Asianet Suvarna News Asianet Suvarna News

Chitradurga: ವದ್ದಿಕೆರೆ ಸಿದ್ದಪ್ಪನ‌ ಸನ್ನಿಧಿಯಲ್ಲಿ ಕಾಳ ಹುಣ್ಣಿಮೆ ಹಬ್ಬದ ಸಂಭ್ರಮ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಸಿದ್ದೇಶ್ವರ ಸ್ವಾಮಿ  ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿರುವ ಭವರೋಗ ವೈದ್ಯ ಎನಿಸಿದ್ದಾರೆ.

Celebration of  Kala hunnime in Chitradurga vaddikere siddeshwara temple gow
Author
First Published Feb 5, 2023, 10:35 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.5):  ಸಂಕ್ರಾಂತಿಯಂದು ರೈತರು ಬೆಳೆದ ದವಸ ಧಾನ್ಯಗಳಿಗೆ ರಾಶಿ ಪೂಜೆ ಮಾಡೋದು ವಾಡಿಕೆ. ಆದ್ರೆ ಇಲ್ಲೊಂದು ದೇವರಿಗೆ ರೈತರು ಬೆಳೆದ ಕಾಳುಗಳನ್ನು ಹರಕೆ ರೂಪದಲ್ಲಿ‌ ಸಲ್ಲಿಸಿ, ಅವರ  ಇಷ್ಟಾರ್ಥ ಈಡೇರಿಸುವಂತೆ‌ ಪ್ರಾರ್ಥಿಸುವ ಸಂಪ್ರದಾಯ ಕೋಟೆನಾಡಲ್ಲಿದೆ. ಇದು ಇರುವುದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಸಿದ್ದೇಶ್ವರ ಸ್ವಾಮಿ ದೇಗುಲ.  ಈ ಸಿದ್ದೇಶ್ವರ ಸ್ವಾಮಿ  ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿರುವ ಭವರೋಗ ವೈದ್ಯ ಎನಿಸಿದ್ದಾರೆ. ಹೀಗಾಗಿ ಈ ದೇವಸ್ಥಾನಕ್ಕೆ ಹೊರ ರಾಜ್ಯಗಳಾದ ಆಂದ್ರಪ್ರದೇಶ, ಮಹಾರಾಷ್ಟ್ರ ಗಳಿಂದಲೂ ಭಕ್ತರು ಆಗಮಿಸಿ ಅವರ ಇಷ್ಟಾರ್ಥ ಸಿದ್ಧಿಗಾಗಿ ಹರಕೆಗಳನ್ನು ಸಲ್ಲಿಸ್ತಾರೆ. ಅಂತೆಯೇ ಪ್ರತಿ ವರ್ಷ ಭರತ ಹುಣ್ಣಿಮೆಯಂದು ಈ ದೇಗುಲಕ್ಕೆ ಇಲ್ಲಿನ ರೈತರು ಬೆಳೆದ ಹುರಳಿ, ಕಡ್ಲೆ ಹಾಗು ತೊಗರಿ ಧಾನ್ಯಗಳನ್ನು ಮೀಸಲು ಕೊಡ್ತಾರೆ. ಆ ಕಾಳುಗಳನ್ನೆಲ್ಲ ಒಂದೆಡೆ ಸೇರಿಸಿ ಬೇಯಿಸಿದ ಬಳಿಕ ಭಕ್ತರಿಗೆ ಹಂಚುತ್ತಾರೆ. ಆಮೂಲಕ ಅವರ ಇಷ್ಟಾರ್ಥ ಸಿದ್ದಿಸಲೆಂದು ಪ್ರಾರ್ಥಿಸುವ ಸಂಪ್ರದಾಯ ಇಲ್ಲಿದೆ.

ಬೆಳಗಾವಿ: ನಿರ್ಬಂಧದ ನಡುವೆಯೂ ಉಳವಿ, ಯಲ್ಲಮ್ಮನಗುಡ್ಡಕ್ಕೆ ಚಕ್ಕಡಿ ಯಾತ್ರೆ..!

 ಇನ್ನು ಈ ಭಾಗದ ರೈತರು ಬೆಳೆದ ಧಾನ್ಯಗಳನ್ನು ಸಿದ್ದೇಶ್ವರನ ಕಾಳು ಹುಣ್ಣಿಮೆಗೆ  ಮೀಸಲು‌ ನೀಡಿದ ಬಳಿಕವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ರೂಡಿಸಿಕೊಂಡಿದ್ದಾರೆ. ಒಂದು ವೇಳೆ ದೇವರಿಗೆ ಕಾಳು ನೀಡದೇ ಮಾರ್ಕೆಟ್ ಗೆ ಹಾಕಿದ್ರೆ ನಷ್ಟವಾಗುವುದೆಂಬ ಭಯವಿದೆ. ಹೀಗಾಗಿ ಈ ಸಂಪ್ರದಾಯವನ್ನು ಪೂರ್ವಜರ ಕಾಲದಿಂದಲೂ ಭಕ್ತರು ನಡೆಸಿಕೊಂಡು ಬಂದಿದ್ದಾರೆ.

ವಿಜಯನಗರ: ಅರಿವಿನ ಹಬ್ಬ ತರಳಬಾಳು ಹುಣ್ಣಿಮೆ, ಸಿಎಂ ಬೊಮ್ಮಾಯಿ

ಒಟ್ಟಾರೆ ವದ್ದಿಕೆರೆ ಯಲ್ಲಿ ಭರತ ಹುಣ್ಣಿಮೆ ಯಂದು  ಕಾಳು ಹುಣ್ಣಿಮೆ ಆಚರಿಸ್ತಾರೆ. ಇದಕ್ಕೆ ಇಲ್ಲಿನ ರೈತರು ಬೆಳೆದ ಧಾನ್ಯಗಳನ್ನು  ಸಿದ್ದೇಶ್ವರನಿಗೆ ಅರ್ಪಿಸ್ತಾರೆ. ಇಷ್ಟಾರ್ಥ ಸಿದ್ದಿಸುವಂತೆ ಹರಕೆ ಸಲ್ಲಿಸೋದು ಇಲ್ಲಿನ ಸಂಪ್ರದಾಯ ಆಗಿದೆ.

Follow Us:
Download App:
  • android
  • ios