Asianet Suvarna News Asianet Suvarna News

ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಮದ್ವೆಯಾದರೂ ವೈಷ್ಣವ್ ಸೆಳೆಯೋ ಕೀರ್ತಿ, ಅಂತವರ ರಾಶಿ ಯಾವುದಾಗಿರುತ್ತೆ?

ಸಾಮಾನ್ಯವಾಗಿ ಜಾತಕ ಹಾಗೂ ಗ್ರಹಗತಿಗಳ ಅನುಸಾರ ಭವಿಷ್ಯವನ್ನು ತಿಳಿದುಕೊಳ್ಳಲಾಗುತ್ತದೆ. ಅದರ ಪ್ರಕಾರ ಮನುಷ್ಯನ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಗೊತ್ತಾಗುತ್ತವೆ.

Aries Leo  Libra  Scorpio  Sagittarius Pisces most attractive zodiac signs suh
Author
First Published Jul 8, 2023, 12:30 PM IST | Last Updated Jul 8, 2023, 12:45 PM IST


ಸಾಮಾನ್ಯವಾಗಿ ಜಾತಕ ಹಾಗೂ ಗ್ರಹಗತಿಗಳ ಅನುಸಾರ ಭವಿಷ್ಯವನ್ನು ತಿಳಿದುಕೊಳ್ಳಲಾಗುತ್ತದೆ. ಅದರ ಪ್ರಕಾರ ಮನುಷ್ಯನ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಗೊತ್ತಾಗುತ್ತವೆ. ಅದೇ ರೀತಿ ಈ 6 ರಾಶಿಯವರು ಹೆಚ್ಚು ಆಕರ್ಷಕ ಗುಣಗಳನ್ನು ಹೊಂದಿರದ್ದಾರೆ ಎನ್ನಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಕೆಲವರು ರಾಶಿಯವರು ಜನರನ್ನು ಮೋಡಿ ಮಾಡುತ್ತಾರೆ. ಇತರರನ್ನು ಅಯಸ್ಕಾಂತದಂತೆ ಸೆಳೆಯುತ್ತಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ವೈಷ್ಣವ್ ಮದುವೆ ಯಾದರು ತನ್ನ ಹಳೆಯ ಪ್ರೇಯಸಿ ಕೀರ್ತಿಯತ್ತ ಸೆಳೆಯುತ್ತಿರುವಂತೆ ಕೆಲವು ರಾಶಿಗಳು ಇರುತ್ತವೆ.  ಯಾವ ರಾಶಿಚಕ್ರದ ಚಿಹ್ನೆಗಳು ಇತರರನ್ನು ಆಕರ್ಷಿಸುವ ಮೋಡಿ ಮತ್ತು ಕಾಂತೀಯತೆಯನ್ನು ಹೊಂದಿವೆ ಎಂಬ ಮಾಹಿತಿ ಇಲ್ಲಿದೆ.

ಮೇಷ ರಾಶಿ (Aries) 

ಮೇಷ ರಾಶಿಯು ಅತ್ಯಂತ ಆಕರ್ಷಕ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಅವರು ಉತ್ಸಾಹ ಮತ್ತು ನಿರ್ಭಯದಿಂದ ಇರುತ್ತಾರೆ. ಹಾಗಾಗಿ ಅವರು ಗುಂಪಿನಲ್ಲಿ ಎದ್ದು ಕಾಣುತ್ತಾರೆ. ಇತರರನ್ನು ಅವರ ಕಾಂತೀಯ ವ್ಯಕ್ತಿತ್ವ  ಸೆಳೆಯುತ್ತದೆ. ಮೇಷ ರಾಶಿಯ ವ್ಯಕ್ತಿಗಳು ನೈಸರ್ಗಿಕ ಮೋಡಿ ಮಾಡುತ್ತಾರೆ. 

ಸಿಂಹ ರಾಶಿ (Leo) 

ಸಿಂಹ ರಾಶಿ ಕೂಡ ಅತ್ಯಂತ ಆಕರ್ಷಕ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಇವರ ವರ್ಚಸ್ಸು ಇತರರನ್ನು ಸೆಳೆಯುತ್ತದೆ. ಆತ್ಮವಿಶ್ವಾಸ ಮತ್ತು ಉದಾರ ಮನೋಭಾವದಿಂದ ಸಿಂಹ ರಾಶಿಯವರು ತಮ್ಮ ಸುತ್ತಲಿನ ಜನರ ಹೃದಯವನ್ನು ಸಲೀಸಾಗಿ ಗೆಲ್ಲುತ್ತಾರೆ.

