Asianet Suvarna News Asianet Suvarna News

ಪರ್ಸಲ್ಲಿ ಸದಾ ದುಡ್ಡು ತುಂಬಿ ತುಳುಕುತ್ತಿರಬೇಕಾ? ಹೀಗೆ ನೋಡಿಕೊಳ್ಳಿ

ಕೆಲವೊಬ್ಬರ ಪರ್ಸ್ ಊದಿಕೊಂಡಿರುತ್ತದೆ. ಅದ್ರಲ್ಲಿ ಹಣದ ಬದಲು ಬೇರೆ ವಸ್ತುಗಳೇ ತುಂಬಿರುತ್ತವೆ. ಬೇಡದ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಳ್ಳುವ ಜನರು ಆರ್ಥಿಕ ನಷ್ಟವನ್ನು ಎದುರಿಸ್ತಾರೆ. ಪರ್ಸ್ ನಲ್ಲಿ ಹಣ ನಿಲ್ಲದಿರಲು ಪರ್ಸ್ ನಲ್ಲಿರುವ ವಸ್ತುಗಳೇ ಕಾರಣವಾಗಿರುತ್ತದೆ.
 

Astro Tips For Wallet
Author
First Published Oct 14, 2022, 4:09 PM IST | Last Updated Oct 14, 2022, 4:09 PM IST

ಆರ್ಥಿಕವಾಗಿ ಸದೃಢವಾಗ್ಬೇಕೆಂದು ಎಲ್ಲರೂ ಬಯಸ್ತಾರೆ. ಪರ್ಸ್ ತುಂಬ ಹಣ ಇರಬೇಕೆಂದು ಹಗಲಿರುಳು ಕೆಲಸ ಮಾಡುತ್ತಾರೆ. ಆದ್ರೆ ಎಷ್ಟೇ ದುಡಿದ್ರೂ ಅನೇಕರ ಪರ್ಸ್ ಖಾಲಿಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಪರ್ಸ್ ಇದೆ. ಚೆಂದದ ಪರ್ಸ್ ಖರೀದಿಸುವ ಜನರು ಅದ್ರಲ್ಲಿ ಹಣ ಮಾತ್ರ ಇಡೋದಿಲ್ಲ. ತಮ್ಮಿಷ್ಟದ ವ್ಯಕ್ತಿಗಳ ಫೋಟೋ, ದೇವರ ಫೋಟೋ ಸೇರಿದಂತೆ ಅನೇಕ ವಸ್ತುಗಳನ್ನು ಇಟ್ಟುಕೊಳ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್ ಕೂಡ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಕೆಲ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ. ಪರ್ಸ್ ನಲ್ಲಿರುವ ಆ ವಸ್ತುಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಣದ ನಷ್ಟಕ್ಕೆ ಇದು ಕಾರಣವಾಗುತ್ತದೆ. ಹಾಗಾಗಿ ಕೈನಲ್ಲಿರುವ ಪರ್ಸ್ ನಲ್ಲಿ ಏನಿಟ್ಟುಕೊಳ್ಳಬೇಕು, ಏನಿಟ್ಟುಕೊಳ್ಳಬಾರದು ಎಂಬುದನ್ನು ತಿಳಿದಿರಬೇಕು. ವಾಸ್ತು ಶಾಸ್ತ್ರದಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಪರ್ಸ್ (Purse) ನಲ್ಲಿ ಈ ವಸ್ತು (Material) ವನ್ನು ಇಡಬೇಡಿ : 

ಈ ಚೀಟಿಯನ್ನು ಪರ್ಸ್ ನಲ್ಲಿಡಬೇಡಿ : ಎಟಿಎಂ (ATM) ರಸೀದಿ, ಹೋಟೆಲ್ ಬಿಲ್, ಚಲನಚಿತ್ರ ಟಿಕೆಟ್ ಇತ್ಯಾದಿಗಳನ್ನು ನಿಮ್ಮ ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಇಟ್ಟುಕೊಳ್ಳಬೇಡಿ. ಈ ಚೀಟಿಗಳು ನಿಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದ್ರಿಂದ ವಿವಾದಗಳು ಹೆಚ್ಚಾಗುವ ಸಾಧ್ಯತೆಯಿದೆ.

ನೋಟನ್ನು ಇಲ್ಲಿ ಇಡಿ : ಪರ್ಸ್ ಅನ್ನು ಯಾವಾಗಲೂ ಎಡ ಜೇಬಿನಲ್ಲಿ ಇಡಬೇಕು. ಎಡ ಜೇಬಿನಲ್ಲಿ ಪರ್ಸ್ ಇಟ್ಟುಕೊಂಡರೆ ಹಣ ಉಳಿತಾಯವಾಗುತ್ತದೆ. ಇದು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ನೋಟನ್ನು ಮಡಚಿ ಇಡಬೇಡಿ : ಪರ್ಸ್ ನಲ್ಲಿ ನೋಟುಗಳನ್ನು ಅನೇಕರು ಇಟ್ಟುಕೊಳ್ತಾರೆ. ಪರ್ಸ್ ಚಿಕ್ಕದು ಎನ್ನುವ ಕಾರಣಕ್ಕೆ ಅಥವಾ ಬೇರೆ ನಾನಾ ಕಾರಣಗಳಿಗೆ ಪರ್ಸ್ ನಲ್ಲಿ ನೋಟನ್ನು ಮಡಚಿ ಇಟ್ಟುಕೊಳ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್ ನಲ್ಲಿ ನೋಟನ್ನು ಮಡಚಿ ಇಡುವುದು ತಪ್ಪು. ಪರ್ಸನ್ನು ಮಡಚಿ ಇಡುವುದ್ರಿಂದ ಹಣದ ನಷ್ಟಕ್ಕೂ ಇದು ಕಾರಣವಾಗುತ್ತದೆ.

Vastu Tips: ಅಡಿಗೆ ಉಪ್ಪು ಹೀಗೆ ಬಳ್ಸಿದ್ರೆ ಮನೆಯಲ್ಲಿ ಸದಾ ಇರುತ್ತೆ ಹಣಕಾಸು

ಪರ್ಸ್ ನಲ್ಲಿಡಬೇಡಿ ಕೀ : ಮನೆಯ ಕೀಲಿಗಳನ್ನು (Keys) ಪರ್ಸ್‌ನಲ್ಲಿ ಇಡಬಾರದು. ಪರ್ಸ್ ನಲ್ಲಿ ಕೀಲಿಯನ್ನು ಇಟ್ಟುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕೀಲಿಯನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ. ಪರ್ಸ್ ನಲ್ಲಿ ಕೀ ಇಡುವುದ್ರಿಂದ ಪ್ರಮುಖ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ. ವ್ಯಕ್ತಿ  ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗ್ತಾನೆ. ಆತನಿಗೆ ಅಪರಿಚಿತರ ಭಯವಿರುತ್ತದೆ. 

ನಾಣ್ಯ : ಪರ್ಸ್ ನಲ್ಲಿ ಹೆಚ್ಚಿನ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿ. ನಾಣ್ಯಗಳ ಶಬ್ಧ ಕೇಳಬಾರದು ಆ ರೀತಿಯಲ್ಲಿ ನೀವು ಪರ್ಸ್ ನಲ್ಲಿ ನಾಣ್ಯಗಳನ್ನು ಇಡಬೇಕು. ನಾಣ್ಯಗಳ ಶಬ್ಧ ನಕಾರಾತ್ಮಕ ಪ್ರಭಾವ ಬೀರುತ್ತದೆ. 

ಪರ್ಸ್ ನಲ್ಲಿ ಇಡಬೇಡಿ  ಈ ಫೋಟೋ : ಆಪ್ತರ ಫೋಟೋಗಳನ್ನು ಜನರು ಪರ್ಸ್ ನಲ್ಲಿ ಇಟ್ಟುಕೊಳ್ತಾರೆ. ಹಾಗೆಯೇ ಸಾವನ್ನಪ್ಪಿದ, ಪ್ರೀತಿ ಪಾತ್ರರ ಫೋಟೋಗಳನ್ನು ಕೂಡ ಇಟ್ಟುಕೊಳ್ತಾರೆ. ಆದ್ರೆ ಪರ್ಸ್ ನಲ್ಲಿ ಎಂದೂ ಸಾವನ್ನಪ್ಪಿದವರ ಫೋಟೋವನ್ನು ಇಟ್ಟುಕೊಳ್ಳಬಾರದು. ಇದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.

ಮಾತ್ರೆ ಪರ್ಸನಲ್ಲಿ ಇಡಬೇಡಿ : ಪ್ರತಿ ದಿನ ನಾನಾ ರೋಗಕ್ಕೆ ಮಾತ್ರೆ ತೆಗದುಕೊಳ್ಳುವವರಿದ್ದಾರೆ. ನೆನಪಿರುವುದಿಲ್ಲ ಎನ್ನುವ ಕಾರಣಕ್ಕೆ ಪರ್ಸ್ ನಲ್ಲಿಟ್ಟುಕೊಳ್ತಾರೆ. ಆದ್ರೆ ಪರ್ಸ್, ಮಾತ್ರೆ ಇಡುವ ಜಾಗವಲ್ಲ. ಇದ್ರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಹಣ, ನೀರಿನಂತೆ ಖಾಲಿಯಾಗುತ್ತದೆ. 

ಪತಿ–ಪತ್ನಿ ಸಂಬಂಧ ಗಟ್ಟಿಗೊಳಿಸುತ್ತೆ ಕರ್ಪೂರ, ಹೇಗೆ ಬಳಸಿದರೊಳಿತು?

ಪರ್ಸ್ ನಲ್ಲಿ ಹಣ ತುಂಬಿರಬೇಕೆಂದ್ರೆ ಹೀಗೆ ಮಾಡಿ : ಪರ್ಸ್ ನಲ್ಲಿ ಸದಾ ಹಣ ತುಂಬಿರಬೇಕು ಎಂದಾದ್ರೆ ನೀವು ಪರ್ಸ್ ನಲ್ಲಿ ತಾಯಿ ಲಕ್ಷ್ಮಿಯ ಫೋಟೋವನ್ನು ಇಡಬೇಕು. ಕೈನಿಂದ ನಾಣ್ಯ ಬೀಳಿಸುತ್ತಿರುವ ಲಕ್ಷ್ಮಿ ಫೋಟೋ ಇಟ್ಟುಕೊಳ್ಳಬಹುದು. ಇದ್ರ ಜೊತೆ ನೀವು ಪರ್ಸ್ ನಲ್ಲಿ ನಾಲ್ಕೈದು ಅಕ್ಕಿ ಕಾಳನ್ನು ಕೂಡ ಇಟ್ಟುಕೊಳ್ಳಬಹುದು. 
 

Latest Videos
Follow Us:
Download App:
  • android
  • ios