ಯುಗಾದಿ ರಾಶಿ ಫಲ.. ಯಾರಿಗೆ ಲಾಭ? ಯಾರಿಗೆ ದೋಷ?

ಹೊಸ ವರ್ಷ ಯುಗಾದಿ ಬಂದಿದೆ/ ಈ ವರ್ಷದ ರಾಶಿ ಫಲ ಹೇಗಿದೆ? ಖ್ಯಾತ ಜ್ಯೋತಿಷಿ  ದೈವಜ್ಞ ಡಾ. ಹರೀಶ್​ ಕಾಶ್ಯಪ ವಿವರ ನೀಡಿದ್ದಾರೆ/ ಯಾರಿಗೆ ಈ ಸಾರಿ ದೊಡ್ಡ ಅಭಿವೃದ್ಧಿ

Astrology horoscope Yugadi Rashi Phala 2021 mah

ಬೆಂಗಳೂರು(ಏ. 11)  ಖ್ಯಾತ ಜ್ಯೋತಿಷಿ  ದೈವಜ್ಞ ಡಾ. ಹರೀಶ್​ ಕಾಶ್ಯಪ ಈ ಬಾರಿಯ ಯುಗಾದಿ ಫಲಾಫಲವನ್ನು ನಮ್ಮ  ಮುಂದೆ ಇಟ್ಟಿದ್ದಾರೆ. ಪ್ಲವನಾಮ ಸಂವತ್ಸರ ಯುಗಾದಿ ಚಾಂದ್ರಮಾನೇನ ವರ್ಷ ಫಲಸೂಚಿಗಳು  ಏನಿವೆ? ಯಾವ ರಾಶೀಯವರಿಗೆ ಲಾಭ..ಯಾರಿಗೆ ಸಂಕಟ ಎದುರಾಗಲಿದೆ?  ಇಲ್ಲಿದೆ ಪೂರ್ಣ ವಿವರ

ಪ್ಲವನಾಮ ಸಂವತ್ಸರ ಯುಗಾದಿ ಚಾಂದ್ರಮಾನೇನ ವರ್ಷ ಫಲಸೂಚಿಗಳು .
13-04-2021 ಪ್ರಾತಃ ಉದಯ ಲಗ್ನಾ ಮೇಷ -– ಅಶ್ವಿನೀ ಚಂದ್ರ ಸೂರ್ಯ ಭಗವಾನ ಉಚ್ಚ ಆರೋಹಗತಿ –- ಚಂದ್ರ ಶುಕ್ರ ಯೋಗ . ಕುಜವಾರ -– ವರ್ಷಾಧಿಪ ರಾಜ , ಸೇನಾಧಿಪ , ಅರ್ಘಾಧಿಪ ಮತ್ತು ಮೇಘಾಧಿಪ ಕುಜನೇ ಆಗಿಹನು. ಇದು ಬುಧ - ಶನಿಗಳು ರಾಜ ಕುಜನಿಗೆ ಸ್ವಭಾವ ಶತ್ರುಗಳಾಗಿ ಮಂತ್ರಿಗಳಾಗಿರುವ ವರ್ಷ. ಗುರು ನೀಚ ತ್ಯಾಗ ( ಶುಭ ) ಕುಂಭಚಾರ -– 14-09 ರಿಂದ 20 -11 -2021ರ ವರೆಗೂ ವಕ್ರೀ ಮಕರ -–ನೀಚ ಚಾರಿ
20-06ರಿಂದ 18-10-2021ರವರೆಗೂ ಶನಿವಕ್ರೀಚಾರಿ ಸೂಪರ್​ಮೂನ್​ -– ಬೃಹತ್​ ಚಂದ್ರ -– ಮಾರ್ಚ್​ 28, ಏಪ್ರಿಲ್​ 27 , ಮೇ 26, ಜೂನ್​ 24 – ( 20 ಡಿಗ್ರಿಯಿಂದ 25 ಅಂಶ ಭೂಮಿಗೆ ಹತ್ತಿರ ) ( ಒಟ್ಟು ಐದು ಬಾರಿ )
ಗ್ರಹಣ : 26-05 ಚಂದ್ರ ಗ್ರಹಣ 10-06 ಸೂರ್ಯ ಗ್ರಹಣ , 19-11 ಚಂದ್ರ - 14 -12 ಸೂರ್ಯ ಗ್ರಹಣ ( ಭಾರತಕ್ಕೆ ಗೋಚರವಿಲ್ಲ) ಪ್ರಭಾವ ಉಂಟು !

