Asianet Suvarna News Asianet Suvarna News

ಚಿತ್ರದುರ್ಗ: ನಾಯಕನಹಟ್ಟಿತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ

ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಮಾಚ್‌ರ್‍ 10ರಂದು ಶುಕ್ರವಾರ ನಡೆಯಲಿದ್ದು, ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಟ್ಟಿತಿಪ್ಪೇಶನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

Countdown to Nayakanahatti tipperudraswamy rathotsav at chitradurga tomarrow rav
Author
First Published Mar 9, 2023, 10:04 PM IST

ನಾಯಕನಹಟ್ಟಿ (ಮಾ.9) : ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಮಾರ್ಚ್ 10ರಂದು ಶುಕ್ರವಾರ ನಡೆಯಲಿದ್ದು, ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಟ್ಟಿತಿಪ್ಪೇಶನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಮಧ್ಯಕರ್ನಾಟಕ(Madhya karnataka)ದ ಐತಿಹಾಸಿಕ ನಾಯಕನಹಟ್ಟಿಜಾತ್ರೆ(Historical nayakanahatti jaatre)ಗೆ ನಾಡಿನ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾಧಿಗಳಿಗೆæ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ. ಜಾತ್ರೆ ಪ್ರಯುಕ್ತ ನಾಯಕನಹಟ್ಟಿಪಟ್ಟಣ ವಧುವಿನಂತೆ ಸಿಂಗಾರಗೊಂಡಿದೆ.

ಕಾಡುಗೊಲ್ಲರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮಾಜಿ ಶಾಸಕ ಎ.ವಿ ಉಮಾಪತಿ ಆಗ್ರಹ

ತಿಪ್ಪೇರುದ್ರಸ್ವಾಮಿ ದೇವಾಲಯ(Tipperudraswamy temple)ದ ಒಳಮಠ ಮತ್ತು ಹೊರಮಠದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಎರಡೂ ದೇವಾಲಯದ ಆವರಣ ಸ್ವಚ್ಛಗೊಳಿಸಲಾಗಿದೆ. ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡೂ ದೇವಾಲಯಗಳ ಆವರಣದಲ್ಲಿ ಬೃಹತ್‌ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಎಲ್ಲಾ ವಾರ್ಡ್‌ ಮತ್ತು ರಸ್ತೆ ಯ ಇಕ್ಕೆಲಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಕುಡಿಯುವ ನೀರಿಗೆ ವಿಶೇಷವಾದ ವ್ಯವಸ್ಥೆ ರೂಪಿಸಲಾಗಿದೆ.

ಸುಗಮ ಸಂಚಾರಕ್ಕೆ ವ್ಯವಸ್ಥೆ:

ಸುಗಮ ಸಂಚಾರಕ್ಕೆ ಪಟ್ಟಣದ 3 ಕಡೆಗಳಲ್ಲಿ ಬಸ್‌ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ-ಜಗಳೂರು- ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಪಟ್ಟಣದ ಗಂಗಯ್ಯನಹಟ್ಟಿಬಳಿ, ಬಳ್ಳಾರಿ-ಅನಂತಪುರ- ರಾಯದುರ್ಗ- ಕಲ್ಯಾಣದುರ್ಗ ಕಡೆಯಿಂದ ಬರುವ ವಾಹನಗಳಿಗೆ ತಳಕು ರಸ್ತೆಯ ಮದರಾಸದ ಬಳಿ, ಬೆಂಗಳೂರು- ತುಮಕೂರು- ಚಳ್ಳಕೆರೆ- ಚಿತ್ರದುರ್ಗ ಮಾರ್ಗದಿಂದ ಬರುವವರಿಗೆ ಮನಮೈನಹಟ್ಟಿಏಕಾಂತೇಶ್ವರ ದೇವಾಲಯದ ಬಳಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ದೇವಾಲಯದ ಬಳಿ ತೆರಳಲು ಆಟೋರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ.

200 ಜಾತ್ರಾ ವಿಶೇಷ ಬಸ್‌ಗಳು:

ರಥೋತ್ಸವದ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ ಘಟಕಗಳಿಂದ ಒಟ್ಟು 200 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಚಿತ್ರದುರ್ಗ-ನಾಯಕನಹಟ್ಟಿ, ಚಳ್ಳಕೆರೆ-ನಾಯಕನಹಟ್ಟಿ, ಹಿರಿಯೂರು-ನಾಯಕನಹಟ್ಟಿ, ನಾಯಕನಹಟ್ಟಿ-ಪರಶುರಾಂಪುರ ಮಾರ್ಗದಲ್ಲಿ ಬಸ್‌ ಸಂಚರಿಸಲಿವೆ.

ಪ್ರಾಣಿ ಬಲಿ ನಿಷೇಧ:

ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪ್ರಾಣಿಬಲಿ ಮಾಡಿ ಕಾನೂನು ಉಲ್ಲಂಘಿಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳೆಯರ ಪರವಾಗಿ ಗಂಡಂದಿರ ಅಧಿಕಾರ ನಡೆಸುವುದು ಬೇಡ: ಶಾಸಕ ತಿಪ್ಪಾರೆಡ್ಡಿ ಸಲಹೆ

ಸಿಂಗಾರಗೊಂಡ ರಥ:

ಜಾತ್ರೆಯ ಕೇಂದ್ರ ಬಿಂದು ದೊಡ್ಡ ರಥವಾಗಿದ್ದು, ಸುಮಾರು 80ಟನ್‌ ತೂಕವಿರುವ ಹಾಗೂ ಸುಮಾರು 75 ಅಡಿ ಎತ್ತರವಿದೆ. ರಥಕ್ಕೆ ಕಳೆದ ಎರಡು ದಿನಗಳಿಂದ ಬಣ್ಣಬಣ್ಣದ ಬಾವುಟಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಗೊಂಬೆಗಳು ಐತಿಹಾಸಿಕ ಘಟನೆಗಳ ಬಿಂಬಿಸುವ ಚಿತ್ರಪಟಗಳ ಅಳವಡಿಸಲಾಗಿದೆ.ರಥವನ್ನು ಎಳೆಯುವ 2ಅಡಿ ಸುತ್ತಳತೆ ಇರುವ ನೂತನ ಮಿಣಿ(ಹಗ್ಗ)ಯನ್ನು ಪರೀಕ್ಷಿಸಲಾಗಿದೆ. ಆ ಮೂಲಕ ಜಾತ್ರೆಗೆ ರಥವನ್ನು ಎಲ್ಲಾ ಹಂತದಲ್ಲೂ ಸಿದ್ಧಗೊಳಿಸಲಾಗಿದೆ.

Follow Us:
Download App:
  • android
  • ios