ಮರಳಿ ಮೂಲಕ್ಕೆ ಎಂಬುದೇ ಸಂಸ್ಕೃತಿಯ ತಿರುಳು : ರಾಘವೇಶ್ವರ ಭಾರತೀ ಸ್ವಾಮೀಜಿ
ಮರಳಿ ಮೂಲಕ್ಕೆ ಎನ್ನುವುದು ನಮ್ಮ ಸಂಸ್ಕೃತಿಯ ತಿರುಳು. ಜೀವನ ಎನ್ನುವುದು ಸತ್‌ವೃತ್ತ ಇದ್ದಂತೆ. ಮತ್ತೆ ಮೂಲ ಬಿಂದುವನ್ನೇ ಮುಟ್ಟುತ್ತದೆ. ಭಗವಂತನ ಸನ್ನಿಧಿಯಿಂದ ಬಂದ ನಾವು ಮತ್ತೆ ಅವನನ್ನೇ ತಲುಪಬೇಕು ಎನ್ನುವ ಆಶಯದೊಂದಿಗೆ ನಮ್ಮ ಕರ್ತವ್ಯ ನಿಭಾಯಿಸೋಣ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಕಾರವಾರ (ಜ.29) : ಮರಳಿ ಮೂಲಕ್ಕೆ ಎನ್ನುವುದು ನಮ್ಮ ಸಂಸ್ಕೃತಿಯ ತಿರುಳು. ಜೀವನ ಎನ್ನುವುದು ಸತ್‌ವೃತ್ತ ಇದ್ದಂತೆ. ಮತ್ತೆ ಮೂಲ ಬಿಂದುವನ್ನೇ ಮುಟ್ಟುತ್ತದೆ. ಭಗವಂತನ ಸನ್ನಿಧಿಯಿಂದ ಬಂದ ನಾವು ಮತ್ತೆ ಅವನನ್ನೇ ತಲುಪಬೇಕು ಎನ್ನುವ ಆಶಯದೊಂದಿಗೆ ನಮ್ಮ ಕರ್ತವ್ಯ ನಿಭಾಯಿಸೋಣ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯಲ್ಲಿ ಶ್ರೀಮಠದ ಕಾರ್ಯಕರ್ತರ ದೇಣಿಗೆಯಿಂದಲೇ ವಿಶಿಷ್ಟವಾಗಿ ನಿರ್ಮಿಸಲಾದ ಸೇವಾಸೌಧದ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ: ರಾಘವೇಶ್ವರ ಸ್ವಾಮೀಜಿ
ಮುಂದಿನ ಪೀಳಿಗೆಗಳು ನೆನೆಸಿಕೊಳ್ಳುವಂಥ ಘನ ರಾಷ್ಟ್ರ ಕಾರ್ಯವನ್ನು ಮಾಡುವ ಮೂಲಕ ಭಗವಂತನಿಗೆ ಹತ್ತಿರವಾಗೋಣ ಎಂದು ಕಿವಿಮಾತು ಹೇಳಿದರು.
ಸೇವಾ ಸೌಧದ ಮೂಲಕ ನಾವು ಮರಳಿ ಮೂಲಕ್ಕೆ ಬಂದೆವು. ಸಾವಿರ ವರ್ಷ ಹಿಂದೆ ಶ್ರೀಶಂಕರರು ಮೂಲಮಠ ಸ್ಥಾಪಿಸಿದ ಪ್ರದೇಶ, ಪೋರ್ಚುಗೀಸರ ದಾಳಿಯಿಂದಾಗಿ ಹಲವು ವರ್ಷಗಳ ಕಾಲ ಅದೃಶ್ಯವಾಗಿತ್ತು. ಪೋರ್ಚುಗೀಸರು ದಾಳಿ ಮಾಡಿ ನಾಶ ಮಾಡಿದ ಮಠದ ನೂರು ಪಟ್ಟು ಶಕ್ತಿಯೊಂದಿಗೆ ಮಠ ಮತ್ತೆ ಆವೀರ್ಭವಿಸುತ್ತಿದೆ ಎಂದು ಹೇಳಿದರು.
ಶಂಕರಾಚಾರ್ಯರು ಮೂಲಮಠ ಸ್ಥಾಪಿಸಿದ ಪುಣ್ಯಭೂಮಿಯಲ್ಲಿ ಮತ್ತೆ ಅಲ್ಲಿಯೇ ಮಠ, ಅಗ್ರಹಾರ, ವಿಶ್ವವಿದ್ಯಾಪೀಠವೊಂದು ಮರಳಿ ಮೂಡಿ ಬರುತ್ತಿರುವುದು ತ್ಯಾಗ- ಬಲಿದಾನ ಮಾಡಿದ ಜೀವಗಳಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ. ಮಠದ ಹಿತ್ಲು ಪ್ರದೇಶದಲ್ಲಿ ಮೂಲಮಠದ ಅವಶೇಷಗಳು ಮಾತ್ರ ಇಂದು ಉಳಿದುಕೊಂಡಿವೆ. ಅಂಥ ನಾಶಕಾಂಡದಿಂದ ಮತ್ತೆ ಸೃಷ್ಟಿಕಾಂಡ ಚಿಗುರೊಡೆಯುತ್ತಿದೆ ಎಂದು ವಿಶ್ಲೇಷಿಸಿದರು.
ಶಂಕರಾಚಾರ್ಯರು 10 ವಿವಿಗೆ ಸಮಾನ: ಬಿ.ಎಲ್. ಸಂತೋಷ:
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯಾದರ್ಶಿ ಬಿ.ಎಲ…. ಸಂತೋಷ್ ಮಾತನಾಡಿ, ಕೋಟಿ ವರ್ಷಕ್ಕೊಮ್ಮೆ ಮಹಾತ್ಮರು ಜನ್ಮ ತಳೆಯುತ್ತಾರೆ ಎಂಬ ಮಾತಿದೆ. ಶಂಕರಾಚಾರ್ಯರು ಅಂಥ ಮಹಾತ್ಮರು. ಅತ್ಯಂತ ಕಿರಿ ವಯಸ್ಸಿನಲ್ಲೇ ವಿಶಿಷ್ಟಕೊಡುಗೆ ನೀಡಿದ ಸಾಧಕ ಪರಂಪರೆಯಲ್ಲಿ ಅಗ್ರಗಣ್ಯರು. ಹತ್ತು ವಿವಿಗಳು, ನೂರಾರು ಸಂಸ್ಥೆಗಳು ಮಾಡುವ ಕಾರ್ಯವನ್ನು ಶಂಕರರೊಬ್ಬರೇ ಮಾಡಿದರು ಎಂದರು.
ದೇಶದ ಸಂಸ್ಕೃತಿಗೆ, ವ್ಯಕ್ತಿಯ ವೈಯಕ್ತಿಕ ಉನ್ನತಿಗೆ ಅವರು ನೀಡಿದ ಕೊಡುಗೆ ಅಪಾರ. ರಾಜಗುರುವಾಗಿ ಆಡಳಿತಕ್ಕೆ ವ್ಯಾವಹಾರಿಕ ಚೌಕಟ್ಟನ್ನು ಹಾಕಿಕೊಟ್ಟವರು. ಅಧ್ಯಾತ್ಮದ ವಿವಿಧ ಮಜಲುಗಳನ್ನು ಸಮಾಜದ ಮುಂದೆ ತೆರೆದಿಟ್ಟರು. ಯತಿ ಪರಂಪರೆಯನ್ನು ಸ್ವತಃ ಆಚರಿಸಿ ತೋರಿಸಿಕೊಟ್ಟರು. ಹಿಂದಿರುಗಿ ಬಾರದ ಪ್ರಯಾಣದಲ್ಲಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ದೇಶಕ್ಕೆ ಬೆಳಕು ತೋರಿಸಿದರು. ಅಂಥ ಶಂಕರರ ಅವಿಚ್ಛಿನ್ನ ಪರಂಪರೆಯ ಪೀಠಾಧಿಪತಿಗಳಾಗಿ ರಾಘವೇಶ್ವರ ಶ್ರೀಗಳು ದೇಶವೇ ಬೆರಗುಗೊಳ್ಳುವ ಸಾಧನೆಯ ಪಥದಲ್ಲಿ ಮುನ್ನಡೆದಿದ್ದಾರೆ ಎಂದು ಹೇಳಿದರು.
ದೇಶಕ್ಕೇ ಚೈತನ್ಯ ಮೂಡಿಸಲಿದೆ: ಕಾಗೇರಿ
ಇಡೀ ದೇಶಕ್ಕೇ ಚೈತನ್ಯ ಮೂಡಿಸುವ ಕೇಂದ್ರವಾಗಿ ವಿವಿವಿ ಮುಂದಿನ ದಿನಗಳಲ್ಲಿ ಬೆಳಗಲಿದೆ. ಇಲ್ಲಿನ ಮಕ್ಕಳು ಕುಟುಂಬ, ಸಮಾಜ, ಭಾರತ, ವಿಶ್ವದಲ್ಲಿ ತಾವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಕರ್ತವ್ಯಪರತೆಯಿಂದ ಕಾರ್ಯ ನಿರ್ವಹಿಸುವ ಪೀಳಿಗೆಯಾಗಿ ರೂಪುಗೊಳ್ಳಲಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಿರುವನಂತಪುರ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಪಟ್ಟೇರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ಗುರುಮೂರ್ತಿ, ಗೋವಾ ಶಾಸಕ ಕೃಷ್ಣಾ ಡಿ.ಸಾಲ್ಕರ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.
ಮುಪ್ಪು ವಜ್ರ್ಯವಲ್ಲ, ಅಂತರಂಗದ ಸಾಧನೆಯ ದರ್ಶನ: ರಾಘವೇಶ್ವರ ಭಾರತೀ ಶ್ರೀ
ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಸಭಾಪೂಜೆ ನೆರವೇರಿಸಿದರು. ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ವಿವಿವಿ ಕೇಂದ್ರ ಸಮಿತಿ ಅಧ್ಯಕ್ಷ ಡಿ.ಡಿ. ಶರ್ಮಾ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ವೇಣುವಿN್ನೕಶ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮೋಹನ್ ಭಾಸ್ಕರ ಹೆಗಡೆ, ಲೋಕಸಂಪರ್ಕಾಧಿಕಾರಿ ಹರಿಕೃಷ್ಣ ಪೆರಿಯಾಪು, ವಿಶ್ರಾಂತ ಸಿಇಒ ಕೆ.ಜಿ. ಭಟ್, ಪ್ರಮೋದ್ ಹೆಗಡೆ ಇದ್ದರು.