Asianet Suvarna News Asianet Suvarna News

chanakya niti: ಜೀವನದಲ್ಲಿ ಯಾವ ಕೆಲಸಗಳು ಆಗುತ್ತಿಲ್ಲವೇ?.. ಈ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ..!

ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಕೆಲವು ವಿಚಾರಗಳು ನಮಗೆ ತಿಳಿದಿರಬೇಕು. ಅವು ನಮಗೆ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತವೆ. ಅವುಗಳನ್ನು ಅನುಸರಿಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಬರುವ ಅಡೆತಡೆಗಳನ್ನು ನಾವು ನಿವಾರಿಸಬಹುದು. ಈ ಕುರಿತು ಚಾಣಕ್ಯ ನೀತಿಯಲ್ಲಿ ಕೆಲವು ಅಂಶಗಳನ್ನು ಹೇಳಲಾಗಿದೆ.

chanakya niti to increase opportunities to get success and grow suh
Author
First Published Jul 30, 2023, 10:43 AM IST

ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಕೆಲವು ವಿಚಾರಗಳು ನಮಗೆ ತಿಳಿದಿರಬೇಕು. ಅವು ನಮಗೆ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತವೆ. ಅವುಗಳನ್ನು ಅನುಸರಿಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಬರುವ ಅಡೆತಡೆಗಳನ್ನು ನಾವು ನಿವಾರಿಸಬಹುದು. ಈ ಕುರಿತು ಚಾಣಕ್ಯ ನೀತಿ (chanakya niti) ಯಲ್ಲಿ ಕೆಲವು ಅಂಶಗಳನ್ನು ಹೇಳಲಾಗಿದೆ.

ಚಾಣಕ್ಯ ನಮ್ಮ ದೇಶದ ಮಹಾನ್ ವಿದ್ವಾಂಸ. ಅವರು ತಮ್ಮ ಪಾಂಡಿತ್ಯ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಿಂದಾಗಿ ಭಾರತೀಯ ಇತಿಹಾಸದ ಹಾದಿಯನ್ನು ಬದಲಿಸಿದ ಮಹಾನ್ ವ್ಯಕ್ತಿ. ಅವರು ಬರೆದ ಚಾಣಕ್ಯ ನೀತಿ ನಮ್ಮ ಜೀವನವನ್ನು ನಡೆಸಲು ಸರಿಯಾದ ಮಾರ್ಗವನ್ನು ಹೇಳುತ್ತದೆ. ನಮ್ಮ ಜೀವನ (life) ದಲ್ಲಿ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು? ಎಂಬುದರ ಉತ್ತಮ ವಿವರಣೆಯು ಚಾಣಕ್ಯ ನೀತಿಯಲ್ಲಿ ಕಂಡುಬರುತ್ತದೆ. ಆಚಾರ್ಯ ಚಾಣಕ್ಯರು ಜೀವನದಲ್ಲಿ ಯಶಸ್ಸ (success) ನ್ನು ಗಳಿಸಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಲಹೆ ನೀಡಿದ್ದಾರೆ. ಜೀವನವನ್ನು ಸರಿಯಾಗಿ ಮುನ್ನಡೆಸಲು ಚಾಣಕ್ಯ ನೀಡಿ ವಿಶೇಷ ಸಲಹೆಗಳನ್ನು ತಿಳಿಯೋಣ.

ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಿ

ಯಶಸ್ಸು ಸಾಧಿಸಲು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿಯಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಕೆಲವೊಮ್ಮೆ ಜನರು ನಿಮ್ಮ ಸರಳ ಸ್ವಭಾವ (nature) ದ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ಚಾಣಕ್ಯ ನಂಬುತ್ತಾರೆ. ಅದಕ್ಕಾಗಿಯೇ ಸ್ವಲ್ಪ ಬುದ್ಧಿವಂತರಾಗಿರುವುದು ಮತ್ತು ಚಿಂತನಾ ಶೀಲರಾಗಿ ನಿರ್ಧಾರ (decision) ಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ಹಣ ಖರ್ಚು ಮಾಡುವುದು ತಪ್ಪಿಸಿ

ಚಾಣಕ್ಯ ನೀತಿಯ ಪ್ರಕಾರ ಎಷ್ಟೇ ಹಣ ಹೇರಳವಾಗಿದ್ದರೂ ಅನಗತ್ಯವಾಗಿ ಹಣ (money) ವನ್ನು ಖರ್ಚುಮಾಡುವುದನ್ನು ತಪ್ಪಿಸಬೇಕು. ಮತ್ತು ಭವಿಷ್ಯದಲ್ಲಿ ಕಷ್ಟದ ಸಮಯವನ್ನು ತಪ್ಪಿಸಲು, ಹಣವನ್ನು ಉಳಿಸಬೇಕು. ಈ ಅಭ್ಯಾಸದಿಂದ ನಿಮ್ಮ ಭವಿಷ್ಯ (future) ವು ಉತ್ತಮವಾಗಿರುತ್ತದೆ. ಮತ್ತು ನೀವು ಬಿಕ್ಕಟ್ಟಿನ ಸಂದರ್ಭಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಶನಿ ಪ್ರಭಾವದ ರಾಶಿಗಳು; ವೃತ್ತಿಪರ ಜೀವನದಲ್ಲಿ ಸಮಸ್ಯೆ, ಕೊನೆಯಲ್ಲಿ ಯಶಸ್ಸು..!

 

ದುರಾಸೆಯಿಂದ ದೂರವಿರಿ

ದುರಾಸೆಯಿಂದಾಗಿ ಅನೇಕ ಬಾರಿ ವ್ಯಕ್ತಿಯು ಉದ್ದೇಪೂರ್ವಕವಾಗಿ ತಪ್ಪು ದಾರಿಯಲ್ಲಿ ನಡೆಯುತ್ತಾನೆ. ಇದರಿಂದಾಗಿ ಅವನು ಭವಿಷ್ಯದಲ್ಲಿ ಸಮಸ್ಯೆ (problem) ಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸರಿ ಮತ್ತು ತಪ್ಪುಗಳ ಬಗ್ಗೆ ಯೋಚಿಸಿ. ಮತ್ತು ದುರಾಸೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ.

ಈ ರಾಶಿಯವರಿಗೆ ಹನುಮಾನ್‌ ಮತ್ತು ಶನಿಯ ಅನುಗ್ರಹ ಇದೆ; ಇವರು ಎಲ್ಲಾ ತೊಂದರೆಗಳಿಂದ ಮುಕ್ತ..!

 

ಕಠಿಣ ಪರಿಶ್ರಮದಿಂದ ಯಶಸ್ಸು

ಚಾಣಕ್ಯನ ನೀತಿಯ ಪ್ರಕಾರ ವ್ಯಕ್ತಿಯ ಕಠಿಣ ಪರಿಶ್ರಮ  (hard work) ಮತ್ತು ಗುಣಗಳು ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತವೆ ಮತ್ತು ಅವನಿಗೆ ಎಂದಿಗೂ ಹಣ, ಸಂತೋಷ  (happiness) ಮತ್ತು ಸಂಪತ್ತಿನ ಕೊರತೆಯಿರಲ್ಲ. ಒಬ್ಬ ವ್ಯಕ್ತಿಯು ಹಣ ಮತ್ತು ಸಂಪತ್ತಿಗಿಂತ ತನ್ನ ಒಳ್ಳೆ ಗುಣಗಳಿಂದ ಶ್ರೀಮಂತನಾಗುತ್ತಾನೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios