಹುದು. ವಿನಾಯಕನಿಗೆ ಕಡಲೆ ನೈವೇದ್ಯ ಮಾಡಿ.
ಕನ್ಯಾ(Virgo): ಸಹೋದರರ ಸಹಕಾರದಿಂದ ಗೃಹ ಕಾರ್ಯಗಳು ಸುಲಭವಾಗುವುವು. ಪ್ರಗತಿಯ ಹಲವು ಮಾರ್ಗಗಳು ತೆರೆಯಲಿವೆ. ಸಂಗಾತಿಯೊಂದಿಗೆ ಮೌನ ಯುದ್ಧ ನಡೆಯಬಹುದು. ಕಚೇರಿಯಲ್ಲಿ ಕೆಲಸಗಳು ಹೆಚ್ಚಲಿವೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.
ಕುಜದೋಷ ನಿವಾರಿಸುವ ತಾಮ್ರ, ಯಾರೆಲ್ಲ ಧರಿಸಬಹುದು?
ತುಲಾ(Libra): ಸಣ್ಣಪುಟ್ಟ ವಿಷಯವನ್ನೇ ದೊಡ್ಡದಾಗಿ ಎಳೆದಾಡಿ ಮನಃಶಾಂತಿ ಹಾಳು ಮಾಡಿಕೊಳ್ಳುವಿರಿ. ಇಂದು ಹೊರ ಹೋಗುವಾಗ ಅತ್ಯಂತ ಜಾಗರೂಕರಾಗಿರಿ. ವಸ್ತು ನಷ್ಟ ಸಾಧ್ಯತೆ ಇದೆ. ಇಡೀ ದಿನ ಮೈಯ್ಯೆಲ್ಲ ಕಣ್ಣಾಗಿರಿ. ವ್ಯಾಪಾರಿಗಳಿಗೆ ನಷ್ಟ. ಖಿನ್ನತೆ ಆವರಿಸಬಹುದು. ಕುಲದೇವರ ಸ್ಮರಣೆ ಮಾಡಿ.
ವೃಶ್ಚಿಕ(Scorpio): ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆಗಳು ಹೆಚ್ಚಲಿವೆ. ಬಹಳ ನಿರೀಕ್ಷೆಯಿಟ್ಟುಕೊಂಡಿದ್ದ ವಿಷಯವೊಂದು ನಿರಾಸೆ ಮೂಡಿಸುವುದು. ವಾಹನ ಅಪಘಾತ ಸಾಧ್ಯತೆ ಇದ್ದು ಇದು ಅಪಾಯದ ದಿನವಾಗಿದೆ. ವಾಹನ ಬಳಸದಿದ್ದರೂ ಉತ್ತಮ. ಬಡವರಿಗೆ ದಾನ ಮಾಡಿ.
Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!
ಧನುಸ್ಸು(Sagittarius): ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ನೀವು ಮುಂದಿರುವಿರಿ. ಅದೃಷ್ಟದ ಬೆಂಬಲ ನಿಮ್ಮದಾಗಲಿದೆ. ನಿಮ್ಮ ಮಹತ್ವಾಕಾಂಕ್ಷೆ ಸಾಧನೆಗೆ ಪ್ರೇರೇಪಿಸಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡುವರು. ಗೋ ಗ್ರಾಸ ನೀಡಿ.
ಮಕರ(Capricorn): ಆನ್‌ಲೈನ್ ವ್ಯವಹಾರಗಳನ್ನೂ ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಸಿ. ನೆಂಟರಿಷ್ಟರ ನಡೆಗಳು ಮನಸ್ಸಿನಲ್ಲಿ ಕ್ಲೇಶ ಉಂಟು ಮಾಡಬಹುದು. ಬೇಡದ ಅತಿಥಿಯ ಆಗಮನವಾಗಬಹುದು. ತೀರಾ ನಂಬಿದವರಿಂದಲೇ ಮೋಸವಾಗಬಹುದು. ಪಕ್ಷಿಗಳಿಗೆ ಕಾಳು ತಿನ್ನಿಸಿ.
ಕುಂಭ(Aquarius): ಕಚೇರಿಯಲ್ಲಾಗುವ ದೊಡ್ಡ ಬದಲಾವಣೆ ನಿಮ್ಮ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದು. ಇಂದು ಯಾರಿಗೂ ಸಾಲ ನೀಡಬೇಡಿ. ಅದು ಮರಳುವ ಸಾಧ್ಯತೆ ಕಡಿಮೆ. ದಾಂಪತ್ಯದಲ್ಲಿ ಅಸಮಾಧಾನ ಹೆಚ್ಚುವುದು. ಗಣಪತಿ ಶ್ಲೋಕ ಹೇಳಿಕೊಳ್ಳಿ.
ಮೀನ(Pisces): ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕಾರ್ಯ ಸಾಧನೆಯಾಗಲಿದೆ. ಬುದ್ಧಿ ಚುರುಕಾಗಿದ್ದು, ಆತ್ಮವಿಶ್ವಾಸ ಹೆಚ್ಚಲಿದೆ. ನಿರುದ್ಯೋಗಿಗಳು ಉದ್ಯೋಗ ಅವಕಾಶಗಳು ಲಭಿಸಲಿವೆ. ಹಿಂದೆ ಮಾಡಿದ ಉತ್ತಮ ಕೆಲಸಗಳ ಫಲವಾಗಿ ಇಂದು ಸಂತೋಷವಾಗಿರಲಿದ್ದೀರಿ. ನವಗ್ರಹ ಶ್ಲೋಕ ಹೇಳಿ.
