ವೃಶ್ಚಿಕ-ವೃಶ್ಚಿಕ ರಾಶಿ ಹೊಂದಾಣಿಕೆ: ಇವರ ಮಧ್ಯ ಡಿವೋರ್ಸ್ ಆಗುವುದಿಲ್ಲ..!
ಹಿಂದೂಗಳಲ್ಲಿ ಮದುವೆ ಮಾಡುವುದೆಂದರೆ ಮೊದಲು ಜಾತಕ (Horoscope) ಹೊಂದಾಣಿಕೆಯಾಗಬೇಕು. ಆಮೇಲಷ್ಟೇ ಹುಡುಗ- ಹುಡುಗಿಯನ್ನು ಮಾತಾಡಲು ಬಿಟ್ಟು ಅಭಿಪ್ರಾಯ ಕೇಳುವುದು. ಜಾತಕ ಹೊಂದಾಣಿಕೆಯಲ್ಲಿ ಹಲವು ವಿಷಯಗಳನ್ನು ಪರಿಗಣಿಸಲಾಗುತ್ತದೆ. ಅವುಗಳಲ್ಲೊಂದು ರಾಶಿ ಹೊಂದಾಣಿಕೆ.
ಹಿಂದೂಗಳಲ್ಲಿ ಮದುವೆ ಮಾಡುವುದೆಂದರೆ ಮೊದಲು ಜಾತಕ (Horoscope) ಹೊಂದಾಣಿಕೆಯಾಗಬೇಕು. ಆಮೇಲಷ್ಟೇ ಹುಡುಗ- ಹುಡುಗಿಯನ್ನು ಮಾತಾಡಲು ಬಿಟ್ಟು ಅಭಿಪ್ರಾಯ ಕೇಳುವುದು. ಜಾತಕ ಹೊಂದಾಣಿಕೆಯಲ್ಲಿ ಹಲವು ವಿಷಯಗಳನ್ನು ಪರಿಗಣಿಸಲಾಗುತ್ತದೆ. ಅವುಗಳಲ್ಲೊಂದು ರಾಶಿ ಹೊಂದಾಣಿಕೆ. ವೃಶ್ಚಿಕ ರಾಶಿ (Scorpio) ಯ ಜತೆ ಇನ್ನೊಂದು ವೃಶ್ಚಿಕ ರಾಶಿ ಹೇಗೆ ಹೊಂದುತ್ತದೆ ಎಂಬ ವಿವರ ಇಲ್ಲಿದೆ.
ಜಾತಕ ಎಂಬುದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯದ ಕುರಿತ ಜ್ಯೋತಿಷ್ಯ (Astrology) ದಾಖಲೆಯಾಗಿದೆ. ಇಬ್ಬರು ವ್ಯಕ್ತಿಗಳ ಜಾತಕದ ಹೊಂದಾಣಿಕೆಯು ಅವರ ಜೀವನ, ಸಂಬಂಧದ ಸುಮಧುರತೆಯನ್ನು ಲೆಕ್ಕ ಹಾಕುತ್ತದೆ. ಎಲ್ಲ ಸ್ವಭಾವದವರು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಕೆಲ ಸ್ವಭಾವದವರು ಕೆಲವರಿಗೆ ತುಂಬಾ ಚೆನ್ನಾಗಿ ಹಿಡಿಸುತ್ತಾರೆ. ಆ ಆಧಾರದ ಮೇಲೆ ಜ್ಯೋತಿಷ್ಯ (Astrology) ದಲ್ಲಿ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ನೋಡುವುದು ರಾಶಿಚಕ್ರ (Zodiac) ಗಳ ಹೊಂದಾಣಿಕೆ. ವೃಶ್ಚಿಕ ರಾಶಿಗೆ ವೃಶ್ಚಿಕ ರಾಶಿ ಹೇಗೆ ಹೊಂದುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಬ್ಬರು ವೃಶ್ಚಿಕ ರಾಶಿಯವರು ಮದುವೆಯಾದರೆ ಇದು ಕೆಲವೊಮ್ಮೆ ಅಪಾಯಕಾರಿಯ ಸಂಬಂಧ (relationship) ಕ್ಕೆ ಮುನ್ನಡಿ ಬರೆದಂತೆ. ಇಬ್ಬರ ನಡುವೆ ಪ್ರಬುದ್ಧತೆ ಇದ್ದರೆ,ಜೀವನವು ಉತ್ತಮವಾಗಿ ಸಾಗುತ್ತದೆ. ಆದರೆ ಪ್ರಬುದ್ಧತೆ (Maturity) ಯೆ ಇಲ್ಲದಿದ್ದರೆ ಇಬ್ಬರ ಸಂಬಂಧ ಹಾಳಾಗುತ್ತದೆ.
