Asianet Suvarna News Asianet Suvarna News

ಟಿ ಅಕ್ಷರದಿಂದ ಶುರುವಾಗೋ ಹೆಸರಿನವರು ಹುಟ್ಟಾ ತರಲೆಗಳು!

ಟಿ ಎಂಬ ಇಂಗ್ಲಿಷ್ ಲೆಟರ್‌ನಿಂದ ಆರಂಭವಾಗಓ ಹೆಸರಿನವರು ಹುಟ್ಟಾ ತರಲೆಗಳಾಗಿದ್ದರೂ ಅಪಾರ ಹೃದಯವಂತರಾಗಿರುತ್ತಾರೆ. ನೀವೂ ಹಾಗೇನಾ ಚೆಕ್ ಮಾಡಿ.

Charecters of persons whose name starts from T
Author
Bengaluru, First Published Apr 9, 2021, 2:55 PM IST

ತಂಟೆಮಾರಿ ಟಿ
ಟಿ ಅಕ್ಷರದಿಂದ ಶುರುವಾಗೋ ಹೆಸರಿನವರ ಒಂದು ಪ್ರಮುಖ ಲಕ್ಷಣ ಅಂದರೆ ತಂಟೆ, ತರಲೆ, ಚೇಷ್ಟೆ. ಸದಾ ಕಾಲ ಏನಾದರೊಂದು ತರಲೆ ಮಾಡದೇ ಇದ್ದರೆ ಇವರಿಗೆ ತಿಂದ ಅನ್ನ ಜೀರ್ಣ ಆಗುವುದೇ ಇಲ್ಲ. ತರಲೆ ಎಂದರೇನು ಸಾಮಾನ್ಯವೇ, ಅದು ಮನೆಯಲ್ಲೂ, ಕಚೇರಿಯಲ್ಲೂ ತರಲೆ ಮಾಡುತ್ತಲೇ ಇರುತ್ತಾರೆ. ಹಾಗಂತ ಕೆಡುಕು ಬುದ್ಧಿಯವರೇನೂ ಅಲ್ಲ. ತಾವು ಮಾಡಿದ ತರಲೆಯಿಂದ ಇನ್ನೊಬ್ಬರಿಗೆ ತೀರಾ ನೋವಾದರೆ ತಾವೇ ನೊಂದುಕೊಳ್ತಾರೆ. ಹಾಗಂತ ಮುಂದಿನ ಸಲ ತಂಟೆ ಮಾಡದೇ ಇರುವುದಿಲ್ಲ. ಹಾಗಂತ ಇವರು ಇನ್ನೊಬ್ಬರ ಸಹಾಯಕ್ಕೆ ಹೋಗದ ವಿಘ್ನಸಂತೋಷಿಗಳೂ ಅಲ್ಲ. ಅಕ್ಕಪಕ್ಕದವರು ಸಂಕಷ್ಟದಲ್ಲಿ ಇದ್ದಾಗ ಮೊದಲಿಗೆ ನೆರವಿಗೆ ಧಾವಿಸುವವರೇ ಇವರು. ಇವರೊಂಥರಾ ಹಲವು ವಿರುದ್ಧ ಗುಣಗಳ ಮೊತ್ತ. ಇನ್ನೊಬ್ಬರಿಗೆ ಕೇಡು ಮಾಡದ ತರಲೆತನವೂ ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆಯತನವೂ ಇವರಲ್ಲಿ ಸಮಾನವಾಗಿ ಇರುತ್ತೆ.

