Asianet Suvarna News Asianet Suvarna News

Navratri 2022: ಹಬ್ಬದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಖಚಿತ!

10 ದಿನಗಳ ಕಾಲ ಆಚರಿಸುವ ವಿಶೇಷ ಹಬ್ಬ ದಸರಾ. ಈ ಸಮಯದಲ್ಲಿ ಮನೆಗೆ ಈ ಮಂಗಳಕರ ವಸ್ತುಗಳನ್ನು ತರುವುದರಿಂದ ಸಂಪತ್ತು ದುಪ್ಪಟ್ಟಾಗುತ್ತೆ. ನವರಾತ್ರಿಯಲ್ಲಿ ಯಾವ ವಸ್ತುಗಳನ್ನು ನೀವು ಮನೆಗೆ ತಂದಿಡಬೇಕು ಗೊತ್ತಾ?

Bringing home these things during Navratri will give you prosperity skr
Author
First Published Sep 25, 2022, 10:42 AM IST

ಹಿಂದೂ ಧರ್ಮದಲ್ಲಿ ಶಾರದೀಯ ನವರಾತ್ರಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ಮಾ ದುರ್ಗೆಯ ಒಂಬತ್ತು ರೂಪಗಳನ್ನು ಭಕ್ತರು ಒಂಬತ್ತು ದಿನಗಳವರೆಗೆ ಪೂಜಿಸುತ್ತಾರೆ. ಜನರು ಉಪವಾಸವನ್ನು ಆಚರಿಸುತ್ತಾರೆ. ಇದು ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಮಂಗಳಕರ ಸಮಯಗಳಲ್ಲಿ ಒಂದಾಗಿದೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಮನೆಯಲ್ಲಿ ಕೆಲವು ವಸ್ತುಗಳನ್ನು ತಂದರೆ ತಾಯಿಯ ಕೃಪೆ ಸಿಗುತ್ತದೆ. ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಆರೋಗ್ಯ ಮತ್ತು ಸಂಪತ್ತನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ಆ ವಸ್ತುಗಳು ಯಾವುವು ನೋಡೋಣ..

ಕಮಲ(Lotus)
ಕಮಲದ ಹೂವು ಲಕ್ಷ್ಮಿ ದೇವಿಗೆ ಪ್ರಿಯವಾದದ್ದು. ನವರಾತ್ರಿಯಲ್ಲಿ ಪ್ರತಿದಿನ ನಿಮ್ಮ ಪೂಜಾ ಕೋಣೆಯಲ್ಲಿ ತಾಜಾ ಕಮಲದ ಹೂವನ್ನು ಇಡುವುದರಿಂದ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ಅವಳು ನಿಮಗೆ ಆರೋಗ್ಯ ಮತ್ತು ಸಂಪತ್ತನ್ನು ಅನುಗ್ರಹಿಸುತ್ತಾಳೆ. ನವರಾತ್ರಿಯಲ್ಲಿ ಕಮಲದ ಮೇಲೆ ಕುಳಿತಿರುವ ತಾಯಿಯ ಫೋಟೋವನ್ನು ಹಾಕುವುದು ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.

Weekly Love Horoscope: ಈ ರಾಶಿಯ ಪ್ರೀತಿಗೆ ಈ ವಾರ ಗೆಲುವು, ಪ್ರೀತಿಸುವವರಿಂದ ಒಪ್ಪಿಗೆ!

ಸೌಂದರ್ಯ ಸಾಮಗ್ರಿಗಳು(Makeup items)
ನವರಾತ್ರಿಯು ಸ್ತ್ರೀ ಸೌಂದರ್ಯದ ಆಚರಣೆಯಾಗಿದೆ. ನವರಾತ್ರಿಯ ಸಮಯದಲ್ಲಿ, ನೀವು ಮನೆಗೆ 16 ರೀತಿಯ ಸೌಂದರ್ಯವರ್ಧಕ ವಸ್ತುಗಳನ್ನು ತರಬೇಕು. ದುರ್ಗಾದೇವಿಗೆ ಷೋಡಶ ಅಲಂಕಾರ ಎಂದರೆ ಬಹಳ ಇಷ್ಟ. ಮಹಿಳೆಯರು ಅಲಂಕಾರ ಮಾಡಿಕೊಂಡರೂ ಇಷ್ಟ. ಇದರಿಂದಾಗಿ ನಿಮ್ಮ ಮನೆಯಲ್ಲಿ ಅಭಿವೃದ್ಧಿ ಮತ್ತು ಅದೃಷ್ಟವು ಉಳಿಯುತ್ತದೆ.

ಬೆಳ್ಳಿ ಅಥವಾ ಚಿನ್ನದ ನಾಣ್ಯ(Silver or gold coin)
ನವರಾತ್ರಿಯಲ್ಲಿ ನೀವು ಲಕ್ಷ್ಮಿ ಮತ್ತು ಗಣೇಶನ ಚಿತ್ರವಿರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ಖರೀದಿಸಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ನವರಾತ್ರಿಯ ಮೊದಲ ದಿನದಂದು ಇದನ್ನು ಮಾಡಬಹುದು ಮತ್ತು ಅದನ್ನು ಮನೆಯ ದೇವರ ಕೋಣೆಯಲ್ಲಿ ಅಥವಾ ನಿಮ್ಮ ಮನೆಯ ಲಾಕರ್‌ನಲ್ಲಿ ಇರಿಸಬಹುದು.

ನವಿಲು ಗರಿ(Peacock feather)
ಸರಸ್ವತಿ ದೇವಿಯು ನವಿಲನ್ನು ಹಿಡಿದಿರುತ್ತಾಳೆ. ನವಿಲುಗರಿಯು ಕೃಷ್ಣ ಮತ್ತು ಸರಸ್ವತಿಗೆ ಸಂಬಂಧಿಸಿದೆ. ನಿಮ್ಮ  ಮನೆಯ ದೇವರ ಕೋಣೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಧನಾತ್ಮಕ ಕಂಪನಗಳನ್ನು ಆಕರ್ಷಿಸುತ್ತದೆ ಮತ್ತು ಮನೆಯ ವಾಸ್ತು ದೋಷವನ್ನು ಸಹ ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.

ಲಕ್ಷ್ಮಿ ವಿಗ್ರಹ(Lakshmi Idol)
ಸಂಪತ್ತು ಮತ್ತು ಸಮೃದ್ಧಿಗಾಗಿ, ನೀವು ಲಕ್ಷ್ಮಿ ದೇವಿಯ ವಿಗ್ರಹವನ್ನು ಮನೆಗೆ ತರಬೇಕು. ಅವಳು ವಿಗ್ರಹದಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿದ್ದಾಳೆ ಎಂದು ಖಚಿತಪಡಿಸಿಕೊಳ್ಳಿ. ಕಮಲದ ಮೇಲೆ ಕುಳಿತಿರುವ ಲಕ್ಷ್ಮೀಯ ವಿಗ್ರಹ ಅಥವಾ ಫೋಟೋ ಬಹಳ ಒಳ್ಳೆಯದು.

ವಾರ ಭವಿಷ್ಯ: ವೃಷಭಕ್ಕೀ ವಾರ ಆರ್ಥಿಕ ಯೋಗ, ಕಟಕಕ್ಕೆ ಹಳೆಯ ಹೂಡಿಕೆಯಿಂದ ಲಾಭ

ತುಳಸಿ ಮತ್ತು ಬಾಳೆಗಿಡ (Tulsi and banana tree)
ನವರಾತ್ರಿಯ ಸಮಯದಲ್ಲಿ ತುಳಸಿ ಮತ್ತು ಬಾಳೆ ಗಿಡಗಳನ್ನು ಮನೆಯಲ್ಲಿ ನೆಡುವುದು ಸಹ ತುಂಬಾ ಮಂಗಳಕರವಾಗಿದೆ. ಈ ಎರಡೂ ಗಿಡಗಳನ್ನು ಪ್ರತಿ ದಿನ ಪೂಜಿಸುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ತುಳಸಿ ಗಿಡದಲ್ಲಿ ಲಕ್ಷ್ಮೀ ಇದ್ದರೆ, ಬಾಳೆಗಿಡದಲ್ಲಿ ಮಹಾ ವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಇಬ್ಬರೂ ಮನೆಗೆ ಒಟ್ಟಾಗಿ ಬರುವುದರಿಂದ ಮತ್ತು ಅವರನ್ನು ಸರಿಯಾಗಿ ನಡೆಸಿಕೊಳ್ಳುವುದರಿಂದ ಮನೆಯ ಸಂಕಷ್ಟಗಳೆಲ್ಲ ತೀರುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios