Chaitra Navratri : ಅಖಂಡ ಜ್ಯೋತಿ ಬೆಳಗಿಸುವ ಮುನ್ನ ನಿಯಮ ತಿಳ್ಕೊಳ್ಳಿ
ಚೈತ್ರ ನವರಾತ್ರಿ ಹತ್ತಿರ ಬರ್ತಿದೆ. ತಾಯಿ ದುರ್ಗೆ ಭಕ್ತರು ತಯಾರಿ ಶುರು ಮಾಡಿದ್ದಾರೆ. ಮನೆಯಲ್ಲಿ ಸುಖ, ಸಂತೋಷಕ್ಕಾಗಿ ಕೆಲವರು ಅಖಂಡ ಜ್ಯೋತಿ ಬೆಳಗಿಸುವ ನಿರ್ಧಾರ ಕೈಗೊಂಡಿರುತ್ತಾರೆ. ಮನೆಗೆ ಮಂಗಳಕರವಾದ ಈ ಅಖಂಡ ಜ್ಯೋತಿ ಸಮೃದ್ಧಿ ತರಬೇಕೆಂದ್ರೆ ವಾಸ್ತು ರೂಲ್ಸ್ ಫಾಲೋ ಮಾಡ್ಬೇಕು.

ಈ ಬಾರಿ ಮಾರ್ಚ್ 22ರಿಂದ ಚೈತ್ರ ನವರಾತ್ರಿ ಶುರುವಾಗ್ತಿದೆ. ಗುರುವಾರ ಮಾರ್ಚ್ 30ರಂದು ನವರಾತ್ರಿ ಮುಕ್ತಾಯಗೊಳ್ಳಲಿದೆ. ಚೈತ್ರ ನವರಾತ್ರಿಯಂದು ತಾಯಿ ದುರ್ಗೆಯ ಆರಾಧನೆಯನ್ನು ಭಕ್ತರು ಭಕ್ತಿಯಿಂದ ಮಾಡ್ತಾರೆ. ಚೈತ್ರ ನವರಾತ್ರಿಯಂದು ಕೆಲ ಕೆಲಸಗಳನ್ನು ಅವಶ್ಯವಾಗಿ ಮಾಡ್ಬೇಕೆಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳಲಾಗಿದೆ. ನವರಾತ್ರಿಯಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡಿ ಅದಕ್ಕೆ ಪೂಜೆ ಮಾಡ್ತಾರೆ. ಹಾಗೆಯೇ ಅಖಂಡ ದೀಪವನ್ನು ಬೆಳಗಿಸುತ್ತಾರೆ. ಈ ಬೆಳಕು ಮನೆಯ ಸಮೃದ್ಧಿಯನ್ನು ಸೂಚಿಸುತ್ತದೆ.
ಅಖಂಡ ಜ್ಯೋತಿ (Akhand Jyoti) ಅಂದ್ರೆ ಆರದ ದೀಪ. ನವರಾತ್ರಿ (Navratri ) ದಿನ ಹಚ್ಚಿದ ದೀಪ 9 ದಿನಗಳ ಕಾಲ ಆರದಂತೆ ನೋಡಿಕೊಳ್ಳಬೇಕು. ಅಖಂಡ ಜ್ಯೋತಿಯನ್ನು ಮನೆಯಲ್ಲಿ ಬೆಳಗಿಸುವ ನಿರ್ಧಾರ ತೆಗೆದುಕೊಂಡ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅಖಂಡ ಜ್ಯೋತಿಗೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು (Vastu) ಶಾಸ್ತ್ರದಲ್ಲಿ ಅನೇಕ ಸಂಗತಿಯನ್ನು ಹೇಳಲಾಗಿದೆ. ನಾವಿಂದು ವಾಸ್ತು ಶಾಸ್ತ್ರ ಅಖಂಡ ಜ್ಯೋತಿ ಬಗ್ಗೆ ಏನು ಹೇಳುತ್ತದೆ ಹಾಗೆ ಅದನ್ನು ಎಲ್ಲಿ ಇಡಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಬುದ್ಧನ ಚಿಂತನೆ: ಶ್ರೀಮಂತ ವೇಶ್ಯೆಯಿಂದ ಸಾಮಾನ್ಯ ಭಿಕ್ಷುಣಿಯಾದ ಅತಿ ಲೋಕ ಸುಂದರಿ ಆಮ್ರಪಾಲಿ
ನವರಾತ್ರಿಯಲ್ಲಿ ಅಖಂಡ ಜ್ಯೋತಿಯ ಮಹತ್ವ : ನವರಾತ್ರಿಯ ಸಮಯದಲ್ಲಿ ಉರಿಯುವ ಅಖಂಡ ಜ್ಯೋತಿಯು ಮನೆಯ ಸಮೃದ್ಧಿಯನ್ನು ಸೂಚಿಸುತ್ತದೆ. ಈ ಬೆಳಕು ಅನೇಕ ಮಾನಸಿಕ ಮತ್ತು ದೈಹಿಕ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರ ಬೆಳಕಿನಿಂದ ಹೊರಹೊಮ್ಮುವ ಬೆಳಕು ಮನೆಯ ಜನರ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಖಂಡ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಲಶ ಸ್ಥಾಪನೆ ಮಾಡಿದ್ರೆ ಭವಿಷ್ಯದಲ್ಲಿ ಸಂತೋಷ, ನೆಮ್ಮದಿ ಕಾಣಬಹುದು ಎಂದು ನಂಬಲಾಗಿದೆ.
