Asianet Suvarna News Asianet Suvarna News

ಕುಂಭ ರಾಶಿಯವರು ನಿಮ್ಮ ಪತ್ನಿಯಾದರೆ ನಿಮ್ಮ ಜೀವನ ಹೀಗಿರುತ್ತೆ!

ಕುಂಭ ರಾಶಿಯ ಮಹಿಳೆ ನಿಮ್ಮ ಜೀವನದ ಸಂಗಾತಿಯಾಗಿ ಬಂದರೆ ನಿಮ್ಮ ಜೀವನ ಹೇಗಿರುತ್ತದೆ ಎಂಬ ಕುತೂಹಲ ಇಲ್ಲವೇ. ಆಕೆ ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಬುದ್ದಿವಂತಿಕೆಯ ಕಾರಣದಿಂದ ಎಲ್ಲಾ ಜನರ ನಡುವೆಯೂ ಕೇಂದ್ರಬಿಂದುವಾಗಿ ಕಂಗೊಳಿಸುತ್ತಾಳೆ. ಇದರೊಂದಿಗೆ ಇನ್ನೂ ಯಾವೆಲ್ಲ ಗುಣಗಳನ್ನು ಆಕೆ ಹೊಂದಿದ್ದಾಳೆ ನೋಡಿ!

Characters of Aquarius women as wife
Author
First Published Dec 3, 2022, 6:26 PM IST

ಕುಂಭ ರಾಶಿಯಲ್ಲಿ ಜನಸಿದ ಮಹಿಳೆಯು ನಿಮ್ಮ ಹೆಂಡತಿಯಾಗಿ ಬಂದರೆ, ಆಕೆ ನಿಮ್ಮೊಂದಿಗೆ ಆರಾಮವಾಗಿರುತ್ತಾಳೆ ಮತ್ತು ಇತರ ಜನರು ಮಾಡುವ ರೀತಿಯಲ್ಲಿ ಗಾಸಿಪ್ ಮಾಡುವುದಿಲ್ಲ. ಅವಳು ಎಂದಾದರೂ ಮದುವೆಯಾಗಲು ನಿರ್ಧರಿಸಿದರೆ, ಮುಕ್ತ ಮನಸ್ಸಿನ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಇನ್ನೂ ಹಲವು ವಿಶಿಷ್ಟ ಮತ್ತು ಆಕರ್ಷಕ ವ್ಯಕ್ತಿತ್ವದ ಬಗ್ಗೆ ಹೆಚ್ಚು ಮಾಹಿತಿ ಇಲ್ಲಿದೆ..

ಸಾಧಿಸುವ  ಹಸಿವು:ಈ ಮಹಿಳೆ ಪ್ರಗತಿಶೀಲ ಬುದ್ಧಿಶಕ್ತಿ (Brilliance) ಮತ್ತು ಸಾಹಸಕ್ಕಾಗಿ ಬಹಳ ಹಸಿವನ್ನು ಹೊಂದಿದ್ದಾಳೆ. ಆದ್ದರಿಂದ, ಅವಳು ತನ್ನ ಸ್ವಂತ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾಳೆ.

ಇದನ್ನೂ ಓದಿ: ತುಲಾ ರಾಶಿಯವರು ನಿಮ್ಮ ಹೆಂಡತಿಯಾದರೆ, ಗಂಡಿನ ಜೀವನ ಹೇಗಿರುತ್ತೆ?

ಎಲ್ಲಾ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾಳೆ: ಈ ಮಹಿಳೆ ತನ್ನ ನೆರೆಹೊರೆಯವರೊಂದಿಗೆ ಒಳ್ಳೆಯ ಪಾರ್ಟಿಯನ್ನು (Party) ಆಚರಿಸಬಹುದು. ಜೊತೆಗೆ ಮನೆಗೆ ಹಿಂದಿರುಗಿ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪಟ್ಟನೆ ಮುಗಿಸುವುದು ಹೀಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಈಕೆಗೆ ಇದೆ. ಗಂಡನಿಗೆ ತೀವ್ರವಾದ ಪ್ರೇಮಿಯಾಗಬಹುದು ಮತ್ತು ಗಂಡನ ಅತ್ಯುತ್ತಮ ಗೆಳತಿಯಾಗಿ ಕೂಡ ಕಾಣಿಸಿಕೊಳ್ಳುತ್ತಾಳೆ.

