ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಬಜೆಟ್ ಮಂಡಿಸಿದ್ದಾರೆ. ತುಳಸೀದಾಸರು ತಮ್ಮ ದೋಹಾದಲ್ಲಿ ಬಜೆಟ್ ಹೇಗಿರಬೇಕು ಮತ್ತು ತೆರಿಗೆ ವ್ಯವಸ್ಥೆ ಹೇಗಿರಬೇಕು, ರಾಮರಾಜ್ಯದಲ್ಲಿ ಹೇಗಿತ್ತು ಎಂಬುದರ ಕುರಿತು  ವಿವರಿಸಿದ್ದಾರೆ.

ದೊಡ್ಡ ಕೈಗಾರಿಕೋದ್ಯಮಿಗಳಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೂ ಎಲ್ಲರಿಗೂ ಬಜೆಟ್ ಮುಖ್ಯವಾಗಿದೆ. ಏಕೆಂದರೆ ಬಜೆಟ್ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ ಎಲ್ಲರ ದೃಷ್ಟಿಯೂ ಬಜೆಟ್‌ನತ್ತ ನೆಟ್ಟಿರುತ್ತದೆ. ಹೆಚ್ಚಿನ ತೆರಿಗೆ ಹೊರೆ ಇರಬಾರದು, ಹಣದುಬ್ಬರದಿಂದ ಮುಕ್ತಿ ಸಿಗಬೇಕು ಮತ್ತು ಗರಿಷ್ಠ ಯೋಜನೆಗಳನ್ನು ಘೋಷಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. 

1 ಫೆಬ್ರವರಿ 2024ರಂದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಬಜೆಟ್ ಅನ್ನು ಮಂಡಿಸಿದ್ದಾರೆ. ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಇದು ಮಧ್ಯಂತರ ಬಜೆಟ್ ಆಗಿದೆ. 

ತೆರಿಗೆ ವ್ಯವಸ್ಥೆ ಇಂದಿನದಲ್ಲ
ತೆರಿಗೆ ವ್ಯವಸ್ಥೆಯು ಇಂದಿನದಲ್ಲ, ಆದರೆ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಿಮಗೆ ಗೊತ್ತೇ? ಜನರಿಗೆ ಅನುಕೂಲವಾಗುವ ಬಜೆಟ್ ಹೇಗಿರಬೇಕು ಎಂಬುದನ್ನು ತುಳಸಿದಾಸ್ ಅವರ ದೋಹಾವಳಿ ಮೂಲಕ ತಿಳಿಯಬಹುದು. ತುಳಸಿದಾಸರು ತಮ್ಮ ಮಹಾಕಾವ್ಯದಲ್ಲಿ ರಾಮನ ಆಳ್ವಿಕೆಯ ಬಜೆಟ್ ಬಗ್ಗೆ ಹೇಳಿದ್ದಾರೆ. ರಾಮನ ಆಳ್ವಿಕೆಯಲ್ಲಿ ಬಜೆಟ್ ಹೇಗಿತ್ತು ನೋಡೋಣ.

ಇಶಾ ಅಂಬಾನಿಯ ಬಲಗೈ ಈ ದರ್ಶನ್ ಮೆಹ್ತಾ, ಇವರ ಸಂಬಳ ಎಷ್ಟು ಅಂದ್ರೆ..

ಬರ್ಶತ್ ಹರ್ಶತ್ ಲೋಗ್ ಸಬ್ ಕರ್ಸತ್ ಲಕೈ ನ ಕೋಯಿ
ತುಲಸೀ ಪ್ರಜಾಸುಭಾಗ್ ತೇ ಭೂಪ್ ಭಾನು ಸೋ ಹೋಯಿ

ಗೋಸ್ವಾಮಿ ತುಳಸಿದಾಸರು ಈ ದ್ವಿಪದಿಯಲ್ಲಿ ತೆರಿಗೆ ಸಂಗ್ರಹದ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತಾರೆ. ಇದರಲ್ಲಿ, ತೆರಿಗೆ ವ್ಯವಸ್ಥೆಯನ್ನು ವಿವರಿಸಲು ಅವರು ಸೂರ್ಯನ ಉದಾಹರಣೆಯನ್ನು ನೀಡುತ್ತಾರೆ. ಸೂರ್ಯನು ಯಾರಿಗೂ ತಿಳಿಯದಂತೆ ಭೂಮಿಯಿಂದ ನೀರನ್ನು ಹೀರಿಕೊಳ್ಳುತ್ತಾನೆ. ಆದರೆ ಈ ನೀರನ್ನು ಸಂಗ್ರಹಿಸಿ ಮೋಡಗಳ ರೂಪದಲ್ಲಿ ಮಳೆಯನ್ನು ಉಂಟು ಮಾಡಲಾಗುತ್ತದೆ. ಮಳೆಯನ್ನು ಕಂಡು ಜನರು ಸಂತಸಗೊಳ್ಳುತ್ತಾರೆ. ರಾಜ (ಸರ್ಕಾರ) ಕೂಡ ಭಾನು (ಸೂರ್ಯ) ರಂತೆ ತೆರಿಗೆ ವಸೂಲಿ ಮಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು.

ಮಣಿ ಮಾಣಿಕ್ ಮಹಂಗೇ ಕಿಯೇ, ಸಹಜೇ ತೃಣ್, ಜಲ್, ನಾಜ್
ತುಲಸೀ ಸೋಯಿ ಜಾನಿಯೇ ರಾಮ್ ಗರೀಬ್ ನವಾಜ್

ತುಳಸಿದಾಸ್ ರಾಮನನ್ನು ಒಬ್ಬ ವ್ಯಕ್ತಿಯಾಗಿ ಅಲ್ಲ, ಆದರೆ ಆದರ್ಶ ಮತ್ತು ಮೌಲ್ಯವಾಗಿ ನೋಡುತ್ತಾರೆ. ತುಳಸಿದಾಸರು ಈ ದ್ವಿಪದಿಯಲ್ಲಿ ರಾಮರಾಜ್ಯದಲ್ಲಿ ತೆರಿಗೆಯನ್ನು ಪಾವತಿಸಲು ಸಮರ್ಥರಾದ ಜನರಿಂದ ಹೆಚ್ಚು ತೆರಿಗೆಯನ್ನು ಸಂಗ್ರಹಿಸಲಾಗಿದೆ. ಮತ್ತು ಬಡವರಿಂದ ತೆರಿಗೆ ತೆಗೆದುಕೊಂಡಿಲ್ಲ ಎಂದು ಹೇಳುತ್ತಾರೆ.