Asianet Suvarna News Asianet Suvarna News

ಇವರು ಹೆಚ್ಚು ನಿರಾಶಾವಾದಿಗಳು; ಈ ರಾಶಿಯವರು ಬದಲಾಗಬೇಕು..!

ಜೀವನದಲ್ಲಿ ಸಂತೋಷ ಮತ್ತು ಒಳ್ಳೆಯ ಸಮಯ ಬರಲಿ ಎಂಬುದು ಎಲ್ಲರ ಬಯಕೆ. ಆದರೆ ಹಲವು ಬಾರಿ ಇದು ಆಗುವುದಿಲ್ಲ. ಅಂತಹ ಜನರು ತುಂಬಾ ನಿರಾಶಾವಾದಿಗಳು, ಅವರಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುವ ಅಗತ್ಯ ಬಹಳ ಇದೆ. ಅವರು ಯಾವ ರಾಶಿಯವರು ಎಂಬ ಡಿಟೇಲ್ಸ್ ಇಲ್ಲಿದೆ.

Capricorn Scorpio Virgo Taurus Cancer zodiac signs More pessimists suh
Author
First Published Jul 7, 2023, 3:50 PM IST | Last Updated Jul 7, 2023, 3:50 PM IST

ಜೀವನದಲ್ಲಿ ಸಂತೋಷ (happiness)  ಮತ್ತು ಒಳ್ಳೆಯ ಸಮಯ ಬರಲಿ ಎಂಬುದು ಎಲ್ಲರ ಬಯಕೆ. ಆದರೆ ಹಲವು ಬಾರಿ ಇದು ಆಗುವುದಿಲ್ಲ. ಅಂತಹ ಜನರು ತುಂಬಾ ನಿರಾಶಾವಾದಿಗಳು, ಅವರಲ್ಲಿ ಧನಾತ್ಮಕತೆ (positivity) ಯನ್ನು ಹೆಚ್ಚಿಸುವ ಅಗತ್ಯ ಬಹಳ ಇದೆ. ಅವರು ಯಾವ ರಾಶಿಯವರು ಎಂಬ ಡಿಟೇಲ್ಸ್ ಇಲ್ಲಿದೆ.

ಜೀವನವು ಯಾವಾಗಲೂ ಒಂದೇ ದಾರಿಯಲ್ಲಿ  ಹೋಗುವುದಿಲ್ಲ, ಸುಖ-ದುಃಖ (happiness and sadness) ಗಳೆರಡು ಸಮಾನ ಪ್ರಮಾಣದಲ್ಲಿ ಸಾಗುತ್ತದೆ. ನಾವು ಸಂತೋಷ ಬಯಸಿದರೂ ಕೆಲವೊಮ್ಮ ಅದು ಆಗಲ್ಲ. ಈ ವೇಳೆ ನಾವು ನಿರಾಶವಾದಿ (pessimist) ಆಗಬಾರದು. ಆದರೆ ಕೆಲವು ರಾಶಿಯವರು ತುಂಬಾ ನಿರಾಶಾವಾದಿಗಳು. ಈ ಕುರಿತು ಇಲ್ಲಿದೆ ಮಾಹಿತಿ.    

ಮಕರ ರಾಶಿ (Capricorn)

ಸಾಮಾನ್ಯವಾಗಿ ಮಕರ ರಾಶಿಯವರು ಪ್ರಾಯೋಗಿಕ  (Practical) ಮತ್ತು ಜವಾಬ್ದಾರಿ (responsibility) ಯುತರು. ಈ ಜನರು ತಮ್ಮ ಗುರಿಗಳ ಕಡೆಗೆ ಮಹತ್ವಾಕಾಂಕ್ಷೆ (Ambition) ಯನ್ನು ಹೊಂದಿದ್ದಾರೆ. ಆದರೂ ಇವರು ಕೆಲವೊಮ್ಮೆ ವೈಫಲ್ಯ (failure) ದ ಬಗ್ಗೆ ಚಿಂತಿಸುವುದರ ಮೂಲಕ ನಿರಾಶವಾದಿ ಚಿಂತನೆಗೆ ಹೊತ್ತು ಕೊಡುತ್ತಾರೆ.

