Sabarimala: ಕಪ್ಪು ಅಶುಭ ಅಂದ ಮೇಲೆ ಅಯ್ಯಪ್ಪ ಭಕ್ತರು ಕಪ್ಪು ಬಟ್ಟೆ ಧರಿಸುವುದೇಕೆ?
ಕಪ್ಪು ಬಟ್ಟೆಯನ್ನು ಸಾಮಾನ್ಯವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಳಸಲಾಗುವುದಿಲ್ಲ. ಆದರೆ ಅಯ್ಯಪ್ಪನ ಭಕ್ತರು ಶಬರಿಮಲೆಗೆ ಭೇಟಿ ನೀಡಿದಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಇದೇಕೆ ಎಂದು ನಿಮಗೆ ಗೊತ್ತೇ?
ಕಪ್ಪು ಬಟ್ಟೆಯನ್ನು ಸಾಮಾನ್ಯವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ದೇವಸ್ಥಾನಕ್ಕೆ ಭೇಟಿ ನೀಡುವಾಗ ಯಾರೂ ಬಳಸಲಾಗುವುದಿಲ್ಲ. ಆದರೆ ಅಯ್ಯಪ್ಪನ ಭಕ್ತರು, ದೀಕ್ಷೆ ತೆಗೆದುಕೊಂಡವರು ಶಬರಿಮಲೆಗೆ ಭೇಟಿ ನೀಡಿದಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಹೌದು, ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಹೆಚ್ಚಿನ ಯಾತ್ರಾರ್ಥಿಗಳು ಕಪ್ಪು ಉಡುಪು ಧರಿಸುತ್ತಾರೆ - ಕಪ್ಪು ಧೋತಿ, ಪ್ಯಾಂಟ್, ಶರ್ಟ್ ಅಥವಾ ಟಿ-ಶರ್ಟ್. ಈ ಅಭ್ಯಾಸಕ್ಕೆ ಏನಾದರೂ ಕಾರಣವಿದೆಯೇ? ಕಪ್ಪು ಶನಿಯ ಬಣ್ಣವಾದ್ದರಿಂದ ಇದು ಶನಿಗೆ ಸಂಬಂಧಿಸಿದೆಯೇ?
ಅಯ್ಯಪ್ಪ ದೀಕ್ಷಾ ಕಾರ್ತಿಕ ಮಾಸದ ಆರಂಭದಲ್ಲಿ ಪ್ರಾರಂಭವಾಗುತ್ತದೆ. ಅಯ್ಯಪ್ಪನ ದೀಕ್ಷೆಯನ್ನು ಅತ್ಯಂತ ಕಠಿಣ ನಿಯಮಗಳೊಂದಿಗೆ ನಡೆಸಲಾಗುತ್ತದೆ. ಅಯ್ಯಪ್ಪ ದೀಕ್ಷೆಯು ಇಷ್ಟಾರ್ಥಗಳನ್ನು ಪೂರೈಸಲು ಮತ್ತು ಕಷ್ಟಗಳನ್ನು ತೊಡೆದುಹಾಕಲು ಸಂಕಲ್ಪದಿಂದ ಮಾಡುವ ದೀಕ್ಷೆಯಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವವರು ದೀಕ್ಷೆ ತೆಗೆದುಕೊಳ್ಳುತ್ತಾರೆ. ಸುಮಾರು 41 ದಿನಗಳ ಕಾಲ ದೀಕ್ಷೆಯ ಸಂದರ್ಭದಲ್ಲಿ ಈ ಭಕ್ತರು ಕಪ್ಪು ಬಟ್ಟೆಗಳನ್ನು ಧರಿಸಿ ಕಠಿಣ ವ್ರತ ಆಚರಿಸುತ್ತಾರೆ. ಕಟ್ಟುನಿಟ್ಟಾದ ತಪಸ್ಸು ಮತ್ತು ಸ್ವಯಂ ನಿಯಂತ್ರಣವನ್ನು ಆಚರಿಸುವುದು ಸಾಮಾನ್ಯ ಪದ್ಧತಿಯಾಗಿದೆ. ಪ್ರತಿ ದಿನವೂ ಅಯ್ಯಪ್ಪನನ್ನು ಪೂಜಿಸುತ್ತಾ ಮಕರ ಸಂಕ್ರಾಂತಿಯ ಜ್ಯೋತಿಯ ದರ್ಶನ ಪಡೆದು, ಅಯ್ಯಪ್ಪ ಸ್ವಾಮಿಯ ದರ್ಶನವಾದ ಮೇಲೆ ಕಪ್ಪು ಬಟ್ಟೆ ತೆಗೆದು ಹಾಕುತ್ತಾರೆ. ಅವರು ಕಪ್ಪು ಬಟ್ಟೆ ಧರಿಸುವ ಹಿಂದಿನ ಕಾರಣ ನೋಡೋಣ..
ಅಯ್ಯಪ್ಪನು ಪುರಾಣದ ದೇವನಲ್ಲದ ಕಾರಣ, ಅವನ ಸುತ್ತಲಿನ ನೀತಿಕಥೆಗಳು ಮತ್ತು ದಂತಕಥೆಗಳು ಪುರಾಣ ಮತ್ತು ಉಪನಿಷತ್ತುಗಳಲ್ಲಿ ಕಂಡುಬರುವುದಿಲ್ಲ, ಬದಲಿಗೆ ಕ್ಷೇತ್ರ-ಪುರಾಣಗಳು ಅಥವಾ ಸ್ಥಳೀಯ ದೇವಾಲಯಗಳ ಇತಿಹಾಸಗಳಲ್ಲಿ ಮಾತ್ರ ಕಂಡುಬರುತ್ತವೆ.
Mangal Margi: ನವವಿವಾಹಿತರ ಮೇಲೆ ಕುಜ ದುಷ್ಪರಿಣಾಮ ತಪ್ಪಿಸಲು ಇಲ್ಲಿವೆ ಪರಿಹಾರ
ಅಯ್ಯಪ್ಪನು ಶನಿಯೊಂದಿಗೆ ಸಂಭಾಷಣೆ ನಡೆಸುತ್ತಾನೆ ಎಂದು ಹೇಳಲಾಗುತ್ತದೆ. ಅಯ್ಯಪ್ಪನು ತನ್ನ ಭಕ್ತರನ್ನು ದುಃಖದಿಂದ ಕೈ ಬಿಡಲು ಶನಿಯನ್ನು ಕೇಳಿದನು. ಅದಕ್ಕಾಗಿ ಅಯ್ಯಪ್ಪನು ಶನಿಗೆ ಕೆಲವು ನಿಯಮಗಳನ್ನು ಹಾಕಿದನು..
ಶನಿ ದೋಷ ನಿವಾರಣೆ
ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಅಯ್ಯಪ್ಪನು ತನ್ನ ಭಕ್ತರಿಗೆ ತೊಂದರೆ ಕೊಡಬಾರದೆಂದು ಶನಿಗೆ ಆಜ್ಞಾಪಿಸಿದ್ದಾನೆ.
ಶನಿಯು ಏಳೂವರೆ ವರ್ಷಗಳ ಕಾಲ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಅಯ್ಯಪ್ಪನು 41 ದಿನಗಳವರೆಗೆ ದೀಕ್ಷೆಯನ್ನು ತೆಗೆದುಕೊಂಡ ತನ್ನ ಭಕ್ತರಿಗೆ ಶನಿ ಬಾಧಿಸುವಂತಿಲ್ಲ. ದಿನಕ್ಕೆ ಒಮ್ಮೆ ಮಾತ್ರ ತಿನ್ನುವುದು, ತಣ್ಣೀರಿನಲ್ಲಿ ಸ್ನಾನ ಮಾಡುವುದು ಮತ್ತು ನೆಲದ ಮೇಲೆ ಮಲಗುವುದು ಮತ್ತು ಬ್ರಹ್ಮಚರ್ಯವನ್ನು ಅಭ್ಯಾಸ ಮಾಡುವುದು.. ಈ ರೀತಿಯಾಗಿ ವ್ರತ ಆಚರಿಸಿದವರಿಗೆ ಶನಿ ಬಾಧಿಸಬಾರದು. ಪ್ರತಿಯಾಗಿ, ತನ್ನ ಭಕ್ತರು ಶನಿಗೆ ಸಂಬಂಧಿಸಿದ ಕಪ್ಪು / ನೀಲಿ ಬಟ್ಟೆಯನ್ನು ಧರಿಸುತ್ತಾರೆ ಎಂದು ಅಯ್ಯಪ್ಪನು ಶನಿಗೆ ಭರವಸೆ ನೀಡಿದನು. ಅಯ್ಯಪ್ಪ ಭಕ್ತರು ಕಪ್ಪು ವಸ್ತ್ರವನ್ನು ಧರಿಸಲು ಇದೇ ಕಾರಣ.
Mangal Margi 2023: ಇನ್ನಾರು ದಿನಗಳಲ್ಲಿ ಕುಜ ಮಾರ್ಗಿ, ಈ ರಾಶಿಗಳ ಆದಾಯ ಹೆಚ್ಚಳ
ಇನ್ನೊಂದು ಕಾರಣ
ಕಪ್ಪು ಬಟ್ಟೆಗಳು ಸಾಂಕೇತಿಕವಾಗಿ ಎಲ್ಲಾ ಭೌತಿಕ ವಸ್ತುಗಳಿಂದ ಹಿಂತೆಗೆದುಕೊಂಡ ಭಕ್ತನ ಮನಸ್ಸನ್ನು ಸೂಚಿಸುತ್ತವೆ. ಕಪ್ಪು ಬಟ್ಟೆಯು ಅಯ್ಯಪ್ಪ ಭಕ್ತನು ಗ್ರಹಿಕೆಗಳು, ಭಾವನೆಗಳು ಮತ್ತು ಆಲೋಚನೆಗಳ ಪ್ರಪಂಚದಿಂದ ದೂರವಿದ್ದಾನೆ ಮತ್ತು ಅವನು ಅಯ್ಯಪ್ಪನ ಚಿಂತನೆಯಲ್ಲಿ ಮುಳುಗಿದ್ದಾನೆ ಎಂದು ಸೂಚಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.