Asianet Suvarna News Asianet Suvarna News

ಚೈತ್ರ ನವರಾತ್ರಿಯಲ್ಲಿ ಈ ದಾನ ಮಾಡಲು ಮರೆಯಬೇಡಿ

ತಾಯಿ ದುರ್ಗೆ ಕೃಪೆಗೆ ಪಾತ್ರರಾಗಬೇಕೆಂದ್ರೆ ನವರಾತ್ರಿ ಶುಭ ಸಂದರ್ಭದಲ್ಲಿ ಕೆಲ ವಿಶೇಷ ಪೂಜೆ ಮಾಡ್ಬೇಕು. ದಾನ – ಧರ್ಮಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಚೈತ್ರ ನವರಾತ್ರಿಯಲ್ಲಿ ನೀವು ಅವಶ್ಯಕವಾಗಿ ಕೆಲ ವಸ್ತುಗಳನ್ನು ದಾನ ಮಾಡಿದ್ರೆ ಸಂಪತ್ತು, ಸುಖ ನಿಮ್ಮದಾಗುತ್ತದೆ. 
 

Chaitra Navratri Donate Five Things
Author
First Published Mar 23, 2023, 2:31 PM IST

ಚೈತ್ರ ನವರಾತ್ರಿ ಆರಂಭವಾಗಿದೆ. ದುರ್ಗೆ ಭಕ್ತರು ಭಕ್ತಿಯಿಂದ ದೇವಿ ಆರಾಧನೆಯಲ್ಲಿ ನಿರತರಾಗಿದ್ದಾರೆ. ಪೂಜೆ, ವೃತ, ಉಪವಾಸಗಳನ್ನು ಮಾಡಿ, ಆಸೆ ಈಡೇರಿಸುವಂತೆ ತಾಯಿಯನ್ನು ಬೇಡಿಕೊಳ್ಳಲಾಗುತ್ತಿದೆ. ಈ ಒಂಬತ್ತು ದಿನಗಳು ದುರ್ಗಾ ದೇವಿಯ ಶಕ್ತಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನವರಾತ್ರಿಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಸಂಪತ್ತು, ಸಂತಾನ ಪ್ರಾಪ್ತಿ, ಸಂತೋಷ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ. ನಾವಿಂದು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಯಾವ ವಸ್ತುಗಳನ್ನೆಲ್ಲ ದಾನ ಮಾಡಿದ್ರೆ ಲಾಭವನ್ನು ಪಡೆಯಬಹುದು ಎಂದು ನಿಮಗೆ ಹೇಳ್ತೇವೆ.

ನವರಾತ್ರಿ (Navratri) ಯ ಶುಭ ಸಮಯದಲ್ಲಿ ಈ ವಸ್ತುಗಳನ್ನು ದಾನ (Donation) ಮಾಡಿ  : 

ಕೆಂಪು (Red) ಬಳೆಗಳು : ನವರಾತ್ರಿಯ 9 ದಿನಗಳನ್ನು ಅತ್ಯಂತ ಮಂಗಳಕರ ಮತ್ತು ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ, ಸುಮಂಗಲೆಗೆ ಸಂಬಂಧಿಸಿದ ವಸ್ತುಗಳಲ್ಲಿ ಪ್ರಮುಖವಾದ ಕೆಂಪು ಬಳೆಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ದುರ್ಗಿ, ಅಖಂಡ ಅದೃಷ್ಟ ಮತ್ತು ಪತಿಯ ದೀರ್ಘಾಯುಷ್ಯವನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ನವರಾತ್ರಿಯ ಈ ಸಮಯದಲ್ಲಿ ವಿವಾಹಿತ ಮಹಿಳೆಯರಿಗೆ ಕೆಂಪು ಬಳೆಗಳನ್ನು ಅರ್ಪಿಸಬೇಕು. ಅಷ್ಟಮಿ-ಮಹಾನವಮಿಯ ದಿನದಂದು ಹುಡುಗಿಯರು ಕೆಂಪು ಬಳೆಗಳನ್ನು ಧರಿಸಬೇಕು. ಇದ್ರಿಂದ ತಾಯಿ ಖುಷಿಯಾಗ್ತಾಳೆ ಎಂದಿ ನಂಬಲಾಗಿದೆ.

ಶನಿಯ ನಕ್ಷತ್ರ ಗೋಚಾರದಿಂದ 6 ರಾಶಿಗಳಿಗೆ 7 ತಿಂಗಳು ಲಾಭ

ಬಾಳೆಹಣ್ಣು (Banana) : ಸಾಮಾನ್ಯವಾಗಿ ಎಲ್ಲ ದೇವರ ಪೂಜೆ ವೇಳೆ ಬಾಳೆ ಹಣ್ಣನ್ನು ಅರ್ಪಿಸಲಾಗುತ್ತದೆ. ನವರಾತ್ರಿಯಲ್ಲೂ ಬಾಳೆ ಹಣ್ಣನ್ನು ದೇವಿಗೆ ನೈವೇದ್ಯ ಮಾಡಿದ್ರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಬಾಳೆಹಣ್ಣನ್ನು ದಾನ ಮಾಡುವುದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಬಾಳೆಹಣ್ಣುಗಳನ್ನು ದಾನ ಮಾಡುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ. ಸಂಪತ್ತು ಹೆಚ್ಚಾಗುತ್ತದೆ. ಅಗತ್ಯವಿರುವವರಿಗೆ ಮಾತ್ರ ಬಾಳೆ ಹಣ್ಣನ್ನು ನೀವು ನವರಾತ್ರಿ ದಿನ ದಾನ ಮಾಡಬೇಕು.

ಬಟ್ಟೆ (Cloths)  : ನವರಾತ್ರಿಯಲ್ಲಿ ಚಿಕ್ಕ ಹುಡುಗಿಯರಿಗೆ ಬಟ್ಟೆಯನ್ನು ದಾನ ಮಾಡುವುದರಿಂದ ದುಃಖ ಮತ್ತು ಬಡತನ ನಾಶವಾಗುತ್ತದೆ. ರೋಗಗಳಿಂದ ಮುಕ್ತಿ ದೊರೆಯುತ್ತದೆ. ಯಾವುದೇ ಕಾರಣಕ್ಕೂ ಬಳಸಿದ ವಸ್ತುಗಳನ್ನು ದಾನ ಮಾಡಬೇಡಿ. ಹೊಸ ಬಟ್ಟೆಗಳನ್ನು ಮಾತ್ರ ದಾನ ಮಾಡಿ. 

ಈ ಎರಡೇ ಮಂತ್ರ ಸಾಕು ನಿಮಗೆ ನೀವು ರಾಜಯೋಗ ಸೃಷ್ಟಿ ಮಾಡ್ಕೊಳೋಕೆ, ಪ್ರತಿ ದಿನ ಹೇಳೋದು ಮರೀಬೇಡಿ!

ಪುಸ್ತಕಗಳು (Books) : ಚೈತ್ರ ನವರಾತ್ರಿಯಲ್ಲಿ ಪುಸ್ತಕಗಳನ್ನು ದಾನ ಮಾಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ನವರಾತ್ರಿಯಲ್ಲಿ ಅಸಹಾಯಕ ವ್ಯಕ್ತಿ ಅಥವಾ ಮಗುವಿಗೆ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುವನ್ನು ದಾನ ಮಾಡಬೇಕು. ಇದ್ರಿಂದ ಎಲ್ಲ ದುಃಖಗಳು ದೂರವಾಗುತ್ತವೆ. ಸರಸ್ವತಿ ದೇವಿಯು ತಾಯಿ ಲಕ್ಷ್ಮಿಯೊಂದಿಗೆ ಕರುಣಾಮಯಿಯಾಗಿರುತ್ತಾಳೆ. 

ಏಲಕ್ಕಿ : ಕೆಲವೊಮ್ಮೆ ಕಠಿಣ ಪರಿಶ್ರಮದ ನಂತರವೂ ಉದ್ಯೋಗದಲ್ಲಿ ಬಡ್ತಿ ಸಿಗುವುದಿಲ್ಲ. ಉದ್ಯೋಗದಲ್ಲಿ ಅಥವಾ ವ್ಯವಹಾರದಲ್ಲಿ ವಿಫಲವಾಗ್ತಾರೆ. ಚೈತ್ರ ನವರಾತ್ರಿಯಲ್ಲಿ ಶುಕ್ರವಾರದಂದು ಹಸಿರು ಬಟ್ಟೆಯಲ್ಲಿ 4 ಏಲಕ್ಕಿಗಳನ್ನು ಕಟ್ಟಿಕೊಳ್ಳಿ. ಅದನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಮರುದಿನ ಬೆಳಿಗ್ಗೆ ಅದನ್ನು ಯಾರಿಗಾದರೂ ದಾನ ಮಾಡಿ. ಹೀಗೆ ಮಾಡಿದ್ರೆ ಒಳ್ಳೆ ಉದ್ಯೋಗ ನಿಮಗೆ ಪ್ರಾಪ್ತಿಯಾಗುತ್ತದೆ.  

ರಾಶಿಗೆ ಅನುಗುಣವಾಗಿ ಮಾಡಿ ದಾನ : 
ಮೇಷ (Aries): ಈ ರಾಶಿಯವರು ಗೋಧಿ (Wheat) ಮತ್ತು ಬೆಲ್ಲ (Jaggery) ವನ್ನು ದಾನ ಮಾಡಿ. ಬಡವರಿಗೆ ಅನ್ನ ಮತ್ತು ಬಟ್ಟೆ ದಾನ ಮಾಡಿ.
ವೃಷಭ (Taurus) : ಸ್ಟೀಲ್ ಪಾತ್ರೆ, ಅಕ್ಕಿ ಮತ್ತು ಸಕ್ಕರೆ ದಾನ ಮಾಡಿ. 
ಮಿಥುನ (Gemini) :  ಬಡವರಿಗೆ ವಸ್ತ್ರದಾನ ಮಾಡಿ. 
ಕರ್ಕ (Cancer) : ಧಾರ್ಮಿಕ ಪುಸ್ತಕವನ್ನು ದಾನ ಮಾಡಿ. ತಾಮ್ರದ ಪಾತ್ರೆಯಲ್ಲಿ ಲಾಡನ್ನು ತುಂಬಿ ದಾನ ಮಾಡಿ.
ಸಿಂಹ (Leo) : ತಾಮ್ರದ ಪಾತ್ರೆ ದಾನ ಮಾಡಿ. ಬಡವರಿಗೆ ಅನ್ನದಾನ ಮಾಡಿ. 
ಕನ್ಯಾ (Virgo) : ಬಡವರಿಗೆ ವಸ್ತ್ರದಾನ ಮಾಡಿ. ಬಡವರಿಗೆ ಖಿಚಡಿ ವಿತರಿಸಿ.
ತುಲಾ (Libra) : ಬಡವರಿಗೆ ಅಕ್ಕಿ ವಿತರಿಸಿ.
ವೃಶ್ಚಿಕ (Scorpio) : ಬಡವರಿಗೆ ಆಹಾರವನ್ನು ವಿತರಿಸಿ. ರಕ್ತದಾನ ಮಾಡಿ. 
ಧನು (Sagittarius) : ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಿ. ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಣ್ಣು ಹಂಪಲು ದಾನ ಮಾಡಿ.
ಮಕರ (Capricorn) : ಎಳ್ಳನ್ನು ದಾನ ಮಾಡಿ. 
ಕುಂಭ (Aquarius) : ಎಳ್ಳು ಮತ್ತು ಎಣ್ಣೆಯನ್ನು ದಾನ ಮಾಡಿ.
ಮೀನ (Pisces)  : ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಿ. ಬಡವರಿಗೆ ಗೋಧಿ ಮತ್ತು ಬೆಲ್ಲವನ್ನು ವಿತರಿಸಿ.

Follow Us:
Download App:
  • android
  • ios