ಅದ್ದೂರಿಯಾಗಿ ಜರುಗಿದ ಏಷ್ಯಾದ 2ನೇ ಅತಿದೊಡ್ಡ ಹಿಂದೂ ಗಣೇಶನ ಬೃಹತ್ ಶೋಭಾಯಾತ್ರೆ!
ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ ನಡೆಯೋದು ಕೋಟೆನಾಡು ಚಿತ್ರದುರ್ಗದಲ್ಲಿ. ಇಂದು ನಡೆದ ಅದ್ದೂರಿ ಶೋಭಾಯಾತ್ರೆಯಲ್ಲಿ ಎಲ್ಲಿ ನೋಡಿದ್ರು ಜನಸಾಗರ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.28): ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ ನಡೆಯೋದು ಕೋಟೆನಾಡು ಚಿತ್ರದುರ್ಗದಲ್ಲಿ. ಇಂದು ನಡೆದ ಅದ್ದೂರಿ ಶೋಭಾಯಾತ್ರೆಯಲ್ಲಿ ಎಲ್ಲಿ ನೋಡಿದ್ರು ಜನಸಾಗರ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದರು. ಕೇಸರಿಮಯವಾಗಿರುವ ನಗರದ ಪ್ರಮುಖ ರಸ್ತೆಗಳು, ಎತ್ತ ಕಡೆ ಕಣ್ಣಾಯಿಸಿದ್ರು ಜನಸಾಗರ. ಪೋಲೀಸರ ಸರ್ಪಗಾವಲಿನಲ್ಲಿ ಪುರುಷರಗಿಂತ ನಾವು ಯಾವುದ್ರಲ್ಲೂ ಕಮ್ಮಿ ಇಲ್ಲ ಎಂಬಂತೆ ಡಿ ಜೆ ಸೌಂಡಿಗೆ ಟಪ್ಪಾಂಗುಚ್ಚಿ ಹೆಜ್ಜೆ ಹಾಕ್ತಿರೋ ಮಹಿಳೆಯರು. ಈ ದೃಶ್ಯಗಳು ಕಂಡು ಬಂದಿದ್ದು ಕಲ್ಲಿನ ಕೋಟೆ ಖ್ಯಾತಿಯ ಚಿತ್ರದುರ್ಗದಲ್ಲಿ.
ಹೌದು, ಇಂದು ಏಷ್ಯಾದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿರುವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜರುಗಿತು. ಬೆಳಗ್ಗೆ 11 ಗಂಟೆಗೆ ನಗರದ ಜೈನಧಾಮದಿಂದ ಶುರುವಾಗಿದ್ದು, ಭಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ಶುರುವಾದ ಬೃಹತ್ ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತು. ಅದ್ರಲ್ಲಂತೂ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು ರಸ್ತೆಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ ಎಂದು ಘೋಷ ವಾಕ್ಯ ಕೂಗುವ ಮೂಲಕ ಭರ್ಜರಿ ಸ್ಟೆಪ್ ಹಾಕಿದರು.
ಅದೇ ರೀತಿ ಯುವಕರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಯುವತಿಯರು ಕೂಡ ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ತಮ್ಮ ಸ್ನೇಹಿತೆಯರೊಂದಿಗೆ ಆಗಮಿಸಿ ಭರ್ಜರಿ ಎಂಜಾಯ್ ಮಾಡಿದರು. ಪ್ರತೀ ವರ್ಷದಂತೆಯೇ ಈ ವರ್ಷವೂ ಅದ್ದೂರಿ ಶೋಭಾಯಾತ್ರೆ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಐತಿಹಾಸಿಕ ಉತ್ಸವ ನಡೆಯುತ್ತಿರೋದು ನಮಗೆ ಹೆಮ್ಮೆ ಅಂತಾರೆ ಸ್ಥಳೀಯರು. ಚಳ್ಳಕೆರೆ ಗೇಟ್ ಬಳಿಯಿಂದ ಹೊರಟ ಬೃಹತ್ ಮೆರವಣಿಗೆ ಮದಕರಿ ವೃತ್ತ, ಗಾಂಧಿ ಸರ್ಕಲ್, ಕನಕ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇನ್ನೂ ವರ್ಷದಿಂದ ವರ್ಷಕ್ಕೆ ಹಿಂದೂ ಗಣಪನ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಈ ವರ್ಷವೂ ಸುಮಾರು ೪ ಲಕ್ಷಕ್ಕೂ ಅಧಿಕ ಮಂದಿ ಶೋಭಾಯಾತ್ರೆಯಲ್ಲಿ ಸೇರಿದ್ದಾರೆ.
ಬಿಜೆಪಿ ಶುದ್ಧೀಕರಣಕ್ಕೆ ಈಶ್ವರಪ್ಪ ಮನೆಯಲ್ಲಿ ಸಭೆ: ಶಾಸಕ ರಮೇಶ್ ಜಾರಕಿಹೊಳಿ
ನಮ್ಮ ಜಿಲ್ಲೆ ಹೇಳಿ ಕೇಳಿ ಸ್ವರ್ಗ ನಮ್ಮ ದುರ್ಗ ಎಂದು ಹೆಸರಾಗಿದೆ. ಇಂತಹ ಶೋಭಾಯಾತ್ರೆ ಮಿಸ್ ಮಾಡಿಕೊಂಡವರೇ ದುರದೃಷ್ಟವಂತರು. ಲಕ್ಷಾಂತರ ಮಂದಿ ಶೋಭಾಯಾತ್ರೆಯಲ್ಲಿ ಸೇರಿದ್ರು ಕೂಡ ಪ್ರತಿಯೊಬ್ಬ ಯುವತಿ, ಮಹಿಳೆಯರಿಗೂ ಸಮಾನ ಗೌರವ ಕೊಡ್ತಾರೆ. ಯಾರಿಗೂ ತೊಂದರೆ ಆಗದಂತೆ ಯುವಕರು ನಡ್ಕೊಳ್ತಾರೆ ಅದು ನಮಗೆ ಹೆಮ್ಮೆ ಅನಿಸುತ್ತೆ ಅಂತಾರೆ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಮಹಿಳೆಯರು. ಒಟ್ಟಾರೆ ಪ್ರತಿ ವರ್ಷಕ್ಕಿಂತ ಈ ವರ್ಷ ಶೋಭಾಯಾತ್ರೆಗೆ ವಿಶೇಷವಾಗಿ ತರಿಸಿದ್ದ ಆಕರ್ಷಕವಾದ ಮುಂಬೈ ಡಿಜೆಗಳ ಬಾರಿ ಸದ್ದಿಗೆ ಯುವಕ ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಆರಂಭ ಆಗ್ತಿದ್ದಂತೆ, ವಿವಿಧ ಜಿಲ್ಲೆಗಳಿಂದ ಬಂದಿದ್ದ ಲಕ್ಷಾಂತರ ಯುವ ಮನಸುಗಳು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದರು.