ಚಾಣಾಕ್ಯ ಪ್ರತಿಯೊಬ್ಬರ ಯಶಸ್ಸಿಗೆ 7 ಸೂತ್ರ ನೀಡಿದ್ದಾನೆ. ಈ ಸೂತ್ರ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಶತ ಸಿದ್ದ.  ಇಲ್ಲಿ ಸೋಲು ಇರುವುದಿಲ್ಲ, ಸೆಟ್ಲ್ ಆಗಬೇಕು ಎಂದರು ಈ ಸೂತ್ರ ಪಾಲಿಸಿದರೆ ಲೈಫ್ ಜಿಂಗಾಲಾಲ

ಜೀವನದಲ್ಲಿ ಮುಂದೆ ಬರಬೇಕು, ಲೈಫ್‌ಲ್ಲಿ ಸೆಟ್ಲ್‌ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಜೀವನದಲ್ಲಿ ಮುಂದೆ ಬರಲು ಸಪ್ತ ಸೂತ್ರಗಳನ್ನು ಅನುಸರಿಸಬೇಕು ಅಂತಾರೆ ಚಾಣಕ್ಯ. ಚಾಣಕ್ಯ ಅಂದು ಹೇಳಿರುವ ಪ್ರತಿಯೊಂದು ಸಂಗತಿಯೂ ಇಂದಿಗೂ ಪ್ರಸ್ತುತ. ಯಾರಲ್ಲಿ ಈ ಗುಣಗಳಿರುತ್ತದೋ ಆ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಸೋಲಲ್ಲ:

ಜ್ಞಾನ ಸಂಪಾದನೆ: ಕಲಿಯುವ ಆಸಕ್ತಿ ಇರಬೇಕು. ತಾನು ಯಾವ ವೃತ್ತಿ ಮಾಡುತ್ತಾರೋ ಅದರಲ್ಲಿ ಪರಿಣಿತನಾಗಿರಬೇಕು, ಆವಾಗ ಮಾತ್ರ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ಚಿಕ್ಕ ಕೆಲಸವಾಗಿರಲ, ದೊಡ್ಡ ಕೆಲಸ ಆಗಿರಲಿ ನಾವು ಏನು ವೃತ್ತಿ ಮಾಡುತ್ತೇವೋ ಅದರಲ್ಲಿ ನಿಪುಣತೆ ಇರಬೇಕು, ಆ ಕೌಶಲ್ಯ ಬರಬೇಕೆಂದರೆ ಕಲಿಯುವ ಆಸಕ್ತಿ ಇರಬೇಕು. 

ಚಾಣಕ್ಯನ ಪ್ರಕಾರ ಈ 5 ಜನರನ್ನು ಅವಮಾನಿಸಿದರೆ ವಿನಾಶ

ತಮ್ಮ ಗುರಿಯತ್ತ ಹೆಚ್ಚು ಗಮನಹರಿಸಬೇಕು: ಬದುಕಿನಲ್ಲಿ ಶಿಸ್ತು ಇರಬೇಕು, ಗುರಿ ಮುಟ್ಟಲು ಶ್ರಮಪಡಬೇಕು. ಯಾವುದೇ ಚಟಗಳನ್ನು ರೂಢಿಸಿಕೊಳ್ಳಬಾರದು. ತನ್ನ ಗುರಿಮುಟ್ಟುವವರೆಗೆ ನಿರಂತರವಾಗಿ ಪ್ರಯತ್ನಿಸುತ್ತಲೇ ಇರಬೇಕು. 

ಯೋಜಿತ ರೀತಿಯಲ್ಲಿ ಕೆಲಸ ಮಾಡುವವರು: ಕೆಲಸದಲ್ಲಿ ಶಿಸ್ತು ಇರಬೇಕು, ಅಲ್ಲದೆ ಯೋಜಿತ ರೀತಿಯಲ್ಲಿ ಕೆಲಸವನ್ನು ಮಾಡಬೇಕು, ಆವಾಗ ಮಾತ್ರ ನಮ್ಮ ಗುರಿ ತಲುಪುವುದು ನಮಗೆ ಸುಲಭವಾಗುವುದು.

