Chanakya Niti : ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ!
ಚಾಣಕ್ಯ ನೀತಿ ಇಂದಿಗೂ ಪ್ರಸಿದ್ಧಿ ಪಡೆದಿದೆ. ಜನರು ಚಾಣಕ್ಯನ ಸಲಹೆಯನ್ನು ಪಾಲಿಸುತ್ತಾರೆ. ಸರ್ವಕಾಲಕ್ಕೂ ಒಪ್ಪುವ ಚಾಣಕ್ಯನ ಸಲಹೆಗಳು ಜನಪ್ರಿಯವಾಗಿವೆ. ಚಾಣಕ್ಯ ಮಹಿಳೆ ಬಗ್ಗೆಯೂ ಅನೇಕ ವಿಷ್ಯಗಳನ್ನು ಹೇಳಿದ್ದಾರೆ.
ದೇಶ (Country) ದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು ಆಚಾರ್ಯ (Acharya ) ಚಾಣಕ್ಯ (Chanakya). ಚಾಣಕ್ಯ ನೀತಿಶಾಸ್ತ್ರಕ್ಕೆ ಬಹಳ ಪ್ರಸಿದ್ಧರಾಗಿದ್ದಾರೆ. ಚಾಣಕ್ಯನ ನೀತಿಗಳ ಬಲದಿಂದ ಚಂದ್ರಗುಪ್ತ ಮೌರ್ಯ (Chandragupta Maurya ) ಮಗಧದ ಚಕ್ರವರ್ತಿಯಾಗಲು ಸಾಧ್ಯವಾಯಿತು. ಆಚಾರ್ಯ ಚಾಣಕ್ಯರು ಸಹ ನೀತಿಯನ್ನು ರಚಿಸಿದ್ದಾರೆ. ಆಚಾರ್ಯ ಚಾಣಕ್ಯನ ಶತಮಾನಗಳಷ್ಟು ಹಳೆಯ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಮಾನವ ಜೀವನ (Life) ವನ್ನು ಸರಳ ಮತ್ತು ಯಶಸ್ವಿಗೊಳಿಸಲು ಸಂಬಂಧಿಸಿದ ಅನೇಕ ವಿಷಯಗಳನ್ನು ನೀತಿ ಪಠ್ಯದಲ್ಲಿ ಅಂದರೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಚಾಣಕ್ಯ, ತನ್ನ ಚಾಣಕ್ಯ ನೀತಿಯಲ್ಲಿ, ಭವಿಷ್ಯ (Future)ವನ್ನು ಉಜ್ವಲಗೊಳಿಸಲು ಸಾಕಷ್ಟು ಸಲಹೆಗಳನ್ನು ನೀಡಿದ್ದಾನೆ. ಜೀವನದಲ್ಲಿ ಯಶಸ್ವಿಯಾಗಲು ಮತ್ತು ದುಷ್ಟ ಜನರಿಂದ ದೂರವಿರಲು ಚಾಣಕ್ಯ ನೀತಿಯನ್ನು ಪಾಲಿಸಬೇಕು. ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಸಂಪತ್ತು, ಆಸ್ತಿ, ಪತ್ನಿ, ಸ್ನೇಹ (Friendship )ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಆಳವಾಗಿ ಹೇಳಿದ್ದಾರೆ. ಇಂದು ನಾವು ಆಚಾರ್ಯ ಚಾಣಕ್ಯ ಮಹಿಳೆಯರ ಬಗ್ಗೆ ಹೇಳಿರುವ ಕೆಲ ವಿಷ್ಯಗಳನ್ನು ಹೇಳ್ತೇವೆ.
ಆಚಾರ್ಯ ಚಾಣಕ್ಯರು ಮಹಿಳೆಯರ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಉದಾಹರಣೆಗೆ, ಅವರ ಸ್ವಭಾವ, ಅವರ ಆಲೋಚನೆ ಮತ್ತು ಅವರು ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಾಣಕ್ಯ ಹೇಳಿದ್ದಾರೆ. ಈ ವಿಷಯಗಳ ಬಗ್ಗೆ ವಿಶೇಷ ಅಧ್ಯಯನಗಳು ನಡೆದಿವೆ. ಚಾಣಕ್ಯನು ತನ್ನ ನೀತಿ ಗ್ರಂಥದಲ್ಲಿ ಕೆಲವು ಮಹಿಳೆಯರನ್ನು ಎಂದಿಗೂ ನಂಬಬಾರದು ಎಂದು ಬರೆದಿದ್ದಾರೆ.
ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಹೇಳಿದ್ದೇನು?
ಕೆಟ್ಟ ಸ್ವಭಾವದ ಮಹಿಳೆ : ಆಚಾರ್ಯ ಚಾಣಕ್ಯರ ಪ್ರಕಾರ, ಭ್ರಷ್ಟ ಮತ್ತು ಕೆಟ್ಟ ಸ್ವಭಾವ (Nature) ದ ಮಹಿಳೆ ಎಂದಿಗೂ ನಂಬಲರ್ಹವಲ್ಲ ಎಂದು ಹೇಳಲಾಗುತ್ತದೆ. ಅವಳು ಯಾವಾಗಲೂ ಇತರ ಪುರುಷರತ್ತ ಆಕರ್ಷಿತಳಾಗುತ್ತಾಳೆ. ಆಕೆ ಕೆಲಸ (Work)ಕ್ಕೆ ಆಕೆ ಪತಿ ಅಡ್ಡಿಪಡಿಸ್ತಾನೆ. ಹಾಗಾಗಿ ಆಕೆಗೆ ಆಕೆ ಗಂಡ (Husband) ನೇ ದೊಡ್ಡ ಶತ್ರು (Enemy)ವಾಗಿರ್ತಾನೆ.
