Asianet Suvarna News Asianet Suvarna News

Zodiac signs and Love: ಆಕಸ್ಮಿಕವಾಗಿ ತಮ್ಮ ಜೀವನಸಂಗಾತಿ ಕಂಡುಕೊಳ್ಳೋ ಅದೃಷ್ಟ ಈ 5 ರಾಶಿಯದು..

ಪ್ರೀತಿ ಎಲ್ಲಿ ಹೇಗೆ ಬೇಕಾದರೂ ಆಗಬಹುದು. ಅದನ್ನು ಲೆಕ್ಕ ಹಾಕಿ ಮಾಡಲಾಗುವುದಿಲ್ಲ. ಆದರೆ, ಎಲ್ಲರಿಗೂ ತಮ್ಮ ಪ್ರೀತಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲ ರಾಶಿಯವರು ಈ ವಿಷಯದಲ್ಲಿ ತುಂಬಾ ಅದೃಷ್ಟಶಾಲಿಗಳು. ಅವರಿಗೆ ಆಕಸ್ಮಿಕ ಭೇಟಿಯಲ್ಲಿ ಸಂಗಾತಿ ಸಿಗುತ್ತಾರೆ. 

Aries Cancer Leo Libra Pisces zodiacs meet their Love by coincidence skr
Author
bangalore, First Published Feb 21, 2022, 3:42 PM IST | Last Updated Feb 21, 2022, 3:42 PM IST

ಜೀವನದಲ್ಲಿ ಯಾವಾಗ ನಮ್ಮ ಪ್ರೀತಿಯನ್ನು ನೋಡುತ್ತೇವೋ, ಆಗ ಇವರೇ ನಮಗೆ ಸರಿ ಎಂದು ಮನಸ್ಸಿಗೆ ತಿಳಿದು ಬಿಡುತ್ತಂತೆ. ಅವರನ್ನು ನೋಡಿದಾಗ ಹೊಸ ಸಂಬಂಧವನ್ನು ಬದುಕಿನಲ್ಲಿ ಬಿಚ್ಚಿಕೊಳ್ಳುತ್ತಿರುವ ಉತ್ಸಾಹ ಉಕ್ಕುತ್ತದೆ. ಹೀಗೆ ನಮ್ಮ ಜೀವನ ಸಂಗಾತಿಯನ್ನು ಮೊದಲ ಬಾರಿ ನೋಡುವುದು, ಪ್ರೀತಿಯಾಗುವುದು ಎಲ್ಲಿ ಯಾವಾಗ ಬೇಕಾದರೂ ಆಗಬಹುದು. ಅಂಥ ಸಂದರ್ಭಗಳು ಇದ್ದಕ್ಕಿದ್ದಂತೆ ಎದುರಾಗುತ್ತವೆ. ಕಾಕತಾಳೀಯ ಭೇಟಿಯಿಂದಾಗಿ ಬದುಕು ಬದಲಾಗಬಹುದು. ಇಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಹೀಗೆ ಆಕಸ್ಮಿಕ ಭೇಟಿಯಿಂದ ಜೀವನ ಸಂಗಾತಿಯನ್ನು ಕಂಡುಕೊಳ್ಳುವ ಅದೃಷ್ಟವಂತರು ಈ ಐದು ರಾಶಿಯವರು. 

