Ayodhya Ram Temple: ರಾಮ ಮಂದಿರದ ಗರ್ಭಗುಡಿಯಲ್ಲಿ ಸೀತಾ ಮಾತೆ ಯಾಕಿಲ್ಲ?

ರಾಮನಿಲ್ಲದೆ ಸೀತೆ ಇಲ್ಲ ಎನ್ನುವ ಮಾತಿದೆ. ರಾಮ ಎಲ್ಲಿದ್ರೂ ನೀವು ಸೀತೆಯನ್ನು ಅಲ್ಲಿ ನೋಡ್ಬಹುದು. ಆದ್ರೆ ಭವ್ಯವಾಗಿ ನಿರ್ಮಾಣವಾಗ್ತಿರುವ ರಾಮ ಮಂದಿರದ ಗರ್ಭಗುಡಿಯಲ್ಲಿ ಸೀತೆ ಮಾತೆಯ ಮೂರ್ತಿ ಇಲ್ಲ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.  

Ayodhya Ram Mandir Ram Lalla Idol Not Mata Sita In Garbhagriha Know The Reason roo

ಭವ್ಯ ರಾಮ ಮಂದಿರ ಸದ್ಯ ಸುದ್ದಿಯಲ್ಲಿದೆ.  700 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಅಯೋಧ್ಯೆಯ ಈ ದೇವಾಲಯವು 500 ವರ್ಷಗಳ ಇತಿಹಾಸವನ್ನು ಹೊಂದಿದೆ.  ಧಾರ್ಮಿಕ ನಂಬಿಕೆ, ಪೌರಾಣಿಕ ನಂಬಿಕೆ ಮತ್ತು   ರಾಮ ಜನ್ಮಸ್ಥಳದ ವಿಜಯದೊಂದಿಗೆ ಇದು ಸಂಬಂಧವನ್ನು ಹೊಂದಿದೆ. ದೇವಾಲಯದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಜನವರಿ 22, 2024ರಂದು ಇದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 22 ರ ಸುವರ್ಣ ದಿನವು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಸನಾತನ ಪ್ರಿಯರಿಗೆ ಭವ್ಯವಾದ ರಾಮಮಂದಿರ (ram mandir) ಉದ್ಘಾಟನೆಯೇ ಅದ್ಧೂರಿ ಹಬ್ಬ ಅಂದ್ರೆ ತಪ್ಪಾಗಲಾರದು. 

ಅಯೋಧ್ಯೆ(Ayodhya )ಯ ಮುಖ್ಯ ದೇವಾಲಯದ ಕಾರ್ಯ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದೆಡೆ 7 ದೇವಾಲಯಗಳನ್ನು ನಿರ್ಮಿಸುವ ಕೆಲಸವೂ ನಡೆಯುತ್ತಿದೆ. ಗುರು ಬ್ರಹ್ಮಋಷಿ ವಶಿಷ್ಠ, ಬ್ರಹ್ಮಋಷಿ ವಿಶ್ವಾಮಿತ್ರ, ಮಹರ್ಷಿ ವಾಲ್ಮೀಕಿ, ಅಗಸ್ತ್ಯ ಮುನಿ, ರಾಮಭಕ್ತ ಕೇವತ್, ನಿಷದ್ರಾಜ್ ಮತ್ತು ಮಾತಾ ಶಬರಿಯ ದೇವಾಲಯ ಇದರಲ್ಲಿ ಸೇರಿವೆ. 2024ರ ಅಂತ್ಯದ ವೇಳೆಗೆ ಈ ದೇವಾಲಯಗಳ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ರಾಮನ ಜೊತೆ ಭಕ್ತರು ಈ ಎಲ್ಲ ಮುನಿಗಳ ದರ್ಶನ ಪಡೆಯಬಹುದು. 

ಜನವರಿ 1ರಂದು ಈ ಕೆಲಸ ಮಾಡಿದ್ರೆ, ವರ್ಷ ಪೂರ್ತಿ ಕೊರಗಬೇಕಾಗುತ್ತೆ!

