Importance of Rangoli: ರಂಗೋಲಿ ಹಾಕಿದ್ರೆ ಗ್ರಹದೋಷಗಳೆಲ್ಲ ಹೋಗುತ್ತೆ, ಆದ್ರೆ ಈ ವಿಷ್ಯ ಕಾಳಜಿ ವಹಿಸಿ
ರಂಗೋಲಿಯು ಭಾರತದಲ್ಲಿ ವೇದಗಳ ಕಾಲದಿಂದಲೂ ಇದೆ. ಗುಹೆಗಳಲ್ಲಿ ಮಾನವ ವಾಸಿಸುತ್ತಿದ್ದಾಗಲೇ ರಂಗೋಲಿ ಹಾಕುತ್ತಿದ್ದರು ಎನ್ನಲಾಗುತ್ತದೆ. ನಾಟ್ಯಶಾಸ್ತ್ರ, ರಾಮಾಯಣ, ಭಾಗವತ, ಮಹಾಭಾರತಗಳಲ್ಲಿಯೂ ರಂಗೋಲಿಯ ಉಲ್ಲೇಖವಿದೆ. ಇಷ್ಟಕ್ಕೂ ರಂಗೋಲಿ ಏಕೆ ಹಾಕಬೇಕು, ರಂಗೋಲಿ ಹಾಕುವುದರ ಹಿಂದಿನ ಉದ್ದೇಶವೇನು ಗೊತ್ತಾ?
ದಿನ ಬೆಳಗಾಗುತ್ತಿದ್ದಂತೆ ಮನೆಯ ಮುಂದಿನ ಜಾಗಕ್ಕೆ ನೀರು ಚಿಮುಕಿಸಿ, ಸ್ವಚ್ಛಗೊಳಿಸಿ ರಂಗೋಲಿ ಹಾಕುವ ಗೃಹಿಣಿಯರನ್ನು ಕಾಣುವುದು ಭಾರತದಲ್ಲಿ ಸಾಮಾನ್ಯ ಚಿತ್ರಣ. ಒಂದೊಂದು ದಿನ ರಂಗೋಲಿ ದೊಡ್ಡದಾಗಿದ್ದರೆ, ಗೃಹಿಣಿಗೆ ಸಮಯವಿಲ್ಲದ ದಿನ ಚಿಕ್ಕದಾಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ಬಣ್ಣಗಳನ್ನು ತುಂಬಿಕೊಂಡು ಕಂಗೊಳಿಸುತ್ತಿರುತ್ತದೆ. ಕೆಲ ರಂಗೋಲಿಗಳು ಹಕ್ಕಿ, ಪ್ರಾಣಿ ಇತ್ಯಾದಿ ಚಿತ್ರಗಳನ್ನು ಹೊಂದಿದ್ದರೆ ಮತ್ತೆ ಕೆಲವು ಸಂಕೀರ್ಣ ಗೆರೆಗಳ ಆಟದಂತೆ ತೋರುತ್ತವೆ. ಒಟ್ಟಿನಲ್ಲಿ ರಂಗೋಲಿಯು ಮನೆ ಬಾಗಿಲನ್ನು ಚೆನ್ನಾಗಿ ಅಲಂಕರಿಸುತ್ತದೆ.
ರಂಗೋಲಿಯ ಉದ್ದೇಶ ಕೇವಲ ಮನೆಯಂಗಳವನ್ನು ಅಂದಗೊಳಿಸುವುದಲ್ಲ. ಚೆಂದದ ರಂಗೋಲಿ ಹಾಕುವುದರ ಹಿಂದೆ ಸಾಕಷ್ಟು ಕಾರಣಗಳಿವೆ. ಹಾಗೆಯೇ ರಂಗೋಲಿ ಹಾಕುವುದರಿಂದ ಸಾಕಷ್ಟು ಲಾಭಗಳೂ ಇವೆ.
ಲಕ್ಷ್ಮೀದೇವಿಗೆ ಆಹ್ವಾನ
ದೇವರನ್ನು ಮನೆಗೆ ಆಹ್ವಾನಿಸುವಾಗ ಮನೆಯಂಗಳ ಸ್ವಚ್ಛವಾಗಿಯೂ ಸುಂದರವಾಗಿಯೂ ಇರಬೇಕಲ್ಲವೇ? ಸಂಪತ್ತು ಮತ್ತು ಎಲ್ಲಾ ರೂಪಗಳ ಸೌಂದರ್ಯದ ದೇವತೆಯಾದ ಲಕ್ಷ್ಮಿಯನ್ನು ನಮ್ಮ ಮನೆಗೆ ಸ್ವಾಗತಿಸಲು ರಂಗೋಲಿ ಹಾಕಲಾಗುತ್ತದೆ.
