Gemology: ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕೊರತೆನಾ? ಪಚ್ಚೆ ಮಾಡ್ಬಹುದು ಮ್ಯಾಜಿಕ್!
ರತ್ನಶಾಸ್ತ್ರದ ಪ್ರಕಾರ, ಪಚ್ಚೆ ರತ್ನವು ಬುಧ ಗ್ರಹಕ್ಕೆ ಸಂಬಂಧಿಸಿದೆ. ಇದರೊಂದಿಗೆ ಇದನ್ನು ಧರಿಸುವುದರಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಿಗುತ್ತದೆ. ಯಾವ ರಾಶಿಗಳಿಗೆ ಪಚ್ಚೆ ಒಳ್ಳೆಯದು?
ಜ್ಯೋತಿಷ್ಯದ ದೃಷ್ಟಿಕೋನದಿಂದ, ಬುಧವನ್ನು ಬಲಪಡಿಸಲು ಪಚ್ಚೆಯನ್ನು ಧರಿಸಲಾಗುತ್ತದೆ. ಪಚ್ಚೆಯು ಹಸಿರು ಬಣ್ಣದ್ದಾಗಿದೆ ಮತ್ತು ತಿಳಿ ಹಸಿರು ಬಣ್ಣ ಅಥವಾ ಪಾರದರ್ಶಕವಾದವುಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಪಚ್ಚೆಯನ್ನು ಧರಿಸುವುದರಿಂದ ವ್ಯಕ್ತಿಯ ಜಾತಕದಲ್ಲಿರುವ ಬುಧ ಗ್ರಹಕ್ಕೆ ಬಲ ಸಿಗುತ್ತದೆ. ಇದು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ತಾರ್ಕಿಕ ಸಾಮರ್ಥ್ಯ ಮತ್ತು ಅಂಕಗಣಿತದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ.
ಏಕೆಂದರೆ, ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬರವಣಿಗೆ, ಪ್ರಕಟಣೆ, ಖಾತೆ, ವಕಾಲತ್ತು, ಭಾಷಣ, ಚರ್ಮ, ಹಾಡುಗಾರಿಕೆ, ವ್ಯವಹಾರ, ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದರೆ ಅಥವಾ ಉತ್ತುಂಗದಲ್ಲಿದ್ದರೆ, ಆ ವ್ಯಕ್ತಿಯು ಪಚ್ಚೆಯನ್ನು ಧರಿಸಬಹುದು. ಪಚ್ಚೆಯನ್ನು ಧರಿಸುವುದರಿಂದ ವ್ಯಾಪಾರ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯಬಹುದು. ಪಚ್ಚೆಯನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ಅದನ್ನು ಹೇಗೆ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಪಚ್ಚೆ ಧರಿಸುವುದರ ಪ್ರಯೋಜನಗಳು
ಪಚ್ಚೆಯನ್ನು ಧರಿಸುವುದರಿಂದ ವ್ಯಾಪಾರ ಮತ್ತು ವೃತ್ತಿಯಲ್ಲಿ ಪ್ರಗತಿ ಸಾಧಿಸಬಹುದು. ಏಕೆಂದರೆ ಪನ್ನ ರತ್ನವು ಬುಧ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಬುಧವನ್ನು ವ್ಯಾಪಾರದ ಕಾರಕ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಪಚ್ಚೆ ಧರಿಸುವುದರಿಂದ ವ್ಯಾಪಾರದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಅಲ್ಲದೆ, ಹೊಸ ಒಪ್ಪಂದಗಳನ್ನು ಅಂತಿಮಗೊಳಿಸಬಹುದು, ಇದು ಭವಿಷ್ಯದಲ್ಲಿ ಪ್ರಯೋಜನಗಳನ್ನು ತರಬಹುದು. ಮತ್ತೊಂದೆಡೆ, ಮಾಧ್ಯಮ, ಸಂಗೀತ, ಗಣಿತ ಮತ್ತು ಫಿಲ್ಮ್ ಲೈನ್‌ಗೆ ಸಂಬಂಧಿಸಿದ ಜನರು ಪಚ್ಚೆಯನ್ನು ಧರಿಸಬಹುದು.
Ugadi 2023: ಹಿಂದೂ ಹೊಸ ವರ್ಷದಂದೇ ಗಜಕೇಸರಿ ರಾಜಯೋಗ, 3 ರಾಶಿಗಳಿಗೆ ವರ್ಷಪೂರ್ತಿ ಶುಭ ಫಲ
ಈ ರತ್ನವನ್ನು ಒಬ್ಬ ವ್ಯಕ್ತಿಯು ಉತ್ತಮ ಸಂಭಾಷಣಾಕಾರ ಅಥವಾ ಭಾಷಣಕಾರನಾಗಬಹುದು. ಅವರು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಈ ರತ್ನವನ್ನು ಧರಿಸುವುದರಿಂದ ವ್ಯಕ್ತಿಯ ಸಾಮಾಜಿಕ ಮತ್ತು ವ್ಯಾವಹಾರಿಕ ಕೌಶಲ್ಯವೂ ಸುಧಾರಿಸುತ್ತದೆ. ಪಚ್ಚೆಯು ಚರ್ಮದ ಕಾಯಿಲೆ, ನರಮಂಡಲದ ಅಸ್ವಸ್ಥತೆಗಳು ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ.
ಒಬ್ಬ ವ್ಯಕ್ತಿಯು ನಾಚಿಕೆಪಡುವ ಸಂದರ್ಭಗಳಲ್ಲಿ ಅಥವಾ ಸಂಭಾಷಣೆಯನ್ನು ಪ್ರಾರಂಭಿಸಲು ಕಷ್ಟವಾದಾಗ ಇದು ತುಂಬಾ ಉಪಯುಕ್ತವಾಗಿದೆ. ಇದರೊಂದಿಗೆ, ಪಚ್ಚೆ ಆರ್ಥಿಕ ಬಿಕ್ಕಟ್ಟನ್ನು ಸಹ ತೆಗೆದು ಹಾಕುತ್ತದೆ. ಹಣದ ಕೊರತೆಯಿಂದ ಕಂಗೆಟ್ಟಿರುವ ಮತ್ತು ಸಾಲದ ಸುಳಿಯಲ್ಲಿ ಸಿಲುಕಿರುವ ಜನರಿಗೆ ಈ ರತ್ನವು ಅದ್ಭುತವಾಗಿದೆ. ಹಾಗೆಯೇ ಉಚ್ಚರಣೆ ಸರಿಯಿಲ್ಲದವರು, ಉಗ್ಗಿನ ಸಮಸ್ಯೆ ಇರುವವರು ಪಚ್ಚೆಯನ್ನು ಧರಿಸಬಹುದು. ಏಕೆಂದರೆ ಮಾತಿಗೆ ಸಂಬಂಧಿಸಿದ ರೋಗಗಳನ್ನು ಭಗವಾನ್ ಬುಧನೇ ನಿಭಾಯಿಸಬಲ್ಲ
ಈ ಜನರು ಧರಿಸಬಹುದು..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ಮತ್ತು ಕನ್ಯಾ ರಾಶಿಯ ಜನರು ಪಚ್ಚೆಯನ್ನು ಧರಿಸಬಹುದು. ಈ ರಾಶಿಗಳ ಅಧಿಪತಿ ಬುಧ ಗ್ರಹ. ಇದರೊಂದಿಗೆ ವೃಷಭ, ತುಲಾ, ಮಕರ, ಕುಂಭ ರಾಶಿಯವರೂ ಇದನ್ನು ಧರಿಸಬಹುದು. ಒಬ್ಬ ವ್ಯಕ್ತಿಯು ಬುಧದ ಮಹಾದಶಾ ಅಥವಾ ಅಂತರದಶವನ್ನು ಹಾದು ಹೋಗುತ್ತಿದ್ದರೆ, ಅವನು ಖಂಡಿತವಾಗಿಯೂ ಪಚ್ಚೆಯನ್ನು ಧರಿಸಬೇಕು. ಮತ್ತೊಂದೆಡೆ, ಬುಧ ಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದರೆ, ಪಚ್ಚೆಯನ್ನು ಧರಿಸಬೇಡಿ. ಅಲ್ಲದೆ, ಪಚ್ಚೆಯೊಂದಿಗೆ ಹವಳವನ್ನು ಧರಿಸಬೇಡಿ.
ಬಾಸ್ ಬೈತಿದ್ರೂ ನಂಗಲ್ಲ ಅನ್ನೋಂಗೆ ಇರೋ ಶಾಂತಮೂರ್ತಿಗಳು ಈ ರಾಶಿಯವ್ರು!
ಈ ರೀತಿ ಧರಿಸಿ
ಪಚ್ಚೆಯನ್ನು ಖರೀದಿಸಿ. ಹಾಗೆಯೇ ಚಿನ್ನದ ಲೋಹದಲ್ಲಿ ಉಂಗುರ ಮಾಡಿ ಧರಿಸಿ. ಪಚ್ಚೆ ಕಲ್ಲನ್ನು ಬುಧವಾರದಂದು ಮಾತ್ರ ಧರಿಸಬೇಕು. ಉಂಗುರವನ್ನು ಧರಿಸುವ ಮೊದಲು, ಅದನ್ನು ಹಸಿ ಹಸುವಿನ ಹಾಲು ಮತ್ತು ಗಂಗಾಜಲದಿಂದ ಶುದ್ಧೀಕರಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.