ವಿಜಯಪುರ: ಫಾರಿನ್‌ನ ಯಾವ ಬುಲ್ ಫೈಟ್‌ಗೂ ಕಮ್ಮಿ ಇಲ್ಲ ಕಾಖಂಡಕಿ ಕರಿ..!

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ  ಗ್ರಾಮದಲ್ಲಿ ನಡೆಯೋ ಕಾರ ಹುಣ್ಣಿಮೆಯ ಕರಿ ಹಬ್ಬ ಅಂದ್ರೆ ಸಾಕು ಜನರು ಒಂದು ಕ್ಷಣ ಬೆಚ್ಚಿಬೀಳ್ತಾರೆ. ಕಾಖಂಡಕಿ ಕರಿ ಹಬ್ಬದ ಎತ್ತಿನ ಓಟವನ್ನ ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಜನರು ಬಂದರೂ ಸಹ ಈಗಾಗಲೇ ಕರಿ ಹಬ್ಬದಲ್ಲಿ ಗೂಳಿಗಳಿಂದ ತಿವಿಸಿಕೊಂಡವರು ಈ ಕಡೆಗೆ ತಲೆ ಹಾಕಿಯು ಮಲಗಲ್ಲ ಅಂತಾರೆ. 

Bull Fight Held Kakhandaki in Vijayapura grg

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ(ಜೂ.10): ಫಾರಿನ್‌ಗಳಲ್ಲಿ ನಡೆಯುವ ಬುಲ್ ಫೈಟ್‌ ಬಗ್ಗೆ ನಿಮಗೆಲ್ಲ ಗೊತ್ತೆ ಇರುತ್ತೆ. ಓಡೋಡಿ ಬರುವ ಮದವೇರಿ ಬುಲ್ ಗುಂಪಿನಲ್ಲಿ ನುಗ್ಗಿ ಜನರನ್ನ ಕೋಡುಗಳ ಮೂಲಕ ಎತ್ತಿ ಬಿಸಾಕಿ ಬಿಡುತ್ವೆ. ಇಂಥ ದೃಶ್ಯಗಳು ಯೂಟ್ಯೂಬ್ ಸೇರಿ ಸೋಶಿಯಲ್ ಮೀಡಿಯಾದಲ್ಲಿ ನೋಡುಗರನ್ನ ಬೆಚ್ಚಿ ಬೀಳಿಸುತ್ತವೆ. ಇಂಥದ್ದೆ ಬುಲ್ ಫೈಟ್ ಹೋಲುವ ಹಬ್ಬವೊಂದು ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದಲ್ಲಿ ನಡೆಯುತ್ತೆ. 

ಬೆಚ್ಚಿ ಬೀಳಿಸುವ ಕಾಖಂಡಕಿ ಕರಿ ಹಬ್ಬ..!

ಜಿಲ್ಲೆಯ ಬಬಲೇಶ್ವರ ತಾಲೂಕಿನ  ಗ್ರಾಮದಲ್ಲಿ ನಡೆಯೋ ಕಾರ ಹುಣ್ಣಿಮೆಯ ಕರಿ ಹಬ್ಬ ಅಂದ್ರೆ ಸಾಕು ಜನರು ಒಂದು ಕ್ಷಣ ಬೆಚ್ಚಿಬೀಳ್ತಾರೆ. ಕಾಖಂಡಕಿ ಕರಿ ಹಬ್ಬದ ಎತ್ತಿನ ಓಟವನ್ನ ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಜನರು ಬಂದರೂ ಸಹ ಈಗಾಗಲೇ ಕರಿ ಹಬ್ಬದಲ್ಲಿ ಗೂಳಿಗಳಿಂದ ತಿವಿಸಿಕೊಂಡವರು ಈ ಕಡೆಗೆ ತಲೆ ಹಾಕಿಯು ಮಲಗಲ್ಲ ಅಂತಾರೆ. ಇಲ್ಲಿ ನಡೆಯುವ ಬುಲ್ಸ್‌ ಗಳ ಡೆಂಜುರಸ್‌ ಓಟ-ಆಟ ಒಂದಿಲ್ಲೊಂದು ಅನಾಹುತವನ್ನ ಸೃಷ್ಟಿಸುತ್ತೆ. ಎಲ್ಲ ಕಡೆಗಳಲ್ಲಿ ಕಾರ ಹುಣ್ಣಿಮೆಯ ಮರುದಿನವೆ ಕರಿ ಹರಿಯುವ ಆಚರಣೆ ನಡೆದರೆ ಕಾಖಂಡಕಿ ಗ್ರಾಮದಲ್ಲಿ ಮಾತ್ರ ಕಾರ ಹುಣ್ಣಿಮೆಯ ಒಂದು ವಾರದ ಬಳಿಕ ಕರಿ ಹರಿಯಲಾಗುತ್ತೆ.  ಈ ಬಾರಿಯು ಕಾರ ಹುಣ್ಣಿಮೆ  ನಡೆದ ಕಾಖಂಡಕಿ ಕಾರ ಹುಣ್ಣಿಮೆ ಎತ್ತಿನ ಓಟದಲ್ಲಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.. ಇಬ್ಬರ ಪ್ರಾಣ ಸಂಕಟದಲ್ಲಿದೆ..

ಆಲಮಟ್ಟಿ: ಮಳೆಗಾಗಿ ಕೃಷ್ಣೆ ತೀರದಲ್ಲಿ ಜಪತಪ..!

ಇತಿಹಾಸ ಪ್ರಸಿದ್ದ ಕಾಖಂಡಕಿ ಕರಿ ಹಬ್ಬ..!

ಡೆಂಜುರಸ್‌ ಆದ್ರು ಕಾಖಂಡಕಿ ಕರಿಗೆ ತನ್ನದೆ ಆದ ಮಹತ್ವ ಇದೆ. ಕಾರ ಹುಣ್ಣಿಮೆ ಕಳೆದ ಒಂದು ವಾರಕ್ಕೆ ಇಲ್ಲಿ ಕರಿ ಹರಿಯುವುದು ಮೊದಲಿನಿಂದಲು ನಡೆದುಕೊಂಡ ಬಂದ ಪದ್ದತಿಯಾಗಿದೆ. ಹೀಗಾಗಿ ಎತ್ತುಗಳನ್ನ ಸಿಂಗಾರಗೊಳಿಸಿ ಜನರ ನಡುವೆ ಬಿಡಲಾಗುತ್ತೆ. ಕೊಬ್ಬಿದ ಹೋರಿಗಳು ಓಡೋದಕ್ಕೆ ಶುರು ಮಾಡಿದ್ರೆ, ಇತ್ತ ನೋಡಲು ಬಂದ ಜನರು ಬೆಚ್ಚಿ ಬೀಳ್ತಾರೆ.‌ ಕೆಲವರು ಎತ್ತುಗಳಿಂದ ತಿವಿಸಿಕೊಂಡು ಗಾಯಗೊಂಡು ವಿಲವಿಲ ಅಂತಾರೆ.

8 ಎತ್ತುಗಳು, 8 ಯುವಕರ ಗುಂಪುಗಳು..!

ಇಡೀ ಕರಿ ಹರಿಯೋ ಆಚರಣೆಗೆ 8 ಎತ್ತುಗಳನ್ನ ಸೆಲೆಕ್ಟ್ ಮಾಡಿಕೊಳ್ಳಲಾಗುತ್ತೆ. ತಕ್ಷಣವೆ ಮದವೇರುವ, ಜನರ ಮೇಲೆ ಏಗರೇಗರಿ ಹೋಗುವಂತ ಗೂಳಿ-ರಾಸುಗಳನ್ನೆ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಆಯ್ಕೆಯಾದ 8 ಎತ್ತುಗಳಿಗೆ 8 ಯುವಕರು ಗುಂಪುಗಳನ್ನ ನೇಮಿಸಲಾಗುತ್ತೆ. ಒಂದು ಗುಂಪಿನಲ್ಲಿ ಅಂದಾಜಿ 20 ರಿಂದ 30 ಜನ ಯುವಕರು ಇರ್ತಾರೆ‌. ಎತ್ತುಗಳ ಕೊರಳಿಗೆ ಹಗ್ಗವನ್ನ ಹಾಕಿ ಓಡಿಸಲಾಗುತ್ತೆ. ಎತ್ತುಗಳಿಗೆ ಆಕರ್ಷಕ ಹೆಸರುಗಳನ್ನ ಇಡಲಾಗಿರುತ್ತೆ. ಈ ಬಾರಿ ಒಂದು ಎತ್ತಿಗೆ ಆರ್.ಸಿ.ಬಿ ಅಂತಾ ಹೆಸರಿಟ್ಟರೆ ಉಳಿದ ಎತ್ತುಗಳಿಗೆ ಹಾಲುಮತದ ಹುಲಿ, ಭೀಮನ ಹುಲಿ, ಗೂಳೇಶ್ವರ, ಓಕಳಿ ಎತ್ತು, "ಕರಿ ಎತ್ತಿಗೆ ಸರ್ಕಾರ್" ಎಂದು ಹೆಸರಿಡಲಾಗಿತ್ತು. 