Charecters of persons whose name starts from T

ನಂಬಿಕೆಯುಳ್ಳವರು
ಇವರಲ್ಲಿ ನೀವು ನಂಬಿಕೆ ಇಡಬಹುದು. ನಂಬಿದ ವ್ಯಕ್ತಿಗಳಿಗೆ ಮೋಸ ಮಾಡುವವರಲ್ಲ. ಸಣ್ಣಪುಟ್ಟ ಚೇಷ್ಟೆ ಮಾಡಬಹುದು, ಆದರೆ ಕೊಟ್ಟ ಮಾತಿಗೆ ಮೋಸ ಮಾಡುವವರಲ್ಲ. ದಿಟ್ಟವಾಗಿ ತಾವು ಹಿಡಿದ ದಾರಿಯನ್ನು ಅನ್ವೇಷಿಸುತ್ತಾ ಮುಂದೆ ಹೋಗುವವರು. ಒಂದು ನಂಬಿಕೆಯನ್ನು ಹಿಡಿದುಕೊಂಡರೆ, ಅದನ್ನು ಸಾಧಿಸಲು ಶತಪ್ರಯತ್ನ ಮಾಡುವವರು. ಅಂದರೆ ಇವರು ದೇವರು ಇದ್ದಾನೆ ಎಂದು ನಂಬಿದರೆ ಆತ ಇದ್ದಾನೆ ಎಂದು ನೂರಕ್ಕೆ ನೂರು ನಂಬುತ್ತಾರೆ ಹಾಗೂ ತಮ್ಮ ಸುತ್ತ ಮುತ್ತ ಇರುವವರನ್ನು ಹಾಗೆ ನಂಬಿಸಲು ಯತ್ನವೂ ಮಾಡುತ್ತಾರೆ. ಕಚೇರಿ ಕೆಲಸದಲ್ಲಿ ಒಂದು ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ನಂಬಿದರೆ ಅದನ್ನು ಇತರರೂ ಮಾಡಲು ಸಾಕಷ್ಟು ಯತ್ನ ಮಾಡುತ್ತಾರೆ. ಹಾಗೇ ನೀವು ಇವರಿಗೆ ಸಾಲ ಕೊಡಬಹುದು. ಮರಳಿ ಕೊಡುವ ಸ್ವಾವ ಇವರದು. ಮರೆತುಬಿಡುವುದಿಲ್ಲ. ಆದರೆ ನೀವು ಇವರಿಂದ ಸಾಲ ಪಡೆಯುವುದಾದರೆ ಎಚ್ಚರಿಕೆ ಬೇಕು. ನಿಮ್ಮಿಂದ ಹೇಗಾದರೂ ವಸೂಲಿ ಮಾಡದೇ ಇರುವುದೇ ಇಲ್ಲ. ಪದೇ ಪದೇ ಕೇಳುತ್ತಲೇ ಇರುತ್ತಾರೆ. ಜೀವ ಹಿಂಡಿ ಬಿಡುತ್ತಾರೆ.

R‌ನಿಂದ ಶುರುವಾಗೋ ಹೆಸರಿನವರು ಬಂಡೆಗೆ ತಲೆ ಚಚ್ಚಿಕೊಳ್ಳುವವರು! ...

ಲವಲವಿಕೆಯ ವ್ಯಕ್ತಿತ್ವ
ಇವರೊಂದಿಗೆ ಪ್ರಯಾಣ ಹೋಗುವುದು ತುಂಬಾ ಮಜಾ ಕೊಡಬಲ್ಲದು. ಯಾಕೆಂದರೆ ಕ್ಷಣಕ್ಷಣಕ್ಕೂ ಪ್ರಯಾಣದ ದಾರಿಯನ್ನು ತಿರುಗಿಸಿ ಎಲ್ಲೆಲ್ಲಿಗೋ ಕೊಂಡೊಯ್ದು ಮಜಾ ತೆಗೆದುಕೊಳ್ಳುವ ಸ್ವಭಾವ ಇವರದಾಗಿರುತ್ತದೆ. ಜೋಗ್ ಜಲಪಾತಕ್ಕೆ ಹೋಗೋಣ ಎಂದು ಹೊರಟರೆ ನಯಾಗರಾ ಜಲಪಾತಕ್ಕೆ ಕೊಂಡೊಯ್ದರೂ ಆಯಿತು. ಅಂದರೆ ಇವರದು ಲವಲವಿಕೆ ಹಾಗೂ ಸದಾ ಅನ್ವೇಷಣೆಯ ಸ್ವಭಾವ. ಹೊಸಹೊಸ ಸಂಗತಿಗಳನ್ನು ಹುಡುಕುತ್ತಾ ಇರುತ್ತಾರೆ. ಪ್ರವಾಸ ಹೋದಲ್ಲಿ ಹೊಸ ರುಚಿಗಳು, ಹೊಸ ವೇಷಭೂಷಣ, ಉಡುಪುಗಳನ್ನೆಲ್ಲ ಟ್ರೈ ಮಾಡುತ್ತಾರೆ. ಹಾಗೇ ನಿಮ್ಮ ಕೌಟುಂಬಿಕ ಅಥವಾ ಕಚೇರಿ ಪಾರ್ಟಿಗಳಿಗೆ ಇವರು ಇದ್ದರೆ ಒಂದು ಬಗೆಯ ಕಳೆ ಇರುತ್ತದೆ. ನಗುತ್ತಾ ನಗಿಸುತ್ತಾ ಇರುತ್ತಾರೆ. ಇವರು ಎಣ್ಣೆ ಪಾರ್ಟಿಗಳಾಗಿದ್ದರೆ ಹೊಸ ಹೊಸ ಪಾನೀಯಗಳ ಪರಿಚಯ ನಿಮಗೂ ಮಾಡಿಸಬಹುದು. ಹಾಗೇ ತಿಂಡಿಗಳು ಸಹ.