ಮೇಷ(Aries)
ಇವರು ತೀರಾ ಅನಿಯಂತ್ರಿತರು. ಸಂದರ್ಭಗಳಿಗೆ ಸರಿಯಾಗಿ ಮುನ್ನುಗ್ಗುವವರು. ಯಾವುದನ್ನೇ ಆಗಲಿ ಮನಸ್ಸಿಗೆ ಬಂದ ಕೂಡಲೇ ಮಾಡಲು ಹೋಗುವವರು. ಇದೇ ಕಾರಣದಿಂದ ಇವರಿಗೆ ಅನಿರೀಕ್ಷಿತವಾಗಿ ಆಕಸ್ಮಿಕ ಸಂದರ್ಭದಲ್ಲಿ ತಮ್ಮ ಭವಿಷ್ಯದ ಪ್ರೀತಿಯ ಭೇಟಿಯಾಗಬಹುದು. ಜಿಮ್‌(gym)ನಲ್ಲೋ, ಕ್ರೀಡಾಂಗಣದಲ್ಲೋ ಅಥವಾ ಯಾವುದೇ ಶಾಪ್‌ನಲ್ಲಿಯೋ ಇವರಿಗೆ ಭವಿಷ್ಯದ ಪ್ರೀತಿಯನ್ನು ನೋಡಿದ ಕೂಡಲೇ ಆಕರ್ಷಣೆ ಹುಟ್ಟಬಹುದು. ನಂತರ ಅವರು ತಡ ಮಾಡದೇ ಆ ವ್ಯಕ್ತಿಯ ಗಮನ ಸೆಳೆಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. 

Hindu Mythology: ಅರೆ! ರಾಮಾಯಣದ ಈ ವ್ಯಕ್ತಿಗಳು ಮಹಾಭಾರತದಲ್ಲೂ ಇದ್ದಾರೆ, ಯಾರವರು?

ಕಟಕ(Cancer)
ಇವರು ಕನಸಿನ ಲೋಕದಲ್ಲಿ ಸದಾ ತೇಲುತ್ತಿರುತ್ತಾರೆ. ಬಹಳ ಬೇಗ ಕರಗುವವರು, ಹೃದಯ ಸೂಕ್ಷ್ಮವಾದುದು. ಅವರು ಆಗಾಗ ಹಗಲುಗನಸು ಕಾಣುವಾಗ ತಮ್ಮ ಭವಿಷ್ಯದ ಸಂಗಾತಿ ಯಾವೆಲ್ಲ ರೀತಿಯ ಆಕಸ್ಮಿಕ ಘಟನೆಗಳಲ್ಲಿ ಸಿಗಬಹುದೆಂದು ಯೋಚಿಸುತ್ತಿರುತ್ತಾರೆ. ಕಾಕತಾಳೀಯವಾಗಿ ಇವರಿಗೆ, ಹೀಗೆ ಆಕಸ್ಮಿಕ ಸಂದರ್ಭದಲ್ಲೇ ತಮ್ಮ ಸಂಗಾತಿ ಸಿಕ್ಕುವ ಸಾಧ್ಯತೆಗಳು ಹೆಚ್ಚು. ಸುಮ್ಮನೆ ವಾಡಿಕೆಯಲ್ಲಿ ಭೇಟಿಯಾದ ವ್ಯಕ್ತಿಯೇ ತಮ್ಮ ಭವಿಷ್ಯದ ಸಂಗಾತಿಯಾಗಬಹುದೆಂಬುದು ಇವರಿಗೆ ತಿಳಿಯದೆಯೇ ಹೋಗಬಹುದು. ಆದರೂ ಹಾಗೆ ಸಿಕ್ಕವರು ಮತ್ತೆ ಜೀವನಕ್ಕೆ ಕಾಲಿಡುವಾಗ ಎಲ್ಲವೂ ಅಚ್ಚರಿಯಾಗಿ ಕಾಣಲಿದೆ. 

ಸಿಂಹ(Leo) 
ಇವರ ಜೀವನದಲ್ಲಿ ವಿವಾಹದ ಬಳಿಕ ಕತೆ ಹೇಳಲು ಚೆಂದದೊಂದು ರೊಮ್ಯಾಂಟಿಕ್ ಸ್ಟೋರಿ ಇರುತ್ತದೆ. ಅಷ್ಟು ವಿಶಿಷ್ಠವಾಗಿ ಇವರು ತಮ್ಮ ಪ್ರೀತಿಯನ್ನು ಭೇಟಿಯಾಗಬಹುದು. ಬೇರೇನೋ ರೀತಿಯಲ್ಲಾದ ಪರಿಚಯ ಪ್ರೇಮವಾಗಿ ಬದಲಾಗಬಹುದು. ಪ್ರೇಮದ ವಿಷಯದಲ್ಲಿ ಇವರು ತೆಗೆದುಕೊಳ್ಳುವ ರಿಸ್ಕ್ ಕೂಡಾ ಮುಂದೆ ದೊಡ್ಡದೊಂದು ಅನುಭವ ಕಥನವೇ ಆಗುವ ಸಾಧ್ಯತೆ ಹೆಚ್ಚು. 