ಧನಾತ್ಮಕ ಆಲೋಚನೆ
ನಾವು ರಂಗೋಲಿಯಲ್ಲಿ ಬಣ್ಣಗಳು, ಸ್ವಸ್ತಿಕ್, 'ಗೋಪದ್ಮ', 'ಗದಾ ಶಂಖ' ಮುಂತಾದ ವಿನ್ಯಾಸಗಳನ್ನು ನೋಡಿದಾಗ, ವ್ಯಕ್ತಿಯಲ್ಲಿ ಕೆಟ್ಟ ಆಲೋಚನೆಗಳು ಮಾಯವಾಗುತ್ತವೆ ಮತ್ತು ವ್ಯಕ್ತಿಯು ಧನಾತ್ಮಕ ಆಲೋಚನೆಗಳೊಂದಿಗೆ ಮನೆಯೊಶಗೆಗೆ ಪ್ರವೇಶಿಸುತ್ತಾನೆ. ಇದರಿಂದ ಆತನ ಮೂಡ್ ಚೆನ್ನಾಗಿರುತ್ತದೆ.
Shukra Gochar 2023: ಮಾಳವ್ಯ ರಾಜಯೋಗದಿಂದ ಮಿಥುನ, ಕನ್ಯಾ, ಧನು ರಾಶಿಗೆ ಅಪಾರ ಧನಲಾಭ
ದಾನ ಕಾರ್ಯ
ಈಗ ರಂಗೋಲಿ ಕೇವಲ ಪ್ರದರ್ಶನವಾಗಿದೆ. ಆದರೆ, ಹಿಂದೆಲ್ಲ ರಂಗೋಲಿ ಬಿಡಿಸುವುದರ ಹಿಂದೆ ಒಂದು ಸದುದ್ದೇಶವಿತ್ತು. ಅದಕ್ಕಾಗಿಯೇ ಆಗ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕಲಾಗುತ್ತಿತ್ತು. ನಮ್ಮಂತೆಯೇ ನಮ್ಮ ಸುತ್ತಲಿನ ಎಲ್ಲ ಜೀವಿಗಳು ಎಂದು ಭಾವಿಸುವ ಧರ್ಮ ನಮ್ಮದು. ಹಾಗಾಗಿ, ಬೆಳಗ್ಗೆದ್ದು, ಸುತ್ತಲಿನ ಜೀವಿಗಳ ಹೊಟ್ಟೆ ತುಂಬಿಸಿದ ನಂತರವೇ ನಮ್ಮ ಬಗ್ಗೆ ಯೋಚಿಸುವ ರೂಢಿ ನಮ್ಮದಾಗಿತ್ತು. ಇದೇ ಕಾರಣಕ್ಕೆ ಕಾಗೆ, ಅಳಿಲು, ಇರುವೆ, ಗುಬ್ಬಚ್ಚಿ, ಪಾರಿವಾಳ ಮುಂತಾದ ಸುತ್ತಲಿನ ಪಕ್ಷಿಗಳು, ಕೀಟಗಳ ಹೊಟ್ಟೆ ತುಂಬಿಸುವ ಸಲುವಾಗಿ ಅಕ್ಕಿ ಹಿಟ್ಟಿನಿಂದ ಮನೆಯಂಗಳದಲ್ಲಿ ರಂಗೋಲಿ ಹಾಕಲಾಗುತ್ತಿತ್ತು. ಎಲ್ಲಾ ಜೀವಿಗಳೊಂದಿಗೆ ಹಂಚಿಕೊಳ್ಳುವ ಮನೋಭಾವಕ್ಕೆ ಹಿಡಿದ ಕನ್ನಡಿ ರಂಗೋಲಿಯಾಗಿದೆ. ಈ ರೀತಿ ಮಾಡುವುದರಿಂದ ಸೇವಾ ಕಾರ್ಯವಾಗುತ್ತದೆ ಅಷ್ಟೇ ಅಲ್ಲದೆ, ಗ್ರಹ ದೋಷಗಳು ನಿವಾರಣೆಯಾಗುತ್ತವೆ.
