Solar Eclipse: ಏ.30ರ ಸೂರ್ಯಗ್ರಹಣ ಎಷ್ಟು ಗಂಟೆಗೆ? ಎಫೆಕ್ಟ್ ಉಂಟಾ?
2022ರ ಸೂರ್ಯಗ್ರಹಣವು ಏ. 30ರಂದು ಗೋಚರಿಸಲಿದ್ದು, ಭಾರತದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಇದರ ಪ್ರಭಾವವು ಭಾರತದಲ್ಲಿ ಉಂಟಾಗುತ್ತದೆಯೇ..? ಯಾವ ಸಮಯದಲ್ಲಿ ಸೂರ್ಯಗ್ರಹಣ ಉಂಟಾಗಲಿದೆ? ಎಲ್ಲೆಲ್ಲಿ ಉಂಟಾಗಲಿದೆ..? ಇದಕ್ಕೆ ಅಂದು ಯಾವುದಾದರೂ ವ್ರತಾನುಷ್ಠಾನಗಳನ್ನು ಮಾಡಬೇಕಾಗುತ್ತೆದೆಯೇ ಎಂಬ ಬಗ್ಗೆ ನೋಡೋಣ ಬನ್ನಿ...
2022 ರ ಸಾಲಿನ ಮೊದಲ ಸೂರ್ಯಗ್ರಹಣವು (Solar Eclipse) ಏಪ್ರಿಲ್ (April) 30ರ ಶನಿವಾರದಂದು ಸಂಭವಿಸಲಿದೆ. ಆದರೆ, ಈ ದಿನ ಶನಿಶ್ರೀ ಅಮಾವಾಸ್ಯೆ ಕೂಡಾ ಇರಲಿದೆ. ಅಲ್ಲದೆ, ಗ್ರಹಣಕ್ಕೂ ಮೊದಲೇ ಶನಿ (Saturn) ಮತ್ತು ರಾಹುವಿನ (Rahu) ಪ್ರಕ್ಷುಬ್ಧತೆ ಇರಲಿದೆ ಎಂದು ಹೇಳಲಾದರೂ ಭಾರತದಲ್ಲಿ (India) ಇದರ ಗೋಚರತೆ ಇಲ್ಲ ಎಂಬುದು ನೆಮ್ಮದಿಯ ವಿಚಾರವಾಗಿದೆ. ಹೀಗಾಗಿ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ದಿನದಂದು ಗ್ರಹಣದ ಅನುಭವವು ಅತ್ಯಂತ ವಿರಳ ಎಂದು ಹೇಳಲಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಗ್ರಹಣ ಸೇರಿದಂತೆ ಇನ್ನಿತರ ಸಂದರ್ಭಗಳ ಬಗ್ಗೆ ಗ್ರಹಗತಿಗಳ ಲೆಕ್ಕಾಚಾರದ ಮೂಲಕವೇ ತಿಳಿದುಕೊಳ್ಳಲಾಗುತ್ತದೆ. ಇದರ ಬಗ್ಗೆ ಪಂಚಾಂಗದಲ್ಲಿ (Panchanga) ಉಲ್ಲೇಖವಾಗಿರುತ್ತದೆ. ಈ ಬಾರಿಯ ಗ್ರಹಣವು ಭಾರತಕ್ಕೆ ಅನ್ವಯಿಸುವುದಿಲ್ಲ. ಇವೆಲ್ಲ ಲೆಕ್ಕಾಚಾರಗಳೂ ಸಹ ಗ್ರಹಗತಿಗಳ ಆಧಾರದ ಮೇಲೆ ನಡೆಯುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣಕ್ಕೆ ರಾಹು ಕಾರಣವಾದರೆ, ಚಂದ್ರ ಗ್ರಹಣಕ್ಕೆ (Lunar Eclipse) ಕೇತು ಕಾರಣವಾಗಲಿದೆ. ಈ ಬಾರಿ ಒಟ್ಟಾರೆಯಾಗಿ 2 ಬಾರಿ ಸೂರ್ಯ ಗ್ರಹಣ ಗೋಚಾರವಾಗಲಿದೆ. ಆದರೆ, ಎರಡೂ ಬಾರಿ ಇದರ ಪ್ರಭಾವ ಭಾರತಕ್ಕೆ ಏನು ಆಗಲಿದೆ ಎಂಬುದು ಕುತೂಹಲಕರ ಅಂಶವಾಗಿದೆ.
