Chaitra Navratri : ಒಂಭತ್ತೂ ದಿನ ಉಪವಾಸ ಮಾಡೋಕೆ ಆಗಲ್ಲವೆಂದ್ರೆ ಚಿಂತೆಯಿಲ್ಲ.. ಈ ನಿಯಮ ಪಾಲಿಸಿ
ನವರಾತ್ರಿ ಅಂದ್ರೆ ತಾಯಿ ದುರ್ಗೆ ಆರಾಧನೆ. ನವರಾತ್ರಿ ಸಂದರ್ಭದಲ್ಲಿ ಜನರು ಉಪವಾಸವಿದ್ದು, ದೇವಿಯ ಪೂಜೆ ಮಾಡ್ತಾರೆ. ಅನೇಕ ಬಾರಿ ಎಲ್ಲ ದಿನ ಒಂದೇ ನಿಯಮ ಪಾಲಿಸೋದು ಕಷ್ಟವಾಗುತ್ತದೆ. ನಿಮಗೂ ಉಪವಾಸ ಕಷ್ಟವೆಂದ್ರೆ ಟೆನ್ಷನ್ ಬೇಡ.
ಚೈತ್ರ ನವರಾತ್ರಿಗೆ ಇನ್ನೇನು ಬಂದೇಬಿಡ್ತು. ಚೈತ್ರ ನವರಾತ್ರಿ ಆಚರಣೆ ಮಾಡುವ ಭಕ್ತರು ಅದಕ್ಕೆ ತಯಾರಿ ಶುರು ಮಾಡಿದ್ದಾರೆ. ಚೈತ್ರ ನವರಾತ್ರಿಯಂದೂ ದುರ್ಗೆ ಪೂಜೆ, ಉಪವಾಸ, ವ್ರತಕ್ಕೆ ಮಹತ್ವವಿದೆ. ನವರಾತ್ರಿಯ ಒಂಭತ್ತು ದಿನ ಉಪವಾಸದ ವ್ರತ ಮಾಡಿದ್ರೆ ದುರ್ಗೆ ಒಲಿಯುತ್ತಾಳೆಂಬ ನಂಬಿಕೆಯಿದೆ.
ಈಗಿನ ದಿನಗಳಲ್ಲಿ ಎಲ್ಲರಿಗೂ ಈ ಒಂಭತ್ತೂ ದಿನ ವ್ರತ, ಉಪವಾಸ (Fasting) ಮಾಡಲು ಸಾಧ್ಯವಿಲ್ಲ. ಅನಾರೋಗ್ಯ (Illness), ಕೆಲಸ, ಪ್ರವಾಸ ಹೀಗೆ ನಾನಾ ಕಾರಣಕ್ಕೆ ಎಲ್ಲರಿಗೂ ಚೈತ್ರ ನವರಾತ್ರಿ (Navratri) ಯ 9 ದಿನ ಉಪವಾಸ ಇರುವುದು ಕಷ್ಟವಾಗುತ್ತದೆ. ದೇವರ ಆರಾಧನೆ ಮಾಡ್ಬೇಕು ಎನ್ನುವ ಮನಸ್ಸಿರುತ್ತದೆ. ಆದ್ರೆ ಉಪವಾಸ ಸಾಧ್ಯವಾಗುವುದಿಲ್ಲ. ಅಂಥವರು ಚಿಂತಿಸುವ ಅಗತ್ಯವಿಲ್ಲ. ನೀವು 9 ದಿನ ಉಪವಾಸ ಮಾಡ್ಬೇಕು ಎಂದಿಲ್ಲ. ತಾಯಿ ದುರ್ಗೆಯ ಆಶೀರ್ವಾದಪಡೆಯಲು ನೀವು ಈ ಕೆಲಸ ಮಾಡಬಹುದು. ಅದು ಯಾವುದು ಅಂತಾ ನಾವು ಹೇಳ್ತೇವೆ.
RAMADAN 2023: ತಿಂಗಳ ಕಾಲ ಉಪವಾಸ ಮಾಡುವುದರ ಪ್ರಾಮುಖ್ಯತೆ ಏನು?
ಒಂಭತ್ತು ದಿನ ಉಪವಾಸ ಸಾಧ್ಯವಿಲ್ಲವೆಂದ್ರೆ ಹೀಗೆ ಮಾಡಿ :
ಈ ದಿನ ಮಾಡಿ ಉಪವಾಸ : ಮೊದಲೇ ಹೇಳಿದಂತೆ ಚೈತ್ರ ನವರಾತ್ರಿಯ ಎಲ್ಲ ದಿನ ಉಪವಾಸ ಅಥವಾ ಜಾಗರಣೆ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಹಾಗಿರುವಾಗ ನಿಮ್ಮ ಶಕ್ತಿ ಮತ್ತು ಅನುಕೂಲಕ್ಕೆ ಅನುಗುಣವಾಗಿ ನೀವು ಸಪ್ತರಾತ್ರಿ, ಪಚರಾತ್ರಿ, ತ್ರಿರಾತ್ರಿ ಅಥವಾ ಒಂದು ರಾತ್ರಿ ಉಪವಾಸವನ್ನು ಮಾಡಬಹುದು.
ಸಪ್ತರಾತ್ರಿ ಉಪವಾಸ : ನೀವು ಪಾಡ್ಯದಿಂದ ಸಪ್ತಮಿಯವರೆಗೆ ಉಪವಾಸ ಮಾಡಿದ್ರೆ ಅದನ್ನು ಸಪ್ತರಾತ್ರಿ ಉಪವಾಸ ಎಂದು ಕರೆಯಲಾಗುತ್ತದೆ.
