Asianet Suvarna News Asianet Suvarna News

ನೀವು ಬಹಳ ಕ್ರಿಯೇಟಿವ್, ಎಲ್ಲರನ್ನೂ ಆಕರ್ಷಿಸುತ್ತೀರಿ ಅಂದ್ರೆ ಇದೇ ದಿನ ಹುಟ್ಟಿರುತ್ತೀರಿ!

ಮನುಷ್ಯನ ಸ್ವಭಾವ ಆತನ ಜನನದ ಜೊತೆ ಸಂಬಂಧ ಹೊಂದಿದೆ. ವ್ಯಕ್ತಿತ್ವ, ಭವಿಷ್ಯ, ಪ್ರೀತಿ ಎಲ್ಲವೂ ನೀವು ಯಾವಾಗ ಜನಿಸಿದ್ದೀರಿ ಎಂಬ ಆಧಾರದ ಮೇಲೆಯೇ ನಿರ್ಣಯವಾಗುತ್ತೆ.   17ನೇ ತಾರೀಕಿನಂದು ಜನಿಸಿದವರ ವ್ಯಕ್ತಿತ್ವದ ಬಗ್ಗೆ ಮಾಹಿತಿ ಇಲ್ಲಿದೆ. 

Astrology People Born On Seventeenth of every month special characteristics roo
Author
First Published Jan 12, 2024, 3:24 PM IST

ನಾವು ಹುಟ್ಟಿದ ವಾರ, ದಿನಾಂಕ, ವರ್ಷ, ಸಮಯ ಎಲ್ಲವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ಸ್ವಭಾವ ಗ್ರಹ, ನಕ್ಷತ್ರದ ಜೊತೆ ಸಂಬಂಧ ಹೊಂದಿರುತ್ತದೆ. ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನನದ ಸಂಖ್ಯೆ ಹಾಗೂ ನಮ್ಮ ಸ್ವಭಾವದ ಬಗ್ಗೆ ನಮ್ಮ ಭವಿಷ್ಯದ ಬಗ್ಗೆ ಹೇಳಲಾಗುತ್ತದೆ. ನಾವಿಂದು ಯಾವುದೇ ತಿಂಗಳ ಹದಿನೇಳನೇ ತಾರೀಕಿನಂದು ಹುಟ್ಟಿದ ಜನರ ಸ್ವಭಾವ ಹೇಗಿರುತ್ತೆ ಎಂಬುದನ್ನು ಹೇಳ್ತೇವೆ.

ತಿಂಗಳು ಯಾವುದೇ ಆಗಿರಲಿ, ನೀವು 17ನೇ ತಾರೀಕು ಜನಿಸಿದ್ದರೆ, ನಿಮ್ಮ ಅಧಿಪತಿ ಶನಿ ಎಂದು ಹೇಳಲಾಗುತ್ತದೆ. ಇವರು ಒಳ್ಳೆಯ ಕೇಳುಗರಾಗಿರುತ್ತಾರೆ. ಮುಂದಿರುವ ವ್ಯಕ್ತಿಯ ಸಮಸ್ಯೆ ಇರಲಿ ಅಥವಾ ಸಂತೋಷದ ವಿಷ್ಯವಿರಲಿ ಅದನ್ನು ಸರಿಯಾಗಿ ಕೇಳಿಸಿಕೊಂಡು ಅದಕ್ಕೆ ಸೂಕ್ತವಾದ ಸಲಹೆಯನ್ನು ನೀಡುತ್ತಾರೆ ಇವರು. ಇದೇ ಕಾರಣಕ್ಕೆ ಎಲ್ಲರ ಮುಂದೆ ಬುದ್ಧಿವಂತರು ಎನ್ನಿಸಿಕೊಂಡಿರುತ್ತಾರೆ ಇವರು. 

ಅಯೋಧ್ಯೆ ರಾಮಲಾಲಾ ಪ್ರಾಣ ಪ್ರತಿಷ್ಠೆಗೂ ಮುನ್ನವೇ ವಿಶೇಷ ಅನುಷ್ಠಾನ ಶುರು ಮಾಡಿದ ಮೋದಿ

ಕುಟುಂಬ (Family) ಕ್ಕೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿಗಳು ಇವರಾಗಿರ್ತಾರೆ. ಇವರು ಕುಟುಂಬದ ಸೇವೆಗೆ ಸದಾ ಸಿದ್ಧರಿರುತ್ತಾರೆ. ಇವರ ಪ್ರೀತಿ (Love)ಯಲ್ಲಿ ಯಾವುದೇ ನಾಟಕೀಯತೆ ಇರೋದಿಲ್ಲ. ಪ್ರೀತಿಸಿದ ವ್ಯಕ್ತಿಯ ಸಂತೋಷಕ್ಕಾಗಿ, ನೆಮ್ಮದಿಗಾಗಿ ಇವರು ಏನು ಮಾಡಲೂ ಸಿದ್ಧವಿರುತ್ತಾರೆ. ಮಕ್ಕಳನ್ನು ತುಂಬಾ ಇಷ್ಟಪಡುವ, ಪ್ರೀತಿಸುವ ಇವರು ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡುವಷ್ಟು ಪ್ರೀತಿ ತೋರಿಸುತ್ತಾರೆ.

ಇವರು ಭಾವನಾಜೀವಿ. ಸಣ್ಣ ವಿಷ್ಯವನ್ನೂ ಇವರು ಭಾವನಾತ್ಮಕವಾಗಿ ನೋಡೋದಲ್ಲದೆ ಬೇಗ ಬೇಸರಗೊಳ್ತಾರೆ. ಹಾಗಾಗಿಯೇ ಆಗಾಗ ದುಃಖಿತರಾಗ್ತಾರೆ. ಆದ್ರೆ ತನ್ನ ಮನಸ್ಸಿಗೆ ನೋವಾಗಿದೆ ಎಂಬ ಸಂಗತಿಯನ್ನು ಯಾರ ಮುಂದೆಯೂ ತೋರಿಸಿಕೊಳ್ಳುವ ಪ್ರಯತ್ನ ಮಾಡೋದಿಲ್ಲ. ಇವರು ಮನಸ್ಸಿನಲ್ಲಿ ಪ್ರಕ್ಷುಬ್ಧತೆಯನ್ನು ಹೊಂದಿರುತ್ತಾರೆ. ಆದರೆ ಹೊರಗೆ ತಮ್ಮನ್ನು ತಾವು ಶಾಂತವಾಗಿ ತೋರಿಸಲು ಪ್ರಯತ್ನಿಸುತ್ತಾರೆ. 

ಹದಿನೇಳನೇ ತಾರೀಕಿನಂದು ಜನಿಸಿದ ಜನರು ಕೆಲಸ ಮಾಡೋದ್ರಲ್ಲಿ ಮುಂದು. ಅವರನ್ನು ಹಾರ್ಡ್ ವರ್ಕರ್ಸ್ ಎಂದು ನಾವು ಹೇಳ್ಬಹುದು. ಯಾವುದೇ ಒಂದು ಕೆಲಸ ಮಾಡೋದಾದ್ರೂ ಅದಕ್ಕೆ ಅಗತ್ಯವಿರುವ ಎಲ್ಲ ಶಕ್ತಿಯನ್ನು ವಿನಿಯೋಗಿಸಲು ಸಿದ್ಧವಾಗಿರುತ್ತಾರೆ. ಅಷ್ಟೇ ಅಲ್ಲ ಇವರು ಬಹಳ ಕ್ರಿಯೇಟಿವ್. ಒಂದೇ ಸಮಯದಲ್ಲಿ ನಾನಾ ವಿಷ್ಯದ ಬಗ್ಗೆ ಆಲೋಚನೆ ಮಾಡುವ, ಕೆಲಸ ಮಾಡುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ. ಎಲ್ಲರ ಕಣ್ಣು ಇವರ ಮೇಲೆ ಬೀಳುವಂತಹ ಕೆಲಸ ಮಾಡುವ ಚುರುಕುತನ ಇವರಲ್ಲಿ ಇರುತ್ತದೆ. 

ಸಂಬಂಧಕ್ಕೆ ಬೆಲೆ ನೀಡೋದ್ರಲ್ಲಿ ಇವರು ಮುಂದಿದ್ದಾರೆ. ತುಂಬಾ ರೋಮ್ಯಾಂಟಿಕ್ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ. ನಮ್ಮನ್ನು ತಾವು ಆರೈಕೆ ಮಾಡಿಕೊಳ್ಳುವ ಬದಲು ಬೇರೆಯವರ ಆರೈಕೆಗೆ ಸದಾ ಸಿದ್ಧರಾಗಿರ್ತಾರೆ ಹದಿನೇಳನೇ ದಿನಾಂಕದಂದು ಜನಿಸಿದ ಜನರು. ಇವರ ನಡವಳಿಕೆಯು ಇತರ ಜನರಿಂದ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ಜನರು ಇತರರಿಗೆ ಅದೃಷ್ಟ ತರುವಂತವರು. ತಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದ್ರೂ ಅದನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಇವರಲ್ಲಿ ಇರುತ್ತದೆ. 

ಮಂಗಳ ಫೆಬ್ರವರಿ 5 ರವರೆಗೆ ಧನುದಲ್ಲಿ, ಈ' ರಾಶಿಗೆ ಸಂಪತ್ತು, ಮದುವೆ ಭಾಗ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 35 ವರ್ಷಗಳವರೆಗೆ ಇವರಿಗೆ ವೃತ್ತಿಯಲ್ಲಿ ತೊಂದರೆಗಳು ಎದುರಾಗುತ್ತವೆ. ನಂತ್ರದ ಜೀವನ ಚೆನ್ನಾಗಿರುತ್ತದೆ. ವೃತ್ತಿಯಲ್ಲಿ ಉತ್ತುಂಗಕ್ಕೆ ಏರುವ ಇವರು, ಕೆಲಸದ ಸ್ಥಳದಲ್ಲಿ ಮತ್ತು ಸಮಾಜದಲ್ಲಿ ಬಹಳಷ್ಟು ಗೌರವವನ್ನು ಪಡೆಯುತ್ತಾರೆ.  ಕೆಲಸದಲ್ಲೂ ಕ್ರಿಯೆಟಿವಿಟಿ ತೋರಿಸುವ ಕಾರಣ, ಇವರು ಅನೇಕರನ್ನು ಆಕರ್ಷಿಸುತ್ತಾರೆ. ಈ ದಿನಾಂಕದಂದು ಜನಿಸಿದವರು ಐಟಿ ಅಥವಾ ಯಾವುದೇ ಸರ್ಕಾರಿ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಾರೆ. ರಾಜಕೀಯ ಕ್ಷೇತ್ರದಲ್ಲೂ ಇವರಿಗೆ ಜಯ ದೊರೆಯುತ್ತದೆ.  ಸೌಂದರ್ಯದಲ್ಲೂ ಈ ದಿನಾಂಕದಂದು ಜನಿಸಿದ ಜನರು ಹಿಂದೆ ಬಿದ್ದಿಲ್ಲ. ಆಕರ್ಷಕವಾಗಿರುವ ಅವರ ಸೌಂದರ್ಯ ಸುತ್ತಮುತ್ತಲಿನವರ ಗಮನ ಸೆಳೆಯುತ್ತದೆ.

Follow Us:
Download App:
  • android
  • ios