Personality Traits: ಮಾರ್ಚ್‌ನಲ್ಲಿ ಜನಿಸಿದವರ ಕ್ಯೂರಿಯಸ್ ಕಹಾನಿ!

ತುಲಾ(Libra)
ಇವರು ಬಹಳ ಉತ್ಸಾಹಿಗಳು. ಸದಾ ಸಂತೋಷವಾಗಿರುತ್ತಾರೆ. ಎಲ್ಲರನ್ನೂ ಗೆಳೆಯರಾಗಿ ಕಾಣುತ್ತಾರೆ. ಸುಲಭವಾಗಿ ಯಾರೊಂದಿಗಾದರೂ ಹತ್ತಿರವಾಗುತ್ತಾರೆ. ಬದುಕಿನಲ್ಲಿ ಬಂದದ್ದೆಲ್ಲವನ್ನೂ ಒಪ್ಪಿಕೊಳ್ಳುವ ಕಾರಣದಿಂದ ಇವರಿಗೆ ಬದುಕು ಸುಲಭ. ಹೀಗಾಗಿ, ಇವರಿಗೆ ಹೀಗೆ ಪರಿಚಯವಾಗುವ ಅಪರಿಚಿತರು ಗೊತ್ತಿಲ್ಲದೆಯೇ ಆಪ್ತರಾಗುತ್ತಾರೆ. ತಾವು ಒಡನಾಡುವ ಜಿಮ್, ಸ್ವಿಮ್ಮಿಂಗ್, ಚಾರಣ, ಪ್ರವಾಸ ಅಥವಾ ಮತ್ತಾವುದೇ ಸ್ಥಳಗಳಲ್ಲಿ ಇವರಿಗೆ ಪ್ರೀತಿ ದೊರಕಬಹುದು. ಒಟ್ನಲ್ಲಿ ಅದೊಂದು ಆಕಸ್ಮಿಕ ಪ್ರೀತಿಯೇ ಆಗಿರುತ್ತದೆ. 

ಮೀನ(Pisces)
ಇವರು ತಮ್ಮ ಪ್ರೇಮಿಗಾಗಿ ಹುಡುಕಾಡುವುದಿಲ್ಲ. ವಿಷಯಗಳು ಹೇಗೆ ಬರುತ್ತವೋ ಹಾಗೆ ಸ್ವೀಕರಿಸುತ್ತಾರೆ. ಜೀವನ ಹೇಗಿದೆಯೋ ಹಾಗೆ ಒಪ್ಪಿಕೊಳ್ಳುತ್ತಾರೆ. ತಮ್ಮ ಸಂಗಾತಿಯ ಹುಡುಕಾಟಕ್ಕೆ ಎನರ್ಜಿ ವ್ಯರ್ಥ ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ, ಇವರಿಗೆ ಪ್ರೇಮಿ ದೊರಕುವುದೇ ಯಾವುದೋ ವಿಚಿತ್ರ ಸನ್ನಿವೇಶದಲ್ಲಿ. ಆಕಸ್ಮಿಕಗಳು ಸಂಭವಿಸದೆ ಇವರಿಗೆ ಸಂಗಾತಿ ಸಿಗುವುದು ಕಷ್ಟವೇ. ಸಿಕ್ಕ ಮೇಲೆ ಅವರನ್ನು ಬಹಳ ಹಚ್ಚಿಕೊಂಡು ಪ್ರೀತಿಸುತ್ತಾರೆ. 

(ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.)

Latest Videos
Follow Us:
Download App:
  • android
  • ios