Asianet Suvarna News Asianet Suvarna News

Astrology Tips : ಮೊಲ ಸಾಕೋರು ಈ ತಪ್ಪು ಮಾಡಿದ್ರೆ ಅಶುಭ ಫಲ ನಿಶ್ಚಿತ

ಪ್ರಾಣಿಗಳ ಮೇಲಿನ ಪ್ರೀತಿಗೆ ನಾವು ಅವುಗಳನ್ನು ಮನೆಗೆ ತಂದು ಸಾಕ್ತೇವೆ. ಆಹಾರ ನೀಡಿ, ಆರೈಕೆ ಮಾಡಿದ್ರೆ ಸಾಕಾಗೋದಿಲ್ಲ. ಕೆಲವೊಂದು ಎಚ್ಚರಿಕೆ ಕ್ರಮತೆಗೆದುಕೊಳ್ಳಬೇಕು. ಇಲ್ಲವೆಂದ್ರೆ ಪ್ರಾಣಿ ಸಾಕೋದ್ರಿಂದ ಸಿಗುವ ಶುಭಫಲ ನಮಗೆ ದಕ್ಕೋದಿಲ್ಲ. 
 

Astrology Tips Feeding Rabbit At Home
Author
First Published Mar 27, 2023, 1:45 PM IST

ಸಾಕು ಪ್ರಾಣಿಗಳು ನಮ್ಮ ಟೆನ್ಷನ್ ಕಡಿಮೆ ಮಾಡುತ್ವೆ. ಒತ್ತಡದಲ್ಲಿರುವ ಮನುಷ್ಯ ಸಾಕು ಪ್ರಾಣಿಗಳ ಜೊತೆ ಸ್ವಲ್ಪ ಸಮಯ ಕಳೆದ್ರೂ ಸಾಕು. ಆತನ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಅನೇಕರು ಸಾಕು ಪ್ರಾಣಿಗಳನ್ನು  ಮನೆಯ ಮಕ್ಕಳಂತೆ ಸಾಕುತ್ತಾರೆ. ಪ್ರತಿ ದಿನ ಅದನ್ನು ಆರೈಕೆ ಮಾಡುವ ಜನರು, ಅದಕ್ಕೆ ಆಹಾರ ನೀಡಿ,ಅದನ್ನೂ ತಾವು ಹೋದಲ್ಲೆಲ್ಲ ಕರೆದುಕೊಂಡು ಹೋಗ್ತಾರೆ. 

ಸಾಕು ಪ್ರಾಣಿಗಳು (Domestic Animals) ಎಂದಾಗ ಮೊದಲು ನಮ್ಮ ನೆನಪಿಗೆ ಬರೋದು ನಾಯಿ, ಬೆಕ್ಕು. ಇದಲ್ಲದೆ ಮೀನು, ಆಮೆ, ಮೊಲ ಹೀಗೆ ಇನ್ನೂ ಅನೇಕ ಪ್ರಾಣಿಗಳನ್ನು ಸಾಕುವವರಿದ್ದಾರೆ. ಎಲ್ಲ ಪ್ರಾಣಿಗಳಲ್ಲಿ ಮೊಲ ಸುಂದರವಾದ ಪ್ರಾಣಿ. ಅದ್ರ ಬಣ್ಣ ಎಲ್ಲರನ್ನು ಆಕರ್ಷಿಸುತ್ತದೆ. ಸಾಕು ಪ್ರಾಣಿಗಳ ಬಗ್ಗೆ ಜ್ಯೋತಿಷ್ಯ (Astrology), ವಾಸ್ತು (Vastu) ಶಾಸ್ತ್ರಗಳಲ್ಲೂ ಹೇಳಲಾಗಿದೆ. ಎಲ್ಲ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದ್ರಿಂದ ಶುಭ ಹಾಗೂ ಅಶುಭ ಎರಡೂ ಫಲ ಸಿಗುತ್ತದೆ. ನಾವಿಂದು ಮನೆಯಲ್ಲಿ ಮೊಲವನ್ನು ಸಾಕಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತಾ ಇಲ್ಲ ಅಶುಭವಾ ಎಂಬುದನ್ನು ನಿಮಗೆ ಹೇಳ್ತೇವೆ. 

LUCKY SIGN ON PALM: ಅಂಗೈಲಿದ್ದರೆ ಈ ಅಪರೂಪದ ಚಿಹ್ನೆ, ನೀವೇ ಅದೃಷ್ಟಶಾಲಿಗಳು

ಮನೆಯಲ್ಲಿ ಮೊಲ (Rabbit) ಸಾಕೋದ್ರಿಂದ ಆಗುತ್ತಾ ಲಾಭ ? : 
• ಮನೆಯಲ್ಲಿ ಮೊಲವನ್ನು ಸಾಕುವುದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ. ಶಾಸ್ತ್ರಗಳಲ್ಲಿ ಮೊಲವನ್ನು ಸಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ.  

• ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಮಗು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಮೊಲ ಸಾಕುವುದು ಒಳ್ಳೆಯದು. ಈ ಸಮಯದಲ್ಲಿ ಮೊಲವಿದ್ದರೆ ಮಗು ನಿಧಾನವಾಗಿ ಚೇತರಿಸಿಕೊಳ್ಳುತ್ತದೆ. ಕ್ರಮೇಣ ರೋಗ ಕಡಿಮೆಯಾಗುತ್ತದೆ.  

• ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣದ ಮೊಲವನ್ನು ಮನೆಯಲ್ಲಿ ಸಾಕುವುದು ತುಂಬಾ ಪ್ರಯೋಜನಕಾರಿ. ಕಪ್ಪು ಬಣ್ಣದ ಮೊಲವನ್ನು ಸಾಕುವುದರಿಂದ ರಾಹು ದೋಷವಿದ್ದರೆ ಶೀಘ್ರವೇ ಪರಿಹಾರ ಸಿಗುತ್ತದೆ. ಕಪ್ಪು ಬಣ್ಣದ ಮೊಲವನ್ನು ಸಂಪತ್ತಿ ಮೂಲವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ಕಪ್ಪು ಬಣ್ಣದ ಮೊಲವನ್ನು ಸಾಕಿದ್ರೆ ತಾಯಿ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿಸ್ತಾಳೆ. ಮನೆಯಲ್ಲಿ ಸಂಪತ್ತು ಸದಾ ನೆಲೆಸಲು ಆಕೆ ಕಾರಣವಾಗ್ತಾಳೆ ಎಂದು ನಂಬಲಾಗಿದೆ. 

• ಜ್ಯೋತಿಷ್ಯದ ಪ್ರಕಾರ, ನಿಮ್ಮ ಮನೆಯಲ್ಲಿರುವ ಮೊಲ ಹಠಾತ್ ಅನಾರೋಗ್ಯಕ್ಕೆ ಒಳಗಾದ್ರೆ, ನಿಮ್ಮ ಮನೆಗೆ ಯಾವುದೋ ಸಂಕಟ ಬರುವುದಿತ್ತು, ಅದನ್ನು ಮೊಲ ತನ್ನ ಮೈಮೇಲೆ ತೆಗೆದುಕೊಂಡಿದೆ ಎಂಬುದನ್ನು ಸೂಚಿಸುತ್ತದೆ. 

ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ! ಅಪಾಯ ತಪ್ಪೋದಿಲ್ಲ..

• ತಾಯಿ ಸರಸ್ವತಿಯ ಕೃಪೆ  ನಿಮ್ಮ ಮೇಲೆ ಇರಬೇಕು, ವಿದ್ಯಾಭ್ಯಾಸ, ಉದ್ಯೋಗ ಇತ್ಯಾದಿಗಳಲ್ಲಿ ಯಾವುದೇ ಅಡೆತಡೆ ಇರಬಾರದು ಎಂದಾದ್ರೆ ನೀವು ಮನೆಯಲ್ಲಿ ಬಿಳಿ ಮೊಲವನ್ನು ಸಾಕಬೇಕೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. 

• ಮನೆಯಲ್ಲಿ ಮೊಲ ಸಾಕಿದ್ರೆ ಸಾಲದು, ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕು. ನೀವು ನಿಯಮಗಳನ್ನು ಮೀರಿದ್ರೆ ಶುಭ ಫಲಗಳು ಅಶುಭವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.  

• ಮೊಲಗಳು ಬಹಳಷ್ಟು ಕೊಳಕನ್ನು ಹರಡುತ್ತವೆ ಎನ್ನಲಾಗುತ್ತದೆ.  ಹಾಗಾಗಿ ನೀವು ಮನೆಯಲ್ಲಿ ಮೊಲವನ್ನು ಸಾಕುತ್ತಿದ್ದರೆ ಮೊಲವಿರುವ ಜಾಗವನ್ನು ಯಾವಾಗ್ಲೂ ಸ್ವಚ್ಛವಾಗಿಟ್ಟುಕೊಳ್ಳಿ.   

• ಮನೆಯ ಪ್ರತಿಯೊಂದು ಸ್ಥಳ ಸದಾ ಸ್ವಚ್ಛವಾಗಿರಬೇಕು. ಆಗ ಮಾತ್ರ ಲಕ್ಷ್ಮಿ ಒಲಿಯಲು ಸಾಧ್ಯವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆಯೇ ಮನೆಯಲ್ಲಿರುವ ಸ್ವಚ್ಛವಾದ ಸ್ಥಳ ಮಾತ್ರ ಶುಭವನ್ನು ಕಾಪಾಡುತ್ತದೆ. ನೀವು ಮೊಲವನ್ನು ಸಾಕುತ್ತಿರುವ ಜಾಗ ಶುದ್ಧವಾಗಿಲ್ಲದೆ, ಕೊಳಕಿನಿಂದ ಕೂಡಿದ್ದರೆ, ಮೊಲವನ್ನು ಸಾಕುವುದರಿಂದ ನಿಮಗೆ ಸಿಗ್ತಿದ್ದ ಶುಭ ಫಲ, ಅಶುಭ ಫಲವಾಗಿ ಪರಿವರ್ತನೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

Follow Us:
Download App:
  • android
  • ios