ಶ್ರಾವಣ ಮಾಸದಲ್ಲಿ ಶಂಖ ಊದಬೇಡಿ; ಶಿವನ ಮೆಚ್ಚಿಸುವಾಗ ಈ ತಪ್ಪು ಮಾಡದಿರಿ...!
ವೃಶ್ಚಿಕ ರಾಶಿ ಇಬ್ಬರೂ ಚೆನ್ನಾಗಿ ಅರ್ಥಮಾಡಿಕೊಳ್ಳುವ ಗುಣಗಳನ್ನು ಹೊಂದಿದ್ದು, ಅರ್ಥ ಮಾಡಿಕೊಳ್ಳಲು ಸಮರ್ಥ (competent) ರಾಗಿದ್ದಾರೆ. ಪ್ರೀತಿ, ಭಾವೋದ್ರೇಕ, ಉತ್ಸಾಹ, ಅಸೂಯೆ ಮತ್ತು ವಾದಗಳು ಈ ಸಂಬಂಧದ ಪ್ರಬಲ ಗುಣಲಕ್ಷಣ (characterization) ಗಳನ್ನು ಹೊಂದಿದೆ. ಇವರ ಲೈಂಗಿಕ ಜೀವನ (sex life) ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿಯವರು ದಂಪತಿ (couple) ಗಳಾದಲ್ಲಿ ಎಷ್ಟೇ ದೂರ ಹೋದರು ಮತ್ತೆ ಒಂದಾಗುತ್ತಾರೆ. ಪರಸ್ಪರ ಒಬ್ಬರನ್ನೊಬ್ಬರು ಸಹಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸು (respect) ವುತ್ತಾರೆ. ಇದರಿಂದ ಇವರ ಮಧ್ಯ ಡಿವೋರ್ಸ್ ಆಗುವುದಿಲ್ಲ. ಈ ರಾಶಿಯ ದಂಪತಿ ಗಡಿಗಳನ್ನು ದಾಟಿದರೆ ಅಪಾಯಕಾರಿಯಾಗಬಹುದು.
ವೃಶ್ಚಿಕ ರಾಶಿಯವರು ಸತಿ ಪತಿಗಳಾದಲ್ಲಿ ಇವರ ನಡುವಿನ ಆಕರ್ಷಣೆ (attraction) ಯು ಕೆಲವೊಮ್ಮೆ ಅಪಾಯಕಾರಿಯಾಗಿರಬಹುದು. ಹಾಗೇ ಅಸೂಯೆ (Jealousy) , ಬ್ಲ್ಯಾಕ್‌ಮೇಲ್ ನಿಯಂತ್ರಿಸದಿದ್ದರೆ ಈ ಸಂಬಂಧವು ದುಃಖದ ಮಾರ್ಗದಲ್ಲಿ ಕೊನೆಗೊಳ್ಳಬಹುದು. ಇದು ಇಬ್ಬರಿಗೂ ಆಳವಾದ ನೋವು (pain) ಉಂಟಾಗಬಹದು.
‘ದೇವರ ಮನೆ’ ಹೀಗಿರಲಿ; ಇಲ್ಲಿವೆ ಕೆಲವು ವಾಸ್ತು ಟಿಪ್ಸ್...
ಒಬ್ಬರು ಇನ್ನೊಬ್ಬರಿಗೆ ಉತ್ತಮ ಭಾವನಾತ್ಮಕ (Emotional) ಪ್ರತಿಕ್ರಿಯೆಯನ್ನು ನೀಡಿದರೆ ಮ್ಯಾರಿಡ್ ಲೈಫ್ (Married life) ಉತ್ತಮವಾಗಿ ಕಳೆಯಬಹುದು. ಇಬ್ಬರ ನಡುವೆ ಪ್ರೀತಿ ಉತ್ತಮವಾಗಿ ಅಗಾಧವಾಗಿ ಇರುತ್ತದೆ. ವೈವಾಹಿಕ ಜೀವನವು ಉತ್ತಮವಾಗಿದ್ದು, ಹುಟ್ಟುವ ಮಕ್ಕಳಿಂದ ಮನೆಯಲ್ಲಿ ಸಂತೋಷ (happiness) ದ ವಾತಾವರಣ ನಿರ್ಮಾಣವಾಗುತ್ತದೆ. ಸಾಮರಸ್ಯ ತೃಪ್ತಿಕರ (satisfactory) ವಾಗಿರಲು ಲೈಂಗಿಕ ಜೀವನವು ಇಬ್ಬರ ನಡುವೆ ಉತ್ತಮವಾಗಿರಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.