3 ಫೆಬ್ರವರಿ 2022, ಗುರುವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಸಿಂಹಕ್ಕೆ ದೊಡ್ಡ ನಿರ್ಧಾರ ತರಲಿದೆ ಸಮಾಧಾನ, ಉಳಿದ ರಾಶಿಗಳ ಫಲ ಏನಿದೆ?
ಮೇಷ(Aries): ಹೊಸ ಪರಿಚಯಗಳಿಂದ ಮನಸ್ಸು ಉಲ್ಲಸಿತವಾಗುವುದು. ಲೇವಾದೇವಿ, ಷೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಹವ್ಯಾಸಗಳು ಆರ್ಥಿಕವಾಗಿ ಲಾಭ ತಂದುಕೊಡಲಿವೆ, ಅವಕಾಶಗಳನ್ನೂ ಗಿಟ್ಟಿಸಲಿವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಅಶ್ವತ್ಥ ಮರಕ್ಕೆ ದೀಪ ಹಚ್ಚಿ ನಮಸ್ಕರಿಸಿ.
ವೃಷಭ(Taurus): ಮನೆ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಸೂಕ್ತ ಮನೆ ದೊರಕುವುದು. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಸ್ನೇಹಿತರ ಸಹಕಾರದಿಂದ ಅಂದುಕೊಂಡ ಕೆಲಸಗಳು ಆಗುವುವು. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕೊಂಚ ದಿಗಿಲು ಮೂಡಿಸಬಹುದು. ಗುರು ರಾಘವೇಂದ್ರರ ಸ್ಮರಣೆ ಮಾಡಿ.
ಮಿಥುನ(Gemini): ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆಯೇ ಇದೆ. ಮಾತಿನಲ್ಲಿ ಹಿಡಿತ ತಪ್ಪಿ ಮತ್ತೊಬ್ಬರ ಮನಸ್ಸನ್ನು ನೋಯಿಸಬೇಡಿ, ಮಾತಿನ ಕಾರಣದಿಂದ ಕೆಲಸಗಳೂ ಹಿಂದೆ ಬಿದ್ದಾವು. ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.
ಕಟಕ(Cancer): ಯಾವುದೋ ಭಯ ನಿಮ್ಮನ್ನು ಕಾಡಬಹುದು. ನಿಮ್ಮ ಪ್ರೀತಿಪಾತ್ರರ ನಡವಳಿಕೆ ಅನಿರೀಕ್ಷಿತವಾಗಿದ್ದು, ಬೇಸರ ಮೂಡಿಸಲಿದೆ. ಸ್ನೇಹಿತರ ವಲಯದಲ್ಲಿ ಅಪವಾದಕ್ಕೆ ಗುರಿಯಾಗುವಿರಿ. ಕೋರ್ಟ್ ವ್ಯವಹಾರಗಳಲ್ಲಿ ಹಿನ್ನಡೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಸಿಂಹ(Leo): ಬಹಳ ಕಾಲದಿಂದ ಗೊಂದಲಕ್ಕೆ ತಳ್ಳುತ್ತಿದ್ದ ದೊಡ್ಡ ನಿರ್ಧಾರವೊಂದರ ಗೊಂದಲಗಳಿಗೆ ತೆರೆ ಬೀಳಲಿದೆ. ಕಚೇರಿಯಲ್ಲಿ ವಿಪರೀತ ಕೆಲಸವಿದ್ದರೂ ಸುಲಲಿತವಾಗಿ ಅದನ್ನು ನಿಭಾಯಿಸುವಿರಿ. ಆರೋಗ್ಯ ರಕ್ಷೆ ಇರಲಿದೆ. ಶ್ರೀ ರಾಮ ಸ್ಮರಣೆ ಮಾಡಿ.
ಕನ್ಯಾ(Virgo): ಕಲೆ, ಸಂಗೀತ, ಮಾತುಗಾರಿಕೆ ಮುಂತಾದ ಪ್ರತಿಭಾ ಕ್ಷೇತ್ರಗಳಲ್ಲಿರುವವರಿಗೆ ಸುದಿನ. ನಿಮ್ಮ ಪ್ರತಿಭೆಗೆ ಶ್ಲಾಘನೆ ಜೊತೆಗೆ ಅವಕಾಶಗಳು ಹೆಚ್ಚಲಿವೆ. ವ್ಯಾಪಾರಿಗಳಿಗೆ ಲಾಭ ಇರಲಿದೆ. ಲೇವಾದೇವಿ ವ್ಯವಹಾರದಿಂದ ಲಾಭ ಇರಲಿದೆ. ದತ್ತಾತ್ರೇಯ ಸ್ಮರಣೆ ಮಾಡಿ.
Aksharabhyasam: ನಿಮ್ಮ ಪುಟ್ಟ ಕಂದನಿಗೆ ಅಕ್ಷರಾಭ್ಯಾಸ ಮಾಡಿಸಿದ್ರಾ?
ತುಲಾ(Libra): ಯಾರದೋ ಅವಮಾನದ ಮಾತಿಗೆ ಕುಗ್ಗದಿರಿ. ನಿಮ್ಮ ಕೆಲಸವೇ ಅವರಿಗೆ ಪ್ರತ್ಯುತ್ತರವಾಗಲಿದೆ. ಹಣದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆ ಇದೆ. ಹಿಂದೆ ಪಡೆದ ಸಾಲಗಳು ಕಂಗೆಡಿಸಲಿವೆ. ಯಾರನ್ನೂ ಅತಿಯಾಗಿ ನಂಬಬೇಡಿ. ಗುರು ರಾಘವೇಂದ್ರ ಶತ ನಾಮಾವಳಿ ಹೇಳಿಕೊಳ್ಳಿ.
ವೃಶ್ಚಿಕ(Scorpio): ಮನೆ ಸದಸ್ಯರ ಜಗಳಗಳಿಂದ ಕಂಗಾಲಾಗುವಿರಿ. ಧೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರ ಹಾಗೂ ಆರೈಕೆಯ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಆಪ್ತರೊಂದಿಗೆ ಮಾತಿಗೆ ಮಾತು ಬೆಳೆದೀತು. ಪ್ರೇಮ ವ್ಯವಹಾರಗಳಲ್ಲಿ ಮುನಿಸು. ಧನ್ವಂತರಿ ಸ್ಮರಣೆ ಮಾಡಿ.
ಧನುಸ್ಸು(Sagittarius): ಸುಮ್ಮನೆ ಕನಸು ಕಾಣುತ್ತಾ ಕಾಲಹರಣ ಮಾಡುವಿರಿ. ಶಾಪಿಂಗ್ ಮಾಡಿ ನಂತರ ಧನವ್ಯಯ ಎಂದು ಕೊರಗುವಿರಿ. ದೇವರ ವಿಚಾರಗಳಲ್ಲಿ ಅಸಡ್ಡೆ ಬೇಡ. ತಂದೆತಾಯಿಯ ಸಲಹೆಗಳನ್ನು ಪರಿಗಣಿಸುವುದರಿಂದ ಒಳಿತಾಗಲಿದೆ. ಅವರ ಆಶೀರ್ವಾದ ಪಡೆಯಿರಿ.
Zodiac Traits: ರಾಶಿ ಅನುಸಾರ, ನಿಮ್ಮನ್ನು ಜನ ದ್ವೇಷಿಸೋದು ಈ ಒಂದು ಕಾರಣಕ್ಕೆ!
ಮಕರ(Capricorn): ಹೆಚ್ಚಲಿರುವ ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಪ್ರಶಂಸೆ. ನಿರುದ್ಯೋಗಿಗಳಿಗೆ ಅವಕಾಶಗಳು ಎದುರಾಗುವುವು. ಪ್ರವಾಸದ ಯೋಜನೆಗಳಲ್ಲಿ ತೊಡಗಿ ಮನೋಲ್ಲಾಸ ಹೆಚ್ಚುವುದು. ಕೃಷ್ಣನಿಗೆ ತುಳಸಿ ಅರ್ಪಿಸಿ.
ಕುಂಭ(Aquarius): ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಿರಿ. ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಂಡುಬರುವುದು. ಮನೆಯು ಶುಭ ಕಾರ್ಯಕ್ಕೆ ಸಜ್ಜಾಗಲಿದೆ. ಹೋಮ ಹವನಗಳಿಂದ ಧನಾತ್ಮಕ ಶಕ್ತಿ ಹೆಚ್ಚಲಿದೆ. ಮಹಾಲಕ್ಷ್ಮೀ ಆರಾಧನೆ ಮಾಡಿ.
ಮೀನ(Pisces): ಕೈಗೊಂಡ ವಿಶೇಷ ಕಾರ್ಯಗಳಲ್ಲಿ ಗೆಲುವಾಗಿ ಆತ್ಮವಿಶ್ವಾಸ ಹೆಚ್ಚಲಿದೆ. ಪ್ರೀತಿಪಾತ್ರರ ಇಷ್ಟಾರ್ಥ ನೆರವೇರಿಸುವಿರಿ. ಪ್ರೇಮ ವ್ಯವಹಾರಗಳಲ್ಲಿ ಸಂತಸ. ವಾಹನ ಖರೀದಿ ಮಾಡಬಹುದು. ಮನೆಗೆ ಹೊಸ ವಸ್ತುಗಳ ಆಗಮನದಿಂದಾಗಿ ಹೆಚ್ಚುವ ಸಂತಸ. ಹಸುವಿಗೆ ಹೊಟ್ಟೆ ತುಂಬಿಸಿ.