ಸೂರ್ಯಾದಿ ನವಗ್ರಹರು ಭೂಮಿಗೆ ತರಲಿರುವ ಶುಭಾಶುಭ ಸರಕು ಇಂತಿರಲಾಗಿ –- ಇನ್ನು ಯುಗಾದಿ ಉದಯಾರೀತ್ಯಾ ಫಲಾಫಲಗಳ ಮುಖ್ಯಾಂಶಗಳು ಇಂತಿವೆ.
‘ಬಹುವೃಷ್ಟಿಭಿರಖಿಕಲಧರಾ ಪ್ಲವ ಸದೃಶಾ..’ ಎಂದೇ ಈ 35ನೇ ಸಂವತ್ಸರದ ಗುಣವೆಂದಿದ್ದಾರೆ ಜ್ಯೋತಿಷ್ಕಾರರು. ಮಹಾಮಳೆ, – ಅಗ್ನಿ, ಉತ್ಪಾತಗಳಿಂದ ಸಮುದ್ರಗಳು ಘಾಸಿಗೊಂಡು ಮೇಲೆದ್ದಾವು. ಇಡೀ ಭೂಮಿ ಒಂದು ಪುಟ್ಟ ದೋಣಿಯಂತೆ ಮಹಾಜಲದಲ್ಲಿ ತೇಲುತ್ತಾ ಇರುವಂತೆ ಭಾಸವಾಗುವುದು.

ಹೊಸ ವರ್ಷದಿಂದ ಯಾವ ಬದಲಾವಣೆ ಅಳವಡಿಸಿಕೊಳ್ಳಬೇಕು? 

ಕುಜನ ರಾಜತ್ವ ಅಂದರೆ, ಕಾಠಿಣ್ಯದಿಂದ ಹರಡುತ್ತದೆ. ರಾಜರಿಗೆ ವಿಶೇಷವಾಗಿ ಖಡಕ್​ ತನದ ಹೆಜ್ಜೆ.. ತಮ್ಮದೇ ನಡೆಯುವಂತೆ ರಾಜದಂಡವ ತಿರುವುತ್ತಾರೆ. ಪ್ರಜೆಗಳಿಗೂ ಅದೇ ಭಾವ ಬಂದು – ಜನಾಮೇಷ, ರಾಜಕೀಯ ತಿಕ್ಕಾಟ , ಭಯೋತ್ಪಾದಕರ ಹಾವಳಿ, ಮರಣಗಳು , ಕ್ರೂರವಾಗಿ ದಂಡಿಸುವ ದೃಶ್ಯಗಳು , ಮಹಾಸ್ತ್ರಗಳ ಪ್ರಯೋಗಗಳು , ತೈಲ ನಿಕ್ಷೇಪಗಳಿಗೆ ಬೆಂಕಿ, ಯಂತ್ರವಾಹನಗಳ ಘರ್ಷಣೆ ಇತ್ಯಾದಿ ಏರ್ಪಟ್ಟು ಅಕ್ಷರಶಃ ಮನುಷ್ಯ ಜಗ ರಣರಂಗವಾಗುತ್ತದೆ.
ಕುಜನ ರಾಹುಯುತಿ ಯುಗಾದಿಯಂದೇ ಪರಿಹಾರ ಆಗಿರುವುದೂ, ಗುರುದ್ರಷ್ಟ ( ದಶ – ನವಮ )ನಾಗಿರುವುದು ಸಮಾಧಾನಕರ.@

ಸ್ವಾಭಾವಿಕ ಶತ್ರುಗಳಾದ ಶನಿ -– ಬುಧರೇ ಮಂತ್ರಿಗಳಾಗಿರುವ ಕಾರಣ ಪರಸ್ಪರ ರಾಜದ್ರೋಹ, ತಿಕ್ಕಾಟ, ಸಂಪುಟ ಬದಲಾವಣೆ , ರಾಷ್ಟ್ರಪತಿ ಆಳ್ವಿಕೆ (ರಾಜ್ಯಗಳಲ್ಲಿ) ಹಿರಿಯ ನಾಯಕರ ಅವಸಾನ ( ದಕ್ಷಿಣ , ಪಶ್ಚಿಮ, ರಾಜ್ಯ- ದೇಶದ ) ಕೋಮುವಾದ ಉಲ್ಬಣ ಇತ್ಯಾದಿ ರಾಜಕೀಯ ವಿಪ್ಲವಕ್ಕೆ ಪ್ಲವ ಸಂವತ್ಸರ ತವಕಿಸುತ್ತಿದೆ.