ಜ್ಯೋತಿಷ್ಯ ಶಾಸ್ತ್ರದ (Astrology) ಅನ್ವಯ ಗ್ರಹಣಗಳು ಒಳ್ಳೆಯದಲ್ಲ. ಇದು ಅಶುಭ ಕಾರಕವಾಗಿರುತ್ತವೆ. ಆದರೆ, ಕೆಲವೊಮ್ಮೆ ಕೆಲವು ರಾಶಿಯವರಿಗೆ ಶುಭ ಫಲವನ್ನು ಕೊಡುತ್ತದೆ. ಇನ್ನು ಕೆಲವು ರಾಶಿಯವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗಾಗಿ ದೇಶದಲ್ಲಿ ಗ್ರಹಣವು ಬಾಧಿಸುತ್ತಿದೆ ಎಂದಾದರೆ ಅಂದು ಹಲವು ರೀತಿಯ ಧಾರ್ಮಿಕ ಆಚರಣೆಯಲ್ಲಿ ನಿರತರಾಗಿರಬೇಕಾಗುತ್ತದೆ. ಆದರೆ, ಪ್ರಸಕ್ತ ಬಾರಿ ಭಾರತಕ್ಕೆ ಯಾವುದೇ ರೀತಿಯಲ್ಲಿ ಸೂರ್ಯಗ್ರಹಣವು ಗೋಚಾರ ಆಗದ ಕಾರಣ ಯಾವುದೇ ರೀತಿಯ ಅನುಷ್ಠಾನಗಳನ್ನು ಮಾಡುವ ಪ್ರಮೇಯ ಬರುವುದಿಲ್ಲ.
ಸೂರ್ಯ ಗ್ರಹಣ ಅಂದರೆ
ಖಗೋಳಶಾಸ್ತ್ರದ (astronomy) ಅನುಸಾರ ಚಂದ್ರ ಭೂಮಿ ಮಧ್ಯ ಸೂರ್ಯನಿಗೆ ಅಡ್ಡ ಬಂದರೆ ಸೂರ್ಯಗ್ರಹಣ ಎನ್ನಲಾಗುತ್ತದೆ.
ಇದನ್ನು ಓದಿ: ಈ 3 ವಸ್ತುಗಳ ದಾನ ಮಾಡಿ ತೊಂದರೆಯಿಂದ ಪಾರಾಗಿ
ಸೂರ್ಯ ಗ್ರಹಣದ ಸಮಯ ಮತ್ತು ಸ್ಥಳ?
ಸೂರ್ಯಗ್ರಹಣವು ಏಪ್ರಿಲ್ 30 ರ ಮಧ್ಯರಾತ್ರಿ 12:15 ಕ್ಕೆ ಪ್ರಾರಂಭವಾಗಿ ಮುಂಜಾನೆ 04:07ಕ್ಕೆ ಮುಕ್ತಾಯವಾಗುತ್ತದೆ. ಗ್ರಹಣದ ಒಟ್ಟು ಅವಧಿ 3 ಗಂಟೆ 52 ನಿಮಿಷಗಳಾಗಿವೆ. ಆದರೆ, ಭಾರತಕ್ಕೆ ಈ ಗ್ರಹಣವನ್ನು ಕಾಣುವುದಿಲ್ಲ. ಈ ಸೂರ್ಯ ಗ್ರಹಣವು ದಕ್ಷಿಣ ಆಫ್ರಿಕಾ (South Africa), ಅಮೆರಿಕದ ಕೆಲವು ಪ್ರದೇಶಗಳು, ಅಟ್ಲಾಂಟಿಕ್ (Atlantic) ಹಾಗೂ ಅಂಟಾರ್ಟಿಕ್ ಸಾಗರ (Antarctic Ocean) ಮತ್ತು ಪೆಸಿಫಿಕ್ ಸಾಗರದಲ್ಲಿ (Pacific Ocean) ಕಂಡುಬರಲಿದೆ.
ಎರಡನೇ ಸೂರ್ಯಗ್ರಹಣ
ಪ್ರಸಕ್ತ ವರ್ಷದ 2ನೇ ಸೂರ್ಯಗ್ರಹಣವು ಇದೇ ಅಕ್ಟೋಬರ್ 25ರಂದು ಕಾಣಿಸಿಕೊಳ್ಳಲಿದೆ. ಈ ಗ್ರಹಣವು ವೃಶ್ಚಿಕ ರಾಶಿಯಲ್ಲಿ ಉಂಟಾಗಲಿದ್ದು, ಭಾರತಕ್ಕೆ ಇದು ಬಾಧಿಸದು. ಅಂದು ಬೆಳಗ್ಗೆ 4:29ಕ್ಕೆ ಗ್ರಹಣ ಆರಂಭವಾಗಿ ಸಂಜೆ 5:42ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಈ ಸೂರ್ಯಗ್ರಹಣ ಭಾರತದಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ನಮಗೆ ಸೂತಕದ ಛಾಯೆ ಇರುವುದಿಲ್ಲ. ಭಾಗಶಃ ಗ್ರಹಣ ಇದಾಗಿದ್ದು, ಯೂರೋಪ್, ಈಶಾನ್ಯ ಆಫ್ರಿಕಾ, ಅಟ್ಲಾಂಟಿಕ್ ಸಾಗರ (Atlantic Ocean) ಹಾಗೂ ರಷ್ಯಾದ ಕೆಲ ರಾಷ್ಟ್ರಗಳಲ್ಲಿ ಕಂಡು ಬರಲಿದೆ.
ಇದನ್ನು ಓದಿ: ಸಿಹಿ ಮಾತಿಂದಲೇ ನಿಮ್ಮ Secrets ಬಾಯಿ ಬಿಡಿಸೋ ಚಾಣಾಕ್ಯರು ಈ ರಾಶಿಯವರು!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.