ಪಂಚರಾತ್ರಿ ಉಪವಾಸ : ಪಂಚಮಿಯ ದಿನ ಒಂದೇ ಭೋಜನ ಮಾಡಿ, ಷಷ್ಠಿಯಂದು ರಾತ್ರಿ ಊಟ ಮಾಡಿ, ಸಪ್ತಮಿಯಂದು ಸಂಪೂರ್ಣ ಉಪವಾಸವಿದ್ದು, ಅಷ್ಟಮಿ ಮತ್ತು ನವಮಿಯಂದು ಪಾರಾಯಣ ಮಾಡಿದ್ರೆ ಅದನ್ನು ಪಂಚರಾತ್ರಿ ವ್ರತವೆಂದು ಕರೆಯಲಾಗುತ್ತದೆ.
ತ್ರಿರಾತ್ರಿ ವ್ರತ : ಸಪ್ತಮಿ, ಅಷ್ಟಮಿ ಮತ್ತು ನವಮಿಯಂದು ಒಂದು ಹೊತ್ತು ಊಟ ಮಾಡುವುದರಿಂದ ತ್ರಿರಾತ್ರ ವ್ರತವು ಪೂರ್ಣಗೊಳ್ಳುತ್ತದೆ.
ಏಕರಾತ್ರಿ ವ್ರತ : ಪಾಡ್ಯದಿಂದ ನವಮಿಯ ನಡುವೆ ಯಾವುದೇ ಒಂದು ದಿನ ನೀವು ಉಪವಾಸ ಮಾಡಿದ್ರೆ ಅದನ್ನು ಏಕರಾತ್ರಿ ವ್ರತವೆಂದು ಕರೆಯಲಾಗುತ್ತದೆ.
Gemology: ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕೊರತೆನಾ? ಪಚ್ಚೆ ಮಾಡ್ಬಹುದು ಮ್ಯಾಜಿಕ್!
ಯುಗ್ಮರಾತ್ರಿ ಉಪವಾಸ : ನೀವು ನವರಾತ್ರಿ ಆರಂಭದ ದಿನ ಅಥವಾ ಕೊನೆಯ ದಿನ ಅಂದರೆ ನವಮಿಯಂದು ಉಪವಾಸವನ್ನು ಆಚರಿಸಲಾಗುತ್ತದೆ. ಇದನ್ನು ಯುಗ್ಮರಾತ್ರಿ ಉಪವಾಸವೆಂದು ಕರೆಯಲಾಗುತ್ತದೆ. ಒಂಬತ್ತು ದಿನ ಉಪವಾಸ ಮಾಡಲು ಸಾಧ್ಯವಾಗದಿದ್ದರೆ, ನೀವು ಈ ಯಾವುದೇ ಉಪವಾಸವನ್ನು ದೃಢಸಂಕಲ್ಪದಿಂದ ಮಾಡಿದರೆ, ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.
ಉಪವಾಸ ಮಾಡುವ ಮುನ್ನ ಇದು ನೆನಪಿರಲಿ :
• ನವರಾತ್ರಿಯ ಮೊದಲು ಮನೆಯ ಸ್ವಚ್ಛತೆಗೆ ಮಹತ್ವ ನೀಡಿ. ನೀವು ಯಾವುದೇ ದಿನ ಉಪವಾಸ, ವ್ರತ ಅಥವಾ ತಾಯಿ ಪೂಜೆ ಮಾಡಿ. ಆದ್ರೆ ನವರಾತ್ರಿ ಶುರುವಾಗುವ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ. ದೇವರ ಮನೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಒಡೆದ, ಮುರಿದ ದೇವರ ಮೂರ್ತಿ, ಪಾತ್ರೆ, ಕನ್ನಡಿ ಸೇರಿದಂತೆ ಯಾವುದೇ ವಸ್ತು ಇರದಂತೆ ನೋಡಿಕೊಳ್ಳಿ.
• ನವರಾತ್ರಿಯ ಒಂಭತ್ತೂ ದಿನ ಉಪವಾಸ ಮಾಡಲು ಸಾಧ್ಯವಾಗದೆ ಹೋದ್ರೂ ಸಾತ್ವಿಕ ಆಹಾರ ಸೇವನೆಗೆ ಮಹತ್ವ ನೀಡಿ. ಈರುಳ್ಳಿ, ಬೆಳ್ಳುಳ್ಳಿ, ಮದ್ಯ, ಮಾಂಸ ಸೇವನೆ ಬೇಡ.
• ನವರಾತ್ರಿಯ ಒಂಭತ್ತು ದಿನ ನೀವು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವ ಕೆಲಸ ಮಾಡಬೇಡಿ. ನವರಾತ್ರಿ ಶುರುವಾಗುವ ಮುನ್ನವೇ ಈ ಎಲ್ಲ ಕೆಲಸ ಮಾಡಿ.
• ನವರಾತ್ರಿ ಸಂದರ್ಭದಲ್ಲಿ ಯಾರನ್ನೂ ನಿಂದಿಸಬೇಡಿ. ಹಾಗೆಯೇ ಲೆದರ್ ನಿಂದ ತಯಾರಿಸಿದ ವಸ್ತುಗಳನ್ನು ಧರಿಸಬೇಡಿ.