Ramadan Festival ಭರ್ಜರಿ ವ್ಯಾಪಾರ ಕಾಣ್ತಿರೋ ಭಟ್ಕಳದ ರಂಜಾನ್ ಮಾರ್ಕೆಟ್

* ಭರ್ಜರಿ ವ್ಯಾಪಾರ ಕಾಣ್ತಿರೋ ಭಟ್ಕಳದ ರಂಜಾನ್ ಮಾರ್ಕೆಟ್ 
* ಕಳೆದ ಒಂದೂವರೆ ದಶಕದಿಂದ ಭಟ್ಕಳ ರಂಜಾನ್ ಮಾರ್ಕೆಟ್ ಹೆಚ್ಚು ಪ್ರಸಿದ್ಧಿ
* ರಂಜಾನ್ ಹಬ್ಬ ಹತ್ತಿರವಾಗುತ್ತಿದ್ದಂತೆಯೇ ವ್ಯಾಪಾರ- ವಹಿವಾಟು ಜೋರು

Bhatkal ramadan market And Nights food Full rush rbj

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್

ಭಟ್ಕಳ, (ಮೇ.01):  
ರಂಜಾನ್, ಈದ್ ಹಬ್ಬಕ್ಕೆ ತಯಾರಿಗಳು ನಡೆಯುತ್ತಿದೆ. ವಿಶ್ವದೆಲ್ಲಡೆ ಈ ಹಬ್ಬವನ್ನು ಮುಸ್ಲಿಮ್ ಬಾಂದವರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಕಳೆದ 2 ವರ್ಷಗಳಿಂದ ಕೊರೋನಾ ಕಾಟದಿಂದಾಗಿ ಕಂಗೆಟ್ಟಿದ್ದ ಭಟ್ಕಳದ ರಂಜಾನ್ ಮಾರ್ಕೆಟ್ ಈ ವರ್ಷವಂತೂ ಭರ್ಜರಿ ವ್ಯಾಪಾರ ಕಾಣುತ್ತಿದೆ.

ಭಟ್ಕಳ ಪುರಸಭೆ ಏಪ್ರಿಲ್ 4ರಿಂದ ಮೇ 3ರವರೆಗೆ ರಂಜಾನ್ ಮಾರ್ಕೆಟ್‌ಗೆ ಅನುಮತಿ ನೀಡಿದ್ದು, ಮೊದಲ 5 ದಿನದ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿತ್ತು. ಆದರೆ, ನಂತರದ ದಿನಗಳಲ್ಲಿ ಭರ್ಜರಿ ವ್ಯಾಪಾರ ಕಂಡಿದ್ದು, ಕೊನೆಯ ದಿನಗಳ ವ್ಯಾಪಾರ- ವಹಿವಾಟಿನ ಮೇಲೆ ವ್ಯಾಪಾರಿಗಳ ಗಮನ ಹರಿದಿದೆ. 

ಕಳೆದ ಒಂದೂವರೆ ದಶಕದಿಂದ ಭಟ್ಕಳ ರಂಜಾನ್ ಮಾರ್ಕೆಟ್ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ರಂಜಾನ್ ಉಪವಾಸ 15 ದಿನಗಳು ಬಾಕಿ ಇರುವಾಗಲೇ ಭಟ್ಕಳಕ್ಕೆ ದೌಡಾಯಿಸುತ್ತಾರೆ. ಬಟ್ಟೆಬರೆ, ಅಲಂಕಾರಿಕಾ ಸಾಮಾನುಗಳು, ಬ್ಯಾಗ್- ಚಪ್ಪಲಿಯಿಂದ ಹಿಡಿದು ಹಲವು ರೀತಿಯ ಮನೆ ಬಳಕೆಯ ವಸ್ತುಗಳು ರಂಜಾನ್ ಪೇಟೆಯಲ್ಲಿ ಮಾರಾಟಕ್ಕೆ ಸಿಗುತ್ತವೆ. 

Expensive camel ಈದ್ ಹಬ್ಬದ ಪ್ರಯುಕ್ತ ಒಂಟೆ ಹರಾಜು, ಬರೋಬ್ಬರಿ 14 ಕೋಟಿ ರೂಗೆ ಮಾರಾಟ!

ಅಲ್ಲಲ್ಲಿ ವಿಭಿನ್ನ ತಿಂಡಿ ತಿನ್ನಿಸುಗಳ ಮಾರಾಟವೂ ಜೋರಾಗಿ ನಡೆಯುತ್ತದೆ. ಈ ರಮ್ಝಾನ್ ಪೇಟೆಗೆ ಮಾರಾಟಕ್ಕೆ ಬರುವ ಸರಕುಗಳೆಲ್ಲಾ ಮಧ್ಯಮ ವರ್ಗದ ಜನರನ್ನು ಆಕರ್ಷಿಸುವುದೇ ರಂಜಾನ್ ಪೇಟೆಯ ವಿಶೇಷ. 1 ತಿಂಗಳ ರಮ್ಝಾನ್ ಉಪವಾಸ ಮುಗಿಸಿ ಹಬ್ಬ ಆಚರಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಖರೀದಿ ಎನ್ನುವುದು ಹೊರೆಯಾಗದಿರಲಿ ಎಂದೇ ಭಟ್ಕಳದಲ್ಲಿ ರಂಜಾನ್ ಪೇಟೆಯನ್ನು ತೆರೆಯಲಾಗಿದೆ. 

ಇದು ಕೇವಲ ಒಂದು ಕೋಮಿನ ಜನರಿಗೆ ಮಾತ್ರ ಸೀಮಿತವಾಗಿರದೆ, ವಿವಿಧೆಡೆಯಿಂದ ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೇ, ಇತ್ತೀಚಿನ ವರ್ಷಗಳಲ್ಲಿ ಭಟ್ಕಳ ಸುತ್ತಮುತ್ತಲಿನ ಹಳ್ಳಿಗಳು, ಹೊನ್ನಾವರ, ಪಕ್ಕದ ಕುಂದಾಪುರ, ಶಿರೂರಿನಿಂದಲೂ ಜನರು ರಂಜಾನ್ ಪೇಟೆಯತ್ತ ಖರೀದಿಗಾಗಿ ಮುಖ ಮಾಡುತ್ತಿದ್ದಾರೆ. ಪ್ರಾರಂಭದ ದಿನಗಳಲ್ಲಿ ರಂಜಾನ್ ಮಾರ್ಕೆಟ್ ಕಳಾಹೀನವಾಗಿದ್ದರೂ, ಇತ್ತೀಚಿನ‌‌ ದಿನಗಳಲ್ಲಿ ಮಾರುಕಟ್ಟೆ ಚೇತರಿಸಿಕೊಂಡು ಉತ್ತಮ ವ್ಯಾಪಾರ ಕಾಣುತ್ತಿದೆ. 

ಹಬ್ಬ ಹತ್ತಿರವಾಗುತ್ತಿದ್ದಂತೇ ವ್ಯಾಪಾರಿಗಳಂತೂ ಉತ್ತಮ ಲಾಭದ ಯೋಜನೆ ಹೊಂದಿದ್ದಾರೆ. ಅಂದಹಾಗೆ, ತಾಲೂಕಿನ ಮುಖ್ಯ ರಸ್ತೆಯ ಸೀಮಿತ ಪ್ರದೇಶದಲ್ಲಿ ರಂಗೇರಿಸಿಕೊಳ್ಳುವ ರಂಜಾನ್ ಪೇಟೆಯಲ್ಲಿ ಪೊಲೀಸ್ ಬಂದೋಬಸ್ತ್ ಭಿಗಿಗೊಳಿಸಲಾಗಿದೆ. ಮಾರಿಕಟ್ಟೆ ಹಾಗೂ ಹಳೇಬಸ್ ನಿಲ್ದಾಣ ಪಕ್ಕದ ನಾಗಬನ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಓಡಾಡುವ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿ ರಂಜಾನ್ ಪೇಟೆಯಲ್ಲಿ ಓಡಾಡುವ ಜನರ ಮೇಲೂ ನಿಗಾ ಇರಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪೇಟೆಯಲ್ಲಿ ಗಸ್ತು ತಿರುಗುತ್ತಾ ಜನರ ಚಲನವಲನಗಳನ್ನು ಗಮನಿಸುತ್ತಿರುವುದು ಕಂಡುಬಂದಿದೆ.

Latest Videos
Follow Us:
Download App:
  • android
  • ios