Asianet Suvarna News Asianet Suvarna News

Astrology Tips : ಗ್ರಹ ದೋಷಕ್ಕೆ ನಿಮ್ಮ ಈ ಅಭ್ಯಾಸವೂ ಕಾರಣ..!

ಗ್ರಹಗಳ ದೋಷದಿಂದ ಸಮಸ್ಯೆಯಾಗಿದೆ, ರಾಹು ಕೆಡಕು ಮಾಡ್ತಿದ್ದಾನೆ, ಸೂರ್ಯ ದುರ್ಬಲವಾಗಿದ್ದಾನೆ ಹೀಗೆ ಅನೇಕ ಕಾರಣಗಳನ್ನು ಜ್ಯೋತಿಷ್ಯಿಗಳು ಹೇಳ್ತಿರುತ್ತಾರೆ. ಈ ಎಲ್ಲ ಗ್ರಹಗಳು ನಿಮಗೆ ಸಮಸ್ಯೆ ಕೊಡಲು ನೀವೇ ಕಾರಣ. ನಿಮ್ಮ ಕೆಲ ಹವ್ಯಾಸ ಅವುಗಳನ್ನು ದುರ್ಬಲಗೊಳಿಸುತ್ತದೆ.
 

Bad Habits That Causes Weak Planets
Author
First Published Feb 7, 2023, 4:10 PM IST

ಒಬ್ಬ ವ್ಯಕ್ತಿಯ ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುವಲ್ಲಿ ಗ್ರಹಗಳ ಪಾತ್ರ ಬಹಳ ದೊಡ್ಡದು. ಗ್ರಹಗಳು ಮತ್ತು ಆಕಾಶಕಾಯಗಳ ಜೋಡಣೆ ಅಥವಾ ಅವುಗಳ ಸ್ಥಾನಗಳಿಂದ ಆಯಾ ದಿನದ ಶುಭ ಅಶುಭ ಸಮಯಗಳನ್ನು ನಿರ್ಧರಿಸಲಾಗುತ್ತದೆ. ಮನುಷ್ಯನ ಜೀವನದಲ್ಲಿನ ಒಳಿತು ಕೆಡುಕುಗಳು ಕೂಡ ಗ್ರಹಗತಿಯನ್ನೇ ಅವಲಂಬಿಸುತ್ತದೆ. ಗ್ರಹಗಳ ಸ್ಥಾನಗಳ ಕೋಷ್ಟಕ ಪಂಚಾಂಗದಲ್ಲಿ ಇರುವುದರಿಂದ ಜ್ಯೋತಿಷಿಗಳು ಪಂಚಾಂಗದ ಸಹಾಯದಿಂದ ಜಾತಕಗಳ ಪರಿಶೀಲನೆ ಮಾಡುತ್ತಾರೆ.

ಗ್ರಹ (Planet) ಗಳು ಶುಭ, ಅಶುಭ ಪ್ರಭಾವ ಬೀರುತ್ತವೆ ಎಂಬುದೇನೋ ಸರಿ ಆದರೆ ಅವು ಹಾಗೆ ಪ್ರಭಾವ ಬೀರಲು ನಮ್ಮ ಅಭ್ಯಾಸ (Practice) ಗಳು ಕೂಡ ಕಾರಣವೆಂದರೆ ನೀವು ನಂಬುತ್ತೀರಾ?.. ನಂಬಲೇಬೇಕು. ಏಕೆಂದರೆ ನಮ್ಮ ಕೆಟ್ಟ ಅಥವಾ ಒಳ್ಳೆಯ ಹವ್ಯಾಸ (hobby) ಗಳು ಗ್ರಹಗತಿಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ಜ್ಯೋತಿಷಿಗಳು ಹೇಳುವ ಪ್ರಕಾರ, ನಮ್ಮ ಒಳ್ಳೆಯ ಕೆಲಸಗಳಿಂದ ಗ್ರಹಗಳ ಮೇಲೆ ಹೇಗೆ ಒಳ್ಳೆಯ ಪ್ರಭಾವ ಬೀರುತ್ತದೆಯೋ ಹಾಗೆ ಕೆಟ್ಟ ಅಭ್ಯಾಸಗಳಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಯಾವ ಯಾವ ಅಭ್ಯಾಸಗಳಿಂದ ಗ್ರಹಗಳು ದುರ್ಬಲವಾಗುತ್ತೆ ಮತ್ತು ಅಶುಭ ಪರಿಣಾಮ ಬೀರುತ್ತೆ ಎನ್ನುವುದನ್ನು ತಿಳಿಯೋಣ.

