Asianet Suvarna News Asianet Suvarna News

ಬುಧನ ಉದಯ; ಈ 3 ರಾಶಿಯವರಿಗೆ ಭರ್ಜರಿ ಆದಾಯ..!

ಬುಧನು ಕಟಕ ರಾಶಿಯಲ್ಲಿ ಉದಯಿಸಿದ್ದು, ಇದು ಕೆಲವು ರಾಶಿಯವರಿಗೆ ಅದೃಷ್ಟ ತಂದಿದೆ. ಬುಧನ ಉದಯದಿಂದ ಈ 4 ರಾಶಿಯವರಿಗೆ ಶುಭಫಲ ಸಿಗಲಿದೆ.

budh uday 2023 mercury rises in cancer money will come to Aries Taurus Virgo zodiac signs suh
Author
First Published Jul 17, 2023, 4:19 PM IST | Last Updated Jul 17, 2023, 4:29 PM IST

ಬುಧನು ಕಟಕ ರಾಶಿ (Cancer) ಯಲ್ಲಿ ಉದಯಿಸಿದ್ದು, ಇದು ಕೆಲವು ರಾಶಿಯವರಿಗೆ ಅದೃಷ್ಟ ತಂದಿದೆ. ಬುಧನ ಉದಯದಿಂದ ಈ 4 ರಾಶಿಯವರಿಗೆ ಶುಭಫಲ ಸಿಗಲಿದೆ.

ಜ್ಯೋತಿಷ್ಯ (Astrology)ದಲ್ಲಿ ಗ್ರಹಗಳ ಉದಯ ಮತ್ತು ಅಸ್ತವನ್ನು, ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ರಾಶಿಚಕ್ರ (Zodiac) ಚಿಹ್ನೆಗಳ ಮೇಲೆ ಅದರ ಪ್ರಭಾವವು ಧನಾತ್ಮಕ  (Positive) ಅಥವಾ ಋಣಾತ್ಮಕ (Negative) ಪರಿಣಾಮ ಬೀರುತ್ತದೆ. 

ರಾಶಿಚಕ್ರದಲ್ಲಿ ಬುಧ ಸಂಕ್ರಮಣವು ಸಾಮಾನ್ಯವಾಗಿ ಸುಮಾರು 23-28 ದಿನಗಳವರೆಗೆ ಇರುತ್ತದೆ. ಇದರ ನಂತರ ಬುಧವು ಮತ್ತೊಂದು ರಾಶಿಚಕ್ರ  (Zodiac) ಚಿಹ್ನೆಗೆ ಚಲಿಸುತ್ತದೆ. ಈ ಬಾರಿ ಬುಧವು ಜುಲೈ 14 2023ರಂದು ಕಟಕ ರಾಶಿಯಲ್ಲಿ ಉದಯಿಸಿದ್ದಾನೆ.  ಇದು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಮೇಷ ರಾಶಿ ( Aries) 

ಮೇಷ ರಾಶಿಯವರಿಗೆ ಬುಧ ಮೂರನೇ ಮನೆ ಮತ್ತು ಆರನೇ ಮನೆಗೆ ಅಧಿಪತಿಯಾಗಿದ್ದು, ಬುಧ ಈಗ ನಾಲ್ಕನೇ ಮನೆಯಲ್ಲಿ  ಉದಯಿಸುತ್ತಿದ್ದಾನೆ. ಇದು ವ್ಯಕ್ತಿಯ ಜೀವನದಲ್ಲಿ ಬೆಳವಣಿಗೆ ಮತ್ತು ಪ್ರಗತಿ (progress) ಯನ್ನು ತರುತ್ತದೆ. ವೃತ್ತಿಯ ವಿಷಯದಲ್ಲಿ ಈ ರಾಶಿಚಕ್ರದವರು ಕೆಲಸದ ಸ್ಥಳದಲ್ಲಿ ಅತ್ಯುತ್ತಮ ಉದ್ಯೋಗ ಸಂಬಂಧಿತ ಫಲಿತಾಂಶ (result) ಗಳು ಮತ್ತು ಅವಕಾಶಗಳನ್ನು ಪಡೆಯಬಹುದು. ಹೆಚ್ಚುವರಿ ಬೋನಸ್‌ ಗಳಿಸಲು ಅಥವಾ ಕರ್ಕಾಟಕದಲ್ಲಿ ಬುಧ ಉದಯಿಸುವ ಸಮಯದಲ್ಲಿ ಬೇರೆ ರೀತಿಯ ಹಣಕಾಸು ಪಡೆಯಲು ಸಹ ಸಾಧ್ಯವಿದೆ.