ಮಹಿಳೆಯರ ಮೆದುಳನ್ನು ಚುರುಕಾಗಿಡುವ ಕ್ರಿಯೆ
ಕೋಲಂ ಆರು ಗಣಿತ ಕೌಶಲ್ಯಗಳನ್ನು ಒಳಗೊಂಡಿದೆ. ಇದು ಎಣಿಕೆ, ಅಳತೆ, ವಿನ್ಯಾಸ, ಗುರುತಿಸುವಿಕೆ, ಪ್ರಯೋಗ ಮತ್ತು ವಿವರಿಸುವುದನ್ನು ಒಳಗೊಂಡಿರುತ್ತದೆ. ಒಂದು ಪರಿಪೂರ್ಣವಾದ ರಂಗೋಲಿಯನ್ನು ಮಾಡಲು, ಆ ಸುಂದರವಾದ ಜ್ಯಾಮಿತೀಯ ಮಾದರಿಗಳನ್ನು ರೂಪಿಸುವಾಗ ಚುಕ್ಕೆಗಳು, ಶೃಂಗಗಳು, ಚಾಪಗಳು ಮತ್ತು ರೇಖೆಗಳ ಎಣಿಕೆಯನ್ನು ಇರಿಸಿಕೊಳ್ಳಬೇಕು. ರಂಗೋಲಿಯನ್ನು ಕೂಡಾ ನೆನಪಿನಲ್ಲಿಟ್ಟುಕೊಳ್ಳಬೇಕು. ಇವೆಲ್ಲವೂ ರಂಗೋಲಿ ಹಾಕುವ ಮಹಿಳೆಯ ಮೆದುಳಿಗೆ ಉತ್ತಮ ವ್ಯಾಯಾಮವಾಗಿದೆ. ಬೆಳಗ್ಗೆ ಏಳುತ್ತಿದ್ದಂತೆಯೇ ರಂಗೋಲಿ ಹಾಕುವುದರಿಂದ ದೈಹಿಕವಾಗಿಯೂ ವ್ಯಾಯಾಮವಾಗುವ ಜೊತೆಗೆ, ಮಹಿಳೆಗೆ ಮಾನಸಿಕ ವ್ಯಾಯಾಮವೂ ಆಗುತ್ತಿತ್ತು.
ಗೆರೆ ಎಳೆದು ನಿರ್ಮಿಸಿದರೇ ಈ ಶಿವ ದೇವಾಲಯಗಳ? ಒಂದೇ ರೇಖಾಂಶದಲ್ಲಿ ನಿರ್ಮಿಸಿದ್ದಾದರೂ ಹೇಗೆ?
ದುಷ್ಟಶಕ್ತಿಗಳು ದೂರ
ರಂಗಲಿಯ ಜ್ಯಾಮಿತೀಯ ವಿನ್ಯಾಸವು ದುಷ್ಟಶಕ್ತಿಗಳನ್ನು ಓಡಿಸುವ ಮೂಲಕ ಸಂಪತ್ತಿನ ಹಿಂದೂ ದೇವತೆಯಾದ ಲಕ್ಷ್ಮಿ ದೇವಿಯನ್ನು ಮನೆಯೊಳಗೆ ಸ್ವಾಗತಿಸುತ್ತದೆ ಎಂದು ಹಿಂದೂಗಳು ನಂಬುತ್ತಾರೆ.
ದೈಹಿಕ ವ್ಯಾಯಾಮ
ರಂಗೋಲಿ ಬಿಡಿಸುವುದು ಉತ್ತಮ ದೈಹಿಕ ವ್ಯಾಯಾಮವಾಗಿ ಕಂಡುಬರುತ್ತದೆ. ರಂಗೋಲಿ ಬಿಡಿಸಲು ತಮ್ಮ ದೇಹವನ್ನು ಬಗ್ಗಿಸಿದಾಗ, ಈ ಅಭ್ಯಾಸವು ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಸೊಂಟಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ರಂಗೋಲಿಯಿಂದ ಒಬ್ಬರ ಸೃಜನಶೀಲತೆ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಏಕೆಂದರೆ, ರಂಗೋಲಿ ಬಿಡಿಸಲು ಹೆಚ್ಚಿನ ಗಮನ ಮತ್ತು ತಾಳ್ಮೆ ಬೇಕಾಗುತ್ತದೆ.
ರಂಗೋಲಿಗೂ ಮುನ್ನ
ಕೋಲಂ ವಿನ್ಯಾಸದ ಮೊದಲು ಮನೆಯ ಮುಂದೆ ಸುರಿಯುವ ನೀರಿನಲ್ಲಿ ಹಸುವಿನ ಸಗಣಿಯನ್ನು ಬೆರೆಸಲಾಗುತ್ತದೆ ಮತ್ತು ಇದು ಶುದ್ಧ ಗಾಳಿಯ ಸಂಚಾರಕ್ಕೆ ಸಹಾಯ ಮಾಡುತ್ತದೆ. ಅನಗತ್ಯ ಕೀಟಗಳನ್ನು ಕೊಲ್ಲುತ್ತದೆ. ರಂಗೋಲಿ ವಿನ್ಯಾಸವನ್ನು ಮುಂಜಾನೆ ಮಾಡಿದರೆ, ಮಹಿಳೆಯರಿಗೆ ಪ್ರಕೃತಿಯ ತಾಜಾ ಗಾಳಿಯನ್ನು ಉಸಿರಾಡುವ ಅವಕಾಶ ಸಿಗುತ್ತದೆ.