ಈ ಜಾಗ ಕೊಳಕಾಗಿದ್ರೆ ಗ್ರಹ ದೋಷ ನಿಶ್ಚಿತ : ಮನೆಯನ್ನಾಗಲೀ ಹೊರಗಿನ ಸ್ಥಳವನ್ನಾಗಲೀ ಕ್ಲೀನ್ ಆಗಿಟ್ಟುಕೊಂಡರೆ ಅದರಿಂದ ಆರೋಗ್ಯವೂ ಚೆನ್ನಾಗಿರುತ್ತೆ. ಮನೆಯಲ್ಲಿ ಕುಲದೇವರು ನೆಲೆಸಿರುತ್ತಾರೆ. ದೇವಸ್ಥಾನದಲ್ಲಿ ದೇವಾನುದೇವತೆಗಳು ಇರುತ್ತಾರೆ. ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ. ಹಾಗಾಗಿ ಮನೆ, ದೇವಸ್ಥಾನ, ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಭ್ಯಾಸವಿರದಿದ್ದರೆ ನಿಮ್ಮ ಗ್ರಹಗಳು ದುರ್ಬಲವಾಗುತ್ತೆ. ಗ್ರಹಗಳು ದುರ್ಬಲವಾದಾಗ ಅವು ನಮ್ಮ ವೈಯಕ್ತಿಕ ಹಾಗೂ ವ್ಯವಹಾರದ ಮೇಲೆ ದುಷ್ಪರಿಣಾಮ ಬೀರಬಹುದು.
ಮನೆ, ಮಂದಿರಗಳಲ್ಲಿ ಕೊಳಕು ತುಂಬಿಕೊಂಡರೆ, ಅದು ಶಿಕ್ಷಣ, ಉದ್ಯೋಗ ಮತ್ತು ಕುಟುಂಬ ಜೀವನದಲ್ಲಿ ಅಡೆತಡೆಗಳನ್ನು ಸೂಚಿಸುತ್ತದೆ. ಮನೆಯನ್ನು ನಾವು ಕೊಳಕಾಗಿಟ್ಟುಕೊಂಡರೆ ಶಿವನಿಗೆ ಅಪಮಾನ ಮಾಡಿದಂತೆ. ಹಾಗಾಗಿ ಗ್ರಹಗಳ ಮೇಲೆ ಒಳ್ಳೆಯ ಪ್ರಭಾವ ಬೀರಬೇಕೆಂದರೆ ಮನೆ, ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ನಿಮ್ಮ ರಾಶಿ ಬ್ರೇಕಪ್‌ ಮಾಡಿಕೊಳ್ಳಲೇನು ಕಾರಣ?

ಗಿಡ ಮರಗಳಿಗೆ ಹಾನಿ ಮಾಡಿದ್ರೆ ದೋಷ  :  ಗಿಡ ಮರಗಳು ನಮಗೆ ಗಾಳಿ, ಹೂವು, ಹಣ್ಣು, ನೆರಳನ್ನು ಕೊಡುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗಿಡ ಮರಗಳನ್ನು ಸುಖ, ಸಮೃದ್ಧಿ, ಉನ್ನತಿ ಮತ್ತು ಏಳ್ಗೆಯ ಸಂಕೇತವೆಂದು ಹೇಳಲಾಗುತ್ತದೆ. ಗಿಡ ಮರಗಳಿಗೂ ಗ್ರಹಗಳಿಗೂ ಕೂಡ ನೇರ ಸಂಬಂಧವಿದೆ. ನಾವು ಗಿಡಗಳಿಗೆ ಹಾನಿಯುಂಟುಮಾಡಿದರೆ ಗ್ರಹಗಳ ಮೇಲೂ ಅದು ಕೆಟ್ಟ ಪ್ರಭಾವ ಬೀರುತ್ತದೆ.
ಗಿಡ ಮರಗಳ ಬಗ್ಗೆ ತೋರುವ ನಿಷ್ಕಾಳಜಿ ಗ್ರಹಗಳ ಶಕ್ತಿಯನ್ನು ಕುಂದಿಸುತ್ತದೆ. ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತವೆ. ಮನೆಯ ಪ್ರಗತಿಗೆ ಅನೇಕ ಅಡೆತಡೆಗಳು ಬರುತ್ತವೆ. ಹಾಗಾಗಿಯೇ ಗಿಡಮರಗಳ ಬಗ್ಗೆ ಸಾಧ್ಯವಾದಷ್ಟು ಕಾಳಜಿವಹಿಸಬೇಕು.