 ಸಂದರ್ಭಕ್ಕೆ ತಕ್ಕಂತೆ ಬದಲಾವಣೆಯನ್ನೂ ಮಾಡಿಕೊಳ್ಳಬೇಕು: ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣವಿರಬೇಕು. ಅವಶ್ಯಕ ಬಿದ್ದರೆ ಕೆಲವೊಂದು ಬದಲಾವಣೆಗಳನ್ನೂ ಮಾಡಿಕೊಳ್ಳಬೇಕು. ಬದುಕು ಯಾವತ್ತಿಗೂ ಒಂದೇ ರೀತಿ ಇರಲ್ಲ, ಪರಿಸ್ಥಿತಿಗೆ ಹೊಂದಿಕೊಂಡ ಹೋದರೆ ಬದುಕು ತುಂಬಾ ಸುಂದರವಾಗಿರುತ್ತದೆ. 

 ತನ್ನ ಸಂಗವನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು:  ಹೌದು ನಮ್ಮ ಸ್ನೇಹಿತರು ಯಾರಾಗಿರಬೇಕು ಎಂಬುವುದನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ, ಒಳ್ಳೆಯವರ ಜೊತೆಗಿನ ಸ್ನೇಹ ಒಳಿತನ್ನು ಮಾಡಿದರೆ ಕೆಟ್ಟ ಸಂಗ ಅನೇಕ ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ನಾವು ನಮ್ಮ ಸ್ನೇಹಿತರು ಯಾರು ಎಂಬುವುದನ್ನು ಆಲೋಚಿಸಿ ಆಯ್ಕೆ ಮಾಡಬೇಕು. ಕೆಟ್ಟ ಚಟವಿರುವ ಸ್ನೇಹಿತರನ್ನು ದೂರವಿಡಿ. ನಮ್ಮ ನಿಜವಾದ ಸ್ನೇಹಿತರು ಯಾರು ಎಂಬುವುದು ನಮಗೆ ಒಂದು ಕಷ್ಟ ಬಂದಾಗ ತಿಳಿಯುತ್ತದೆ. 

ಸೋಲಿನಿಂದ ಪಾಠ ಕಲಿಯಬೇಕು: ಬದುಕು ಎಂದರೆ ಸೋಲು-ಗೆಲುವು ಸಹಜ, ಸೋಲು ಎದುರಾದಾಗ ಕುಗ್ಗದೆ ಮತ್ತೆ ಜೀವನದಲ್ಲಿ ಗೆದ್ದು ಬರುವುದು ಹೇಗೆ ಎಂಬುವುದರ ಬಗ್ಗೆ ಆಲೋಚನೆ ಮಾಡಬೇಕು ಹಾಗೂ ಗೆಲುವಿಗಾಗಿ ಪ್ರಯತ್ನಿಸಬೇಕು, ಖಂಡಿತ ಜಯ ಗಳಿಸಲು ಸಾಧ್ಯವಾಗುವುದು. 

 ತಾಳ್ಮೆಯಿರಬೇಕು: ಈ ಯಶಸ್ಸು ಎಂಬುವುದು ದೊರೆಯಬೇಕೆಂದರೆ ತಾಳ್ಮೆ ಕೂಡ ಅಷ್ಟೇ ಮುಖ್ಯ. ಕಷ್ಟಪಟ್ಟು ಕೆಲಸ ಮಾಡಬೇಕು, ಅದರ ಫಲ ಸ್ವಲ್ಪ ನಿಧಾನವಾದರೂ ಸಿಕ್ಕೇ ಸಿಗುತ್ತದೆ. ಹಣ ಗಳಿಸಲು ಅಡ್ಡಮಾರ್ಗ ಅನುಸರಿಸದೆ ಸ್ವಂತ ಶ್ರಮದಿಂದ ಬೆಳೆಯಲು ಪ್ರಯತ್ನಿಸಬೇಕು.

 ಈ ಏಳು ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ವ್ಯಕ್ತಿ ಬದುಕಿನಲ್ಲಿ ಸೋಲುವುದೇ ಇಲ್ಲ, ಖಂಡಿತ ಯಶಸ್ಸು ಗಳಿಸಿಯೇ ಗಳಿಸುತ್ತಾರೆ, ಹಾಗಾಗಿ ಈ 7 ಸೂತ್ರಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿ ನೋಡಿ, ಬದುಕಿನಲ್ಲಿ ಮಿರಾಕಲ್ ಸಂಭವಿಸುತ್ತದೆ.

Chanakya Niti: ನಿಮ್ಮ ಹೆತ್ತವರಿಗೆ ಈ 11 ಸನ್ನಿವೇಶಗಳಲ್ಲಿ ನೀವು ಸಂತೋಷ ನೀಡುತ್ತೀರಿ