ಬಣ್ಣಗಳು ನಮ್ಮ ಬಾಳಿನಲ್ಲಿ ಬೆಳಕು ನೀಡುತ್ತವೆ. ವಾರದ ಏಳೂ ದಿನ ಬೇರೆ ಬೇರೆ ದೇವರಿಗೆ ಮೀಸಲಾಗಿದೆ. ಹಾಗೆಯೇ ವಾರದ ಏಳೂ ದಿನ ಬಣ್ಣಗಳು ಬೇರೆಯಾಗಿವೆ. ಶನಿವಾರ ಜನಿಸಿದವರು ಎಲ್ಲ ಬಣ್ಣ ಬಳಸುವಂತಿಲ್ಲ. ಕೆಲ ಬಣ್ಣ ಅವರ ಬಾಳಿಗೆ ಮುಳುವಾಗುತ್ತೆ.  

ನಾವು ಯಾವುದಾದರೂ ಒಂದು ಕೆಲಸವನ್ನು ಆರಂಭಿಸುವಾಗ ಒಳ್ಳೆಯ ದಿನ, ಘಳಿಗೆಗಳನ್ನು ನೋಡ್ತೇವೆ. ಮದುವೆಯಂತಹ ಶುಭ ಕಾರ್ಯಗಳನ್ನು ಮಾಡುವಾಗ, ಮಗು ಹುಟ್ಟಿದ ತಕ್ಷಣ ಕೂಡ ಘಳಿಗೆ ಚೆನ್ನಾಗಿದೆಯಾ ಎಂದು ನೋಡ್ತಾರೆ. ಒಳ್ಳೆಯ ಕೆಲಸವನ್ನು ಮಂಗಳವಾರ, ಶುಕ್ರವಾರ ಮಾಡಿ. ಸೋಮವಾರ ಈಶ್ವರನನ್ನು ಪೂಜಿಸಿ.. ಹೀಗೆ ವಾರದ ಏಳು ದಿನವೂ ಕೂಡ ಒಂದೊಂದು ರೀತಿಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಹಾಗೆ ಬಣ್ಣ ಕೂಡ ಕೆಲವು ಸಂಕೇತಗಳನ್ನು ನೀಡುತ್ತದೆ. ಉದಾಹರಣೆಗೆ ಕೆಂಪು ಪ್ರೀತಿಯ ಸಂಕೇತ, ಬಿಳಿ ಶಾಂತಿಯ ಸಂಕೇತ, ಹಸಿರು ಅಭಿವೃದ್ಧಿಯ ಸಂಕೇತವಾಗಿದೆ. ಅವರವರ ಹುಟ್ಟಿದ ವಾರಕ್ಕೆ ಅನುಗುಣವಾಗಿಯೂ ಬಣ್ಣಗಳು ಅವರ ಮೇಲೆ ಪ್ರಭಾವ ಬೀರುತ್ತದೆ. ಈಗ ನಾವು ಶನಿವಾರ ಹುಟ್ಟಿದವರಿಗೆ ಯಾವ ಬಣ್ಣ ಶ್ರೇಷ್ಠ, ಅವರು ಯಾವ ಬಣ್ಣವನ್ನು ಬಳಸಬಾರದು ಎಂಬುದರ ಕುರಿತು ಮಾಹಿತಿ ನೀಡ್ತೇವೆ.

Add Asianetnews Kannada as a Preferred SourcegooglePreferred

ಶನಿವಾರ (Saturday) ಹುಟ್ಟಿದವರ ಮೇಲೆ ಶನಿ ದೇವರ ಪ್ರಭಾವ ಹೆಚ್ಚಿಗೆ ಇರುತ್ತದೆ. ಶನಿವಾರ ಹುಟ್ಟಿದ ವ್ಯಕ್ತಿಗಳು ನೋಡಲು ಬಹಳ ಗಂಭೀರವಾಗಿ ಕಾಣಿಸಿದರೂ ಒಮ್ಮೆ ಅವರೊಡನೆ ಸ್ನೇಹ (Friendship) ಬೆಳೆಸಿದರೆ ಅವರು ಜನರಿಗೆ ಬಹಳ ಹತ್ತಿರವಾಗ್ತಾರೆ. ಇವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಹೋಗುವ ಸ್ವಭಾವ (Nature) ದವರಾಗಿರುತ್ತಾರೆ. ಇವರು ಜೀವನದಲ್ಲಿ ತಾವು ಏನಾದರೂ ಸಾಧಿಸಿಬೇಕು ಎನ್ನುವ ಆಕಾಂಕ್ಷೆ ಮತ್ತು ಗುರಿಯನ್ನು ಹೊಂದಿರುತ್ತಾರೆ. ಆ ಗುರಿ ತಲುಪಲು ಬಹಳ ಪ್ರಯತ್ನಪಡುತ್ತಾರೆ. ಶನಿವಾರ ಹುಟ್ಟಿದವರು ಅಂತರ್ಮುಖಿಗಳಾಗಿದ್ದು ಬಹಳ ಧೈರ್ಯ (Courage) ವಂತರಾಗಿರುತ್ತಾರೆ. ಇವರು ಬಹಳ ಬೇಗ ಕೋಪಗೊಳ್ಳುವುದಿಲ್ಲ ಮತ್ತು ಬಡವರಿಗೆ ಸಹಾಯಮಾಡುವವರಾಗಿರುತ್ತಾರೆ.