ವೃಶ್ಚಿಕ ರಾಶಿ (Scorpio)

ಈ ರಾಶಿಯ ಜನರು ಭಾವೋದ್ವೇಗ (emotion) ದಿಂದ ಕೂಡಿರುತ್ತಾರೆ. ಆದರೆ ಕೆಲವೊಮ್ಮೆ ಅತಿಯಾದ ಭಾವನಾತ್ಮಕತೆ (Emotionality) ಯು ಅವರನ್ನು ನಿರಾಶಾವಾದಿ ಚಿಂತನೆ ಕಡೆಗೆ ಕರೆದೊಯ್ಯುತ್ತದೆ. ಈ ರಾಶಿ ಚಕ್ರ (zodiac) ದ ಜನರು ಅತಿಯಾಗಿ ಯೋಚಿಸುವುದು ಮತ್ತು ಚಿಂತಿಸುವುದನ್ನು ಸಹ ಮಾಡುತ್ತಾರೆ.

ನಿನ್ನ ‘ಈ ಗುಣ’ಗಳೇ ನಿನ್ನ ದರಿದ್ರ ಸ್ಥಿತಿಗೆ ಕಾರಣ; ಗರುಡ ಪುರಾಣ ಏನು ಹೇಳುತ್ತೆ?

 

ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರು ಚಿಕ್ಕ ಚಿಕ್ಕ ವಿಷಯಗಳಿಗೂ ಹೆಚ್ಚಿನ ಕಾಳಜಿ  (concern) ವಹಿಸುತ್ತಾರೆ. ಆದರೆ ಕೆಲವು ವಿಷಯಗಳು ತಾವು ಅಂದುಕೊಂಡ ಹಾಗೆ ಆಗದಿದ್ದಾಗ ಅವರು ನಿರಾಶವಾದಿ ಮನಸ್ಥೀತಿಯನ್ನು ಬೆಳೆಸಿಕೊಳ್ಳುತ್ತಾರೆ. ಈ ರಾಶಿ ಚಕ್ರದ ಜನರು ಅತಿಯಾಗಿ ಯೋಚಿಸುವುದು ಮತ್ತು ಚಿಂತಿಸು (worry) ವುದನ್ನು ಸಹ ಮಾಡುತ್ತಾರೆ.
 
ವೃಷಭ ರಾಶಿ (Taurus)

ಇವರು ಕೆಲವೊಮ್ಮೆ ಹಠಮಾರಿ (Stubborn) ಗಳಾಗುತ್ತಾರೆ. ಇವರ ಮೊಂಡುತನ ಅವರನ್ನು ನಿರಾಶವಾದಿಗಳಂತೆ ಮಾಡುತ್ತದೆ. ಕೆಲವೊಮ್ಮೆ ಈ ರಾಶಿಚಕ್ರದ ಜನರು ಸಹ ಬದಲಾವಣೆಯನ್ನು ವಿರೋಧಿಸುತ್ತಾರೆ. ಇದರಿಂದಾಗಿ ಅವರ ನಿರಾಶೆ (disappointment) ಯು ಹೆಚ್ಚು ಪ್ರಬಲವಾಗುತ್ತದೆ.

ಕಟಕ ರಾಶಿ (Cancer) 
 
ಈ ರಾಶಿಯ ಜನರು ಹೆಚ್ಚು ಸಂವೇದನಾಶೀಲ (Sensitive) ರು ಮತ್ತು ಭಾವನಾತ್ಮಕವಾಗಿರುತ್ತಾರೆ. ಆದರೆ ಕೆಲವೊಮ್ಮೆ ಇವರ ಈ ಸಹಾನುಭೂತಿ (Sympathy) ಯ ಸ್ವಭಾವವು ಅವರನ್ನು ಹೆಚ್ಚು ನಿರಾಶವಾದಿಯನ್ನಾಗಿ ಮಾಡಬಹುದು. ಈ ರಾಶಿಚಕ್ರ (Zodiac) ದ ಜನರು ಗತಕಾಲದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅದು ಅವರ ಜೀವನ  (life) ಮತ್ತು ಸಂಬಂಧ (relationship) ಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಈ ರಾಶಿಯವರು ಲಕ್ಕಿ ಗರ್ಲ್; ಇವರು ಮನೆಗೆ ಅದೃಷ್ಟ ದೇವತೆಯರು..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

 

Latest Videos
Follow Us:
Download App:
  • android
  • ios