Asianet Suvarna News Asianet Suvarna News

Chaitra Navratri: ಯಾರಿಗೆ ಶುಭ ನೀಡಲಿದೆ ಚೈತ್ರ ನವರಾತ್ರಿ?

ಗ್ರಹ, ನಕ್ಷತ್ರದಲ್ಲಿ ಬದಲಾವಣೆಯಾಗ್ತಿದ್ದಂತೆ ನಮ್ಮ ಜೀವನದಲ್ಲೂ ಬದಲಾವಣೆಯಾಗುತ್ತದೆ. ಹಾಗೇ ಹಬ್ಬದ ಸಂದರ್ಭದಲ್ಲಿ ಕೂಡ ನಮ್ಮ ರಾಶಿಯಲ್ಲಿ ನಾವು ಏರಿಳಿತವನ್ನು ನೋಡ್ಬಹುದು. ಚೈತ್ರ ನವರಾತ್ರಿ ಸಂದರ್ಭದಲ್ಲೂ ಕೆಲ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ.  
 

Chaitra Navratri Lucky Zodiac Signs
Author
First Published Mar 20, 2023, 3:12 PM IST

ಒಂದ್ಕಡೆ ಯುಗಾದಿ ಸಂಭ್ರಮವಾದ್ರೆ ಮತ್ತೊಂದು ಕಡೆ ನವರಾತ್ರಿ ಸಡಗರ. ವರ್ಷದಲ್ಲಿ ಐದು ನವರಾತ್ರಿಗಳು ಬರುತ್ತವೆ. ಚೈತ್ರ, ಆಷಾಡ, ಅಶ್ವಿನಿ, ಪೌಶ ಮತ್ತು ಮಾಘ. ಇದ್ರಲ್ಲಿ ಎರಡು ಮುಖ್ಯ ನವರಾತ್ರಿಯಾದ್ರೆ ಮತ್ತೆರಡು ಗುಪ್ತ ನವರಾತ್ರಿಯಾಗಿರುತ್ತದೆ. ಶರದ್ ನವರಾತ್ರಿ ಇವೆಲ್ಲವುಗಳಲ್ಲಿ ಮುಖ್ಯ ನವರಾತ್ರಿಯಾಗಿದೆ. ಬಹುತೇಕ ಎಲ್ಲರೂ ಈ ನವರಾತ್ರಿಯನ್ನು ಆಚರಿಸುತ್ತಾರೆ. ಈಗ ಚೈತ್ರ ನವರಾತ್ರಿ ಸಂಭ್ರಮ. ಚೈತ್ರ ನವರಾತ್ರಿ ಸಂದರ್ಭದಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎನ್ನುವ ಮಾಹಿತಿ ಇಲ್ಲಿದೆ. 

ಮೇಷ (Aries) : ಈ ಬಾರಿ ನವರಾತ್ರಿ ಆಧ್ಯಾತ್ಮಿಕ ನಂಬಿಕೆಯನ್ನು  ಹೆಚ್ಚಿಸುತ್ತದೆ. ಧಾರ್ಮಿಕ (Religious) ಪ್ರವಾಸಗಳಿಗೆ ಅವಕಾಶ ಒದಗಿಬರುತ್ತದೆ.   ಧೈರ್ಯ (Courage) ದಿಂದ ಮುನ್ನುಗ್ಗಿದ್ರೆ ಗುರಿ ಸಾಧಿಸುವುದು ಸಾಧ್ಯ. ಸಂತೋಷ, ಸಮೃದ್ಧಿ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಅಗತ್ಯವಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗಲಿದೆ. ಆರ್ಥಿಕ ಕೆಲಸದಲ್ಲಿ ಪ್ರಗತಿಯಾಗಲಿದೆ. ಪ್ರೇಮ (Love) ಸಂಬಂಧ ಹಾಗೂ ಸ್ನೇಹ ಸಂಬಂಧದಲ್ಲಿ ವೃದ್ಧಿಯಾಗಲಿದೆ.

ವೃಷಭ (Taurus): ತಾಯಿ ದುರ್ಗೆ ಕೃಪೆಯಿಂದ ಮಂಗಳ ಕಾರ್ಯಗಳು ನೆರವೇರಲಿವೆ. ಧನ, ಧಾನ್ಯದಲ್ಲಿ ವೃದ್ಧಿಯಾಗಲಿದೆ. ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಪ್ರದರ್ಶನ ತೋರಲಿದ್ದೀರಿ. ಶುಭ ಸುದ್ದಿ ಸಿಗಲಿದೆ. ಇಡೀ ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಶಿಕ್ಷಣದಲ್ಲಿ ಪ್ರಗತಿ ಕಾಣಲಿದ್ದಿರಿ.

CHAITRA NAVRATRI : ಒಂಭತ್ತೂ ದಿನ ಉಪವಾಸ ಮಾಡೋಕೆ ಆಗಲ್ಲವೆಂದ್ರೆ ಚಿಂತೆಯಿಲ್ಲ.. ಈ ನಿಯಮ ಪಾಲಿಸಿ

ಮಿಥುನ (Taurus) : ಈ ಬಾರಿ ನವರಾತ್ರಿ ಧೈರ್ಯದಿಂದ ಗುರಿ ಸಾಧಿಸಲು ಪ್ರಯತ್ನಿಸುತ್ತೀರಿ. ಸಂತೋಷ, ಸಮೃದ್ಧಿ ಮತ್ತು ಬುದ್ಧಿವಂತಿಕೆ ಪಥದಲ್ಲಿ ಸಾಗಿದ್ರೆ ಒಳ್ಳೆಯದು. ರಚನಾತ್ಮಕ ಕೆಲಸದಲ್ಲಿ ತೊಡಗಿಕೊಳ್ಳಲಿದ್ದೀರಿ. ಮಂಗಳ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ರಕ್ತ ಸಂಬಂಧದಲ್ಲಿ ಸುಧಾರಣೆಯಾಗಲಿದೆ. ಶ್ರೇಯಸ್ಸು, ಗೌರವ ಪ್ರಾಪ್ತಿಯಾಗಲಿದೆ.

ಕರ್ಕ : ನವರಾತ್ರಿ ಈ ರಾಶಿಯವರಿಗೆ ಶುಭವಾಗಲಿದೆ. ಧಾರ್ಮಿಕ ಸ್ಥಳಗಳಿಗೆ ನೀವು ಭೇಟಿ ನೀಡಲಿದ್ದೀರಿ. ದಾನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಶುದ್ಧ ಆಹಾರ ಸೇವನೆ ಮಾಡಲಿದ್ದೀರಿ. ಭಾವನೆಗಳ ಮೇಲೆ ನಿಯಂತ್ರಣ ಸಿಗಲಿದೆ. ಅನಿರೀಕ್ಷಿತ ಯಶಸ್ಸು ನಿಮಗೆ ಸಿಗುವ ಸಾಧ್ಯತೆಯಿದೆ.

Happiness Day: ಲೈಫಲ್ಲಿ ಖುಷಿಯಾಗಿರ್ಬೇಕಾ, ಕೃಷ್ಣ ಹೇಳಿದ್ದಷ್ಟು ಮಾಡಿ ಸಾಕು!

ಸಿಂಹ : ತಾಯಿ ದುರ್ಗೆಯ ಕೃಪೆಗೆ ಪಾತ್ರರಾಗಲು ಇದು ಒಳ್ಳೆಯ ಸಮಯ. ಆರ್ಥಿಕ ವೃದ್ಧಿಯಾಗಲಿದೆ. ಗುರಿ ಮುಟ್ಟಲು ಇದು ಒಳ್ಳೆಯ ಸಮಯ. ಆರೋಗ್ಯ ಮತ್ತು ವ್ಯಕ್ತಿತ್ವವು ಉತ್ತಮ ಸ್ಥಿತಿಯಲ್ಲಿ ಇರಲಿದೆ. ಗೌರವ ಹೆಚ್ಚಾಗಲಿದೆ. 

ಕನ್ಯಾ : ನವರಾತ್ರಿ ಸಂದರ್ಭದಲ್ಲಿ ಸ್ಥಿರತೆ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಆಡಳಿತ ನಿರ್ವಹಣೆ ಮತ್ತು ಪೂರ್ವಜರ ಕೆಲಸಗಳು ವೇಗವಾಗಿ ಸಾಗಲಿದೆ. ಆರ್ಥಿಕ ವೃದ್ಧಿಗೆ ಅವಕಾಶ ಸಿಗಲಿದೆ. ಕೆಲಸದಲ್ಲಿ ಲಾಭ ಸಿಗಲಿದೆ. ಮನೋರಂಜನೆ ಸಿಗಲಿದೆ. ಸ್ನೇಹಿತರು ನಿಮ್ಮ ನೆರವಿಗೆ ಬರಲಿದ್ದಾರೆ.