ರಾಮ ಮಂದಿರದಲ್ಲಿ ರಾಮನ ವಿಗ್ರಹವಿರಲಿದೆ. ಆದ್ರೆ ಅಲ್ಲಿ ಸೀತಾ ಮಾತೆ ಇರೋದಿಲ್ಲ. ಸಾಮಾನ್ಯವಾಗಿ ರಾಮನ ಜೊತೆ ನೀವು ಸೀತೆ ನಿಂತಿರೋದನ್ನು ನೋಡಿರ್ತೀರಿ. ಸೀತೆ ಇಲ್ಲದ ರಾಮ, ರಾಮನಿಲ್ಲದ ಸೀತೆ ಅಪೂರ್ಣ. ರಾಮ – ಸೀತೆಯನ್ನು ಒಟ್ಟಿಗೆ ದರ್ಶನ ಮಾಡಿದ್ರೆ ಒಳ್ಳೆಯದು ಎನ್ನುವ ಮಾತುಗಳನ್ನು ಕೂಡ ನೀವು ಕೇಳಿರುತ್ತೀರಿ. ಆದ್ರೆ ಅಯೋದ್ಯೆಯಲ್ಲಿ ಸೀತೆ ಇಲ್ಲದ ರಾಮನ ವಿಗ್ರಹವನ್ನು ನಾವೆಲ್ಲ ನೋಡಲಿದ್ದೇವೆ. ಅಲ್ಲಿ ಸೀತೆ (sita) ವಿಗ್ರಹ ಏಕಿಲ್ಲ ಎಂಬುದಕ್ಕೆ ಕಾರಣ ಇಲ್ಲಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಜೊತೆ ಸೀತೆ ಇಲ್ಲದಿರಲು ಕಾರಣ ಅಲ್ಲಿ ಪ್ರತಿಷ್ಠಾಪನೆಯಾಗ್ತಿರುವ ಮೂರ್ತಿ. ಅಲ್ಲಿ ಸೀತೆ ಮದುವೆಯಾದ ನಂತ್ರ ಇರುವ ರಾಮನನ್ನು ನೀವು ಕಾಣಲು ಸಾಧ್ಯವಿಲ್ಲ. ಐದು ವರ್ಷದ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗ್ತಿದೆ.  ಬಾಲ ರಾಮನನ್ನು ನೀವು ಅಯೋಧ್ಯೆಯಲ್ಲಿ ನೋಡಬಹುದು. ರಾಮನ ಮದುವೆ ನಡೆದಿದ್ದು 27ನೇ ವಯಸ್ಸಿನಲ್ಲಿ. ತುಳಸಿದಾಸ್ ಜಿ ಅವರು ಬರೆದ ರಾಮಚರಿತಮಾನಸದಲ್ಲಿ ದ್ವಿಪದಿಯಲ್ಲಿ ಇದನ್ನು ವಿವರಿಸಲಾಗಿದೆ. 

ಮುಂದಿನ ವಾರ ಬುಧ ಗುರು ನೇರ, ಈ 5 ರಾಶಿಗೆ ಶ್ರೀಮಂತಿಕೆ ಭಾಗ್ಯ.. ಅದೃಷ್ಟ ವೃದ್ಧಿ

ದೇವಾಲಯದ ಮುಖ್ಯ ಮಂದಿರ 360 ಅಡಿ ಎತ್ತರ ಹಾಗೂ 235 ಅಡಿ ಅಗಲವನ್ನು ಹೊಂದಿದೆ. ಮಂದಿರದ ಶಿಖರ  161 ಅಡಿ ಎತ್ತರವನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ರಾಮನ ದರ್ಶನ ಪಡೆಯಲು ಭಕ್ತರು 32 ಮೆಟ್ಟಿಲುಗಳನ್ನು ಹತ್ತಬೇಕು. ಮೆಟ್ಟಿಲುಗಳನ್ನು ಹತ್ತಿ ರಾಮನ ದರ್ಶನ ಪಡೆಯುವ ಮೊದಲು ನಿಮಗೆ ಕೆಲ ಸ್ಥಳಗಳ ವೀಕ್ಷಣೆಗೆ ಅವಕಾಶ ಸಿಗಲಿದೆ. ಕೆಲ ಮೆಟ್ಟಿಲುಗಳನ್ನು ಹತ್ತಿದ ನಂತ್ರ ರಂಗಮಂಟಪ ಸಿಗಲಿದೆ. ಅಲ್ಲಿ ಭಗವಂತ ರಾಮನ ಜೀವನಕ್ಕೆ ಸಂಬಂಧಿಸಿದ ಕೆಲ ಫೋಟೋಗಳು ಹಾಗೂ ಚಿತ್ರಗಳನ್ನು ನೀವು ನೋಡ್ಬಹುದು. ಇದಾದ ಮೇಲೆ ನಿಮಗೆ ನೃತ್ಯ ಮಂಟಪ ಸಿಗಲಿದೆ. ಇದರಲ್ಲಿ ದೇವಾನುದೇವತೆಗಳ ಮೂರ್ತಿಗಳನ್ನು ನೀವು ಕಾಣಬಹುದು. ಇದರಿಂದ ಮುಂದೆ ನಿಮಗೆ ಭಗವಂತನ ಗರ್ಭಗುಡಿ ಸಿಗಲಿದೆ. 

ದೇಶದ ವಿವಿಧ ಭಾಗದ 4000 ಕಾರ್ಮಿಕರು ಮಂದಿರ ನಿರ್ಮಾಣದ ಪುಣ್ಯ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ರಾಮ ಮಂದಿರದಲ್ಲಿ ಒಂದೇ ಒಂದು ಆಹಾರದ ಅಂಗಡಿಯಾಗ್ಲಿ, ಟೀ ಸ್ಟಾಲ್ ಆಗ್ಲಿ ನಿಮಗೆ ಸಿಗೋದಿಲ್ಲ. 

Latest Videos
Follow Us:
Download App:
  • android
  • ios