Astro Remedies : ವೈವಾಹಿಕ ಜೀವನದ ಪ್ರೀತಿ ಹೆಚ್ಚಲು ಶಿವರಾತ್ರಿಯಂದು ಹೀಗೆ ಮಾಡಿ

ಶಿವನ ನಾಮ ಸ್ಮರಣೆ ಮಾಡಿದ್ರೆ ಎಲ್ಲ ಕಷ್ಟಗಳು ಬಗೆಹರಿಯುತ್ತವೆ ಎನ್ನಲಾಗುತ್ತದೆ. ಶಿವರಾತ್ರಿಯಂದು ಭಕ್ತರು ಬಯಸಿದ್ದನ್ನೆಲ್ಲ ಶಿವ ನೀಡ್ತಾನೆ ಎಂಬ ನಂಬಿಕೆಯಿದೆ. ದಾಂಪತ್ಯದಲ್ಲಿ ಸಮಸ್ಯೆ ಕಾಣ್ತಿದೆ ಎನ್ನುವವರು ಆ ದಿನ ಶಿವನನ್ನು ವಿಶೇಷವಾಗಿ ಪೂಜಿಸಿದ್ರೆ ದಾಂಪತ್ಯ ಸುಖ ಕಾಣಬಹುದಾಗಿದೆ.
 

Astro Remedies On Mahashivratri For Successful Marriage

ಶಿವ ಎಂದಾಕ್ಷಣ ಅವನ ಕೊರಳಲ್ಲಿರುವ ಹಾವು, ತ್ರಿಶೂಲ, ಕೈಯಲ್ಲಿನ ಡಮರು, ಉದ್ದನೆಯ ಜಡೆ, ಜಡೆಯಲ್ಲಿರುವ ಗಂಗೆ, ಮೂರು ಕಣ್ಣು, ನೀಲಿ ಬಣ್ಣದ ಕೊರಳು ಇವುಗಳೇ ಕಣ್ಣೆದುರು ಬರುತ್ತದೆ. ಶಿವನ ಈ ಆಕಾರಗಳೆಲ್ಲವೂ ನಮಗೆ ಒಂದೊಂದು ಅರ್ಥವನ್ನು ಹೇಳುತ್ತದೆ. ಶಿವನ ತಲೆಯ ಗಂಗೆ ಶುದ್ಧೀಕರಣದ ಸಂಕೇತ, ಶಿವನ ಮೂರನೆಯ ಕಣ್ಣು ಬುದ್ಧಿವಂತಿಕೆ, ಜಡೆಯಲ್ಲಿನ ಅರ್ಧಚಂದ್ರಾಕೃತಿ ಅತೀಂದ್ರಿಯ ದೃಷ್ಟಿ ಮತ್ತು ಜ್ಞಾನದ ಸಂಕೇತವಾಗಿದೆ. ಶಿವನು ಹಿಡಿದಿರುವ ತ್ರಿಶೂಲವು ಪ್ರಕೃತಿಯ ತಮ, ರಜ ಮತ್ತು ಸತ್ವ ಈ ಮೂರು ಗುಣಗಳ ಪ್ರತೀಕವಾಗಿದೆ. ಶಿವನು ಯೋಗಗಳಿಗೆ ಗುರು ಎಂದು ಅವನನ್ನು ಆದಿಯೋಗಿ ಎಂದು ಕೂಡ ವರ್ಣಿಸುತ್ತಾರೆ.

ಇನ್ನೇನು ಶಿವರಾತ್ರಿ (Shivratri) ಸಮೀಪಿಸುತ್ತಿದೆ. ಈ ವರ್ಷ ಫೆಬ್ರವರಿ (February) 18ರಂದು ಮಹಾಶಿವರಾತ್ರಿಯ ದಿನವಾಗಿದೆ. ಶಿವ ಅಭಿಷೇಕ ಪ್ರಿಯ. ಹಾಗಾಗಿಯೇ ಶಿವರಾತ್ರಿಯಂದು ಎಲ್ಲೆಡೆ ಶಿವನಿಗೆ ಅಭಿಷೇಕ ನಡೆಯುತ್ತದೆ. ಹಲವಾರು ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಉಪವಾಸ (Fasting), ಜಾಗರಣೆಗಳನ್ನು ಮಾಡಿ ಶಿವನ ಸ್ಮರಣೆಯನ್ನು ಮಾಡುತ್ತಾರೆ. ಅಂದಿನ ದಿನ ಶಿವ ಪಾರ್ವತಿ (Parvati) ಯರ ವಿವಾಹದ ದಿನವಾದ್ದರಿಂದ ದೇಶದೆಲ್ಲೆಡೆ ಶಿವರಾತ್ರಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ಶಿವರಾತ್ರಿಯಂದು ಈಶ್ವರನ ಪೂಜೆ ಮಾಡಿದರೆ ವಿವಾಹಕ್ಕೆ ಇರುವ ತೊಡಕುಗಳು, ವಿವಾಹದ ನಂತರದ ಸಮಸ್ಯೆಗಳು ನಿವಾರಣೆಯಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಶಿವರಾತ್ರಿಯ ದಿನದಂದು ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸಿದರೆ ವಿವಾಹದ ನಂತರ ಅನೇಕ ಸಮಸ್ಯೆಗಳು ದೂರವಾಗುತ್ತದೆ.

ಶಿವನಿಗೆ ಕೇಸರಿ ಹಾಲನ್ನು ಅರ್ಪಿಸಿ : ಶಿವ ಅಭಿಷೇಕ ಪ್ರಿಯ ಎಂಬುದು ನಿಮಗೆ ತಿಳಿದೇ ಇದೆ. ಶಿವರಾತ್ರಿಯಂದು ಸ್ನಾನ ಮಾಡಿ ಶುಚಿಯಾದ ನಂತರ ದಂಪತಿ ಸೇರಿ ಕೇಸರಿ ಬೆರೆಸಿದ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಬೇಕು. ಶಿವನಿಗೆ ಹಾಲು ಮತ್ತು ಕೇಸರಿ ಅತಿ ಪ್ರಿಯವಾದ್ದರಿಂದ ಶಿವ ಸಂತುಷ್ಟನಾಗಿ ನಿಮ್ಮ ಸಂಸಾರದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ದೂರಮಾಡುತ್ತಾನೆ. ಇಂತಹ ಪೂಜೆಗಳು ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.

Vastu Tips For Flat: ಫ್ಲಾಟ್ ಕೊಳ್ಳುವಾಗ ಈ ವಾಸ್ತು ನಿಯಮಗಳನ್ನು ಗಮನಿಸಿ..

ಶಿವಲಿಂಗವನ್ನು ಮನೆಯಲ್ಲೇ ಮಾಡಿ : ಮಹಾ ಶಿವರಾತ್ರಿಯಂದು ಅನೇಕ ಮನೆಗಳಲ್ಲಿ ರುದ್ರಾಭಿಷೇಕ ಪೂಜೆಯನ್ನು ಮಾಡುತ್ತಾರೆ. ಶಿವನಿಗೆ ರುದ್ರವನ್ನು ಹೇಳಿ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ನೀವು ಕೂಡ ನಿಮ್ಮ ಮನೆಯಲ್ಲಿ ಶಿವ ಲಿಂಗವನ್ನು ಮಾಡಬಹುದು. ಗೋಧಿ ಹಿಟ್ಟನ್ನು ತಯಾರಿಸಿಕೊಂಡು ಅದರಿಂದ ಹನ್ನೊಂದು ಲಿಂಗಗಳನ್ನು ಮಾಡಿ ಅದಕ್ಕೆ ರುದ್ರಾಭಿಷೇಕ ಮಾಡಬಹುದು. ಮನೆಯಲ್ಲಿ ಪೂಜೆ ಮಾಡುವವರೂ ಕೂಡ ದಂಪತಿ ಸಮೇತರಾಗಿ ಪೂಜೆ ಮಾಡಬೇಕು. 

ನಂದಿಯ ಪೂಜೆಯನ್ನೂ ಮಾಡಿ : ನೀವು ಶಿವನ ಯಾವ ದೇವಸ್ಥಾನಕ್ಕೆ ಬೇಕಾದರೂ ಹೋಗಿ ಅಲ್ಲಿ ಶಿವನ ಎದುರು ಶಿವನ ವಾಹನವಾದ ನಂದಿ ಇದ್ದೇ ಇರುತ್ತಾನೆ. ಶಿವರಾತ್ರಿಯಂದು ಶಿವನ ಪೂಜೆ ಮಾಡಿದ ನಂತರ ನಂದಿಯ ಪೂಜೆಯನ್ನು ಮಾಡಬೇಕು. ನಂದಿಯನ್ನು ಭಕ್ತಿಯಿಂದ ಪೂಜಿಸಿ ನಂದಿಯ ಕಿವಿಯಲ್ಲಿ ನಿಮ್ಮ ಆಸೆ, ಕಷ್ಟಗಳನ್ನು ಹೇಳಬೇಕು. ನಂದಿಯ ಕಿವಿಯಲ್ಲಿ ಹೇಳಿದ ಮಾತು ನೇರವಾಗಿ ಶಿವನಿಗೆ ತಲುಪುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ನಂದಿಯ ಬಳಿ ನಿಮ್ಮ ಸಂಸಾರದ ಕಷ್ಟಗಳನ್ನು ಹೇಳಿಕೊಂಡರೆ ಖಂಡಿತವಾಗಿಯೂ ಅಂತಹ ಕಷ್ಟಗಳು ದೂರವಾಗುತ್ತೆ.

ಈ ಬಣ್ಣದ ಬಟ್ಟೆ ಧರಿಸಿ : ಶಿವನಿಗೆ ಬಿಳಿ ಬಣ್ಣವೆಂದರೆ ಬಹಳ ಇಷ್ಟ. ಶಿವರಾತ್ರಿಯ ದಿನದಂದು ನೀವು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಶಿವನನ್ನು ಪೂಜಿಸಿ. ಒಮ್ಮೆ ನಿಮಗೆ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಲು ಇಷ್ಟವಿಲ್ಲ ಎಂದಾದರೆ ಕ್ರೀಮ್ ಬಣ್ಣ ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಪೂಜೆ ಮಾಡಿ.

Gautam Buddha Story: ಡಕಾಯಿತನನ್ನು ಸಂತನಾಗಿಸಿದ ಬುದ್ಧ! ಅಹಿಂಸಕ ಕೊಲೆಗಡುಕನಾದದ್ದು ಹೇಗೆ?

ಶಿವರಾತ್ರಿಯಂದು ನಿಮ್ಮ ಆಹಾರ ಹೀಗಿರಲಿ : ಶಿವರಾತ್ರಿಯಂದು ನೀವು ಬಿಳಿ ಬಣ್ಣದ ಆಹಾರವನ್ನೇ ಸೇವಿಸಿ. ಸಾಬೂದಾನಿಯ ಖಿಚಡಿ, ಖೀರ್, ಅವಲಕ್ಕಿ ಮುಂತಾವುಗಳನ್ನು ಸೇವಿಸಿ. ಶಿವರಾತ್ರಿಯಂದು ದಂಪತಿ  ಯಾವುದಾದರೂ ವ್ರತಾಚರಣೆಯನ್ನು ಕೂಡ ಕೈಗೊಳ್ಳಬಹುದು.
 

Latest Videos
Follow Us:
Download App:
  • android
  • ios