ಮಾನಸಿಕ ನೆಮ್ಮದಿಗೆ ಮೆಡಿಟೇಶನ್ ಸಹಕಾರಿ. ಆದರೆ ಮೆಡಿಟೇಶನ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ಯಾವುದೇ ಯೋಚನೆಗಳು ಬಾರದಂತೆ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇದಕ್ಕೆ ಪರ್ಯಾಯವಾಗಿ ಶಾಂತಿ ಮಂತ್ರವನ್ನು ಪಠಿಸುವುದು ಅಷ್ಟೇ ಲಾಭದಾಯಕವೆಂದು ಹೇಳಲಾಗುತ್ತದೆ. ಈ ವಿಷಯದ ಬಗ್ಗೆ ಇನ್ನಷ್ಟು ತಿಳಿಯೋಣ.
ಮನೆಯಲ್ಲಿ ಸುಖ - ಸಮೃದ್ಧಿ ನೆಲೆಸುವಂತೆ ಮಾಡಲು ಅನೇಕ ಮಾರ್ಗಗಳು ಇವೆ. ದೇವರ ಪೂಜೆ (Pooja), ಭಜನೆ, ಅರ್ಚನೆ, ಜಪ, ಮಂತ್ರ ಪಠಣ (Chanting) ಹೀಗೆ ಬೇರೆ ಬೇರೆ ವಿಧಾನಗಳಿಂದ ಮನಸ್ಸಿಗೆ ನೆಮ್ಮದಿಯನ್ನು (Peace) ತಂದುಕೊಳ್ಳಬಹುದು. ಮನಸ್ಸಿಗೆ ನೆಮ್ಮದಿ ಇದ್ದರೆ ಮನೆಯಲ್ಲಿ ಸುಖ - ಶಾಂತಿ ನೆಲೆಸುತ್ತದೆ.
ಮನಸ್ಸಿನ ನೆಮ್ಮದಿಗಾಗಿ ಧ್ಯಾನ ಮಾಡುವುದು (Meditation) ಸಹ ಒಳ್ಳೇ ಅಭ್ಯಾಸವಾಗಿದೆ. ಚಿತ್ತವನ್ನು ಏಕಾಗ್ರಗೊಳಿಸಿ, ಮನಸ್ಸಿನ ಒಳಗೆ ಯಾವುದೇ ಆಲೋಚನೆಗಳು ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸತತ ಪ್ರಯತ್ನ ಮತ್ತು ಶ್ರದ್ಧೆ (Dedication) ಬೇಕಾಗುತ್ತದೆ. ಕೆಲವರಿಗೆ ಮೆಡಿಟೇಷನ್ ಮಾಡಲು ತುಂಬಾ ಕಷ್ಟವಾಗುತ್ತದೆ. ಅಂಥವರಿಗೆ ವರವಾಗಿರುವುದು (Boon) ಈ ಕೆಲವು ಮಂತ್ರಗಳಾಗಿವೆ. ಆ ಮಂತ್ರಗಳು (Mantras) ಯಾವುವು ಮತ್ತು ಅದರಿಂದಾಗುವ ಪ್ರಯೋಜನವೇನು ಎಂಬುದನ್ನು ತಿಳಿಯೋಣ...
ಮನೆಯಲ್ಲಿ ನೆಮ್ಮದಿ ನೆಲೆಸಬೇಕೆಂದು ಹಲವಾರು ಮಂತ್ರಗಳನ್ನು ಪಠಣ ಮಾಡುವ ರೂಢಿಯಿದೆ (Habit). ಇದರಿಂದ ಸಕಾರಾತ್ಮಕ ಶಕ್ತಿಯ (Positive energy) ಹರಿವು ಹೆಚ್ಚುತ್ತದೆ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಸುಖ – ಶಾಂತಿ - ನೆಮ್ಮದಿ ನೆಲೆಸುತ್ತದೆ.
ಶಾಂತಿ ಮಂತ್ರ :
ಓಂ ದ್ಯೌಃ ಶಾಂತಿರಂತರಿಕ್ಷಂ ಶಾಂತಿಃ, ಪೃಥಿವೀ ಶಾಂತಿರಾಪಃ ಶಾಂತಿರೋಷಧಯಃ ಶಾಂತಿಃ | ವನಸ್ಪತಯಃ ಶಾಂತಿರ್ವಿಶ್ವೇದೇವಾಃ ಶಾಂತಿಬ್ರ್ರಹ್ಮಶಾಂತಿಃ, ಸರ್ವಂ ಶಾಂತಿಃ, ಶಾಂತಿರೇವ ಶಾಂತಿಃ, ಸಾ ಮಾ ಶಾಂತಿರೇಧಿ || ಓಂ ಶಾಂತಿಃ ಶಾಂತಿಃ ಶಾಂತಿಃ ||
ಸ್ವರ್ಗದಲ್ಲಿ ಶಾಂತಿಯಿರಲಿ, ಆಕಾಶದಲ್ಲಿ ಶಾಂತಿಯಿರಲಿ, ಭೂಮಿಯಲ್ಲಿ ಶಾಂತಿಯಿರಲಿ, ನೀರಿನಲ್ಲಿ ಶಾಂತಿಯಿರಲಿ, ಔಷಧೀಯ ವೃಕ್ಷಗಳಲ್ಲಿ ಶಾಂತಿಯಿರಲಿ , ಔಷಧೀಯ ಸಸ್ಯಗಳಲ್ಲಿ ಶಾಂತಿಯಿರಲಿ, ವಿಶ್ವದಲ್ಲಿರುವ ಎಲ್ಲ ದೇವರುಗಳಲ್ಲೂ ಶಾಂತಿಯಿರಲಿ, ಬ್ರಹ್ಮನಲ್ಲಿ ಶಾಂತಿಯಿರಲಿ, ಸರ್ವತ್ರ ಶಾಂತಿಯಿರಲಿ, ಶಾಂತಿಯಲ್ಲೇ ಶಾಂತಿಯಿರಲಿ, ನನ್ನಲ್ಲಿರುವ ಶಾಂತಿ ಇನ್ನೂ ವೃದ್ಧಿಯಾಗಲಿ.. ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಅರ್ಥವನ್ನು ಈ ಶಾಂತಿ ಮಂತ್ರವು ನೀಡಲಿದ್ದು, ಹೀಗೆ ಮಾಡುವದರಿಂದ ಮಾನಸಿಕ ನೆಮ್ಮದಿಯು ಹೆಚ್ಚುತ್ತದೆ.
ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸರ್ವೇಷಾಂ ಸ್ವಸ್ತಿರ್ಭವತು ಸರ್ವೇಷಾಂ ಶಾಂತಿರ್ಭವತು | ಸರ್ವೇಷಾಂ ಪೂರ್ಣಂ ಭವತು ಸರ್ವೇಷಾಂ ಮಂಗಲಂ ಭವತು ||
ಈ ಮಂತ್ರದ ಅರ್ಥವೇನೆಂದರೆ, ಎಲ್ಲರೂ ಸುಖವಾಗಿರಲಿ, ಯಾರಿಗೂ ಚಿಂತೆ ಬಾರದಿರಲಿ, ಸರ್ವರೂ ಸುಖವಾಗಿರಲಿ, ಎಲ್ಲರೂ ಒಳ್ಳೆಯ ವಿಷಯಗಳನ್ನೇ ನೋಡುವಂಥಾಗಲಿ, ಯಾರಿಗೂ ದುಃಖ ಬಾರದಿರಲಿ... ಎಂದು ಹೇಳುತ್ತದೆ.
ಇದನ್ನು ಓದಿ: Vastu Tips: ಮನೆ ನಿರ್ಮಾಣಕ್ಕೆ ಶುಭ ಮುಹೂರ್ತ ಯಾವುದು ಗೊತ್ತಾ?
ಇದು ಶಾಂತಿಮಂತ್ರವಾಗಿದ್ದು ಈ ಮಂತ್ರವನ್ನು ಪೂಜೆಯ ನಂತರ ಅಥವಾ ಪೂಜೆಗಿಂತ ಮೊದಲು ಹೇಳಿಕೊಳ್ಳಬಹುದು. ಇದರಿಂದ ಮನೆಯಲ್ಲಿ ಕಲಹ, ಕ್ಲೇಷಗಳಿಂದ ದೂರವಾಗುತ್ತವೆ. ಜೀವನದಲ್ಲಿ ಎದುರಾಗುತ್ತಿರುವ ತೊಂದರೆ ತಾಪತ್ರಯಗಳಿಂದ ಮುಕ್ತಿ ಹೊಂದಬಹುದಾಗಿದೆ. ಈ ಮಂತ್ರದ ಉಚ್ಛಾರಣೆಯಿಂದ ನಕಾರಾತ್ಮಕ ಶಕ್ತಿ ದೂರವಾಗಿ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
ಶಾಂತಿ ಮಂತ್ರವನ್ನು ಜಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಶರೀರದಲ್ಲಿ ಆಂತರಿಕ ಶಕ್ತಿ ಮತ್ತಷ್ಟು ಬಲಗೊಳ್ಳುತ್ತದೆ. ಈ ಮಂತ್ರಗಳನ್ನು ಬೆಳಗಿನ ಸಮಯದಲ್ಲಿ ಜಪಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ಮಂತ್ರವನ್ನು ಜಪಿಸುವುದರಿಂದ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿ (Negative energy) ನಾಶವಾಗಿ ಸಕಾರಾತ್ಮಕತೆ ಎಲ್ಲೆಡೆ ಪಸರಿಸುತ್ತದೆ.
ಇದನ್ನು ಓದಿ : ವ್ಯಾಪಾರದಲ್ಲಿ ಸಕ್ಸಸ್ ಆಗಬೇಕೆಂದರೆ ಪಾಲಿಸಿ ಈ Vastu ಸೂತ್ರ!
ಮೆಡಿಟೇಶನ್ (Meditation) ಮಾಡಲು ಕಷ್ಟಪಡುತ್ತಿರುವ ವ್ಯಕ್ತಿಗಳು, ಈ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಈ ಮಂತ್ರಗಳನ್ನು ಸತತವಾಗಿ ಪಠಿಸುವುದರಿಂದ ಏಕಾಗ್ರತೆ (Concentration) ಹೆಚ್ಚುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮೆಡಿಟೇಶನ್ ಮಾಡಲು ಸಹಾಯಕವಾಗುತ್ತದೆ. ಹಾಗಾಗಿ ಈ ಶಾಂತಿ ಮಂತ್ರವನ್ನು ಪಠಣ (Chanting) ಮಾಡುವುದರಿಂದ ಎನರ್ಜಿ ಟಾನಿಕ್ ಆಗಿ ಕಾರ್ಯ ನಿರ್ವಹಿಸುತ್ತವೆ.
Last Updated Apr 17, 2022, 10:08 AM IST