ಶನಿ –- ಗುರುಗ್ರಹರ ವಕ್ರೀಚಾರದ ವರ್ಷ ಜೂನ್​ನಿಂದ ಅಕ್ಟೋಬರ್​ವರೆಗೂ ದೀರ್ಘವಾಗಿದೆ. ಅದೇ ಸಮಯದಲ್ಲಿ ಗುರು ಮಕರದಲ್ಲಿ ನೀಚತ್ವ ಹೊಂದಿ -– ನೀಚ ಭಂಗವೂ ಪಡೆಯುವ ಅಪರೂಪ ಗೋಚಾರವಾಗಿದೆ. ಇದರಿಂದ ತಂತ್ರಜ್ಞಾನ , ರಾಜಕೀಯ , ವಿದೇಶ ವ್ಯವಹಾರಗಳು , ಭೋದನೆ ಮತ್ತು ಧರ್ಮ ಕ್ಷೇತ್ರಗಳು ಪರಿಣಾಮ ಹೊಂದುತ್ತವೆ. ಅರ್ಧ ಅರ್ಥನಾಶವೂ, ಅರ್ಧ ಏಳಿಗೆಯ ಸಂಕ್ರಾಂತಿ ತರುವ ಗುರು -– ಶನಿಗಳ ವಕ್ರೀಕಾಲವಿದು. ವೃದ್ಧ ನಾಯಕರಿಗೂ -– ವಯೋ ಕಾಯಿಲೆಗಳ ದೋಷವೂ ಬಂದು ದುಃಖಪಡಬೇಕಾದೀತು

ಐದು ಬಾರಿ ಚಂದ್ರನು ಭೂಮಿಗೆ ಅತೀ ಹತ್ತಿರನಾಗಿ ಮಳೆಗಾಲ ಆರಂಭವಾಗುವ ವರ್ಷವಿದು. ಇದರಿಂದ ದಕ್ಷಿಣ ನೈರುತ್ಯ ಮಾರುತ –- ಪರ್ವತ –- ಸಮುದ್ರಗಳಿಗೆ ಉತ್ಪಾತ ಮಹಾಮಳೆಯಿಂದ ಅನೇಕ ಭೂಭಾಗಗಳು ಮುಳುಗಿ ತೇಲುವುದು. SUPER MOON.

ಗ್ರಹಣ - ಮಳೆಗಾಲದ ಆರಂಭದಲ್ಲಿ ಎರಡು ಗ್ರಹಣಗಳು ಕೇತುಗ್ರಸ್ತ ಚಂದ್ರಗ್ರಹಣ- ವೃಶ್ಚಿಕ ರಾಶಿ .… ರಾಹುಗ್ರಸ್ತ ಸೂರ್ಯ ಗ್ರಹಣ -ವೃಷಭರಾಶಿ ( ರವಿ -ಚಂದ್ರ - ಬುಧ - ರಾಹು )
ಬೃಹತ್​ ಚಂದ್ರ- ಸೂಪರ್​ ಮೂನ್​ಗಳಿಗೂ - ಈ ಗ್ರಹಣಗಳಿಗೂ ನೇರ ಸಂಬಂಧವಿದೆ. ವರ್ಷ ಮಧ್ಯದಲ್ಲಿ ಇದೂ ಕೂಡಾ ಪ್ರಾಕೃತಿಕ ಜಲ ಕಂಟಕವೇ ಆಗಿದೆ.

ಚಾಂದ್ರ ಪ್ಲವ ಸಂವತ್ಸರ ಗ್ರಹಬಲಾದಿ :
ಪ್ರಾತಃ ಮೇಷ ಲಗ್ನ - ಚಂದ್ರ - ಶುಕ್ರಯುತಿ -ದಶಮ ಶಶಕ ಶನಿ ಯೋಗವೂ , ಏಕಾದಶದ ಗುರು , ಉಚ್ಚ ಆರೋಹಿ ರವಿಯ ಅತ್ಯುತ್ತಮ ಅಪರೂಪ ಶುಭಯೋಗದ ವರ್ಷವಿದೆ.
ಸ್ತ್ರೀಯರಿಗೆ ಅಧಿಕ ಶುಭ - ಪರಿಶ್ರಮ - ಏಳಿಗೆ- ಆತ್ಮ ವಿಶ್ವಾಸ -–ಅವಕಾಶ - ತಿಕ್ಕಾಟಗಳ ಮಿಶ್ರಫಲದ ವರ್ಷ.
ಮನರಂಜನೆ- ಸಿನಿಮಾ ಏಳಿಗೆ ಕಾಣುವುದು.
ಬೆಳೆ ಫಸಲು ರಸವತ್ತು ಪಡೆಯುವುದು.
ಹಿತ ಶತ್ರುಗಳ ಕಾಟ -ಪೀಡೆ , ಧರ್ಮ ಕಾರ್ಯ ಪ್ರಗತಿ .
ಭೂವ್ಯವಹಾರ ಮಧ್ಯಮ ಫಲ. ಆರ್ಥಿಕತೆ ಸುಧಾರಣೆ
ಆಯಾತ ನಿರ್ಯಾತ ಏರಿಕೆ -ಮನ್ನಣೆ . ಅಧಿಕಾರಿ , ರಾಜವರ್ಗದ ಬಲ ವರ್ಧನೆ , ಶನಿ-ಗುರುಗಳು ಬಲಿಷ್ಠರಿರುವುದರಿಂದ ಕುಜನು ಸ್ವಜನರ ರಕ್ಷಣೆಗಾಗಿ ಪರರ ಹಿಂಸೆ ಮಾಡುವನು. ಅಂದರೆ ಯುದ್ಧ ಸಮಾನ ಭೀತಿಗಳು.
ಜನರು ತಾವೇ ತಮ್ಮ ಹಿತವನ್ನು ಕಾಪಾಡಿಕೊಂಡು ಹೋಗತಕ್ಕದ್ದು. ಕೆಟ್ಟ ವರ್ತನೆ – ದುರುದ್ದೇಶಗಳಿಂದ ಜನರನ್ನು ರಾಹು ಪೀಡಿಸುವನು. ಕುಜನು ಉತ್ತರ ಕೊಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು.
ಶುಭವಾರ : ಗುರು- ಮಂಗಳ- ಸೋಮ
ಶುಭ ದಿಕ್ಕು : ಪೂರ್ವ- ಉತ್ತರ 
ಶುಭವರ್ಣ : ಬಿಳಿ -ಕೆಂಪು -ಹಳದೀ ( ಹರಳು ಸಹ)
ಶುಭದೇವತೆ : ಶ್ರೀಗಣಪತಿ- ಸುಬ್ರಹ್ಮಣ್ಯ- ದುರ್ಗಾ -ನಾಗರು

ದ್ವಾದಶ ರಾಶಿಗಳ ಫಲಾಫಲ : 
ಮೇಷ : ಏಕಾದಶ ಗುರು- ದಶಮ ಶನಿ. ಆರೋಗ್ಯ- ಹಣಕಾಸು, ಉದ್ಯೋಗ ಉತ್ತಮಗೊಳ್ಳುವುದು. ಸರ್ವತ್ರ ವಿಜಯ. ಧರ್ಮಕಾರ್ಯಾಸಕ್ತಿ . ವಿವಾಹಾದಿ ಮಂಗಲ ಕಾರ್ಯ ವೃದ್ಧಿ.
ವೃಷಭ : ದಶಮ ಗುರು.  ದೈವ ಮನಸ್ಕ ಸ್ಥಿತಿ. ಗೊಂದಲವೇ ಹೆಚ್ಚಿನ ಮನೋಸ್ಥಿತಿ. ವಿಚಾರ ಮಾಡಿ ತಾಳ್ಮೆಯಿಂದ ಕೆಲಸ ಮಾಡಿ . ದೈವಾನುಕೂಲವಿದೆ. ಅಧಿಕಾರ, ಕೀರ್ತಿ ಲಾಭ.
ಮಿಥುನ : ನವಮ ಗುರು. ಸರ್ವಬಾಧೆಗಳು ಪರಿಹಾರವಾಗುವುದು. ಸರ್ವಪತನ ಭೀತಿ -ಜಾಗೃತೆ , ಮಧ್ಯಮ ಲಾಭ -ಸ್ತ್ರೀಯರಿಗೆ ದೋಷಕರ . ಗುರುಬಲವಿದೆ  ಮುನ್ನಡೆಯಿರಿ.
ಕರ್ಕ : ಅಷ್ಠಮ ಗುರು. ಧರ್ಮಕಾರ್ಯಗಳಲ್ಲಿ ಸಂಚಾರ. ಮನೋಕ್ಲೇಷ- ಆಯಾಸದ ವರ್ಷ ಆರಂಭ. ಬಂಧು ಮಿತ್ರರ ಸಹಾಯ ದೊರೆವುದು. ಸಾಧಾರಣ ಫಲ. ಪಿತೃಕರ್ಮ ಶಾಂತಿಯಾದಿಗಳ ಅವಶ್ಯಕತೆಯಿದೆ.
ಸಿಂಹ : ಸಪ್ತಮ ಗುರು. ವಿವಾಹ ಯೋಗ, ದಾಂಪತ್ಯ ಅನುಕೂಲ, ಪುತ್ರ ಸಂತಾನ. ಬಿರುಸಿನ ವರ್ಷಾರಂಭ. ಅನಿರೀಕ್ಷಿತ ಪ್ರಯಾಣ- ಕೆಲಸ ಬದಲು- ಹೊಸ ಅವಕಾಶ .
ಕನ್ಯಾ : ಷಷ್ಠಗುರು, ಶ್ರಮ ಹೆಚ್ಚು, ಫಲ ಕಡಿಮೆ. ದಿಢೀರ್ ಉದ್ಯೋಗ ಬದಲಾವಣೆ.  ನಿಮ್ಮ ಧೈರ್ಯ- ಹಿರಿಯರ ಆಶೀರ್ವಾದವೇ ನಿಮಗೆ ದಾರಿದೀಪ. ಚಿಂತೆ ಬಿಟ್ಟು , ಕೆಲಸ ಕಾರ್ಯಗಳಲ್ಲಿ ತೊಡಗಿರಿ. 
ತುಲಾ : ಪಂಚಮ ಗುರು. ಆತ್ಮವಿಶ್ವಾಸ ಹೆಚ್ಚುವುದು. ಭಾವನಾತ್ಮಕ ವರ್ಷ. ನಿಂತ ಶುಭಕಾರ್ಯ ಚಾಲನೆ ಪಡೆವುದು . ಹಣ ಹೂಡಿಕೆ - ಹೊಸ ವ್ಯಾಪಾರದಲ್ಲಿ ಜಾಗೃತೆ ಬೇಕು.
ವೃಶ್ಚಿಕ : ಚತುರ್ಥ ಗುರು.ಅಭಿಯೋಗ, ರಾಜಯೋಗ ಫಲ.  ವ್ಯವಹಾರಿಕವಾಗಿ ಉತ್ತಮ ವರ್ಷ . ಪಿತ್ತ - ಶೀತಗಳ ಉಪದ್ರವಾದೀತು , ಎಚ್ಚರ .
ಧನು : ತೃತೀಯ ಗುರು,  ಜನ್ಮ ಶನಿ ಕೊನೆ - ಗುರು ಚಾರದ ವರ್ಷ, ಬಹಳ ನಿರೀಕ್ಷೆ ಈಡೇರದೇ  ಬಂದದ್ದನ್ನು ಸ್ವೀಕೃತ ಮನದಿಂದ ಪಡೆಯಿರಿ. ಆಯಾಸ, ಪರ್ಯಟನೆ, ವ್ಯಾಪಾರ ನಿಂತ ನೀರು. ಅಧಿಕ ಶ್ರಮ.
ಮಕರ : ದ್ವಿತೀಯ ಗುರು. ಯಶ- ವಿಜಯ ಪ್ರಾಪ್ತಿ.  ಹೊಸ ಹುರುಪು , ಧನಾದಾಯ ಆಶಾದಾಯಕ . ದೈವಾನುಕೂಲ ಇದೆ. ಒತ್ತಡ ಹೆಚ್ಚುವುದು. ಗಟ್ಟಿ ಮನಸ್ಸಿನಿಂದ ನಿಭಾಯಿಸಿ.
ಕುಂಭ : ಜನ್ಮಗುರು. ಮಾನಸಿಕ ಸ್ಥಿರತೆ. ಶನಿ-ಗುರುಗಳ ಅತಿಚಾರದಿಂದ ಆಂತರಿಕ ಶಕ್ತಿ ವರ್ಧನೆ. ಧನಾದಾಯ ಮಧ್ಯಮ . ಚಟುವಟಿಕೆಯ ಬಿರುಸು ವರ್ಷ.
ಮೀನ : ದ್ವಾದಶ ಗುರು. ಶುಭ ಚಿಂತನೆ ಬೆಳೆಯುವುದು.  ವ್ಯವಹಾರಿಕ ಚೇತರಿಕೆ. ಸಂಬಂಧಗಳು ಸುಖ ತರುವುದು. ಅನೇಕ ಸಂಚಾರಯೋಗ, ಗುರುಪೀಠಗಳ ದರ್ಶನ. ಖರ್ಚು-ವೆಚ್ಚ ಹೆಚ್ಚುವುದು. 

 

Latest Videos
Follow Us:
Download App:
  • android
  • ios