ಜೆ ಅಕ್ಷರದಿಂದ ಶುರುವಾಗೋ ಹೆಸರಿನವರು ಗುಪ್ತ್‌ ಗುಪ್ತ್‌! ...

ಹೊಸ ಪ್ರಾಜೆಕ್ಟ್‌ಗಳು
ಕಚೇರಿಯಲ್ಲಿ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಸಲು ಇವರು ಸೂಕ್ತ ವ್ಯಕ್ತಿ. ಯಾವುದೇ ತಕರಾರು ಇಲ್ಲದೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುತ್ತಾರೆ ಹಾಗೂ ಮಾಡಿ ಮುಗಿಸುತ್ತಾರೆ. ಬುದ್ಧಿವಂತಿಕೆಯೊಂದಿಗೆ ಹೊಸ ವಿಷಯಗಳನ್ನು ಅನ್ವೇಷಿಸುವ ಪ್ರವೃತ್ತಿಯಿಂದಾಗಿ ಇವರಿಗೆ ಒಪ್ಪಿಸಿದ ಕೆಲಸಗಳು ನಾಜೂಕಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಆಗುತ್ತವೆ.

ಗಡ್ಡದಲ್ಲೂ ಅಡಗಿರಬಹುದು ಅದೃಷ್ಟ, ಆದರೆ... ...

ಕೌಟುಂಬಿಕ ಸೌಖ್ಯ
ಇವರು ಮನೆಯಲ್ಲಿದ್ದರೆ ಒಂದು ಮಧುರ ವಾತಾವರಣವನ್ನು ಸೃಷ್ಟಸುತ್ತಾರೆ. ಇವರು ಮನೆಯ ಯಜಮಾನ/ಯಜಮಾನಿ ಆಗಿದ್ದರೆ ಮನೆಯಿಡೀ ಉಲ್ಲಾಸದಲ್ಲಿ ಇರುತ್ತದೆ. ಮಕ್ಕಳಾಗಿದ್ದರೆ ಸದಾ ತಂಟೆ ಮಾಡುತ್ತ ಮನೆ ಘಂ ಅನ್ನುತ್ತಾ ಇರುತ್ತದೆ. ತಂದೆ ತಾಯಿಯ ಮಾತನ್ನು ಚಿಕ್ಕದಿರುವಾಗ ಕೇಳಲೊಲ್ಲರು. ದೊಡ್ಡವರಾದಂತೆ ತಮ್ಮ ನಿರಾಕರಣೆಗೆ ತರ್ಕವನ್ನು ಜೋಡಿಸುತ್ತಾರೆ. ಆದರೆ ಮುಂದಿನ ತಲೆಮಾರು ಸದಾ ಹಿಂದಿನ ತಲೆಮಾರಿಗಿಂತ ಹೆಚ್ಚು ಜಾಣ. ಹೀಗಾಗಿ ನೀವು ಇವರ ಮಾತನ್ನು ಕೇಳುವುದು ಒಳ್ಳೆಯದು.

Follow Us:
Download App:
  • android
  • ios