ತುಲಾ : ನವರಾತ್ರಿಯ ಎಲ್ಲಾ ದಿನ ದೇವಿ ಕೃಪೆ ನಿಮ್ಮ ಮೇಲೆ ಇರಲಿದೆ. ನಿಮಗೆ ಈ ದಿನಗಳಲ್ಲಿ ಅದೃಷ್ಟ ಹೆಚ್ಚಾಗಲಿದೆ. ಇದು ಹೊಸ ಆರಂಭದ ಸಮಯ. ಜವಾಬ್ದಾರಿಗಳನ್ನು ಪೂರೈಸುವಿರಿ. ವೈಯಕ್ತಿಕ ವಿಷಯಗಳಲ್ಲಿ ಯಶಸ್ಸು ಸಿಗಲಿದೆ.

ವೃಶ್ಚಿಕ : ಈ ರಾಶಿಯವರಿಗೆ ನವರಾತ್ರಿ ಶುಭ ತರಲಿದೆ. ಈ ವೇಳೆ ಮಾಡುವ ಉಪವಾಸ ಆರೋಗ್ಯದ ಬಗ್ಗೆ ನಿಮ್ಮ ಅರಿವನ್ನು ಹೆಚ್ಚಿಸಲಿದೆ. ಲಾಭ ಹಾಗೂ ಆದಾಯಕ್ಕೆ ಒಳ್ಳೆ ಅವಕಾಶವಿದೆ. ಆದ್ರೆ ಆತುರ ಮಾಡಬೇಡಿ. ವರಿಷ್ಠರ ಜೊತೆ ಬೆರೆಯುವ ಅವಕಾಶ ಸಿಗುತ್ತದೆ.

ಧನು : ತಾಯಿಯ ಆಶೀರ್ವಾದಗಳು ಅನೇಕ ರೂಪಗಳಲ್ಲಿ ಸಿಗಲಿದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗಲಿದೆ. ನಿರೀಕ್ಷೆಯಗಿಂತ ಹೆಚ್ಚಿನ ಫಲ ಪ್ರಾಪ್ತಿಯಾಗಲಿದೆ. ಅದೃಷ್ಟದ ಬಲದಿಂದ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ. 

ಮಕರ : ಚೈತ್ರ ನವರಾತ್ರಿ ಸಂದರ್ಭದಲ್ಲಿ ಧೈರ್ಯ, ಸಮನ್ವಯ ಮತ್ತು ಕಠಿಣ ಪರಿಶ್ರಮದಿಂದ ದೊಡ್ಡ ಯಶಸ್ಸು ಸಿಗಲಿದೆ. ವೃತ್ತಿಪರತೆ ಮತ್ತು ಶ್ರದ್ಧೆಯಿಂದ ಮುನ್ನಡೆಯುವುದು ಮುಖ್ಯ. ಅನಿರೀಕ್ಷಿತ ಲಾಭದ ಪರಿಸ್ಥಿತಿ ಲಭ್ಯವಾಗಲಿದೆ. ಕಠಿಣ ಪರೀಕ್ಷೆಗಳನ್ನು ನೀವು ಸುಲಭವಾಗಿ ಎದುರಿಸಲಿದ್ದೀರಿ. 

ಕುಂಭ : ಕುಂಭ ರಾಶಿಯವರಿಗೆ ತಾಯಿ ಆಶೀರ್ವಾದ ಸಿಗಲಿದೆ. ಪ್ರೀತಿಪಾತ್ರರ ಜೊತೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಲಿದೆ. ಸ್ನೇಹಿತರ ಜೊತೆ ಬೆರೆಯಲು ಒಳ್ಳೆಯದ ಸಮಯ.

ಮೀನ : ದೇವಿ ಅನುಗ್ರಹದಿಂದ ಎಲ್ಲಾ ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬಕ್ಕೆ ನೀವು ಹತ್ತಿರವಾಗಲಿದ್ದೀರಿ. ಹಣ ಮತ್ತು ಆಸ್ತಿ ವಿಷಯಗಳ ಪರವಾಗಿ ನಿಮ್ಮ ಜೀವನವಿರಲಿದೆ. ಆರೋಗ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಹೆಚ್ಚು ಗಮನ ನೀಡಿ. 
 

Follow Us:
Download App:
  • android
  • ios