ಭವಿಷ್ಯ ಹೇಳುವ ಬಾಸಿಂಗ ಎತ್ತುಗಳು..!

ಇನ್ನೂ ಈ ಓಟದ ನಡುವೆ ಸಾಂಪ್ರದಾಯಿಕ ಆಚರಣೆಯು ನಡೆಯುತ್ತೆ. ಕೆಂಪು ಹಾಗೂ ಬಿಳಿ ಎತ್ತುಗಳಿಗೆ ಬಾಸಿಂಗ ಕಟ್ಟಿ ಬಿಡಲಾಗುತ್ತೆ. ಯಾವ ಬಣ್ಣದ ಎತ್ತು ಓಡಿ ಬರುತ್ತೋ ಅದರ ಮೇಲೆ ಮುಂದಿನ ಒಂದು ವರ್ಷದ ಮಳೆ-ಬೆಳೆಯ ಭವಿಷ್ಯವನ್ನ ನಿರ್ಧರಿಸಲಾಗುತ್ತೆ. ಈ ಬಾರಿ ಮತ್ತೆ ಕೆಂಪು ಎತ್ತು‌ ಕರಿ ಹರಿಯಿತು. ಈ ಮೂಲಕ ಈ ಬಾರಿ ಕೆಂಪು ಧಾನ್ಯ ಬೆಳೆಗಳು ರೈತರ ಕೈ ಹಿಡಿಯಲಿವೆ ಎನ್ನಲಾಗಿದೆ. ಕೆಂಪು ಧಾನ್ಯಗಳಾದ ಗೋದಿ, ಮೆಕ್ಕೆಜೋಳ ಸೇರಿದಂತೆ ಹಲವು ಧಾನ್ಯಗಳ ಫಸಲು ಹಲುಸಾಗಿ ಬೆಳೆಯುತ್ತವೆ ಎನ್ನುವ ನಂಬಿಕೆ ಜನರಲ್ಲಿದೆ.

ಎಂಎ ಇಂಗ್ಲಿಷ್‌ ಅಂತಿಮ ಪರೀಕ್ಷೆ ಬರೆದ 81 ವರ್ಷದ ಹಿರಿಯಜ್ಜ: ಸಾಧನೆಗೆ ಪತ್ನಿಯೇ ಪ್ರೇರಣೆ

ರಾಜ್ಯ-ಹೊರ ರಾಜ್ಯಗಳಿಂದ ಬಂದ ಜನ..!

ಎತ್ತುಗಳ ಸ್ಪರ್ಧೆ ವೀಕ್ಷಿಸಲು ರಾಜ್ಯದ ಹುಬ್ಬಳ್ಳಿ, ಬೆಳಗಾವಿ ಕಲಬುರ್ಗಿ, ಕೊಪ್ಪಳ, ಬಾಗಲಕೋಟೆ ಇನ್ನೂ ನೆರೆಯ ಮಾಹಾರಾಷ್ಟ್ರದಿಂದಲು ಜನರು ಬರೋದು ವಿಶೇಷ. ಮರದ ಮೇಲೆ, ಮೇಲ್ಚಾವಣಿ ಮೇಲೆ ಕುಳಿತು ಜನರು ಎತ್ತುಗಳ ಆರ್ಭಟಿಸುವುದನ್ನ ಕಣ್ತುಂಬಿಕೊಳ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಜನರ ಮೇಲೆ ಎರಗಿದ ಎತ್ತುಗಳು..!

ಗ್ರಾಮದಲ್ಲಿ ಎತ್ತುಗಳನ್ನ ಓಡಿಸೋಕೆ ಶುರು ಮಾಡಿದ್ರೆ, ಓಡೋಡಿ ಬರುವ ಎತ್ತುಗಳನ್ನ ಯುವಕರು ಹಿಡಿಯೋಕೆ ಪ್ರಯತ್ನಿಸುತ್ತಾರೆ. ಎತ್ತುಗಳ ಗಮನ ಸೆಳೆಯಲು ಪ್ಲಾಸ್ಟಿಕ್ ಸದ್ದು ಮಾಡುವುದು, ಛತ್ರಿಗಳನ್ನ ಹಿಡಿದು ಆಕರ್ಷಿಸಲಾಗುತ್ತೆ. ಇದರಿಂದ ಬೆದರುವ ಎತ್ತುಗಳು ದಾಳಿ ಇಡುತ್ತವೆ.. ಈ ಬಾರಿಯು ಹಲವರ ಮೇಲೆ ಎತ್ತುಗಳು ಏರಗಿವೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Latest Videos
Follow Us:
Download App:
  • android
  • ios