ತುಲಾ ರಾಶಿ (Libra) 

ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಅಂತರಾ ರಚಿಸಿರೋ ವ್ಯೂಹದಲ್ಲಿ ಅರಿವಿಲ್ಲದೆ ಸಿಲುಕಿರುವ ಲೀಲಾನ್ನು ಪ್ರತಿಯೊಂದು ಸನ್ನಿವೇಶದಲ್ಲಿ ಕಾಪಾಡುತ್ತಿರುವ ಎಜೆ ಲೀಲಾಗೆ ಅರಿವಿಲ್ಲದೆ ಮತ್ತಷ್ಟು ಹತ್ತಿರವಾಗುತ್ತಿರುವಂತೆ ತುಲಾ ರಾಶಿಯವರು. ತುಲಾ ರಾಶಿಯವರು ಸಹಜವಾದ ಮೋಡಿಯನ್ನು ಹೊಂದಿದ್ದು, ಅದು ಆಕರ್ಷಕ ಮತ್ತು ಸಾಮರಸ್ಯದಿಂದ ಇರುತ್ತಾರೆ. ಅವರ ಸಮಾನತೆ ಮತ್ತು ಗಾಂಭೀರ್ಯ ಸ್ವಭಾವವು ಇತರರಿಗೆ ಮೋಡಿ ಮಾಡುತ್ತದೆ. ಇವರು ಇತರರಲ್ಲಿ ನಿಜವಾದ ಆಸಕ್ತಿಯನ್ನು ಹೊಂದಿರುತ್ತಾರೆ. 

ಹಣೆಗೆ ಸಿಂಧೂರ ಇಡಲು ಇವೆ ಕ್ರಮಗಳು; ಯೋಧರಿಗೆ ಹೆಬ್ಬೆರಳ ತಿಲಕ ಏಕೆ..?

 

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯ ವ್ಯಕ್ತಿಗಳು ನಿಗೂಢ ಆಕರ್ಷಣೆಯನ್ನು ಹೊಂದಿರುತ್ತಾರೆ. ಅದು ಚಿಟ್ಟೆಯಂತೆ ಇತರರನ್ನು ತಮ್ಮತ್ತ ಸೆಳೆಯುತ್ತದೆ. ಅವರ ತೀವ್ರವಾದ ನೋಟ, ನಿಗೂಢ ಸ್ವಭಾವ ಮತ್ತು ಭಾವನೆಗಳ ಆಳವು ಕಾಂತೀಯತೆಯನ್ನು ಸೃಷ್ಟಿಸುತ್ತದೆ. ಇದರಿಂದ ಇವರು ಜನರಿಗೆ ಮೋಡಿ ಮಾಡುತ್ತಾರೆ.

ಧನು ರಾಶಿ (Sagittarius) 

ಧನು ರಾಶಿಯವರು ಉತ್ಸಾಹ ಮತ್ತು ಸಾಹಸಮಯ ಮನೋಭಾವವನ್ನು ಹೊಂದಿರುತ್ತಾರೆ. ಅದು ಇತರರನ್ನು ಆಕರ್ಷಣೆ ಮಾಡುತ್ತದೆ. ಅವರ ಮುಕ್ತ ಮನೋಭಾವದ ಸ್ವಭಾವ ಮತ್ತು ಜೀವನದ ಮೇಲಿನ ಆಶಾವಾದಿ ದೃಷ್ಟಿಕೋನವು ಇತರರನ್ನು ಅಯಸ್ಕಾಂತದಂತೆ ಸೆಳೆಯುತ್ತದೆ.

ಮೀನ ರಾಶಿ (Pisces) 

ಮೀನ ರಾಶಿಯವರು ಅಲೌಕಿಕ ಆಕರ್ಷಣೆಯನ್ನು ಹೊಂದಿರುತ್ತಾರೆ. ಅದನ್ನು ವಿರೋಧಿಸಲು ಜನರಿಗೆ ಕಷ್ಟವಾಗುತ್ತದೆ. ಅವರ ಸಹಾನುಭೂತಿಯ ಸ್ವಭಾವ ಮತ್ತು ಇತರರೊಂದಿಗೆ ಆಳವಾಗಿ ಸಂಪರ್ಕಿಸುವ ಸಾಮರ್ಥ್ಯದೊಂದಿಗೆ ವಿಶಿಷ್ಟವಾದ ಆಕರ್ಷಣೆಯನ್ನು ಹೊಂದಿದ್ದಾರೆ.

Daily Horoscope: ಇಂದು ಈ ರಾಶಿಯವರಿಗೆ ಮಿತ್ರನಿಂದಲೇ ಅಪಾಯ; ನಂಬುವ ಮುನ್ನ ಎಚ್ಚರ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios