Astrology Tips for Wealth: ಸಮೃದ್ಧಿ ಮತ್ತು ಹಣಕಾಸು ಹೆಚ್ಚಿಸುವ ರತ್ನಗಳು ಇವು!
ಅದೃಷ್ಟ ಖುಲಾಯಿಸುತ್ತೆ ಎಂದರೆ ನಮ್ಮ ಜನ ಏನು ಬೇಕಾದರೂ ಮಾಡಲು ಸಿದ್ಧ. ಅದೃಷ್ಟ ಮನೆ ಬಾಗಿಲಿಗೆ ಬಂದರೆ ಯಾರು ತಾನೆ ಬೇಡ ಎನ್ನುತ್ತಾರೆ ಹೇಳಿ. ಸಂಪತ್ತು ಹೆಚ್ಚಿಸಲು ಗಿಡಗಳಿಂದ ಹಿಡಿದು ಕ್ರಿಸ್ಟಲ್‌ಗಳ ವರೆಗೂ ಪ್ರಭಾವಿಸುತ್ತದೆ. ಹಣಕಾಸಿನ ಸಮೃದ್ಧಿಯನ್ನು ಸೃಷ್ಟಿಸಲು ಗುಣಲಕ್ಷಣಗಳನ್ನು ಹೊಂದಿರುವ ಕೆಲವು ಹರಳುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಅದೃಷ್ಟ ಖುಲಾಯಿಸುತ್ತೆ ಎಂದರೆ ನಮ್ಮ ಜನ ಏನು ಬೇಕಾದರೂ ಮಾಡಲು ಸಿದ್ಧ. ಅದೃಷ್ಟ ಮನೆ ಬಾಗಿಲಿಗೆ ಬಂದರೆ ಯಾರು ತಾನೆ ಬೇಡ ಎನ್ನುತ್ತಾರೆ ಹೇಳಿ. ಸಂಪತ್ತು ಹೆಚ್ಚಿಸಲು ಗಿಡಗಳಿಂದ ಹಿಡಿದು ಕ್ರಿಸ್ಟಲ್‌ಗಳ ವರೆಗೂ ಪ್ರಭಾವಿಸುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ ರತ್ನಗಳು ಕೆಲ ದೇವರ ಪ್ರತಿ ರೂಪವಾಗಿ ಕೆಲಸ ಮಾಡುತ್ತವೆ. ಹಾಗಾಗಿ ಅವು ಸಂಪತ್ತು, ಸಮೃದ್ಧಿ, ನೆಮ್ಮದಿಯನ್ನು ನಮ್ಮ ಜೀವನದಲ್ಲಿ ತಂದುಕೊಡುತ್ತವೆ. ಕೇವಲ ಶೋ ಪೀಸ್ ಆಗಿಯೋ, ಆಭರಣವಾಗಿ ಅಲ್ಲದೆ ತಮ್ಮ ಶಕ್ತಿಯಿಂದ ಉದ್ದೇಶವನ್ನು ಪೂರೈಸುತ್ತವೆ. ವಿವಿಧ ರೀತಿಯ ಹರಳುಗಳಿವೆ, ಆದ್ದರಿಂದ ಸಂಪತ್ತಿಗೆ ಸರಿಯಾದದನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಏಕೆಂದರೆ ನೀವು ಸಾಧಿಸಲು ಬಯಸುವ ಗುರಿಗಳನ್ನು ಅದು ನಿಮಗೆ ನೆನಪಿಸುತ್ತದೆ. ಹಣಕಾಸಿನ ಸಮೃದ್ಧಿಯನ್ನು ಸೃಷ್ಟಿಸಲು ಗುಣಲಕ್ಷಣಗಳನ್ನು ಹೊಂದಿರುವ ಕೆಲವು ಹರಳುಗಳ ಬಗ್ಗೆ ಇಲ್ಲಿದೆ ಮಾಹಿತಿ.
1. ಸಿಟ್ರಿನ್ ಕ್ರಿಸ್ಟಲ್(Citrine)
ಈ ಹಳದಿ ರತ್ನವು ಸಂಪತ್ತಿನ ಕಲ್ಲು, ವ್ಯಾಪಾರಿ ಕಲ್ಲು ಎಂದು ಕರೆಯಲಾಗುತ್ತದೆ. ಸಮೃದ್ಧಿಯನ್ನು ಆಕರ್ಷಿಸಲು ಇದು ಅತ್ಯುತ್ತಮವಾಗಿದೆ. ಫೆಂಗ್ ಶೂಯಿ ಪ್ರಕಾರ ಈ ಸಿಟ್ರಿನ್ ಸ್ಫಟಿಕವನ್ನು ೮ರ ಅವಧಿüಯಲ್ಲಿ ಅತ್ಯಂತ ಉಪಯುಕ್ತ ಮತ್ತು ಪ್ರಾಯೋಗಿಕವಾಗಿ ಕಂಡುಕೊAಡಿದ್ದಾರೆ. ಈ ಸಿಟ್ರಿನ್ ಕಲ್ಲನ್ನು ಬ್ರೇಸ್ಲೆಟ್, ಬಳೆ, ಕಿವಿಯೋಲೆ, ಆಭರಣವಾಗಿಯೂ ಧರಿಸಬಹುದು. ಪರ್ಯಾಯವಾಗಿ ಉತ್ತಮ ಫಲಿತಾಂಶಕ್ಕಾಗಿ ಸಿಟ್ರಿನ್ ಸ್ಫಟಿಕವನ್ನು ಮನೆ ಮತ್ತು ಕಚೇರಿಯ ಸಂಪತ್ತಿನ ವಲಯಗಳಲ್ಲಿ ಇರಿಸಬಹುದು. ಇದು ಸಂಪತ್ತನ್ನು ಮ್ಯಾಗ್ನೆಟ್‌ನಂತೆ ಸೆಳೆಯುತ್ತದೆ.
ಇದನ್ನೂ ಓದಿ: ಈ ರತ್ನಗಳನ್ನು ತಪ್ಪಿಯೂ ಜೊತೆಯಾಗಿ ಧರಿಸಬೇಡಿ!
2. ಪರ್ಪಲ್ ಅಮೆಥಿಸ್ಟ್(Amethyst)
ಪರ್ಪಲ್ ಅಮೆಥಿಸ್ಟ್ ಬುದ್ಧಿವಂತಿಕೆಯ ಕಲ್ಲಾಗಿದೆ. ಇದು ಆಂತರಿಕ ಶಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಜೀವನದಲ್ಲಿ ಸಮತೋಲನವನ್ನು ಪುನಃ ಸ್ಥಾಪಿಸುತ್ತದೆ. ಇದು ಹಣಕಾಸಿನ ಅಡೆತಡೆ ಅಥವಾ ನಿರ್ಬಂಧಗಳೊAದಿಗೆ ಸಂಪತ್ತನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಸಂಪತ್ತಿನ ಪ್ರದೇಶದಲ್ಲಿ ನೇರಳೆ ಅಮೆಥಿಸ್ಟ್ ಜಿಯೋಡ್ ಗುಹೆಯನ್ನು ಇಡುವುದು ಒಳ್ಳೆಯದು. ಏಕೆಂದರೆ ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಆ ಪ್ರದೇಶವನ್ನು ಶಕ್ತಿಯುತಗೊಳಿಸಲು ಸಹಾಯ ಮಾಡುತ್ತದೆ.
3. ಕ್ಲಿಯರ್ ಕ್ವಾಡ್ಜ್(Clear Quartz)
ಇದು ಸಂಪತ್ತು ಸೇರಿದಂತೆ ಶಕ್ತಿ ಮತ್ತು ಉದ್ದೇಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಣಕಾಸಿನ ಗುರಿಯನ್ನು ಸಾಧಿಸಲು ಬಯಸಿದರೆ, ನಿಮ್ಮ ಉದ್ದೇಶವನ್ನು ಬಲಪಡಿಸಲು ಈ ಕಲ್ಲನ್ನು ಬಳಸಿ. ಪರಿಣಾಮವನ್ನು ಹೆಚ್ಚಿಸಲು ಇತರೆ ಹಣದ ಹರಳುಗಳೊಂದಿಗೆ ಇದನ್ನು ಉತ್ತಮವಾಗಿ ಬಳಸಬಹುದು.
4. ಜೇಡ್(Jed)
ಈ ರತ್ನವು ಹೊಸ ಉದ್ಯಮಗಳಿಗೆ ಹಣ ಮತ್ತು ಅವಕಾಶಗಳನ್ನು ಪ್ರಕಟಿಸುವ ಅತ್ಯುತ್ತಮ ಹರಳುಗಳಲ್ಲಿ ಒಂದಾಗಿದೆ. ವ್ಯಾಪಾರ ಸಭೆಗಳಂತಹ ಪ್ರಮುಖ ಘಟನೆಗಳಿಗೆ ಹೋದಾಗಲೆಲ್ಲಾ ಜನರು ಈ ರತ್ನವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಜೇಡ್ ರತ್ನವು ಅದೃಷ್ಟವನ್ನು ತರುತ್ತದೆ ಮತ್ತು ಯಶಸ್ಸಿನ ಅವಕಾಶವನ್ನು ಹೆಚ್ಚಿಸುತ್ತದೆ. ಫೆಂಗ್ ಶೂಯಿ ಪ್ರಕಾರ ಆನೆ ಮತ್ತು ಇತರೆ ಅನೇಕ ಅದೃಷ್ಟದ ಚಿಹ್ನೆಗಳು ಜೇಡ್‌ನಿಂದ ಮಾಡಿಸಿದರೆ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತದೆ.
ಇದನ್ನೂ ಓದಿ: ಈ ರತ್ನ ಧಾರಣೆ ಮಾತ್ರದಿಂದ ನಿಮ್ಮೊಳಗಿನ ಪ್ರತಿಭೆ ಹೊರ ಬರುತ್ತದೆ!
5. ಪೈರೈಟ್(Pirate)
ಪೈರೈಟ್‌ಅನ್ನು ನೋಡುವ ಮೂಲಕ ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುವ ಅಮೂಲ್ಯವಾದ ಚಿನ್ನವನ್ನು ಹೋಲುತ್ತದೆ. ಇದು ವ್ಯಾಪಾರ ಉದ್ಯಮಗಳು ಮತ್ತು ಶೈಕ್ಷಣಿಕ ಅನ್ವೇಷಣೆಗಳಲ್ಲಿ ಸಹಾಯ ಮಾಡುತ್ತದೆ. ಅದೃಷ್ಟವನ್ನು ಆಕರ್ಷಿಸುವ ಉದ್ದೇಶದಿಂದ ಅನೇಕ ಜನರು ಇದನ್ನು ಮನೆ ಮತ್ತು ಕಚೇರಿಯಲ್ಲಿ ಇಟ್ಟುಕೊಳ್ಳುತ್ತಾರೆ. ಅದೃಷ್ಟದ ಜೊತೆಗೆ ನಕಾರಾತ್ಮಕ ಶಕ್ತಿಯಿಂದ ನಿಮ್ಮನ್ನು ರಕ್ಷಿಸಲು ಇದು ರಕ್ಷಣಾತ್ಮಕ ಗುಣಲಕ್ಷಣವನ್ನು ಹೊಂದಿದೆ. ಆದ್ದರಿಂದ ಇದು ವಾಸಿಸಲು ಅಥವಾ ಕೆಲಸ ಮಡಲು ಹೆಚ್ಚು ಸಾಮರಸ್ಯದ ಜಾಗವನ್ನು ಸೃಷ್ಟಿಸುತ್ತದೆ ಮತ್ತು ಉತ್ತೇಜಿಸುತ್ತದೆ.