Asianet Suvarna News Asianet Suvarna News

Heart disease astro remedy: ಹೃದಯದ ಸಮಸ್ಯೆಯೇ? ಈ ಜ್ಯೋತಿಷ್ಯ ಪರಿಹಾರಗಳನ್ನು ಕೈಗೊಳ್ಳಿ..

ಜ್ಯೋತಿಷ್ಯದಲ್ಲಿ ಕೆಲವು ಗ್ರಹಗಳನ್ನು, ಯೋಗಗಳನ್ನು ಮತ್ತು ಜಾತಕ ಸ್ಥಾನಗಳನ್ನು ಹೃದ್ರೋಗಕ್ಕೆ ಕಾರಣ ಎನ್ನಲಾಗುತ್ತದೆ. ಹೃದ್ರೋಗಕ್ಕೆ ಕಾರಣವಾಗುವ ಗ್ರಹಗಳು ಯಾವುವು, ಇದಕ್ಕಾಗಿ ಮಾಡಬೇಕಾದ ಜ್ಯೋತಿಷ್ಯ ಪರಿಹಾರಗಳೇನು ತಿಳಿಯೋಣ.

Astrological reasons and Remedies for Heart Diseases skr
Author
First Published Nov 25, 2022, 2:46 PM IST

ಇಂದಿನ ವೇಗದ ಮತ್ತು ಒತ್ತಡದ ಜೀವನದಲ್ಲಿ, ತನ್ನನ್ನು ತಾನು ಆರೋಗ್ಯವಾಗಿರಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ತಿನ್ನುವ, ಕುಡಿಯುವ, ಮಲಗುವ ಮತ್ತು ಏಳುವ ವಿಧಾನದ ಬದಲಾವಣೆಯಿಂದ ಹೃದಯ ಕಾಯಿಲೆಗಳು ಹೆಚ್ಚಾಗತೊಡಗಿವೆ. ಇತ್ತೀಚಿನ ದಿನಗಳಲ್ಲಂತೂ ಸಣ್ಣ ವಯಸ್ಸಿಗೇ ಹೃದಯಾಘಾತ ಮತ್ತು ಇತರೆ ಹೃದಯ ಸಮಸ್ಯೆಗಳು ಹೆಚ್ಚಾಗಿದ್ದು, ಸಾವಿನ ಭೀತಿ ಯುವಜನತೆಯನ್ನು ನಿರಂತರ ಕಾಡುತ್ತಿದೆ. ವೈದ್ಯರ ಪ್ರಕಾರ ಅತಿಯಾದ ಒತ್ತಡದಿಂದ ಹೃದ್ರೋಗಗಳು(Heart diseases) ಬರುತ್ತವೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಕೆಲವು ಗ್ರಹಗಳೂ ಕಾರಣ ಎಂದು ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೃದ್ರೋಗ ಸಮಸ್ಯೆಗೆ ಕಾರಣಗಳೇನು ಎಂದು ತಿಳಿಯೋಣ.

ಸೂರ್ಯನ ಸ್ಥಾನ
ಜ್ಯೋತಿಷ್ಯದಲ್ಲಿ, ಸೂರ್ಯನನ್ನು ತಂದೆ ಮತ್ತು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕ(Horoscope)ದಲ್ಲಿ ಸೂರ್ಯನ ಅಶುಭ ಸ್ಥಾನವು ಸ್ಥಳೀಯರಿಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ನೀಡಬಹುದು.

ಚಂದ್ರ ಗ್ರಹ ಸ್ಥಾನ
ಜ್ಯೋತಿಷ್ಯದಲ್ಲಿ, ಚಂದ್ರ(Moon)ನನ್ನು ಮನಸ್ಸು ಮತ್ತು ಮೆದುಳಿನ ಅಂಶವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಚಂದ್ರನು ಕೆಟ್ಟದ್ದಾಗಿದ್ದರೆ, ಅವನಿಗೆ ಹೃದಯ ಕಾಯಿಲೆ ಇರಬಹುದು.

Shami Plant Astrology: ಶನಿ ಕಾಟದಿಂದ ತಪ್ಪಿಸುತ್ತೆ ಶಮಿ ಸಸ್ಯ!

ಮಂಗಳ ಸ್ಥಾನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ನಮ್ಮ ದೇಹದ ಸ್ನಾಯುಗಳಿಗೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗಿದೆ. ಹೃದಯವೂ ಸ್ನಾಯುಗಳಿಂದ ಮಾಡಲ್ಪಟ್ಟಿರುವುದರಿಂದ, ಮಂಗಳ(Mars)ವನ್ನು ಸಹ ಹೃದಯ ಕಾಯಿಲೆಗೆ ಕಾರಣವೆಂದು ಪರಿಗಣಿಸಬಹುದು.