ವೃಷಭ ರಾಶಿ (Taurus ) 

ವೃಷಭ ರಾಶಿಯವರಿಗೆ ಬುಧ (Wednesday) ನು ಎರಡನೇ ಮನೆ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು, ಮೂರನೇ ಮನೆಯಲ್ಲಿ ಉದಯಿಸುತ್ತಾನೆ. ಮೂರನೇ ಮನೆಯಲ್ಲಿ ಬುಧವು ಉದಯಿಸುವುದರಿಂದ ವೃಷಭ ರಾಶಿಯ ಜನರು ಹೆಚ್ಚಿನ ಶ್ರಮವನ್ನು ಮತ್ತು ಕಠಿಣಪರಿಶ್ರಮದ ನಂತರ ಯಶಸ್ಸನ್ನು ಅನುಭವಿಸುವ ಸ್ಥಿತಿಯಲ್ಲಿರುತ್ತಾರೆ. ಅವರು ತಮ್ಮ ಹಣದ ಸಂಪತ್ತನ್ನು ಹೆಚ್ಚಿಸುವ ಮತ್ತು ಅವರ ಆಧ್ಯಾತ್ಮಿಕ  (Spiritual) ಆಸಕ್ತಿಗಳನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಗಮನಹರಿಸಬಹುದು.

ಕಟಕದಲ್ಲಿ ಸೂರ್ಯ ಸಂಚಾರ; ಈ ರಾಶಿಯವರಿಗೆ ಹಣದ ಸುರಿಮಳೆ

 

ಕನ್ಯಾ ರಾಶಿ (Virgo) 

ಕನ್ಯಾ ರಾಶಿಯವರಿಗೆ ಬುಧ 1ನೇ ಮತ್ತು 10ನೇ ಮನೆಗೆ ಅಧಿಪತಿಯಾಗಿದ್ದು, ಬುಧನು ಈಗ 11ನೇ ಮನೆಯಲ್ಲಿ ಉದಯಿಸಿದ್ದಾನೆ. ಈ ದಿನಗಳಲ್ಲಿ ಕನ್ಯಾ ರಾಶಿಯವರಿಗೆ ಗಳಿಕೆ ಮತ್ತು ಆರ್ಥಿಕ ಸ್ಥಿರತೆ (Financial stability) ಯನ್ನು ಪಡೆಯುವುದು ಸುಲಭ‌.  ನಿಮ್ಮ ಈ ವೇಳೆ ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಮೇಲಾಧಿಕಾರಿಗಳ ಬೆಂಬಲವನ್ನು ಪಡೆಯಬಹುದು‌.  ಈ ರಾಶಿಚಕ್ರದ ಜನರು ಉನ್ನತ ಮಟ್ಟದ ಪ್ರಗತಿಗೆ ಮತ್ತು ಅಭಿವೃದ್ಧಿಯನ್ನು ಕಾಣಬಹುದು. ಈ ಅವಧಿಯಲ್ಲಿ ತೃಪ್ತಿಯ ಜೊತೆಗೆ ಒಟ್ಟಾರೆ ಸಮೃದ್ಧಿಯನ್ನು ಕಾಣಬಹುದು, ಇದು ನಿಮ್ಮ ಆಸೆಗಳನ್ನು ಪೂರೈಸುವ ಕ್ಷಣವಾಗಿರಬಹುದು.

ರಾಹು-ಕೇತು ಸಂಕ್ರಮಣ; ಈ ಮೂರು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios