Asianet Suvarna News Asianet Suvarna News

ಇಶಾ ಅಂಬಾನಿಯ ಬಲಗೈ ಈ ದರ್ಶನ್ ಮೆಹ್ತಾ, ಇವರ ಸಂಬಳ ಎಷ್ಟು ಅಂದ್ರೆ..

ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ರಿಟೇಲ್ ಇಂದು ಯಶಸ್ವಿಯಾಗಿ ನಡೆಯುತ್ತಿದೆ. ಇದರ ಕುರಿತಾದ ಎಲ್ಲ ನಿರ್ಧಾರ ತೆಗೆದುಕೊಳ್ಳಲು ಇಶಾಗೆ ಬಲಗೈಯಾಗಿ ಇರುವವರು ದರ್ಶನ್ ಮೆಹ್ತಾ. ಯಾರು ಈ ಮೆಹ್ತಾ?

Meet Darshan Mehta right hand of Isha Ambani skr
Author
First Published Feb 1, 2024, 4:22 PM IST

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಅವರು 904369 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಕೇಶ್ ಅಂಬಾನಿ ಅವರ ಮಕ್ಕಳು ನಿಕಟ ಸಹವರ್ತಿಗಳ ನೇತೃತ್ವದಲ್ಲಿ ಅದರ ಅಂಗಸಂಸ್ಥೆಗಳ ಮೂಲಕ ವ್ಯಾಪಕ ಶ್ರೇಣಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯುತ್ತಮ ಕಾರ್ಯನಿರ್ವಹಣೆಯ ಅಂಗಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್ ಇದು ಪುತ್ರಿ ಇಶಾ ಅಂಬಾನಿಯ ಮುಂದಾಳತ್ವದಲ್ಲಿದೆ.

ರಿಲಯನ್ಸ್ ರಿಟೇಲ್ ಪ್ರಸ್ತುತ ರೂ. 8,40,000 ಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಮುಕೇಶ್ ಅಂಬಾನಿ ಇಶಾ ಅಂಬಾನಿಯನ್ನು ಆಗಸ್ಟ್ 2022ರಲ್ಲಿ ರಿಲಯನ್ಸ್ ರಿಟೇಲ್‌ನ ಮಾಲಕಿ ಎಂದು ಹೆಸರಿಸಿದ್ದಾರೆ ಮತ್ತು ಆಕೆ ಉದ್ಯಮಿಯಾಗಿ ಅಂದಿನಿಂದ ಭಾರತಕ್ಕೆ ಹಲವಾರು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ತಂದಿದ್ದಾರೆ.

ಕಂಪನಿಯನ್ನು ಹೊಸ ಎತ್ತರಕ್ಕೆ ಏರಿಸಲು, ಇಶಾ ಅಂಬಾನಿ ಕೆಲವು ವಿಶ್ವಾಸಾರ್ಹ ಸಹಾಯಕರನ್ನು ಹೊಂದಿದ್ದು, ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ. ಹೀಗೆ ಇಸಾಗೆ ಪ್ರಮುಖ ಸಹಾಯಕರಾಗಿದ್ದು, ಬಲಗೈ ಭಂಟರಂತೆ ಇರುವವರು ಮುಖೇಶ್ ಅಂಬಾನಿ ಸಂಸ್ಥೆಯ ಮೊದಲ ಉದ್ಯೋಗಿ ದರ್ಶನ್ ಮೆಹ್ತಾ. 

ರಿಲಯನ್ಸ್ ರಿಟೇಲ್‌ನ ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಬ್ರಾಂಡ್ಸ್ ಅನ್ನು 2007ರಲ್ಲಿ ಮುಖೇಶ್ ಅಂಬಾನಿ ಸ್ಥಾಪಿಸಿದರು. ಆಗ ಬ್ರ್ಯಾಂಡ್‌ನ ಮೊದಲ ಉದ್ಯೋಗಿಯಾಗಿದ್ದವರು ದರ್ಶನ್ ಮೆಹ್ತಾ.  ಅವರು ಪ್ರಸ್ತುತ ರಿಲಯನ್ಸ್ ಬ್ರ್ಯಾಂಡ್‌ನ ಅಧ್ಯಕ್ಷ ಮತ್ತು ಎಂಡಿ ಆಗಿದ್ದಾರೆ.

ಮೆಹ್ತಾ ಅವರು ಆರಂಭದಲ್ಲಿ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಅವರು ನಿಧಾನವಾಗಿ ಚಿಲ್ಲರೆ ವ್ಯಾಪಾರದತ್ತ ಹೊರಳಿದರು. ಟಾಮಿ ಹಿಲಿಗರ್, ಗ್ಯಾಂಟ್ ಮತ್ತು ನಾಟಿಕಾದಂತಹ ಬ್ರ್ಯಾಂಡ್‌ಗಳನ್ನು ಭಾರತಕ್ಕೆ ತರುವಲ್ಲಿ ಮೆಹ್ತಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. 

ಯಶಸ್ಸು ಬೇಕಂದ್ರೆ ಮೊದ್ಲು ಈ ಸಿಂಪಲ್ ವಿಷ್ಯ ಕಲೀರಿ ಅಂತಾರೆ ನಟ ಮಾಧವನ್

ದರ್ಶನ್ ಮೆಹ್ತಾ ಸ್ಯಾಲರಿ
ಕಂಪನಿಯ ಫೈಲಿಂಗ್ಸ್ ಪ್ರಕಾರ, ದರ್ಶನ್ ಮೆಹ್ತಾ ಅವರು 2020-21ನೇ ಸಾಲಿಗೆ 4.89 ಕೋಟಿ ರೂ. ಪಡೆದಿದ್ದಾರೆ. ಅವರು ಚಾರಣಪ್ರಿಯರಾಗಿದ್ದಾರೆ.  ರಿಲಯನ್ಸ್ ರಿಟೇಲ್‌ನಲ್ಲಿ ಇಶಾ ಅಂಬಾನಿಯವರ ಯಶಸ್ಸಿನ ಹಿಂದೆ ಅವರು ಪ್ರಮುಖ ವ್ಯಕ್ತಿಯಾಗಿದ್ದಾರೆ. ಮೆಗಾ ರಿಲಯನ್ಸ್ ಇಂಡಸ್ಟ್ರೀಸ್ ಈವೆಂಟ್‌ನಲ್ಲಿ ಇಶಾ ಅಂಬಾನಿ ಬಹಿರಂಗಪಡಿಸಿದಂತೆ, ರಿಲಯನ್ಸ್ ರಿಟೇಲ್ ಕಳೆದ ವರ್ಷ 3300 ಸ್ಟೋರ್‌ಗಳನ್ನು ತೆರೆದಿದೆ.

Follow Us:
Download App:
  • android
  • ios