ಗುರು ಗ್ರಹದ ಸ್ಥಾನ
ಇದು ಅಪಧಮನಿಗಳು ಮತ್ತು ರಕ್ತನಾಳಗಳನ್ನು ನಿಯಂತ್ರಿಸುತ್ತದೆ. ಅಪಧಮನಿಗಳು ಮತ್ತು ರಕ್ತನಾಳಗಳ ಮೂಲಕ ಪರಿಚಲನೆಯಾಗುವ ಎಲ್ಲಾ ರಕ್ತವು ಗುರು ಗ್ರಹದಿಂದ ನಿಯಂತ್ರಿಸಲ್ಪಡುತ್ತದೆ. ನಿಮ್ಮ ಜಾತಕದಲ್ಲಿ ಗುರುವು ದುರ್ಬಲವಾಗಿದ್ದರೆ ನೀವು ಹೃದಯ ಸಮಸ್ಯೆಯೇ ಅಲ್ಲದೆ, ಮಧುಮೇಹ, ಕಾಮಾಲೆ ಮತ್ತು ಕ್ಯಾನ್ಸರ್‌ನಂತಹ ಕೆಲವು ರೋಗಗಳನ್ನು ಎದುರಿಸಬಹುದು. 

ರಾಹು ಗ್ರಹದ ಸ್ಥಾನ
ಜ್ಯೋತಿಷ್ಯದಲ್ಲಿ, ರಾಹುವನ್ನು ಹಠಾತ್ ಘಟನೆ, ಅಪಘಾತ(Accident)ದಿಂದ ವ್ಯಕ್ತಿಯನ್ನು ಅನಾರೋಗ್ಯಕ್ಕೆ ಒಳಪಡಿಸುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಹೃದ್ರೋಗವನ್ನು ಹೊಂದಿದ್ದರೆ, ಆಗ ರಾಹು ಕೂಡ ಅದರ ಕಾರಕ ಗ್ರಹವಾಗಬಹುದು.

Mercury retrograde 2022: ವರ್ಷಾರಂಭದಲ್ಲೇ ಬುಧ ವಕ್ರಿಯಿಂದ ಈ ರಾಶಿಗಳಿಗೆ ಸಂಕಷ್ಟ

ಹೃದ್ರೋಗವನ್ನು ತಪ್ಪಿಸಲು ಜ್ಯೋತಿಷ್ಯ ಪರಿಹಾರಗಳು(Astro remedies)

  • ಮೊದಲನೆಯದಾಗಿ, ನೀವು ಹೃದಯ ಸಂಬಂಧಿ ಕಾಯಿಲೆಯನ್ನು ಹೊಂದಿದ್ದರೆ ಅಥವಾ ಆ ರೀತಿಯ ಕಾಯಿಲೆ ಇರಬಹುದು ಎಂಬ ಅನುಮಾನದಲ್ಲಿದ್ದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಅದರ ನಂತರವೇ ಯಾವುದೇ ಜ್ಯೋತಿಷ್ಯ ಪರಿಹಾರಕ್ಕೆ ಗಮನ ನೀಡಬೇಕು. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು ಭಾನುವಾರದಂದು ಸೂರ್ಯೋದಯದ ಸಮಯದಲ್ಲಿ 108 ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ . ಈ ಪರಿಹಾರವು ಹೃದಯ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
  • ಮತ್ತೊಂದೆಡೆ, ಸೋಮವಾರ ರಾತ್ರಿ, ಆರಾಮದಾಯಕ ಭಂಗಿಯಲ್ಲಿ ಕುಳಿತು 'ಓಂ ಸೋಮ ಸೋಮಾಯ ನಮಃ' ಮಂತ್ರವನ್ನು 108 ಬಾರಿ ಚಂದ್ರನ ಮುಂದೆ ಜಪಿಸಿ. ಇದಲ್ಲದೇ ಮಂಗಳವಾರ ಬೆಳಗ್ಗೆ ಪೂಜೆಯ ಸಮಯದಲ್ಲಿ 'ಓಂ ಅಂಗಾರಕಾಯ ನಮಃ' ಎಂಬ ಮಂಗಳ ಮಂತ್ರವನ್ನು 108 ಬಾರಿ ಜಪಿಸಿ.
  • ಪ್ರತಿದಿನ ಮುಂಜಾನೆ 5ರಿಂದ 6 ಗಂಟೆಯ ನಡುವೆ ಸೂರ್ಯ ದೇವರಿಗೆ ನೀರು ನೀಡಿ. ಇದು ನಿಮ್ಮ ಜಾತಕದಲ್ಲಿ ಸೂರ್ಯ ಗ್ರಹಕ್ಕೆ ಶಕ್ತಿ ಮತ್ತು ಬೆಂಬಲವನ್ನು ನೀಡುತ್ತದೆ.
  • ಮಾಣಿಕ್ಯ ರತ್ನವನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Follow Us:
Download App:
  • android
  • ios