ಆಧ್ಯಾತ್ಮಿಕತೆ (Spiritual): ಈ ಮಹಿಳೆಯ ವಿವಾಹ ಸಮಾರಂಭವು ಆಳವಾದ ಆಧ್ಯಾತ್ಮಿಕ ಮಹತ್ವದಿಂದ ತುಂಬಿರುತ್ತದೆ, ಇವರಿಬ್ಬರ ನಡುವಿನ ಪ್ರೀತಿಯನ್ನು (Love) ಸಂಪೂರ್ಣವಾಗಿ ವ್ಯಕ್ತಪಡಿಸುತ್ತದೆ ಮತ್ತು ಭಾವನೆಗಳ ವ್ಯಾಪ್ತಿಯನ್ನು ಪ್ರದರ್ಶಿಸುತ್ತದೆ. ಅವಳು ಹೃದಯದಲ್ಲಿ ಸಾಕಷ್ಟು ಆಧ್ಯಾತ್ಮಿಕತೆ ತುಂಬಿಕೊಂಡಿರುತ್ತದೆ.

ಸಮಯದೊಂದಿಗೆ (Flow) ಮುನ್ನಡೆಯುತ್ತಾರೆ: ಅಕ್ವೇರಿಯಸ್ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಸಹಾನುಭೂತಿ ಮತ್ತು ಪ್ರಾಯೋಗಿಕವಾಗಿರುತ್ತಾರೆ. ಜೊತೆಗೆ ತಮ್ಮ ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನಾಟಕದ ಮೇಲೆ ಹೆಚ್ಚು ಗಮನ ನೀಡದೆ ಇರುವುದು ಹಾಗೆಯೇ ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಮುನ್ನಡೆಯುವುದು ಇವರ ದೊಡ್ಡ ಶಕ್ತಿ ಎಂದೇ ಹೇಳಬಹುದು.

ಅವಳು ಯಾವಾಗಲೂ ಸರಿ: ಈ ಮಹಿಳೆಯರು ತರ್ಕಬದ್ಧ (Rational) ಮತ್ತು ಪ್ರಾಯೋಗಿಕವಾಗಿರುತ್ತಾರೆ ಮತ್ತು ತಪ್ಪುಗಳನ್ನು ಮಾಡುವುದಿಲ್ಲ. ಆದ್ದರಿಂದ, ಅವರು ಏನನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಅವರು ತಿಳಿದಿರುತ್ತಾರೆ. ಅವರ ಸ್ವಂತ ವಿವಾಹ ಮತ್ತು ಜೀವನದ ವಿಷಯಕ್ಕೆ ಬಂದಾಗ ಅವರ ಸಂಗಾತಿಯು ಅವರಿಗೆ ಸೂಕ್ತವಾದವರು ಎಂದು ಖಚಿತವಾಗಿ ನಿರ್ಧರಿಸಿದ ಬಳಿಕವೇ ಮದುವೆಯಾಗುತ್ತಾರೆ.

 ಗಂಡನ ಬೆಸ್ಟ್ ಫ್ರೆಂಡಾಗಿರುತ್ತಾಳೆ (Bestie):  ಕುಂಭಾ ರಾಶಿಯ ಮಹಿಳೆಯು ತನ್ನ ಗಂಡನ ಅತ್ಯುತ್ತಮ ಸ್ನೇಹಿತೆ ಮತ್ತು ಅವರ ಮನೆಯಲ್ಲಿ ನಡೆಸುವ ಕೂಟಗಳಿಗೆ ಆದರ್ಶ ಹೊಸ್ಟೆಸ್ ಆಗಿರುತ್ತಾಳೆ. ಅವಳು ಸರಳವಾಗಿ ಬೆರೆಯುವುದನ್ನು ಮತ್ತು ಬಹಳಷ್ಟು ಜನರೊಂದಿಗೆ ಇರುವುದನ್ನು ಆನಂದಿಸುತ್ತಾಳೆ. ಅದರೊಂದಿಗೆ ತನ್ನ ಗಂಡನಿಗೆ ಬೇಕಾಗುವ ಸ್ವಂತ ಸ್ಪೇಸ್ ಅನ್ನು ನೀಡುವುದರ ಜೊತೆಗೆ ಅದನ್ನು ಗೌರವಿಸುತ್ತಾಳೆ.

ಇದನ್ನೂ ಓದಿ:Zodiac Sign: ಸೆಲ್ಫ್‌ ಕೇರ್‌ ಎನ್ನುವುದು ಈ ರಾಶಿಗಳ ಜನಕ್ಕೆ ರಕ್ತದಲ್ಲೇ ಬಂದಿರುತ್ತೆ

ತನ್ನ ವಿಚಾರಗಳ ಬಗ್ಗೆ ಕ್ಲಾರಿಟಿ ಹೊಂದಿರುತ್ತಾಳೆ ಅದರಿಂದ ಎಂದಿಗೂ ಗೊಂದಲಕ್ಕೊಳಗಾಗುವುದಿಲ್ಲ: ಈ ಹುಡುಗಿ ಪಾರ್ಟಿಗಳು ಮತ್ತು ಸಾಮಾಜಿಕ ಕೂಟಗಳಲ್ಲಿ (Gathering) ನಿರಂತರವಾಗಿ ಗಮನ ಕೇಂದ್ರಬಿಂದುವಾಗಿರುತ್ತಾಳೆ ಹಾಗೂ ಜನಪ್ರಿಯ ವ್ಯಕ್ತಿತ್ವ ಇವಳದು. ಏಕೆಂದರೆ ಎಲ್ಲರೂ ಅವಳನ್ನು ಇಷ್ಟಪಡುತ್ತಾರೆ. ಸ್ತ್ರೀ ಅಕ್ವೇರಿಯಸ್ ಶಕ್ತಿಯುತ ವ್ಯಕ್ತಿಯಾಗಿದ್ದು, ಅವರು ಜೀವನದಿಂದ ಏನು ಬಯಸುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಸ್ಪಷ್ಟವಾಗಿರುತ್ತಾರೆ.

ಪ್ರಮುಖ ನಿರ್ಧಾರಗಳಿಗಾಗಿ ತನ್ನ ಸಂಗಾತಿಯನ್ನು ಸಂಪರ್ಕಿಸುತ್ತಾಳೆ (Consult): ಅವಳನ್ನು ಸಂಬಂಧಕ್ಕೆ ಒಪ್ಪಿಸಿಕೊಂಡ ನಂತರ ಅವಳು ವಿಶ್ವಾಸಾರ್ಹ ಮತ್ತು ನಿಷ್ಠಾವಂತಳಾಗಿರುತ್ತಾಳೆ, ಆದ್ದರಿಂದ ಅವಳು ತನ್ನ ಸಂಗಾತಿಯನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವ ಉತ್ತಮ ಹೆಂಡತಿಯಾಗಿದ್ದಾಳೆ. ಎಲ್ಲಾ ಹೆಂಡತಿಯರು ತಮ್ಮದೇ ಆದ ಎಲ್ಲಾ ಪ್ರಮುಖ ಆಯ್ಕೆಗಳನ್ನು ಮಾಡಿದರೂ ಸಹ, ಈ ಮಹಿಳೆ ತನ್ನ ಗಂಡನ ಜೊತೆ ಚರ್ಚಿಸಿ ಬಳಿಕ ನಿರ್ಧಾರ ಕೈಗೊಳ್ಳುತ್ತಾರೆ.

Follow Us:
Download App:
  • android
  • ios