Asianet Suvarna News Asianet Suvarna News

ಮೀನ ರಾಶಿಯವರಿಗೆ ಎಂಥಾ ಬಾಳ ಸಂಗಾತಿ ಬೇಕು ನಿಮಗೆ ಗೊತ್ತೆ?

ನಿಂತಲ್ಲಿ ನಿಲ್ಲದೆ ಸದಾ ಚಟುವಟಿಕೆಯಿಂದಿರುವ ಮೀನ ರಾಶಿಯವರಿಗೆ ಹೊಂದಾಣಿಕೆಯಾಗುವ ಸಂಗಾತಿ ಹೇಗಿರಬೇಕಂತೆ ಗೊತ್ತೇ?
 

character traits Pisces Zodiac born wish to have in their life partner
Author
Bengaluru, First Published Oct 1, 2021, 7:27 PM IST
  • Facebook
  • Twitter
  • Whatsapp

12 ರಾಶಿಚಕ್ರಗಳಲ್ಲಿ ಅಂತಿಮವಾಗಿ ಬರುವುದೇ ಮೀನ (Pisces) ರಾಶಿ. ಮೀನ ರಾಶಿಯ ಅಂಶ ನೀರು (Water). ಆಳುವ ಗ್ರಹ ಗುರು, ನೆಪ್ಚೂನ್‌ (Neptune), ಇವರ ಇಷ್ಟದ ಬಣ್ಣಗಳು ನೀಲಿ (Blue), ನೇರಳೆ, ಕಡು ನೇರಳೆ, ಸಮುದ್ರ ಹಸಿರು (Green). ಸಹಾನುಭೂತಿ, ಕಲಾತ್ಮಕತೆ, ಅರ್ಥಗರ್ಭಿತ, ಸೌಮ್ಯ, ಬುದ್ಧಿವಂತ ಸ್ವಭಾವ, ನಿಂತಲ್ಲಿ ನಿಲ್ಲದೆ ಮೀನಿನಂತೆ ಸದಾ ಚುರುಕಾಗಿ ಸುತ್ತಾಡುತ್ತಿರುವುದು ಇವರ ಗುಣಲಕ್ಷಣಗಳು. ಇವರಲ್ಲಿ ನಕಾರಾತ್ಮಕ ಅಂಶಗಳೂ ಇಲ್ಲದಿಲ್ಲ. ಭಯಭೀತರಾಗಿರುವಿಕೆ, ಅತಿಯಾದ ನಂಬಿಕೆ, ದುಃಖ, ವಾಸ್ತವದಿಂದ ತಪ್ಪಿಸಿಕೊಳ್ಳುವ ಬಯಕೆ, ಹುತಾತ್ಮರಾಗುವ ಸ್ವಭಾವಗಳು ಇವರ ನಕಾರಾತ್ಮಕ ಅಂಶಗಳು. ಏಕಾಂಗಿಯಾಗಿರುವುದು, ಪ್ರೀತಿ (Love), ನಿದ್ರೆ (Sleep), ಸಂಗೀತ (Music), ಪ್ರಣಯ (Romance), ಈಜು (Swimming), ಆಧ್ಯಾತ್ಮಿಕ (Spirituality) ವಿಷಯಗಳು ಇವರ ಇಷ್ಟದ ವಿಷಯಗಳು. ಎಲ್ಲವನ್ನೂ ತಿಳಿಯಲು ಬಯಸುವುದು, ಟೀಕೆಗೆ ಗುರಿಯಾಗುವುದು, ಭೂತಕಾಲ (Past Tense) ಮತ್ತೆ ಕಾಡುವುದು, ಯಾವುದೇ ರೀತಿಯ ಕ್ರೌರ್ಯಗಳನ್ನು ಇವರು ಇಷ್ಟಪಡುವುದಿಲ್ಲ. 

ನಿಷ್ಠಾವಂತರು ಬೇಕು 
ಇವರು ತಮ್ಮ ಜೀವನವನ್ನು ಹಂಚಿಕೊಳ್ಳಲು ಪ್ರಾರಂಭಿಸುವ ಯಾರೊಬ್ಬರ ಮೇಲಿನ ನಂಬಿಕೆಯನ್ನು ಕಂಡುಕೊಂಡ ನಂತರ, ಇವರು ಆಳವಾಗಿ ನಿಷ್ಠಾವಂತರು ಮತ್ತು ಪ್ರಾಮಾಣಿಕರಾಗುತ್ತಾರೆ. ಅಂದರೆ ಇವರ ಸಂಗಾತಿ ಕೂಡ ಹೀಗೇ ಇರಬೇಕು ಎಂದು ಬಯಸುತ್ತಾರೆ. ಇವರ ಜೀವನದಲ್ಲಿ ಏಕೈಕ ಉದ್ದೇಶವೆಂದರೆ ತಮ್ಮವರ ಮುಂದೆ ನಿಂತು ಅವರನ್ನು ಸಂತೋಷಪಡಿಸುವುದು. ಮೀನ ರಾಶಿಯವರ ಸ್ನೇಹಿತರು ಮತ್ತು ಕೌಟುಂಬಿಕ ಸಂಬಂಧದಲ್ಲಿ ಸಾಕಷ್ಟು ತಾಳ್ಮೆಯಿಂದಿರುವ ಜನರಿಗೆ ಆದರ್ಶ ಸ್ನೇಹಿತರಾಗಬಹುದು. ಬಾಳಸಂಗಾತಿಯನ್ನು (Life Partner) ಕಂಡುಕೊಂಡ ಬಳಿಕ ಹಾಗೂ ಅವರು ತಮಗೆ ನಿಷ್ಠಾವಂತರು ಎಂದು ಗೊತ್ತಾದ ಬಳಿಕ ತಮ್ಮ ನಿಷ್ಠೆಯನ್ನು ಇವರು ಎಂದೂ ಬದಲಾಯಿಸುವುದಿಲ್ಲ. ಹಾಗಂತ ಅಲ್ಪಾವಧಿಯ ಸಂಬಂಧಗಳು ಮತ್ತು ಸಾಹಸಗಳು ಈ ರಾಶಿಚಕ್ರಕ್ಕೆ ವಿಶಿಷ್ಟವಲ್ಲ.

ಸಾಹಸಪ್ರಿಯರಾದ ಧನುರಾಶಿಯವರಿಗೆ ಎಂಥ ಜೀವನಸಂಗಾತಿ ಸೂಕ್ತ ? 
ಇವರು ಗೊಂದಲಕ್ಕೊಳಗಾಗುತ್ತಾರೆ, ಕಳೆದುಹೋಗುತ್ತಾರೆ, ಯೋಜನೆಗಳನ್ನು ಬದಲಾಯಿಸುತ್ತಾರೆ. ಆದರೆ ಅವರ ಅಕ್ಕಪಕ್ಕ ಒಬ್ಬರು ಭಾವಿಸುವ, ಸಹಾನುಭೂತಿ ಮತ್ತು ಪ್ರೀತಿಯುಳ್ಳವರು ಇದ್ದರೆ ಸಾಕಾಗುತ್ತದೆ. ಅವರು ಇತರರ ಅಗತ್ಯಗಳನ್ನು ತಮ್ಮಿಂದ ಪೂರೈಸಲು ಯತ್ನಿಸುತ್ತಾರೆ. ಇವರು ಕೆಲವೊಮ್ಮೆ ತಮ್ಮ ಗಡಿಗಳನ್ನು ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಕುಟುಂಬದ ಜೊತೆಗೆ ಆಳವಾದ ಸಂಬಂಧ ಹೊಂದಿರಲು ಬಯಸುತ್ತಾರೆ. ಇವರ ಆಂತರಿಕ ಶಾಂತಿಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರು ಸಂಗಾತಿಯಾಗಿ ಬಂದಾಗ ಜೀವನ ಉತ್ತಮವಾಗಿರುತ್ತದೆ. 

ಹಣ (Money) ಮುಖ್ಯವಲ್ಲ 
ಇವರ ವೃತ್ತಿಜೀವನದಲ್ಲಿ (Career) ಹಣ ಪ್ರಮುಖ ಪಾತ್ರ ವಹಿಸುವುದಿಲ್ಲ. ಅದರ ಬದಲಾಗಿ ತಮ್ಮ ಸೃಜನಶೀಲ ಕೌಶಲ್ಯಗಳು ಮುಂಚೂಣಿಗೆ ಬರುವ ಕೆಲಸಗಳನ್ನು ಉತ್ತಮವಾಗಿ ಅನುಭವಿಸುತ್ತಾರೆ. ಮೀನ ರಾಶಿಗೆ ಸೂಕ್ತವಾದ ಉದ್ಯೋಗಗಳು ಸಹಾನುಭೂತಿ ಮತ್ತು ನಂಬಿಕೆ ಮತ್ತು ಭಕ್ತಿಯಿಂದ ತುಂಬಿರುತ್ತವೆ. ಆದ್ದರಿಂದ ಅವರು ಅತ್ಯುತ್ತಮ ಪುರೋಹಿತರು, ವೈದ್ಯರು, ಪಶುವೈದ್ಯರು, ಸಂಗೀತಗಾರರು, ಚಿತ್ರಕಾರರು ಆಗಬಲ್ಲರು. ತಮ್ಮ ಸಂಗಾತಿಯಲ್ಲಿ ಕೂಡ ಇಂಥ ಗುಣಗಳು (Characters) ಕಂಡುಬಂದರೆ ಅಂಥವರನ್ನು ಹೆಚ್ಚಾಗಿ ನೆಚ್ಚುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಕನಸುಗಳು ಮತ್ತು ಗುರಿಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಮತ್ತು ಅವುಗಳನ್ನು ಸಾಧಿಸಲು ಮಾತ್ರ ಹಣವನ್ನು ಗಳಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ತಮ್ಮ ಸಂಗಾತಿಯ ವೃತ್ತಿಜೀವನ (Career), ಹಣಕಾಸು ಸಂಪಾದನೆ (Earning) ಇವರಿಗೆ ಮುಖ್ಯವೆನಿಸುವುದಿಲ್ಲ. ಬದಲಾಗಿ ಅವರ ಸೃಜನಶೀಲತೆಯನ್ನೇ (Creativity) ಹೆಚ್ಚು ಇಷ್ಟಪಡುತ್ತಾರೆ. 

ಮಕರ ರಾಶಿಯ ಜನರು ಬಾಳಸಂಗಾತಿಗೆ ಮೇಕೆ ಹಾಗೆ ಗುಮ್ಮುತ್ತಾರಾ?

ಲೈಂಗಿಕ ಸೃಜನಶೀಲತೆ (Sexual Creativity)
ಮೀನ ರಾಶಿಯವರ ಲೈಂಗಿಕತೆಯು ಒಂದು ಬಗೆಯ ಫ್ಯಾಂಟಸಿಯಿಂದ ಕೂಡಿರುರುತ್ತದೆ. ಇವರು ಆಧ್ಯಾತ್ಮಿಕ, ಭಾವನಾತ್ಮಕ ಮತ್ತು ಕೆಲವೊಮ್ಮೆ ಸೃಜನಶೀಲತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಸೆಕ್ಸ್ ಜೀವನದಲ್ಲಿ ಕೂಡ ತಮ್ಮ ಸಂಗಾತಿ ಹೆಚ್ಚು ಕ್ರಿಯೇಟಿವ್ ಆಗಿದ್ದರೆ ಇವರಿಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ನಿತ್ಯದ ಕೆಲಸ, ಅಥವಾ ರೂಢಿಗಳು ಇವರಿಗೆ ಬೋರ್ ಉಂಟುಮಾಡುತ್ತವೆ. ಮೀನ ರಾಶಿಯವರ ಮುಂದೆ ಯಾವುದೇ ತಪ್ಪು ಮಾಡಬೇಡಿ, ಇವರು ಒಮ್ಮೆ ನಿಮ್ಮಿಂದ ನಿರಾಶೆಗೊಂಡರೆ ನಿಮ್ಮ ಮೇಲೆ ಸಿಟ್ಟು ತೀರಿಸಲು ಹಿಂಜರಿಯುವುದಿಲ್ಲ. 

ಹೊಂದಾಣಿಕೆ ಆಗುವವರು
ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿಚಕ್ರಗಳು ವೃಶ್ಚಿಕ (Scorpio) ಮತ್ತು ಕಟಕ (Cancer)- ಎರಡೂ ರಾಶಿಹ್ನೆಗಳು ಅತ್ಯಂತ ಸಹಾನುಭೂತಿಯಿಂದ ಕೂಡಿರುತ್ತವೆ. ಮಕರ, ಮಿಥುನ ರಾಶಿಯವರು ಹೊಂದಾಣಿಕೆ ಆಗುವುದಿಲ್ಲ. ಮೀನ ರಾಶಿಯವರು ತಮ್ಮ ಸಂಗಾತಿಯೊಂದಿಗೆ ತುಂಬಾ ಶಾಂತ ಮತ್ತು ಅತ್ಯಂತ ಉದಾರರಾಗಿರುತ್ತಾರೆ. ಆದರೆ ಪ್ರೀತಿಯ ಹುಡುಕಾಟದಲ್ಲಿ ಕಾಲಕಾಲಕ್ಕೆ ಅವರ ನೈತಿಕ ಮೌಲ್ಯಗಳನ್ನು ಮರೆತುಬಿಡುತ್ತಾರೆ.

ಹಾಸ್ಯಪ್ರಿಯರಾದ ಕುಂಭ ರಾಶಿಯವರು ಬಾಳಸಂಗಾತಿಯಲ್ಲಿ ಏನಿಷ್ಟಪಡ್ತಾರೆ?

Follow Us:
Download App:
  • android
  • ios