ವೃತ್ತಿ ಜೀವನದ ಸಮಸ್ಯೆಗಳನ್ನು ನಿವಾರಿಸಲು ಫೆಂಗ್ ಶುಯಿಯ ಈ ನಿಯಮ ಪಾಲಿಸಿ

ಶನಿವಾರ ಹುಟ್ಟಿದವರು ಈ ಬಣ್ಣವನ್ನು ಬಳಸಿ : ನೀವು ಶನಿವಾರ ಹುಟ್ಟಿದವರಾಗಿದ್ದರೆ ಈ ಕೆಳಗಿನ ಬಣ್ಣಗಳು ನಿಮಗೆ ಅತ್ಯಂತ ಶುಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಈ ಬಣ್ಣವನ್ನು ಬಳಸಿದ್ದಲ್ಲಿ ನಿಮ್ಮ ಜೀವನದಲ್ಲಿ ಯಾವಾಗಲೂ ಸಮೃದ್ಧಿ ನೆಲೆಸುತ್ತದೆ.

ಕಪ್ಪು ಬಣ್ಣ ಶುಭ : ಶನಿವಾರದಂದು ಶನಿಯ ಪ್ರಭಾವ ಹೆಚ್ಚಿಗೆ ಇರುತ್ತದೆ. ಹಾಗಾಗಿ ಶನಿವಾರ ಜನಿಸಿದವರು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಶನಿಗ್ರಹದ ಪ್ರಭಾವ ನಿಮ್ಮ ಮೇಲಿರುತ್ತದೆ. ನೀವು ಯಾವುದಾದರೂ ಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ, ಸಂದರ್ಶನಕ್ಕೆ ಹೋಗುವಾಗ ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಂಡರೆ ಎಲ್ಲ ಕೆಲಸವೂ ಸಫಲವಾಗುತ್ತದೆ. ಮನೆಯಲ್ಲಿನ ಫರ್ನಿಚರ್ ಗಳಿಗೆ ಕೂಡ ಕಪ್ಪು ಬಣ್ಣವನ್ನು ಬಳಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

ನೀಲಿ ಬಣ್ಣವನ್ನೂ ಬಳಸಬಹುದು :  ಶನಿವಾರ ಹುಟ್ಟಿದವರು ಕಪ್ಪು ಬಣ್ಣವನ್ನು ಧರಿಸುವುದಿಲ್ಲ ಎಂದರೆ ನೀಲಿ ಬಣ್ಣವನ್ನು ಬಳಸಬಹುದು. ರಾಯಲ್ ಬ್ಲೂ ಅಥವಾ ಗಾಢ ನೀಲಿ ಬಣ್ಣದ ಬಟ್ಟೆ ಕೂಡ ನಿಮಗೆ ಶುಭ ಉಂಟುಮಾಡುತ್ತದೆ. ನೀಲಿ ಬಣ್ಣದ ಫರ್ನಿಚರ್ ಬಳಸುವುದರಿಂದಲೂ ಜೀವನದಲ್ಲಿ ಸಮೃದ್ಧಿ ಸಿಗಲಿದೆ.

ಬೂದು ಬಣ್ಣವನ್ನು ಬಳಸಿ : ಶನಿವಾರ ಹುಟ್ಟಿದವರಿಗೆ ಬೂದು ಬಣ್ಣ ಕೂಡ ಶುಭ ತರುತ್ತದೆ. ಈ ಬಣ್ಣವನ್ನು ನೀವು ಯಾವಾಗ ಬಳಸಿದರೂ ಶನಿದೇವರ ಪ್ರಭಾವವನ್ನು ಪಡೆಯುತ್ತೀರಿ. ಈ ಬಣ್ಣ ನಿಮ್ಮ ಜೀವನಕ್ಕೆ ಶುಭ ಸಂಕೇತ ನೀಡುತ್ತದೆ.

ಈ ಬಣ್ಣಗಳಿಂದ ದೂರವಿರಿ : ಕೆಂಪು ಬಣ್ಣ ಶನಿವಾರ ಹುಟ್ಟಿದವರಿಗೆ ಶ್ರೇಷ್ಠವಲ್ಲ. ಕೆಂಪನ್ನು ಮಂಗಳಗ್ರಹದ ಬಣ್ಣವೆಂದು ಹೇಳಲಾಗುತ್ತೆ. ಹಾಗಾಗಿ ಶನಿವಾರ ಜನಿಸಿದವರು, ಶನಿವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ಧರಿಸದೇ ಇರುವುದು ಒಳ್ಳೆಯದು. ಕೆಂಪು ನಿಮಗೆ ಇಷ್ಟವಾದ ಬಣ್ಣ ಎಂದಾದರೆ ಉಳಿದ ದಿನಗಳಲ್ಲಿ ಕೆಂಪು ಬಟ್ಟೆಯನ್ನು ಹಾಕಿಕೊಳ್ಳಿ.

ಈ ರಾಶಿಯವ್ರಿಗೆ ಲೌಡ್ ಮ್ಯೂಸಿಕ್, ಪಾರ್ಟಿಗಿಂತ… ಚೆನ್ನಾಗಿ ನಿದ್ದೆ ಮಾಡೋದೇ ಇಷ್ಟ!

ಶನಿವಾರ ಹುಟ್ಟಿದವರಿಗೆ ಹಳದಿ ಬಣ್ಣ ಕೂಡ ಒಳ್ಳೆಯದಲ್ಲ. ಈ ಬಣ್ಣ ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ಕೊಡುತ್ತದೆ. ಉಳಿದ ದಿನ ನೀವು ಹಳದಿ ಬಣ್ಣದ ಬಟ್ಟೆ ಧರಿಸಿದರೂ ಕೂಡ ಶನಿವಾರ ಮಾತ್ರ ಹಳದಿ ಬಣ್ಣದ ವಸ್ತ್ರ ಧರಿಸಬೇಡಿ.