VASTU TIPS: ಟೆರೇಸ್ ಮೇಲೆ ಈ ಗಿಡ ಇಟ್ರೆ ಅಶುಭ ಪರಿಣಾಮ ಗ್ಯಾರಂಟಿ!
ಹೆಣ್ಣಿನ ಸೌಂದರ್ಯ : ಮಹಿಳೆ ಮಾತ್ರವಲ್ಲ ಯಾವುದೇ ವ್ಯಕ್ತಿಯ ಸೌಂದರ್ಯ ನೋಡಿ ಅವರನ್ನು ಅಳೆಯಬಾರದು. ಹೆಣ್ಣಿನ ಸೌಂದರ್ಯವನ್ನು ನೋಡಿ ಅವಳನ್ನು ನಂಬುವ ಕೆಲಸಕ್ಕೆ ಎಂದೂ ಹೋಗಬಾರದು ಎನ್ನುತ್ತಾರೆ ಚಾಣಕ್ಯ. ಹೆಣ್ಣಿನ ಸೌಂದರ್ಯ ನೋಡಿ ಆಕೆಯನ್ನು ನಂಬುವುದು ದೊಡ್ಡ ತಪ್ಪು. ಬಾಹ್ಯ ಸೌಂದರ್ಯಕ್ಕಿಂತ ಅವಳ ಗುಣಗಳು ಮುಖ್ಯವಾಗಿರಬೇಕು. ಸೌಂದರ್ಯಕ್ಕಿಂತ ಮಹಿಳೆಯ ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸೌಂದರ್ಯ ಶಾಶ್ವತವಲ್ಲ ಎಂಬುದನ್ನು ತಿಳಿಯಬೇಕು.
ಧರ್ಮದಲ್ಲಿ ಕಡಿಮೆ ನಂಬಿಕೆ : ಧರ್ಮ ಮತ್ತು ಕರ್ಮಗಳಲ್ಲಿ ನಂಬಿಕೆ ಇರಬೇಕಾಗುತ್ತದೆ. ಆಚಾರ್ಯ ಚಾಣಕ್ಯ ಪ್ರಕಾರ, ಕಡಿಮೆ ನಂಬಿಕೆ ಇರುವ ಮಹಿಳೆಯನ್ನು ಎಂದಿಗೂ ನಂಬಬಾರದು.
ದುರಾಸೆ : ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯಲ್ಲಿ ದುರಾಸೆಯ ಭಾವನೆ ತುಂಬಾ ಅಪಾಯಕಾರಿ. ಇದು ಮನೆಯ ಶಾಂತಿಯನ್ನು ಕೆಡಿಸುವುದು ಮಾತ್ರವಲ್ಲದೆ ಕೆಲವೊಮ್ಮೆ ಇಡೀ ಕುಟುಂಬವನ್ನು ಹಾಳುಮಾಡುತ್ತದೆ. ಇರುವುದ್ರಲ್ಲೇ ತೃಪ್ತಿಪಡದೆ ಇನ್ನಷ್ಟು ಬೇಕು ಮತ್ತಷ್ಟು ಬೇಕು ಎನ್ನುವ ಮಹಿಳೆಯನ್ನು ಎಂದೂ ನಂಬಬಾರದು. ದುರಾಸೆ ಹೊಂದಿರುವ ಮಹಿಳೆ ತನಗಾಗಿ ಏನೂ ಮಾಡಲೂ ಸಿದ್ಧವಿರುತ್ತಾಳೆ.
ಸಾವಿನ ಸಂದರ್ಭದಲ್ಲಿ ಮಾತ್ರ ಗರುಡ ಪುರಾಣ ಪಠಣ ಮಾಡುವುದೇಕೆ?
ಸೊಕ್ಕಿನ ಮಹಿಳೆ : ತಾಯಿ ಸರಸ್ವತಿ ಮತ್ತು ತಾಯಿ ಲಕ್ಷ್ಮಿ ಇಬ್ಬರೂ ಸೊಕ್ಕಿನ ಮಹಿಳೆಯನ್ನು ಇಷ್ಟಪಡುವುದಿಲ್ಲ. ಸೊಕ್ಕಿರುವ ಮಹಿಳೆ ತನ್ನ ಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸಲು ಸಾಧ್ಯವಾಗುವುದಿಲ್ಲ. ಹಾಗೆ ಮನೆಯ ಸಂತೋಷ ಇವಳಿಂದ ಹಾಳಾಗುತ್ತದೆ. ಹಾಗಾಗಿ ಎಂದೂ ಸೊಕ್ಕಿನ ಮಹಿಳೆಯನ್ನು ನಂಬಬೇಡಿ ಎಂದು ಚಾಣಕ್ಯ ಹೇಳಿದ್ದಾರೆ.