ವಾಸ್ತು ಪ್ರಕಾರ ಅಖಂಡ ಜ್ಯೋತಿಯನ್ನು ಈ ದಿಕ್ಕಿನಲ್ಲಿಡಿ : ಅಖಂಡ ಜ್ಯೋತಿಯು ಬೆಂಕಿಗೆ ಸಂಬಂಧಿಸಿದೆ. ಹಾಗಾಗಿ ಅದನ್ನು ಸ್ಥಾಪಿಸುವಾಗ ದಿಕ್ಕನ್ನು ನೋಡಬೇಕಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಅಖಂಡ ಜ್ಯೋತಿಯನ್ನು ಇಡುವುದು ಉತ್ತಮವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಆಗ್ನೇಯ ದಿಕ್ಕಿನಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸುವುದ್ರಿಂದ ಶುಭ ಫಲಗಳನ್ನು ಪಡೆಯಬಹುದು. ಚೈತ್ರ ನವರಾತ್ರಿಯ ವೇಳೆ ನೀವು ಮಾಡಿದ ಸಂಪೂರ್ಣ ಪೂಜೆಯ ಫಲ ನಿಮಗೆ ಪ್ರಾಪ್ತಿಯಾಗುತ್ತದೆ. ಪೂಜೆ ಮಾಡುವಾಗ ಅಖಂಡ ಜ್ಯೋತಿಯ ಮುಖವು ಉತ್ತರ ಅಥವಾ ಪೂರ್ವಕ್ಕೆ ಇರುವಂತೆ ನೋಡಿಕೊಳ್ಳಬೇಕು. ನೀವು ಅಖಂಡ ಜ್ಯೋತಿಯನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದನ್ನು ಯಮ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಪೂಜೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡದಂತೆ ಸಲಹೆ ನೀಡಲಾಗುತ್ತದೆ.
ಜಾತಕ ಹೀಗಿದ್ದರೆ ಎರಡು, ಮೂರು ಸಂಬಂಧಗಳೂ ಇರಬಹುದು!
ಅಖಂಡ ಜ್ಯೋತಿಯನ್ನು ಎಲ್ಲಿಟ್ಟರೆ ಸೂಕ್ತ ?: ತಾಯಿ ದುರ್ಗೆಯ ವಿಗ್ರಹವನ್ನು ನೀವು ಸ್ಥಾಪನೆ ಮಾಡಿದ್ದರೆ ಅಥವಾ ಕಲಶವನ್ನು ಸ್ಥಾಪಿಸಿದ್ದರೆ ಆ ಸ್ಥಳದಲ್ಲಿ ನೀವು ಯಾವಾಗಲೂ ಅಖಂಡ ಜ್ಯೋತಿಯನ್ನು ಇಡಬೇಕು. ಕಲಶದ ಬಳಿ ಇಟ್ಟ ಅಖಂಡ ಜ್ಯೋತಿ ಸದಾ ಉರಿಯುತ್ತಿರುವಂತೆ ನೋಡಿಕೊಳ್ಳಬೇಕು. ಜ್ಯೋತಿ ಆರುವುದನ್ನು ಅಶುಭವೆಂದು ನಂಬಲಾಗುತ್ತದೆ.
ದುರ್ಗೆಯ ಚಿತ್ರದ ಬಲಭಾಗದಲ್ಲಿ ಅಖಂಡ ಜ್ಯೋತಿಯನ್ನು ಇಡಬೇಕು.
ಅಖಂಡ ಜ್ಯೋತಿಯ ಜ್ವಾಲೆ ಯಾವಾಗಲೂ ಹೆಚ್ಚು ಅಥವಾ ಕಡಿಮೆ ಇರಬಾರದು. ಹಾಗೆಯೇ ಅದಕ್ಕೆ ತುಪ್ಪವನ್ನು ಬಳಸಿದರೆ ಮಂಗಳಕರವೆಂದು ನಂಬಲಾಗಿದೆ. ಎಳ್ಳಿನ ಎಣ್ಣೆಯನ್ನು ಸಹ ಬಳಸಬಹುದು. ಅಖಂಡ ಜ್ಯೋತಿಯನ್ನು ಇಡುವ ಜಾಗದಲ್ಲಿ ಮೊದಲು ಅಕ್ಷತೆ ಹಾಕಬೇಕು. ನಂತ್ರ ಕುಂಕುಮವನ್ನು ಹಾಕ್ಬೇಕು. ಅದರ ಮೇಲೆ ಅಖಂಡ ಜ್ಯೋತಿಯನ್ನು ಇಡಬೇಕು. ಮನೆಯಲ್ಲಿ ಅಖಂಡ ಜ್ಯೋತಿಯಿದ್ರೆ ಮನೆ ಬಾಗಿಲು ಹಾಕಿ ಎಲ್ಲರೂ ಹೊರಗೆ ಹೋಗಬೇಡಿ. ರಾತ್ರಿ - ಹಗಲು ಜ್ಯೋತಿ ಆರದಂತೆ ನೋಡಿಕೊಳ್ಳಿ.