ಈ ಅಭ್ಯಾಸದಿಂದಲೂ ಕಾಡುತ್ತೆ ಗ್ರಹ ದೋಷ : ಕೆಲವರು ಏನಾದರೂ ಚಿಂತೆಯಲ್ಲಿದ್ದಾಗ ಅಥವಾ ಓದುವಾಗ ಉಗುರು ಕಡಿಯುವುದನ್ನು ನೀವು ನೋಡಿರುತ್ತೀರಿ. ಹೀಗೆ ಉಗುರು ಕಡಿಯುವುದರಿಂದ ರಾಹು ಮತ್ತು ಶನಿ ಗ್ರಹಗಳು ದುರ್ಬಲವಾಗುತ್ತದೆ. ಇದರಿಂದ ವ್ಯಕ್ತಿಯು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. 
ಎಲ್ಲೆಂದರಲ್ಲಿ ಉಗುಳುವುದರಿಂದಲೂ ಗ್ರಹಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಕೆಟ್ಟ ಅಭ್ಯಾಸದಿಂದ ಸೂರ್ಯ ದೋಷ ಉಂಟಾಗುತ್ತೆ. ಇದರಿಂದ ಧನ-ಧಾನ್ಯದ ಕೊರತೆಯಾಗುತ್ತದೆ ಮತ್ತು ಎಲ್ಲ ಕೆಲಸದಲ್ಲಿಯೂ ವಿಘ್ನಗಳು ಬರುತ್ತದೆ.

Surya Gochar 2023: 3 ರಾಶಿಗಳಿಗೆ ಸರ್ಕಾರಿ ಕೆಲಸ ಸಿಗುವ ಸಂಭಾವ್ಯತೆ

ತಡರಾತ್ರಿ ಮಲಗುವ ರೂಢಿ : ಬಿಡುವಿಲ್ಲದ ಕೆಲಸದಲ್ಲಿ ಹಗಲು ರಾತ್ರಿಯೆನ್ನದೇ ದುಡಿಯುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ರಾತ್ರಿ ಪಾಳಿಯಲ್ಲಿಯೇ ಕೆಲಸ ಮಾಡುತ್ತಾರೆ. ಹೀಗೆ ಕೆಲಸ ಮಾಡುವುದು ತಪ್ಪಲ್ಲ. ಆದರೆ ಯಾವುದೇ ಕಾರಣವಿಲ್ಲದೆ ರಾತ್ರಿ ನಿದ್ದೆಗೆಡುವುದರಿಂದ ಗ್ರಹಗಳು ದುರ್ಬಲಗೊಳ್ಳುತ್ತೆ. ಚಂದ್ರನು ರಾತ್ರಿ ತಡವಾಗಿ ಮಲಗುವ ವ್ಯಕ್ತಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತಾನೆ. ಇದರಿಂದ ಮನಸ್ಸು ಚಂಚಲವಾಗುತ್ತೆ ಮತ್ತು ಯಾವುದಾದರೂ ಒಂದು ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತೆ. ಚಂದ್ರನ ಕೆಟ್ಟ ದೃಷ್ಟಿಯೊಂದ ವ್ಯಾಪಾರದಲ್ಲಿಯೂ ನಷ್ಟವಾಗುತ್ತದೆ.
 

Follow Us:
Download App:
  • android
  • ios