Asianet Suvarna News Asianet Suvarna News

ಈ ದಿನದಲ್ಲಿ ಹುಟ್ಟಿದವರಿಗೆ ದುಡ್ಡೇ ಸರ್ವಸ್ವ, ಮಹತ್ವಾಕಾಂಕ್ಷಿ, ಆದರೆ ವೈವಾಹಿಕ ಜೀವನ..!?

ಪಾದಾಂಕ 3ರ ಅಧಿಪತಿ ಗ್ರಹ ಬೃಹಸ್ಪತಿ ಗ್ರಹವಾದ ಗುರು ಆಗಿದೆ. ಹಾಗಾಗಿ ಇವರಿಗೆ ಗುರು ಗ್ರಹಕ್ಕೆ ಸಂಬಂಧಪಟ್ಟ ಎಲ್ಲ ಗುಣ -ದೋಷಗಳು ಸಹ ಬಂದಿರುತ್ತವೆ. ಇವರು ಸ್ವಾಭಿಮಾನಿ ಗುಣವನ್ನು ಹೊಂದಿದವರಾಗಿದ್ದು, ಯಾರ ಮುಂದೆಯೂ ತಲೆ ತಗ್ಗಿಸಲು ಇಷ್ಟಪಡುವುದಿಲ್ಲ. ಯಾರ ಋಣವನ್ನೂ ಇಟ್ಟುಕೊಳ್ಳಲು ಬಯಸಲಾರರು. ಬೇರೆಯವರಿಗೋಸ್ಕರ ಏನನ್ನು ಬೇಕಿದ್ದರೂ ಮಾಡಲು ಸಿದ್ಧರಿರುತ್ತಾರೆ. ಇವರ ಬಗ್ಗೆ ಇನ್ನಷ್ಟು ವಿಶೇಷ ಗುಣಗಳಿದ್ದು, ಅವುಗಳ ಬಗ್ಗೆ ತಿಳಿಯೋಣ.

Born on this date are money minded people know about their married life
Author
Bangalore, First Published Jul 19, 2021, 2:08 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರಕ್ಕೂ ಅದರದ್ದೇ ಆದ ಮಹತ್ವ ಇದೆ. ನಿಮ್ಮ ಅದೃಷ್ಟವನ್ನು ಸಂಖ್ಯೆಗಳ ಮೂಲಕ ತಿಳಿಯಬಹುದು. ಕೆಲವರಿಗೆ ಕೆಲವು ಸಂಖ್ಯೆಗಳು ದುರಾದೃಷ್ಟವಾಗಿರುತ್ತದೆ. ಆದರೆ, ಲಕ್ಕಿ ನಂಬರ್ ಗಳೆಂದು ಹಲವರು ಹೇಳುವುದನ್ನು ಎಲ್ಲರೂ ಕೇಳಿರುತ್ತಾರೆ. ಹೀಗೆ ಕೆಲವು ಸಂಖ್ಯೆಗಳಿಗೆ ಕೆಲವು ವಸ್ತುಗಳು ಹೊಂದಾಣಿಕೆಯಾಗುತ್ತವೆ. ಆದರೆ, ಇಂಥ ದಿನದಲ್ಲಿಯೇ ಖರೀದಿಸಬೇಕು, ವಾಹನಗಳಿಗೂ ಇಂಥ ಸಂಖ್ಯೆಯೇ ಬೇಕು ಎಂದು ಹುಡುಕಿ ಹಾಕಿಸಿಕೊಳ್ಳುವವರಿದ್ದಾರೆ. ಹೀಗೆ ಹಲವು ವಿಷಯಗಳಿಗೆ ಸಂಖ್ಯಾಶಾಸ್ತ್ರದ ಮೊರೆ ಹೋಗಲಾಗುತ್ತದೆ. 

ವರ್ಷದಲ್ಲಿ 12 ತಿಂಗಳಿದ್ದು, ಯಾವುದೇ ತಿಂಗಳ 3, 12, 21 ಮತ್ತು 30ನೇ ತಾರೀಖಿನ ದಿನ ಜನಿಸಿದವರ ಭವಿಷ್ಯ, ಸ್ವಭಾವ ಯಾವ ರೀತಿ ಇದೆ? ಅದೃಷ್ಟದ ಕಥೆ ಏನು..? ಇವರಿಗೆ ಧನಲಾಭ ಇದೆಯೇ..? ಆರ್ಥಿಕವಾಗಿ ಹೇಗೆ? ಗೌರವಾದರಗಳು ಲಭ್ಯವಾಗುತ್ತವೆಯೇ ಎಂಬಿತ್ಯಾದಿ ಅಂಶಗಳನ್ನು ಸಂಖ್ಯಾಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಈ ದಿನಗಳಂದು ಜನಿಸಿದವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

Born on this date are money minded people know about their married life


3, 12, 21 ಮತ್ತು 30ನೇ ತಾರೀಖಿನಂದು ಜನಿಸಿದವರ ಪಾದಾಂಕವು 3 ಆಗಲಿದೆ. ಹಾಗಾಗಿ 3ನೇ ತಾರೀಖು ಮಾತ್ರವಲ್ಲದೆ, ಉಳಿದ 12, 21 ಮತ್ತು 30ನೇ ತಾರೀಖಿನಲ್ಲಿ ಜನಿಸಿದವರಿಗೂ ಪಾದಾಂಕ 3 ಆಗಲಿದ್ದು, ಭವಿಷ್ಯ ಹೇಗೆ ಇರಲಿದೆ ಎಂಬುದನ್ನು ಸಂಖ್ಯಾಶಾಸ್ತ್ರ ಮೂಲಕ ತಿಳಿದುಕೊಳ್ಳಬಹುದಾಗಿದೆ. 

ಇದನ್ನು ಓದಿ: ಮಂಗಳವಾರದ ಈ ಆರಾಧನೆಗಳಿಂದ ನಿಮಗೆ ಎಲ್ಲವೂ ಪ್ಲಸ್..!

ಸಾಧಿಸುವ ಛಲದ ಸ್ವಭಾವ
ತಮ್ಮ ಜೀವನದಲ್ಲಿ ಯಾರೂ ಸಹ ಉದ್ದೇಶವಿಲ್ಲದೆ ಹಸ್ತಕ್ಷೇಪ ಮಾಡುವುದನ್ನು ಈ ವ್ಯಕ್ತಿಗಳು ಇಷ್ಟಪಡಲಾರರು. ಸ್ವತಂತ್ರ್ಯಕ್ಕೆ ಯಾವುದೇ ಅಡ್ಡಿ ಬರುವುದಕ್ಕೆ ಇವರು ಇಷ್ಟಪಡುವುದಿಲ್ಲ. ಅದಕ್ಕೆ ಯಾವುದೇ ರಾಜಿ ಇಲ್ಲ. ಸಾಹಸ ಪ್ರವೃತ್ತಿ ಉಳ್ಳವರಾಗಿದ್ದು, ಪರಾಕ್ರಮಿಯಾಗಿದ್ದಾರೆ. ಸೋಲನ್ನು ಒಪ್ಪಿಕೊಳ್ಳದಿರುವವರು ಇವರಾಗಿರುತ್ತಾರೆ. ಯಾವುದೇ ಕೆಲಸವನ್ನು ಮಾಡಬೇಕೆಂದುಕೊಂಡರೂ ಸಾಧಿಸುವ ಛಲ ಇವರಲ್ಲಿ ಇರುತ್ತದೆ. ಅತಿ ಮಹತ್ವಾಕಾಂಕ್ಷಿಗಳು. ಉತ್ತಮ ವಿಚಾರವಂತರು, ದೂರದರ್ಶಿಗಳು ಆಗಿರುತ್ತಾರೆ. 

ಶಿಕ್ಷಣ ಪ್ರಗತಿ ಹೇಗೆ..?
ಪಾದಾಂಕ 3ರಲ್ಲಿ ಜನಿಸಿದವರು ಶಿಕ್ಷಣವನ್ನು ಪೂರ್ಣಗೊಳಿಸಿಕೊಳ್ಳಲು ಹೆಚ್ಚು ಸಂಘರ್ಷವನ್ನು ಎದುರಿಸುತ್ತಾರೆ. ಇವರ ಶಿಕ್ಷಣದಲ್ಲಿ ಸದಾ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಆದರೂ, ಅಂಥ ಸಂಘರ್ಷಗಳ ನಂತರವೂ ಉನ್ನತ ಸ್ಥರದ ಶಿಕ್ಷಣವನ್ನು ಪಡೆಯುತ್ತಾರೆ. ಈ ವ್ಯಕ್ತಿಗಳು ವಿಜ್ಞಾನ ಅಥವಾ ಸಾಹಿತ್ಯದಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿರುತ್ತಾರೆ. 


ಇದನ್ನು ಓದಿ: ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ಆರ್ಥಿಕ ಸ್ಥಿತಿ ಬಗ್ಗೆ ತಿಳಿಯೋಣ…
ಈ ಪಾದಾಂಕದ ವ್ಯಕ್ತಿಗಳಿಗೆ ಆರಂಭದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದಿಲ್ಲ. ಆದರೆ, ಕಾಲಕ್ಕೆ ತಕ್ಕಂತೆ ಧನ ಪ್ರಾಪ್ತಿಯೂ ಆಗುತ್ತದೆ. ಈ ವ್ಯಕ್ತಿಗಳಿಗೆ ಒಂದಕ್ಕಿಂತ ಹೆಚ್ಚು ಆದಾಯ ಮೂಲಗಳಿಂದ ಆದಾಯವು ಬರುತ್ತವೆ. ಆದರೆ, ಕೆಲವು ಬಾರಿ ಧನ ಸಂಪತ್ತಿನ ಬಗ್ಗೆ ಕಾನೂನು ಮೊರೆ ಹೋಗುವ ಸಾಧ್ಯತೆಯೂ ಇರುತ್ತದೆ. ತಮ್ಮ ಪ್ರಯತ್ನಗಳಿಂದ ಹಣವಂತರಾಗುತ್ತಾರೆ. ಸ್ವಲ್ಪ ಮಟ್ಟಿಗೆ ಮನಿಮೈಂಡ್ ಅನ್ನು ಸಹ ಹೊಂದಿರುತ್ತಾರೆ. 

ಸಂಬಂಧ/ಬಾಂಧವ್ಯ ಹೀಗಿರುತ್ತೆ..
ಈ ಪಾದಾಂಕದಲ್ಲಿ ಜನಿಸಿದವರು ಬಹಳ ವ್ಯಾವಹಾರಿಕವಾಗಿ ಯೋಚಿಸುವುದರಿಂದ ಜನರ ಜೊತೆ ಇವರ ಬಾಂಧವ್ಯ ಉತ್ತಮವಾಗಿರುತ್ತದೆ. ಆದರೆ, ಕೌಟುಂಬಿಕ ಸಂಬಂಧಗಳಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವ್ಯಕ್ತಿಗಳು ಅಣ್ಣ-ತಂಗಿಯ ವಿಷಯದಲ್ಲಿ ಬಹಳ ಮುತುವರ್ಜಿ ವಹಿಸಿ ಕೊಡುಗೆಗಳನ್ನು ನೀಡುತ್ತಾರೆ. ಆದರೆ, ಅವರಿಂದ ಆ ಪ್ರಮಾಣದ ಸಾಥ್ ದೊರೆಯುವುದಿಲ್ಲ. ಇವರಿಗೆ ಬಹಳ ಸಂಖ್ಯೆಯಲ್ಲಿ ಸ್ನೇಹಿತರಿರುತ್ತಾರೆ. ಪ್ರೇಮ ಸಂಬಂಧವು ಗಟ್ಟಿ ಬಾಂಧವ್ಯವವನ್ನು ಹೊಂದಿರುವುದಿಲ್ಲ. 

ವೈವಾಹಿಕ ಜೀವನ
ಪಾದಾಂಕ 3ರ ವ್ಯಕ್ತಿಗಳ ಜೀವನ ಎಂದೂ ಸಹ ಏರು ಪೇರಾಗಿರುತ್ತದೆ. ಇವರಿಗೆ 2 ವಿವಾಹವಾಗುವ ಸಾಧ್ಯತೆಗಳೂ ಇವೆ. ಇವರಿಗೆ ಮೊದಲನೇ ಮದುವೆಯಲ್ಲಿ ಹೆಚ್ಚು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಒಟ್ಟಾರೆಯಾಗಿ ಇವರ ವೈವಾಹಿಕ ಜೀವನ ಅಷ್ಟು ಉತ್ತಮವಾಗಿ, ಸುಖಕರವಾಗಿ ಇರುವುದಿಲ್ಲ. 

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಹೆಚ್ಚು ಭಾಗ್ಯವಂತರು..!

ಕಾರ್ಯಕ್ಷೇತ್ರದಲ್ಲಿ ಸಾಧನೆ
ಇವರು ಪೊಲೀಸ್, ಸೇನೆ, ಬ್ಯಾಂಕ್ ಅಧಿಕಾರಿ, ಧಾರ್ಮಿಕ ಮುಖ್ಯಸ್ಥರು, ಉತ್ತಮ ಲೇಖಕರು, ಅಧ್ಯಾಪಕರು, ಪ್ರೊಫೆಸರ್ ಗಳು, ವಿನ್ಯಾಸಕಾರರು ಸಹ ಆಗಲಿದ್ದಾರೆ. ಯಾವುದೇ ಕಾರ್ಯದಲ್ಲಿಯೂ ಸಹ ಧಕ್ಷತೆಯನ್ನು ಇವರು ಹೊಂದಿರುತ್ತಾರೆ. ಉತ್ತಮ ಹೆಸರನ್ನು ಗಳಿಸುತ್ತಾರೆ.

Follow Us:
Download App:
  • android
  • ios