Chanakya Niti: ಮಹಿಳೆಯರಿಗೆ ಮುಳುವಾಗುತ್ತೆ ಈ ಅಭ್ಯಾಸ

Chanakya Niti About Women Qualities: ಚಾಣಕ್ಯ ನೀತಿಯಲ್ಲಿ ಸಾಕಷ್ಟು ವಿಷ್ಯವಿದೆ. ಅದನ್ನು ಸರಿಯಾಗಿ ಓದಿ, ಅರ್ಥ ಮಾಡಿಕೊಂಡರೆ ಯಾವುದೇ ವ್ಯಕ್ತಿ ಕೂಡ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಬರೀ ಪುರುಷರು ಮಾತ್ರವಲ್ಲ ಮಹಿಳೆಯರು ಅರಿತುಕೊಳ್ಳುವ ವಿಷ್ಯಗಳನ್ನು ಚಾಣಕ್ಯ ಹೇಳಿದ್ದಾರೆ.

Chanakya Niti These Three Habbits Of Women Get Them And Their Family In Trouble

ಆರ್ಥಿಕ ತಜ್ಞ ಆಚಾರ್ಯ ಚಾಣಕ್ಯ ನಮ್ಮ ಜೀವನಕ್ಕೆ ಬೇಕಾದ ಅನೇಕ ಸಂಗತಿಯನ್ನು ಹೇಳಿದ್ದಾರೆ. ನಾವು ಎಷ್ಟೇ ಬೆಳೆಯಲಿ, ತಂತ್ರಜ್ಞಾನ ಎಷ್ಟೇ ಮುಂದುವರೆಯಲಿ ಚಾಣಕ್ಯರ ನೀತಿ ಈಗ್ಲೂ ಪ್ರಸ್ತುತವಾಗಿದೆ. ಚಾಣಕ್ಯ ಬರೀ ಪುರುಷರ ಬಗ್ಗೆ ಮಾತ್ರವಲ್ಲ ಮಹಿಳೆಯರ ಬಗ್ಗೆಯೂ ಕೆಲ ವಿಷ್ಯಗಳನ್ನು ಹೇಳಿದ್ದಾರೆ. ಮಹಿಳೆ ಬೆಳೆದ ಮನೆ ಹಾಗೂ ಹೋದ ಮನೆ ಎರಡರ ಗೌರವ ಕಾಪಾಡಬೇಕಾಗುತ್ತದೆ. ಮಹಿಳೆಯ ಗುಣ Qualities) ಮತ್ತು ನ್ಯೂನತೆ ಇಡೀ ಕುಟುಂಬ (Family)ದ ಮೇಲೆ ಪರಿಣಾಮ ಬೀರುತ್ತದೆ.

ಮನೆಯಲ್ಲಿ ಬರೀ ಮುಖ್ಯಸ್ಥ ಮಾತ್ರವಲ್ಲ ಪತ್ನಿ, ತಾಯಿ, ಶಿಕ್ಷಕಿ, ಸೊಸೆ ಹೀಗೆ ನಾನಾ ರೂಪದಲ್ಲಿ ತನ್ನ ಜವಾಬ್ದಾರಿ ನಿಭಾಯಿಸುವ ಮಹಿಳೆ ಬಹಳ ಮುಖ್ಯವಾಗ್ತಾಳೆ. ಚಾಣಕ್ಯ ಕೂಡ ಇದನ್ನೇ ಹೇಳ್ತಾರೆ. ಚಾಣಕ್ಯ (Chanakya) ಪ್ರಕಾರ, ಮಹಿಳೆಯ ಕೆಲವು ಅಭ್ಯಾಸ (practice) ಗಳು ಆಕೆ ಹಾಗೂ ಕುಟುಂಬ ಎರಡಕ್ಕೂ ಹಾನಿ. ಹಾಗಾಗಿ ಮಹಿಳೆ ಎಂದೂ ಆ ಅಭ್ಯಾಸಗಳನ್ನು ಇಟ್ಟುಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ.

ಸ್ವಂತಕ್ಕಿಂತ ಒತ್ತಾಯ (Pressure) ದ ಮೇಲೆ ನಿರ್ಣಯ : ಸಂಸಾರ ಚೆನ್ನಾಗಿರಬೇಕೆಂದ್ರೆ ಪತಿ – ಪತ್ನಿ ಇಬ್ಬರು ಸೇರಿ ನಿರ್ಧಾರ ತೆಗೆದುಕೊಳ್ಳಬೇಕು. ಕೆಲವು ಸಂದರ್ಭದಲ್ಲಿ ಪತ್ನಿಗೆ ಒಪ್ಪಿಗೆಯಿಲ್ಲದೆ ಹೋದ್ರೂ ಸಂಸಾರದಲ್ಲಿ ಗಲಾಟೆಯಾಗಬಹುದು ಎನ್ನುವ ಕಾರಣಕ್ಕೆ, ಸಂಸಾರ ತೂಗಿಸಿಕೊಂಡು ಹೋಗಲು ಬೇರೆಯವರ ನಿರ್ಧಾರವನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿಕೊಳ್ತಾಳೆ. ನಂತ್ರ ಪಶ್ಚಾತ್ತಾಪ ಪಡುತ್ತಾಳೆ. ಚಾಣಕ್ಯ ಪ್ರಕಾರ, ಮಹಿಳೆ ಈ ತಪ್ಪನ್ನು ಎಂದಿಗೂ ಮಾಡಬಾರದು. ಆಕೆ ತನ್ನ ಅಭಿಪ್ರಾಯವನ್ನು ಮಂಡಿಸಬೇಕು. ಇದ್ರಿಂದ ಮನೆಯಲ್ಲಾಗುವ ಕೆಲ ಸಮಸ್ಯೆಯನ್ನು ತಪ್ಪಿಸಬಹುದು.  ಪುರುಷರಷ್ಟೆ ಹಕ್ಕು ಮಹಿಳೆಗೆ ಮನೆಯಲ್ಲಿ ಇರುತ್ತದೆ. 

ಇದನ್ನೂ ಓದಿ: Friday remedies: ವ್ಯಾಪಾರದಲ್ಲಿ ನಷ್ಟನಾ? ಶುಕ್ರವಾರ ಈ ಕೆಲಸ ಮಾಡಿ ನೋಡಿ

ಸುಳ್ಳಿಗೆ ಎಂದೂ ಜಯವಿಲ್ಲ : ಆಚಾರ್ಯ ಚಾಣಕ್ಯ ಶ್ಲೋಕವೊಂದರ ಮೂಲಕ ಮಹಿಳೆಯರ ಸುಳ್ಳಿನ ಬಗ್ಗೆ ಹೇಳ್ತಾರೆ. ಕೆಲ ಮಹಿಳೆಯರು ಅನೇಕ ವಿಷಯಗಳಲ್ಲಿ ಸುಳ್ಳು ಹೇಳುತ್ತಾರೆ.  ಈ ಅಭ್ಯಾಸ ಕೆಟ್ಟದ್ದು. ಹಾಗಾಗಿ ಅವರು ಅನೇಕ ಬಾರಿ ಸಿಕ್ಕಿಬೀಳುತ್ತಾರೆ.  ಪುರುಷರು ಸುಳ್ಳು ಹೇಳುವುದು ಸಾಮಾನ್ಯ. ಅವರಿಗೆ ಅದರಲ್ಲಿ ವಿಶೇಷತೆ ಕಾಣುವುದಿಲ್ಲ. ಆದ್ರೆ ಮನೆಯ ಗೃಹಿಣಿ ಸುಳ್ಳು ಹೇಳಲು ಪ್ರಾರಂಭಿಸಿದರೆ ಇದ್ರಿಂದ ಆಕೆ ಮಾತ್ರವಲ್ಲ ಕುಟುಂಬದ ಸದಸ್ಯರು ಸಮಸ್ಯೆ ಎದುರಿಸಬೇಕಾಗುತ್ತದೆ. ಸುಳ್ಳು ಅಲ್ಪ ಸಮಯ ಸಂತೋಷವನ್ನು ನೀಡುತ್ತದೆ. ಒಂದಾನೊಂದು ಸಮಯದಲ್ಲಿ ಸತ್ಯ ಹೊರಬರುತ್ತದೆ. ಸತ್ಯ ಬಹಿರಂಗಗೊಂಡಾಗ ಕುಟುಂಬದಲ್ಲಿ ಸಂತೋಷ ಮಾಯವಾಗುತ್ತದೆ. ಹಾಗಾಗಿ ಮಹಿಳೆ ಸುಳ್ಳು ಹೇಳದಿರುವುದು ಒಳ್ಳೆಯದು. ಎಷ್ಟೆ ಕಷ್ಟದ ಸಂದರ್ಭದಲ್ಲಿ ಕೂಡ ಆಕೆ ಸತ್ಯ ಹೇಳುವ ಧೈರ್ಯ ಮಾಡಿದ್ರೆ ಬಂದ ಕಷ್ಟ ಕೆಲವೇ ಸಮಯದಲ್ಲಿ ಮಾಯವಾಗುತ್ತದೆ.

ಇದನ್ನೂ ಓದಿ: Heart disease astro remedy: ಹೃದಯದ ಸಮಸ್ಯೆಯೇ? ಈ ಜ್ಯೋತಿಷ್ಯ ಪರಿಹಾರಗಳನ್ನು ಕೈಗೊಳ್ಳಿ..

ಆರೋಗ್ಯದ (Health) ಬಗ್ಗೆ ನಿರ್ಲಕ್ಷ್ಯ : ಮಹಿಳೆಯರು ಇಡೀ ಕುಟುಂಬಸ್ಥರ ಆರೋಗ್ಯದ ಬಗ್ಗೆ ಗಮನ ಹರಿಸ್ತಾರೆ.  ಹಿರಿಯರಿಗೆ ಮಾತ್ರೆ ನೀಡೋದನ್ನು ಮರೆಯೋದಿಲ್ಲ, ಮಕ್ಕಳಿ (children) ಗೆ ಉತ್ತಮ ಆಹಾರ ನೀಡಲು ಮರೆಯೋದಿಲ್ಲ ಆದ್ರೆ ತಮ್ಮ ಆರೋಗ್ಯದ ವಿಷ್ಯ ಬಂದಾಗ ನಿರ್ಲಕ್ಷ್ಯ ವಹಿಸ್ತಾರೆ. ಅನೇಕ ಬಾರಿ ಹದಗೆಟ್ಟ ಆರೋಗ್ಯದ ಬಗ್ಗೆ ಕುಟುಂಬಸ್ಥರಿಗೆ ತಿಳಿಸದೆ ವಿಷ್ಯ ಮುಚ್ಚಿಡುತ್ತಾರೆ. ಹಾಗೆ ಆಕೆ ಒತ್ತಡವನ್ನು ಸಹಿಸಿಕೊಳ್ಳುತ್ತಾಳೆ. ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಪೌಷ್ಠಿಕ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯ ವೃದ್ಧಿಯ ಯಾವುದೇ ಕೆಲಸಕ್ಕೆ ಕೈ ಹಾಕುವುದಿಲ್ಲ. ಇದು ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.  ಬರೀ ಆಕೆ ಆರೋಗ್ಯ ಮಾತ್ರವಲ್ಲ ಕುಟುಂಬಸ್ಥರ ಆರೋಗ್ಯ ಹಾಳಾಗುತ್ತದೆ. ಮನೆಯಲ್ಲಿರುವ ಗೃಹಿಣಿ ಹಾಸಿಗೆ ಹಿಡಿದ್ರೆ ಇಡೀ ಮನೆ ವಾತಾವರಣ ಬದಲಾಗುತ್ತದೆ. 

Latest Videos
Follow Us:
Download App:
  • android
  • ios