Asianet Suvarna News Asianet Suvarna News

Astrology Tips : ಅಶ್ವತ್ಥ ಮರಕ್ಕೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಪೂಜೆ ಮಾಡ್ಬೇಡಿ

ಅಶ್ವತ್ಥ ಮರದಲ್ಲಿ ದೇವಾನುದೇವತೆಗಳು ವಾಸಿಸುತ್ತವೆ. ಪ್ರತಿ ದಿನ ಅದ್ರ ಪೂಜೆ ಮಾಡೋದ್ರಿಂದ ಕಷ್ಟ ಪರಿಹಾರವಾಗುತ್ತದೆ. ಅಶ್ವತ್ಥ ಮರಕ್ಕೆ ನೀರು ಹಾಕಿದ್ರೂ ಸಂತೋಷ ಮನೆಯಲ್ಲಿ ನೆಲೆಸುತ್ತದೆ. ಇದ್ರ ಪೂಜೆ ಮೊದಲು ಭಕ್ತರು ಕೆಲ ಸಂಗತಿ ತಿಳಿದಿರಬೇಕು.
 

When People Shoul Not Offering Water Sacred Fig
Author
First Published Nov 10, 2022, 4:57 PM IST

ಹಿಂದೂ ಧರ್ಮದಲ್ಲಿ ಅಶ್ವತ್ಥ ಮರಕ್ಕೆ ವಿಶೇಷ ಮಹತ್ವವಿದೆ. ಈ ಮರದಲ್ಲಿ ತಾಯಿ ಲಕ್ಷ್ಮಿ, ವಿಷ್ಣು ಮತ್ತು ಇತರ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಅಶ್ವತ್ಥ ಮರದಲ್ಲಿ  ನಾನು ನೆಲೆಸಿದ್ದೇನೆ ಎಂದು ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಪ್ರತಿನಿತ್ಯ ಅಶ್ವತ್ಥ ವೃಕ್ಷವನ್ನು ಪೂಜಿಸುವುದರಿಂದ ಶನಿ ದೋಷ, ಸಾಡೆ ಸತಿ ಮತ್ತು ಧೈಯಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅಶ್ವತ್ಥ ಮರದ ಪೂಜೆಯಿಂದ  ಪೂರ್ವಜರ ಆಶೀರ್ವಾದವೂ ಸಿಗುತ್ತದೆ. ಪ್ರತಿ ದಿನ ಅಶ್ವತ್ಥ ಮರಕ್ಕೆ ಪೂಜೆ ಮಾಡುವವರಿದ್ದಾರೆ. ಅಶ್ವತ್ಥ ಮರದ ಕೆಳಗೆ ದೀಪ ಬೆಳಗಿ, ಪ್ರದಕ್ಷಿಣೆ ಹಾಕಿ, ಎಲ್ಲ ಸಮಸ್ಯೆ ದೂರ ಮಾಡುವಂತೆ ಜನರು ಬೇಡಿಕೊಳ್ತಾರೆ. ಆದ್ರೆ ಕೆಲವರಿಗೆ ಅಶ್ವತ್ಥ ಮರವನ್ನು ಯಾವಾಗ ಪೂಜೆ ಮಾಡ್ಬೇಕು, ಯಾವಾಗ ಮಾಡಬಾರದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಶ್ವತ್ಥ ಮರದಲ್ಲಿ ದೇವರು ನೆಲೆಸಿದೆ ಎನ್ನುವ ಕಾರಣಕ್ಕೆ ದಿನದ ಎಲ್ಲ ಸಮಯದಲ್ಲಿ ಅದ್ರ ಪೂಜೆ ಮಾಡುವುದು ಸರಿಯಲ್ಲ. ಅಶ್ವತ್ಥ ಮರದ ಆರಾಧನೆ ಮಾಡುವ ಮೊದಲು ಶಾಸ್ತ್ರದಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿಯುವುದು ಒಳ್ಳೆಯದು. 

ಅಶ್ವತ್ಥ (Sacred Fig) ಮರದ ಬಗ್ಗೆ ಸ್ಕಂದ ಪುರಾಣದಲ್ಲಿ ವಿವರವಾಗಿ ವಿವರಿಸಲಾಗಿದೆ. ಈ ಪುರಾಣ (Mythology) ದಲ್ಲಿ ಒಂದು ಪದ್ಯದ ಮೂಲಕ ಅಶ್ವತ್ಥ ಮರದ ಮಹತ್ವವನ್ನು ಹೇಳಲಾಗುತ್ತದೆ. ಆ ಶ್ಲೋಕ (Shloka) ದಲ್ಲಿ ಅಶ್ವತ್ಥ ಮರದ ಮೂಲದಲ್ಲಿ ವಿಷ್ಣು, ಕಾಂಡದಲ್ಲಿ ಕೇಶವ, ಕೊಂಬೆಗಳಲ್ಲಿ ನಾರಾಯಣ, ಎಲೆಗಳಲ್ಲಿ ಹರಿ ಮತ್ತು ಹಣ್ಣುಗಳಲ್ಲಿ ಎಲ್ಲಾ ದೇವತೆಗಳು ನೆಲೆಸಿದ್ದಾರೆ ಎನ್ನಲಾಗಿದೆ.  ಅಂದ್ರೆ ಅಶ್ವತ್ಥ ಮರ ವಿಷ್ಣುವಿನ ರೂಪವಾಗಿದೆ. 
ಅಶ್ವತ್ಥ ಮರವನ್ನು ಪೂಜಿಸುವ ಮತ್ತು ಸೇವೆ ಮಾಡುವ ವ್ಯಕ್ತಿ ಎಲ್ಲಾ ರೀತಿಯ ಪಾಪಗಳಿಂದ ಮುಕ್ತನಾಗುತ್ತಾನೆ. ಪೂರ್ವಜರ ಆಶೀರ್ವಾದ ಪಡೆಯುತ್ತಾನೆ. 

ವೃಷಭ ರಾಶಿಯ ಪುರುಷ ಮತ್ತು ಮಹಿಳೆ ನಡುವಿನ Compatibility ಹೇಗಿದೆ ನೋಡಿ!

ಈ ಸಮಯದಲ್ಲಿ ಅಶ್ವಥ ಮರ ಪೂಜೆ ಮಾಡಬೇಡಿ : ಶಾಸ್ತ್ರಗಳ ಪ್ರಕಾರ, ಸೂರ್ಯೋದಯದ ಮೊದಲು ಅಶ್ವತ್ಥ ಮರವನ್ನು ಪೂಜಿಸಬಾರದು. ಏಕೆಂದರೆ ಸೂರ್ಯೋದಯಕ್ಕೆ ಮುನ್ನ ದರಿದ್ರ ಲಕ್ಷ್ಮಿಯು ಅಶ್ವತ್ಥ ಮರದಲ್ಲಿ ನೆಲೆಸುತ್ತಾಳೆ. ದರಿದ್ರ ಲಕ್ಷ್ಮಿ ಬಡತನದ ದೇವತೆ ಎಂದು ಪರಿಗಣಿಸಲಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲು ಅಶ್ವತ್ಥ ಮರ ಪೂಜೆ ಮಾಡಿದ್ರೆ ದರಿದ್ರ ಲಕ್ಷ್ಮಿ ಪೂಜೆ ಮಾಡಿದಂತೆ ಆಗುತ್ತದೆ. ಇದ್ರಿಂದ ಮನೆಯಲ್ಲಿ ಬಡತನ ಆವರಿಸುತ್ತದೆ.  ಜೀವನದಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ಸೂರ್ಯೋದಯಕ್ಕೆ ಮೊದಲು ಅಶ್ವತ್ಥ ಮರದ ಹತ್ತಿರವೂ ಹೋಗಬಾರದು. ಯಾವಾಗಲೂ ಸೂರ್ಯೋದಯದ ನಂತರವೇ ಅಶ್ವತ್ಥ ಮರವನ್ನು ಪೂಜಿಸಬೇಕು.

ಈ ದಿನ ಅಶ್ವತ್ಥ ಮರಕ್ಕೆ ನೀರು ಹಾಕ್ಬೇಡಿ : ಧರ್ಮಗ್ರಂಥಗಳ ಪ್ರಕಾರ ಒಂದೊಂದು ದಿನ ಒಂದೊಂದು ದೇವರು ಅಶ್ವತ್ಥ ಮರದಲ್ಲಿ ವಾಸಿಸುತ್ತಾರೆ.  ಲಕ್ಷ್ಮಿ ಶನಿವಾರದಂದು ಅಶ್ವತ್ಥ ಮರದಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಶನಿವಾರ ನೀರನ್ನು ಅರ್ಪಿಸುವುದು ಉತ್ತಮವಾಗಿದೆ. ಭಾನುವಾರ ಅಶ್ವತ್ಥ ಮರಕ್ಕೆ ನೀರನ್ನು ಹಾಕುವುದನ್ನು  ನಿಷೇಧಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಭಾನುವಾರದಂದು ಅಶ್ವತ್ಥ ಮರಕ್ಕೆ ನೀರನ್ನು ಹಾಕುವುದ್ರಿಂದ ಬಡತನ ಆವರಿಸುತ್ತದೆ.  
ಅಶ್ವತ್ಥ ಮರವನ್ನು ಎಂದಿಗೂ ಕತ್ತರಿಸಬಾರದು. ಹೀಗೆ ಮಾಡುವುದರಿಂದ ಪೂರ್ವಜರು ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ವಂಶಾಭಿವೃದ್ಧಿಗೆ ತೊಂದರೆಯಾಗುತ್ತದೆ.  

ಮನೆಯಲ್ಲಿ ಈ ವಿಗ್ರಹಗಳನ್ನಿಟ್ಟರೆ, ಅದೃಷ್ಟದ ಬೀಗ ತೆರೆದುಕೊಳ್ಳೋದು ಗ್ಯಾರಂಟಿ

ಅಶ್ವತ್ಥ ಮರದ ಆಶೀರ್ವಾದ (Blessing) ಸಿಗ್ಬೇಕೆಂದ್ರೆ ಏನು ಮಾಡಬೇಕು ? : ನಿಮ್ಮೆಲ್ಲ ಇಷ್ಟಗಳನ್ನು ಈಡೇರಿಸುವ ಶಕ್ತಿ ಅಶ್ವತ್ಥ ಮರಕ್ಕಿದೆ. ನೀವು ಅದಕ್ಕೆ ನೀರು ಹಾಕುವುದ್ರಿಂದ, ಪೂಜೆ ಮಾಡುವುದ್ರಿಂದ ಮತ್ತು ಪ್ರದಕ್ಷಿಣೆ ಹಾಕುವುದ್ರಿಂದ ಎಲ್ಲ ಪಾಪಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದ್ರಿಂದ ನಿಮ್ಮ ಶತ್ರುಗಳನ್ನು ನಾಶ ಮಾಡಬಹುದು. ಅಶ್ವತ್ಥ ಮರವನ್ನು ಪೂಜಿಸುವುದರಿಂದ ಗ್ರಹದೋಷ, ಪಿತೃದೋಷ ಮತ್ತು ಅನ್ಯಗ್ರಹಗಳಿಂದ ಉಂಟಾಗುವ ದೋಷಗಳು ನಿವಾರಣೆಯಾಗುತ್ತದೆ. ಅಮವಾಸ್ಯೆ ಮತ್ತು ಶನಿವಾರದಂದು ಅಶ್ವತ್ಥ ಮರದ ಕೆಳಗೆ ಕುಳಿತು ಹನುಮಂತನ ಆರಾಧನೆ ಮಾಡಿದ್ರೆ, ಹುನಮಾನ ಚಾಲೀಸಾವನ್ನು ಓದಿದ್ರೆ ಎಲ್ಲ ದುಃಖಗಳು ಕಡಿಮೆಯಾಗುತ್ತವೆ.  
 

Follow Us:
Download App:
  • android
  • ios